Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕೆ ಗಂಡನನ್ನು ಕಳೆದು ಕೊಂಡಿದ್ದಳು! ಆದರೆ ಕೊನೆಗೂ ನಡೆಯಿತು ಪವಾಡ!!
ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವುದು ಮನುಷ್ಯನ ಜೀವನದ ಕೆಲವೊಂದು ಘಟ್ಟಗಳು. ಅದರಲ್ಲೂ ಮದುವೆಯಾದ ಬಳಿಕ ಜೀವನ ಸುಖಮಯವಾಗಿರಬೇಕೆಂದು ಬಯಸುತ್ತಾರೆ. ಆದರೆ ವಿಧಿಯಾಟದಿಂದ ಕೆಲವೊಂದು ಅಡೆತಡೆಗಳು ಬರುತ್ತದೆ.
ಅದರಲ್ಲೂ ಜೋಡಿ ಎತ್ತಿನಂತಿರುವ ಸಂಸಾರದಲ್ಲಿ ಯಾರಾದರೊಬ್ಬರು ಸಾವನ್ನಪ್ಪಿದರೆ ಜೀವನವೇ ಅಲ್ಲೋಲಕಲ್ಲೊಲವಾಗುವುದು. ಇಲ್ಲೊಬ್ಬರ ಮಹಿಳೆಯ ಜೀವನವು ಇದೇ ರೀತಿಯಾಗಿದೆ. ಕೇವಲ ಮೂರೇ ತಿಂಗಳಲ್ಲಿ ಮಹಿಳೆಯ ಪತಿಯು ಸಾವನ್ನಪ್ಪಿದ್ದಾನೆ. ಇದರಿಂದ ಆಕೆಯ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಒಂದು ಒಳ್ಳೆಯ ಸುದ್ದಿಯೆಂದರೆ ಆಕೆಯ ಗಂಡನ ವೀರ್ಯವನ್ನು ವೈದ್ಯರು ಉಳಿಸಿಕೊಂಡಿರುವುದರಿಂದ ಈಗ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಪತಿ ಸಾವನ್ನಪ್ಪಿದ ಮೂರು ವರ್ಷದ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಕಥೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

ಕರ್ತವ್ಯದಲ್ಲಿದ್ದಾಗ ಪೊಲೀಸ್‌ಗೆ ಗುಂಡು ಹಾರಿಸಲಾಯಿತು....
ಆಕೆಯ ಹೆಸರು ಪೆಯಿ ಸ್ಯಾನಿ ಕ್ಸೈ ಚೆನ್. ಪತಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಕರ್ತವ್ಯ ನಿರ್ವಹಿಸುತ್ತಾ ಇದ್ದಾಗಲೇ ಆತನಿಗೆ ಗುಂಡು ತಾಗಿ ಕೊನೆಯುಸಿರೆಳೆದ. ಅಂತಿಮ ಸಂಸ್ಕಾರ ಮಾಡುವ ಮೊದಲು ಆತನ ವೀರ್ಯವನ್ನು ಕಾಯ್ದಿರಸಬಹುದು ಎಂದು ವೈದ್ಯರು ತಿಳಿಸಿದರು. ಇದರಿಂದ ಆಕೆ ಭವಿಷ್ಯದಲ್ಲಿ ಮಗುವನ್ನು ಪಡೆಯಬಹುದು.

ಪ್ರೇಮಕಥೆ ಅರ್ಧಕ್ಕೆ
ಪ್ರತಿಯೊಂದು ದಂಪತಿಯಂತೆ ಇವರು ಕೂಡ ತಮ್ಮ ಜೀವನದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಧಿಲೀಲೆ ಮಾತ್ರ ಬೇರೆಯೇ ಆಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಆತ ಗುಂಡು ತಗುಲಿ ಸಾವನ್ನಪ್ಪಿದ.

ಅಕೆ ಒಪ್ಪಿದಳು
ಪತಿಯ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಬೇಕೆಂದು ಆಕೆ ಬಯಸಿದ್ದಳು. ಇದಕ್ಕಾಗಿ ಆಕೆ ಪತಿಯ ವೀರ್ಯವನ್ನು ಕಾಯ್ದಿಡುವಂತೆ ವೈದ್ಯರಿಗೆ ಸೂಚಿಸಿದಳು. ಮೂರು ವರ್ಷ ಬಳಿಕ ಆಕೆ ಗರ್ಭಿಣಿಯಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಆಕೆಯ ಅತ್ತೆಯ ಪ್ರತಿಕ್ರಿಯೆ
ಆಕೆಯ ಅತ್ತೆಯು ತನ್ನ ಮಗನ ಮಗುವನ್ನು ಕೈಯಲ್ಲಿ ಹಿಡಿದುಕೊಂಡಾಗ ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆಕೆ ತನ್ನ ಮೊಮ್ಮಗಳಂತೆ ಕಾಣಿಸುತ್ತಾ ಇದ್ದಾಳೆ. ಆದರೆ ಆಕೆಯ ಕಣ್ಣು, ಹಣೆ ತನ್ನ ಮಗನಂತೆ ಇದೆ ಎಂದು ಹೇಳಿದ್ದಾಳೆ. ಮುಖದ ಮೇಲ್ಭಾಗವು ತನ್ನ ಮಗನಂತೆ ಇದೆ. ಕೆಳಭಾಗ ತಾಯಿಯಂತೆ ಇದೆ. ತಲೆ ನನ್ನ ಮಗನಂತೆಯೇ ಇದೆ. ಆಕೆಯಲ್ಲಿ ನನ್ನ ಮಗನನ್ನು ಕಾಣುತ್ತಿದ್ದೇನೆ ಎನ್ನುತ್ತಾಳೆ ಆಕೆ. ಇಂತಹ ಕಥೆಗಳು ನಿಜವಾಗಿ ಪ್ರೀತಿಯ ಅರ್ಥವನ್ನು ತೋರಿಸುತ್ತದೆ. ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಅದು ಎಷ್ಟು ಮೌಲ್ಯವಾಗಿರುವುದು ಎಂದು ಇದರಿಂದ ತಿಳಿದುಬರುವುದು.



Click it and Unblock the Notifications
