For Quick Alerts
ALLOW NOTIFICATIONS  
For Daily Alerts

  ಈಕೆಗೆ ತನ್ನ ಪತಿಯನ್ನು ನೋಡಿದರೆಯೇ ಅಲರ್ಜಿ ಆಗುತ್ತದೆಯಂತೆ!!

  By Arshad
  |

  ನಮಗೆಲ್ಲರಿಗೂ ಯಾವುದಾದರೊಂದು ವಸ್ತುವಿನ ಅಲರ್ಜಿ ಇದ್ದೇ ಇರುತ್ತದೆ ಹಾಗೂ ಎಲ್ಲಿಯವರೆಗೆ ನಮಗೆ ಇದರ ಅನುಭವವಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಈ ಅಲರ್ಜಿ ಇರುವುದೇ ಗೊತ್ತಿರುವುದಿಲ್ಲ. ಆದರೆ ಓರ್ವ ಮಹಿಳೆಗೆ ಅತ್ಯಪರೂಪದ ಅಲರ್ಜಿ ಇದೆ. ಅಂದರೆ ಈಕೆಗೆ ಬಹುತೇಕ ಎಲ್ಲಾ ವಸ್ತುಗಳೂ ಅಲರ್ಜಿಕಾರಕವಾಗಿವೆ, ಆಕೆಯ ಪತಿಯ ಸಹಿತ! ನಮಗೆ ಯಾವ ವಸ್ತುವಿಗೆ ಅಲರ್ಜಿ ಇರುವುದು ಗೊತ್ತಿರುತ್ತದೆಯೋ, ನಾವು ಆ ವಸ್ತುವನ್ನು ಸ್ಪರ್ಷಿಸಲು ಅಥವಾ ಬಳಸಲು ಹಿಂದೇಟು ಹಾಕುತ್ತೇವೆ.

  ಆದರೆ ಬಹುತೇಕ ಎಲ್ಲಾ ವಸ್ತುಗಳೂ ಅಲರ್ಜಿಯಿರುವ ಈ ಮಹಿಳೆ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ? ಅದರಲ್ಲೂ ಮೂಲಭೂತ ಅವಶ್ಯಕತೆಗಳನ್ನು ಅವರು ಹೇಗೆ ಪೂರೈಸಿಕೊಳ್ಳುತ್ತಾರೆ? ಈ ವಿಶಿಷ್ಟ ಪರಿಸ್ಥಿತಿಗೆ mast cell activation syndrome (MCAS) ಎಂಬ ವೈದ್ಯಕೀಯ ಹೆಸರಿದ್ದು ಈ ತೊಂದರೆ ಇರುವ ಜೋಹಾನಾ ವಾಟ್ಕ್ಸಿನ್ ರವರ ಕಥೆಯನ್ನು ನೋಡೋಣ.... 

  ಈಕೆಗೆ ಅತ್ಯಪರೂಪದ ತೊಂದರೆ ಇದೆ

  ಈಕೆಗೆ ಅತ್ಯಪರೂಪದ ತೊಂದರೆ ಇದೆ

  ಈ ತೊಂದರೆಗೆ Mass Cell Activation Syndrome (MCAS) ಎಂದು ಕರೆಯಲಾಗುತ್ತದೆ. ಈ ಸ್ಥಿತಿ ಇರುವ ವ್ಯಕ್ತಿಗಳ ದೇಹದ ಜೀವಕೋಶಗಳು ಯಾವುದೇ ಅಗತ್ಯ ವಸ್ತುವಿನ ಸ್ಪರ್ಶಕ್ಕೆ ಈಕೆಯ ರೋಗ ನಿರೋಧಕ ಶಕ್ತಿ ಅಗತ್ಯಕ್ಕೆ ವಿರುದ್ಧವಾದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈಕೆಯ ಈ ತೊಂದರೆ ಎಷ್ಟು ಸೂಕ್ಷ್ಮ ಎಂದರೆ ಪಕ್ಕದ ಮನೆಯಲ್ಲಿ ಯಾವುದಾದರೂ ಅಡುಗೆ ಮಾಡಿದ್ದ ಪರಿಮಳ ಗಾಳಿಯಲ್ಲಿ ತೇಲಿಬಂದರೂ ಈಕೆಗೆ ತೊಂದರೆಯಾಗುತ್ತದೆ.

  ಈಕೆಗೆ ಆಕೆಯ ತಂದೆ ತಾಯಿಯರೂ ಅಲರ್ಜಿ

  ಈಕೆಗೆ ಆಕೆಯ ತಂದೆ ತಾಯಿಯರೂ ಅಲರ್ಜಿ

  ಈಕೆಯ ಆರೋಗ್ಯದ ವರದಿಗಳ ಪ್ರಕಾರ ಈಕೆಗೆ ತನ್ನ ತಂದೆತಾಯಿಯರೂ ಅಲರ್ಜಿ ಮೂಡಿಸಬಲ್ಲವರಾಗಿದ್ದಾರೆ. ಈಕೆಯ ಮೂವರು ಸಹೋದರ ಸಹೋದರಿಯರಲ್ಲಿ ಒಬ್ಬಳು ಸಹೋದರಿಗೆ ಮಾತ್ರವೇ ಈಕೆಗೆ ಅಲರ್ಜಿಯಾಗುವುದಿಲ್ಲ. ಇದೇ ಕಾರಣಕ್ಕೆ ಈಕೆ ತನ್ನ ಸ್ನೇಹಿತೆಯೊಬ್ಬರ ಮನೆಯ ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿರುತ್ತಾರೆ. ಈ ಕೋಣೆಯಲ್ಲಿ ಶುದ್ಧೀಕರಿಸಿದ ಗಾಳಿ ಮಾತ್ರವೇ ಒಳಬರುವಂತೆ ವ್ಯವಸ್ಥೆ ಮಾಡಲಾಗಿದ್ದು ಈ ಕೋಣೆಯಲ್ಲಿ ಮಾತ್ರವೇ ಆಕೆ ನಿರಾಳವಾಗಿರಬಲ್ಲರು. ಈಕೆಗೆ ವೈದ್ಯರನ್ನು ಕಾಣಲೇಬೇಕಾದ ಅನಿವಾರ್ಯತೆ ಇದ್ದಾಗ ಅಥವಾ ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಇದ್ದಾಗ ಮಾತ್ರವೇ ಮನೆಯಿಂದ ಹೊರಬರುತ್ತಾರೆಯೇ ವಿನಃ ಈ ಕೋಣೆಯೇ ಆಕೆಯ ಜಗತ್ತಾಗಿದೆ.

  ಈಕೆಯ ಅಲರ್ಜಿ ಅತ್ಯಂತ ತೀವ್ರವಾಗಿವೆ

  ಈಕೆಯ ಅಲರ್ಜಿ ಅತ್ಯಂತ ತೀವ್ರವಾಗಿವೆ

  ಈಕೆಗೆ ಹೆಚ್ಚಿನ ಆಹಾರಗಳೆಲ್ಲಾ ಅಲರ್ಜಿಕಾರಕವಾಗಿರುವುದರಿಂದ ಈಕೆ ಅಲರ್ಜಿಯಾಗದೇ ಇರುವ ಕೆಲವೇ ಆಹಾರಗಳನ್ನೇ ಪ್ರತಿದಿನವೂ ತಿನ್ನುತ್ತಾರೆ. ಈಕೆಗೆ ಕುರಿಮಾಂಸದ ಖೈಮಾ, ಹುರಿದ ಮಾಂಸ, ಸೌತೆಕಾಯಿ ಮತ್ತು ಕ್ಯಾರೆಟ್ಟುಗಳು ಮಾತ್ರವೇ ತಿನ್ನಲು ಸಾಧ್ಯವಾಗುತ್ತದೆ. ಈಕೆಗೆ ನೀರು ಬಿಟ್ಟು ಬೇರೆ ಯಾವುದೇ ದ್ರವಾಹಾರ ಸೇವಿಸಲು ಸಾಧ್ಯವೇ ಇಲ್ಲ.

  ಈ ದಂಪತಿ ಸಾಮಾನ್ಯ ಜೀವನ ನಡೆಸಲು ಯತ್ನಿಸುತ್ತಿದ್ದಾರೆ

  ಈ ದಂಪತಿ ಸಾಮಾನ್ಯ ಜೀವನ ನಡೆಸಲು ಯತ್ನಿಸುತ್ತಿದ್ದಾರೆ

  ಇವರ ಪತಿ ಸ್ಕಾಟ್ ರವರು ತಮ್ಮ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಒಬ್ಬರ ಕಷ್ಟವನ್ನು ಇನ್ನೊಬ್ಬರು ಹಂಚಿಕೊಳ್ಳುವ ಮೂಲಕ ಮಾದರಿ ಪತಿ ಪತ್ನಿಯರಾಗಿದ್ದಾರೆ. ಕೆಲವಾರು ವರ್ಷಗಳಿಂದಲೂ ಇವರು ಅಲರ್ಜಿಗಾಗಿ ಮಾಡದ ಔಷಧಿಯಿಲ್ಲ, ಹೊರದ ಹರಕೆಯಿಲ್ಲ. ಆದರೂ ಇದುವರೆಗೂ ಇವರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯಾಗಿಲ್ಲ.

  ಈ ದಂಪತಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಆದರೆ...

  ಈ ದಂಪತಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಆದರೆ...

  ಈ ದಂಪತಿಗಳು ಒಂದೇ ಮನೆಯಲ್ಲಿ ವಾಸಿಸುತ್ತಾರಾದರೂ ಸ್ಕಾಟ್ ರವರು ಕೆಳಮಹಡಿಯ ಮಲಗುವ ಕೋಣೆಯಲ್ಲಿ ಪವಡಿಸಿದರೆ ಜೋಆನ್ನಾರವರು ಮೇಲಿನ ಮಹಡಿಯಲ್ಲಿರುವ ಮುಖ್ಯ ಮಲಗುವ ಕೋಣೆಯಲ್ಲಿ ಪವಡಿಸುತ್ತಾರೆ. ಈ ಅಲರ್ಜಿಯನ್ನು ಎದುರಿಸಲು ಇವರೊಂದು ಒತ್ತಡದ ಕೋಣೆಯನ್ನು ನಿರ್ಮಿಸಿ ಒಳಗೆ ಪೀಠೋಪಕರಣಗಳು ಬಿಸಿಯಾಗುವಂತೆ ಮಾಡಿ ಇವರಿಗೆ ಅಲರ್ಜಿಯುಂಟುಮಾಡುವ ವಸ್ತುಗಳಿಂದ ಹೊರಬರುವಂತೆ ಮಾಡಲಾಗಿದ್ದರೂ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಏಕೆಂದರೆ ಮನೆಗೆ ಹೊಡೆದ ಬಣ್ಣವೂ ಈಕೆಗೆ ಅಲರ್ಜಿ.

  ಆದರೆ ಆಕೆಯನ್ನು ಪ್ರೀತಿಸುವುದನ್ನು ಸ್ಕಾಟ್ ಇನ್ನೂ ಬಿಟ್ಟಿಲ್ಲ

  ಆದರೆ ಆಕೆಯನ್ನು ಪ್ರೀತಿಸುವುದನ್ನು ಸ್ಕಾಟ್ ಇನ್ನೂ ಬಿಟ್ಟಿಲ್ಲ

  ಸ್ವಂತ ಪತಿಯ ಸಂಗವೂ ಆಕೆಗೆ ಅಲರ್ಜಿಕಾರಕವಾಗಿರುವುದರಿಂದ ದಂಪತಿಗಳು ಪರಸ್ಪರ ಸ್ಕೈಪ್ ಮೂಲಕ ಮಾತನಾಡುತ್ತಾರೆ. ಆದರೂ ಇವರು ತಮ್ಮ ಪತ್ನಿಯನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ. "ನಾನು ಆಕೆಯ ಹತ್ತಿರ ಹೋಗುವಂತಿಲ್ಲ, ಆಕೆಯನ್ನು ಬಿಗಿದಪ್ಪುವಂತಿಲ್ಲ, ಆಕೆಗೆ ಅಪಾಯವಾಗದಂತೆ ಆಕೆಯನ್ನು ಬಿಗಿದಪ್ಪಲು ಸಾಧ್ಯವೇ ಇಲ್ಲ" ಎಂದು ಇವರು ನಗುತ್ತಲೇ ಉತ್ತರಿಸುತ್ತಾರೆ.

  Source

  English summary

  Woman Who is Allergic To Her Own Husband

  Most of us are unaware of our allergies unless we are exposed to them. This is one such case of a woman who is suffering from a rare condition where she is allergic to almost everything! The list even includes her husband! Things seem to be difficult for her as she is allergic to the most basic things.Check out the story of Johanna Watkins, who suffers from mast cell activation syndrome (MCAS).
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more