ನಿಮಗೆ ಗೊತ್ತಾ? ಇಲ್ಲಿ ಬಾಡಿಗೆಗೂ ಹೆಂಡತಿಯರು ಸಿಗುತ್ತಾರಂತೆ!

By: Divya Pandith
Subscribe to Boldsky

ದೇಶದೆಲ್ಲೆಡೆ ಮಹಿಳಾ ಸಬಲೀಕರಣ ಲಿಂಗ ಸಮಾನತೆಯ ಕುರಿತು ಮಾತನಾಡುತ್ತಿದ್ದೇವೆ. ಇದರ ನಡುವೆ ಹತ್ತು ರೂಪಾಯಿ ಸ್ಟಾಂಪ್ ಪೇಪರ್ ಆಧಾರದ ಮೇಲೆ ಬಾಡಿಗೆ ಹೆಂಡತಿ ಸಿಗುತ್ತಾಳೆ ಎನ್ನುವ ವಿಚಾರ ಕೇಳಿದರೆ ನಮ್ಮನ್ನು ಅದೆಷ್ಟು ಬೆಚ್ಚಿ ಬೀಳುತ್ತದೆ ಅಲ್ಲವಾ? ಅಂತಹ ಒಂದು ಪದ್ಧತಿ ಅಥವಾ ವ್ಯವಹಾರ ನಮ್ಮ ದೇಶದಲ್ಲಿಯೇ ನಡೆಯುತ್ತಿದೆಯಾ? ಎನ್ನುವುದು ನಮ್ಮ ಹುಬ್ಬೇರುವಂತೆ ಮಾಡುತ್ತದೆ.

ಪ್ರೀತಿ, ವಿಶ್ವಾಸ, ಸಂಬಂಧ, ಆಚಾರ-ವಿಚಾರಗಳಲ್ಲಿ ಬಹಳ ಪವಿತ್ರತೆ ಹಾಗೂ ಶ್ರೀಮಂತಿಕೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇಂತಹದೊಂದು ಅಸಹ್ಯಕರ ಪದ್ಧತಿ ಇದೆಯೆಂದರೆ ನಿಜಕ್ಕೂ ಶೋಚನೀಯ ಸಂಗತಿಯೇ. ಮಹಿಳೆಯ ಮೇಲೆ ನಡೆಯುತ್ತಿರುವ ಈ ರೀತಿಯ ಶೋಷಣೆಯು ಇಷ್ಟು ದಿನಗಳಕಾಲ ಯಾರ ಕಣ್ಣಿಗೂ ಬೀಳದೆ ಇದ್ದಿತ್ತೇ? ಎನ್ನುವುದು ಸೋಜಿಗದ ಸಂಗತಿ.

ಪ್ರಪಂಚದಾದ್ಯಂತ ಏನೇನೋ ವೈಶಿಷ್ಯತೆಗಳು ನಡೆಯುತ್ತವೆ ಎನ್ನುವುದನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಂತಹ ವಿಚಾರದಲ್ಲಿ ಇದೂ ಒಂದು ಎಂದರೆ ತಪ್ಪಾಗಲಾರದು. ತನ್ನಬಾಳನ್ನು ಬೆಳಗಲು ಬಾ ಎಂದು ಕೈಹಿಡಿದು ಮನೆಗೆ ತುಂಬಿಸಿಕೊಂಡ ಗಂಡನೇ ಇನ್ನೊಬ್ಬ ಪುರುಷನೊಂದಿಗೆ ಮಲಗಲು ಆಸ್ಪದ ಮಾಡಿಕೊಡುತ್ತಾನೆ ಎಂದರೆ ಅದೆಂತಹ ಕೀಳು ಪರಿಸ್ಥಿತಿ ಬಂದಿದೆ ಎಂದು ಚಿಂತಿಸಬೇಕಿದೆ..

ಎಲ್ಲವೂ ಒಪ್ಪಂದದಡಿಯಲ್ಲಿ!

ಎಲ್ಲವೂ ಒಪ್ಪಂದದಡಿಯಲ್ಲಿ!

ಇಂತಹ ಒಂದು ವ್ಯವಹಾರ ಮಧ್ಯ ಪ್ರದೇಶದ ಶಿವಪುರಿ ಹಳ್ಳಿಯಲ್ಲಿ ನಡೆಯುತ್ತಿದೆ. ಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ತಮ್ಮ ಪತ್ನಿಯರನ್ನು ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೆಂಡತಿಯನ್ನಾಗಿಸಿಕೊಳ್ಳಲು ಬಾಡಿಗೆ ನೀಡುತ್ತಿದ್ದಾರೆ. ಧದೀಚಾ ಪ್ರಥ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಮಹಿಳೆಯರನ್ನು ತಮ್ಮ ಗಂಡಂದಿರು ಹೆಂಡತಿಯಿಲ್ಲದ ಶ್ರೀಮಂತ ಉದ್ಯಮಿಗಳಿಗೆ ಗುತ್ತಿಗೆ ನೀಡುತ್ತಾರೆ. ಇದಕ್ಕೆ ಪುರಾವೆಯ ಪ್ರತಿಯಾಗಿ 10 ರೂಪಾಯಿಯ ಸ್ಟಾಂಪ್ ಪೇಪರ್ ಮೇಲೆ ಒಪ್ಪಂದದ ಸಹಿಯನ್ನು ಹಾಕುತ್ತಾರೆ. ಆ ಮಹಿಳೆಯೂ 10 ರೂ. ಕಾಗದದ ಆಧಾರದ ಮೇಲೆಯೇ ಹೊಸ ಪತಿಯನ್ನು ಹೊಂದುತ್ತಾಳೆ.

ಮಾಸಿಕ ಆದಾಯ ಬರುವುದು

ಮಾಸಿಕ ಆದಾಯ ಬರುವುದು

ಇಂತಹ ಒಂದು ವ್ಯವಹಾರ ಮಧ್ಯ ಪ್ರದೇಶದ ಶಿವಪುರಿ ಹಳ್ಳಿಯಲ್ಲಿ ನಡೆಯುತ್ತಿದೆ. ಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ತಮ್ಮ ಪತ್ನಿಯರನ್ನು ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೆಂಡತಿಯನ್ನಾಗಿಸಿಕೊಳ್ಳಲು ಬಾಡಿಗೆ ನೀಡುತ್ತಿದ್ದಾರೆ. ಧದೀಚಾ ಪ್ರಥ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಮಹಿಳೆಯರನ್ನು ತಮ್ಮ ಗಂಡಂದಿರು ಹೆಂಡತಿಯಿಲ್ಲದ ಶ್ರೀಮಂತ ಉದ್ಯಮಿಗಳಿಗೆ ಗುತ್ತಿಗೆ ನೀಡುತ್ತಾರೆ. ಇದಕ್ಕೆ ಪುರಾವೆಯ ಪ್ರತಿಯಾಗಿ 10 ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದದ ಸಹಿಯನ್ನು ಹಾಕುತ್ತಾರೆ. ಆ ಮಹಿಳೆಯೂ 10 ರೂ. ಕಾಗದದ ಆಧಾರದ ಮೇಲೆಯೇ ಹೊಸ ಪತಿಯನ್ನು ಹೊಂದುತ್ತಾಳೆ.

ಮಾಸಿಕ ಆದಾಯ ಬರುವುದು

ಮಾಸಿಕ ಆದಾಯ ಬರುವುದು

ಈ ಕಾರ್ಯವೆಲ್ಲವೂ 10 ರಿಂದ 100 ರೂಪಾಯಿ ಸ್ಟಾಂಪ್ ಪೇಪರ್‍ನಲ್ಲಿ ಸಹಿ ಮಾಡುವ ಮೂಲಕ ನಡೆಯುತ್ತದೆ. ಇದು ಕೇವಲ ಮಧ್ಯ ಪ್ರದೇಶದಲ್ಲಷ್ಟೇ ಸೀಮಿತವಾಗಿಲ್ಲ. 2006ರಲ್ಲಿ ಗುಜರಾತ್‍ನ ಒಬ್ಬ ವ್ಯಕ್ತಿ ಶ್ರೀಮಂತ ಉದ್ಯಮಿಗೆ ಮಾಸಿಕ ಬಾಡಿಗೆ 8000 ರೂಪಾಯಿಗೆ ಮಾರಿದ್ದ ಎನ್ನಲಾಗಿದೆ.

ಲಿಂಗ ಅಸಮಾನತೆಯೇ ಕಾರಣ

ಲಿಂಗ ಅಸಮಾನತೆಯೇ ಕಾರಣ

ಮಧ್ಯಪ್ರದೇಶ ಮತ್ತು ಗುಜರಾತ್‍ನ ಕೆಲವು ಜಿಲ್ಲೆಗಳಲ್ಲಿ ಲಿಂಗ ಅನುಪಾತದ ಕುಸಿತವು ಇಂತಹ ಚಟುವಟಿಕೆ ಉತ್ಪತ್ತಿಯಾಗಲು ಕಾರಣವಾಗಿದೆ ಎನ್ನುತ್ತಾರೆ.

ಎಲ್ಲವೂ ಹಣಕ್ಕಾಗಿ ನಡೆಯುತ್ತದೆ

ಎಲ್ಲವೂ ಹಣಕ್ಕಾಗಿ ನಡೆಯುತ್ತದೆ

ಕೆಲವು ಸ್ಥಳಗಳಲ್ಲಿ ಬುಡಕಟ್ಟು ಜನಾಂಗದವರು ಬ್ರೋಕರ್‪ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ತಮ್ಮ ಹೆಣ್ಣು ಮಕ್ಕಳನ್ನು ಶ್ರೀಮಂತ ಪುರುಷರಿಗೆ ಮಾರುತ್ತಾರೆ ಎನ್ನಲಾಗುತ್ತದೆ. ದಳ್ಳಾಳಿಗಳು ಶ್ರೀಮಂತ ಪುರುಷರಿಂದ ಸುಮಾರು ರೂ. 65,000 ರೂ ನಿಂದ 70,000 ಹಣವನ್ನು ಪಡೆದು ಬುಡಕಟ್ಟು ಜನಾಂಗದವರಿಗೆ 15,000 ರೂ. ನಿಂದ 20,000 ರೂ ನೀಡುತ್ತಾರೆ.

ಮುಂಚೆಯೇ ಹಣ ಪಡೆದಿರುತ್ತಾರೆ

ಮುಂಚೆಯೇ ಹಣ ಪಡೆದಿರುತ್ತಾರೆ

ಕೆಲವು ಸಂದರ್ಭದಲ್ಲಿ ಮಹಿಳೆಯರನ್ನು 500 ರೂಪಾಯಿಗೆ ದರದಲ್ಲಿ ಮಾರಲಾಗುತ್ತದೆ. ಕೆಲವು ಕುಟುಂಬದಲ್ಲಿ ಬೇರೆ ಸಮುದಾಯದವರಿಗೆ ಮುದವೆ ಮಾಡಿಕೊಡಲು 50,000 ರೂಗಳನ್ನು ಪಡೆದಿರುತ್ತಾರೆ.

ಮುಂದುವರಿಯುತ್ತಲೇ ಇರುತ್ತದೆ

ಮುಂದುವರಿಯುತ್ತಲೇ ಇರುತ್ತದೆ

ಒಬ್ಬ ವ್ಯಕ್ತಿಯಾದ ನಂತರ ಅಂದರೆ ಗುತ್ತಿಗೆ ಅವಧಿ ಸಂಪೂರ್ಣವಾದ ಮೇಲೆ ಪುನಃ ಇನ್ನೊಬ್ಬ ವ್ಯಕ್ತಿಗೆ ಹೆಂಡತಿಯಾಗಿ ಹೋಗುತ್ತಾಳೆ. ಒಟ್ಟಿನಲ್ಲಿ ಆಕೆ ತನ್ನ ಭಾವನೆ ಹಾಗೂ ತನ್ನ ತನವನ್ನು ಮಾರಿಕೊಂಡಂತೆ ಬದುಕುತ್ತಿರುವ ಪರಿಸ್ಥಿತಿಯಾಗಿರುತ್ತದೆ.

ಮಹಿಳೆಯರು ಹೆದರುತ್ತಾರೆ

ಮಹಿಳೆಯರು ಹೆದರುತ್ತಾರೆ

ಇಂತಹ ಅಸಹ್ಯಕರ ವಿಚಾರವನ್ನು ಅನೇಕ ಬಾರಿ ಪೊಲೀಸರ ಮುಂದೆ ಇಡಲಾಗಿದೆ. ಆದರೆ ಆ ಸಮಯದಲ್ಲಿ ಮಹಿಳೆಯರೇ ಯಾವ ವಿಚಾರವನ್ನು ಹೇಳುವುದಿಲ್ಲ. ಕಾರಣ ಮಹಿಳೆಯರು ಬೇರಾವುದೇ ರೀತಿಯಲ್ಲಿ ತೊಂದರೆಗೆ ಈಡಾಗಬಹುದು ಎನ್ನುವ ಭಯಕ್ಕೆ ಒಳಗಾಗಿರುತ್ತಾರೆ.

ಪತ್ರಿಕೆಯೊಂದರಲ್ಲಿ ಪ್ರಕಟಣೆ

ಪತ್ರಿಕೆಯೊಂದರಲ್ಲಿ ಪ್ರಕಟಣೆ

ಭರೂಚಿಯ ನೇತ್ರಾಂಗ ತಾಲೂಕಿನಲ್ಲಿ ಅಟ್ಟಾ ಪ್ರಜಾಪತಿ ಎನ್ನುವ ವ್ಯಕ್ತಿ ತನ್ನ ಹೆಂಡತಿ ಲಕ್ಷ್ಮಿ ಎಂಬಾಕೆಯನ್ನು ಮೆಹ್ಸಾನಾದ ಪಟೇಲನೊಬ್ಬನಿಗೆ ಮಾರಿ ತಿಂಗಳಿಗೆ 8,000 ವೇತನವನ್ನು ಪಡೆಯುತ್ತಿದ್ದ ಎನ್ನುವುದು ಈಗಾಗಲೇ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಇವೆಲ್ಲವೂ ಮೆಹ್ಸಾನಾ, ರಾಜ್ಕೋಟ್ ಮತ್ತು ಗಾಂಧಿನಗರದಂತಹ ಜಿಲ್ಲೆಗಳಲ್ಲಿ ಮಹಳೆಯರ ಕೊರತೆಯಿದೆ. ಅದಕ್ಕಾಗಿ ದಳ್ಳಾಳಿಗಳು ಬಡ ಕುಟುಂಬದವರಿಗೆ ಹಣ ನೀಡುವ ಮೂಲಕ ಈ ರೀತಿಯ ವ್ಯವಹಾರ ನಡೆಸುತ್ತಾರೆ ಎನ್ನಲಾಗುತ್ತಿದೆ.

ಮಹಿಳೆಯರು ಎಚ್ಚೆತ್ತುಕೊಳ್ಳಬೇಕು

ಮಹಿಳೆಯರು ಎಚ್ಚೆತ್ತುಕೊಳ್ಳಬೇಕು

ನಾವು ಮಹಿಳೆಯರ ಒಳಿತಿಗೆ ಮುಂದಾಗುತ್ತಿರುವ ದೇಶದಲ್ಲಿದ್ದೇವೆ. ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಹಕ್ಕಿದೆ ಎನ್ನುವ ಚರ್ಚೆ ನಡೆಯುತ್ತಿರುವಾಗ ಮಹಿಳೇಯರಾದ ನಾವು ಎಚ್ಚೆತ್ತುಕೊಳ್ಳಬೇಕು ಎನ್ನುವ ಅರಿವು ಮೂಡಬೇಕಿದೆ. ತಮಗಾಗುವ ಅನ್ಯಾಯದ ವಿರುದ್ಧ ಮಹಿಳೆಯರು ಬಾಯಿ ಬಿಟ್ಟು ಮಾತನಾಡಬೇಕಿದೆ. ಸುತ್ತಲು ಇರುವವರು ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುವಾಗ ತಮಗಾದ ಅನ್ಯಾಯದ ಬಗ್ಗೆ ಮಾತನಾಡುವ ಧೈರ್ಯ ಮಹಿಳೆಗೆ ಬಂದಾಗ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಬಹುದು.

Image Courtesy -wittyfeed.com

English summary

WIFE ON RENT! It's A Culture In Some Parts Of The Country?

From the earlier phase of rent-a-womb, now Indian women are in the phase of rent-a-wife! Yes, you read me right, RENT-A-WIFE. From being sold in the marriage, now they are asked to live with higher class men who cannot find a wife, on a monthly or yearly-rental basis.In the country where we talk about women empowerment and equal rights, women are actually being sold on a lease. These acts are practiced in our culture from past many years, and it is shocking that no action has been taken against it until now.
Subscribe Newsletter