ಚೀನಾದವರ ಅವಸ್ಥೆ ನೋಡಿ!-ಹಣಕ್ಕಾಗಿ 'ಎದೆ ಹಾಲನ್ನೇ' ಮಾರುತ್ತಿದ್ದಾರೆ!!

By: Arshad
Subscribe to Boldsky

ದುಡ್ಡಿದ್ದವನೇ ದೊಡ್ಡಪ್ಪ ಎಂಬುದೊಂದು ಕನ್ನಡದ ಗಾದೆ. ಈ ಗಾದೆಮಾತು ಕೊಂಚ ವಿಸ್ತರಿಸಿ ಚೀನಾದೇಶಕ್ಕೆ ಅಳವಡಿಸಬಹುದಾದರೆ ಇದನ್ನು ದುಡ್ಡಿದ್ದವಳೇ ದೊಡ್ಡಮ್ಮ ಎಂದು ಮಾರ್ಪಾಡಿಸಬಹುದು. ಏಕೆಂದರೆ ಭಾರತದಂತೆಯೇ ಚೀನಾದಲ್ಲಿಯೂ ಜನಸಂಖ್ಯೆಯ ಬಾಹುಳ್ಯ ತತ್ತರಿಸಿ ಹೋಗುವಷ್ಟಿದ್ದು ಪತಿ ಪತ್ನಿಯರಿಬ್ಬರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಹಣ ಮಾಡಲು ಚೀನೀಯರು ಯೋಚಿಸದೇ ಇರುವ ಮಾರ್ಗವೇ ಇಲ್ಲ ಎನ್ನಬಹುದು.

ಅತ್ಯುತ್ತಮದಿಂದ ಅತ್ಯಂತ ಕಳಪೆ ದರ್ಜೆಯ ವಸ್ತುಗಳನ್ನು ತಯಾರಿಸಿ ವಿಶ್ವದೆಲ್ಲೆಡೆ ಮಾರಾಟ ಮಾಡಿ ಜೀವಿಸುತ್ತಿರುವ ಚೀನೀಯರಿಗೆ ಮಾರಾಟ ಮಾಡಲು ಇಂತಹದ್ದೇ ವಸ್ತು ಬೇಕೆಂದಿಲ್ಲ. ನಕಲಿ ಆಹಾರವೂ ಆಗಬಹುದು, ತಮ್ಮ ಸ್ವಂತ ರಕ್ತ, ಮೂತ್ರಪಿಂಡ, ಕೂದಲು ಒಟ್ಟಾರೆ, ಹಣ ಬಂದರೆ ಏನನ್ನೂ ಮಾರಲು ತಯಾರು!  

ಆಡು ಮುಟ್ಟದ ಸೊಪ್ಪಿಲ್ಲ, ಚೀನೀಯರು ತಿನ್ನದ ಆಹಾರವಿಲ್ಲ!

ಇತ್ತೀಚೆಗೆ ಚೀನಾದಲ್ಲಿ ನಡೆಸಿದ ಸಮೀಕ್ಷೆಯೊಂದರ ಫಲಿತಾಂಶದ ಪ್ರಕಾರ ಚೀನೀಯರು ಈಗ ಇನ್ನೂ ಕೊಂಚ ಮುಂದಕ್ಕೆ ಹೋಗಿ ಹಣಕ್ಕಾಗಿ ತಾಯಿಹಾಲನ್ನೂ ಮಾರುತ್ತಿದ್ದಾರೆ. ಚೀನಾದಲ್ಲಿ ಈ ಪ್ರಕಾರದ ಮಾರಾಟಕ್ಕೆ ಕಾನೂನಿನಿಂದ ನಿಷೇಧ ಹೇರಲಾಗಿದ್ದರೂ ಜನರು ಒಳಗಿಂದೊಳಗೇ ಮಾರುತ್ತಲೇ ಇದ್ದಾರೆ ಹಾಗೂ ಕೊಳ್ಳುವವರೂ ಗೋಪ್ಯವಾಗಿಯೇ ಕೊಳ್ಳುತ್ತಿದ್ದಾರೆ, ಅದೂ ಕೊಂಚ ದುಬಾರಿ ಬೆಲೆಗೆ.ಬನ್ನಿ, ಈ ವಿಚಿತ್ರ ವಿದ್ಯಮಾನದ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ..... 

ಚೀನಾದಲ್ಲಿ ತಾಯಿಹಾಲು ಮಾರುವುದು ನಿಷೇಧ

ಚೀನಾದಲ್ಲಿ ತಾಯಿಹಾಲು ಮಾರುವುದು ನಿಷೇಧ

ಚೀನಾ ದೇಶದ ಆರೋಗ್ಯ ಸಚಿವಾಲಯ ಆಹಾರವಸ್ತುವನ್ನಾಗಿ ಉತ್ಪಾದಿಸಿ ಮಾರಬಹುದಾದ ವಸ್ತುಗಳ ಪಟ್ಟಿಯಲ್ಲಿ ತಾಯಿಹಾಲು ಸೇರಿಲ್ಲ. ಆ ಪ್ರಕಾರ ತಾಯಿಹಾಲನ್ನು ಮಾರುವುದೂ ಕೊಳ್ಳುವುದೂ ಕಾನೂನಿಗೆ ವಿರುದ್ಧವಾಗಿದ್ದು ಶಿಕ್ಷಾರ್ಹವಾಗಿದೆ.

ಆದರೆ ತಾಯಿಹಾಲಿಗೆ ದುಬಾರಿ ಬೆಲೆ ಇದೆ

ಆದರೆ ತಾಯಿಹಾಲಿಗೆ ದುಬಾರಿ ಬೆಲೆ ಇದೆ

ಸುಮಾರು ಕಾಲು ಲೀಟರ್ ನಷ್ಟು ಶೀತಲೀಕರಿಸಿ ಸಂಗ್ರಹಿಸಿರುವ ತಾಯಿಹಾಲಿಗೆ ಹದಿನೈದು ಯುವಾನ್ (ಸುಮಾರು 142 ರೂ) ನಿಂದ ಅವರತ್ತು ಯುವಾನ್ ವರೆಗೆ (568) ಬೆಲೆ ಇದೆ. ಆದರೆ ಇಂದಿನ ದಿನದ ತಾಯಿಹಾಲಿಗೆ ನೂರೈವತ್ತು ಯುವಾನ್ (1420 ರೂ) ವರೆಗೂ ಬೆಲೆ ಕಟ್ಟಲಾಗುತ್ತದೆ.

ಕಾನೂನಿಗೆ ವಿರುದ್ಧವಾದರೂ ಭಾರೀ ಪ್ರಮಾಣದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಈ ವ್ಯವಹಾರ

ಕಾನೂನಿಗೆ ವಿರುದ್ಧವಾದರೂ ಭಾರೀ ಪ್ರಮಾಣದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಈ ವ್ಯವಹಾರ

ಹೇಗಾದರೂ ಮಾಡಿ ಕೊಂಚ ಹಣ ಸಂಪಾದಿಸಿ ಕುಟುಂಬ ನಡೆಸುವಂತಾದರೆ ಸಾಕು ಎಂಬ ಸ್ಥಿತಿಯಲ್ಲಿರುವ ಲಕ್ಷಾಂತರ ತಾಯಂದಿರಿಗೆ ಇದು ಒಂದು ಸುವರ್ಣಾವಕಾಶವಾಗಿದ್ದು ತಮ್ಮ ಹಾಲನ್ನು ಮಾರಿಕೊಳ್ಳುವ ಮೂಲಕ ಏನಿಲ್ಲವೆಂದರೂ ಏಳು ಸಾವಿರದಿಂದ (66,291 ರೂ) ಎಂಟು ಸಾವಿರ ಯುವಾನ್ (75761 ರೂ) ನಷ್ಟು ಪ್ರತಿ ತಿಂಗಳೂ ಸಂಪಾದಿಸಬಹುದು. ಇದೇ ಕಾರಣಕ್ಕೆ ಕಾನೂನಿಗೆ ವಿರುದ್ಧವಾದರೂ ಭಾರೀ ಪ್ರಮಾಣದಲ್ಲಿ ಈ ವ್ಯವಹಾರ ನಡೆಯುತ್ತಿದೆ.

ಅಷ್ಟಕ್ಕೂ ತಾಯಿ ಹಾಲು ಸತತವಾಗಿ ಉತ್ಪತ್ತಿಯಾಗುವುದು ಹೇಗೆ?

ಅಷ್ಟಕ್ಕೂ ತಾಯಿ ಹಾಲು ಸತತವಾಗಿ ಉತ್ಪತ್ತಿಯಾಗುವುದು ಹೇಗೆ?

ತಮ್ಮ ಹಾಲಿಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ ಎಂದು ಗೊತ್ತಾದ ತಾಯಂದಿರು ತಮ್ಮ ಹಾಲನ್ನು ಉತ್ಪಾದಿಸಿಕೊಳ್ಳಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಪರಿಣಾಮವಾಗಿ ತಮ್ಮ ಸ್ವಂತ ಮಗುವಿನ ಪಾಲಿನ ಹಾಲನ್ನು ಕಡಿಮೆ ಮಾಡುತ್ತಾರೆ ಹಾಗೂ ಬೇಗನೇ ಹಾಲು ಬಿಡಿಸುತ್ತಾರೆ. ಇನ್ನೂ ಕೆಲವರು ತಾಯಿ ಹಾಲು ಹೆಚ್ಚಿಸುವ ಆಹಾರಗಳನ್ನು ಸೇವಿಸುತ್ತಾರೆ.

ತಾಯಿ ಹಾಲು ಇಷ್ಟೇಕೆ ದುಬಾರಿ?

ತಾಯಿ ಹಾಲು ಇಷ್ಟೇಕೆ ದುಬಾರಿ?

ಮಗುವಿಗೆ ತಾಯಿಹಾಲಿಗಿಂತ ಅಮೃತಸಮಾನವಾದ ದ್ರವ ಈ ಜಗತ್ತಿನಲ್ಲಿಯೇ ಇಲ್ಲ. ತಾಯಿಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯವಾದ ಪ್ರತಿವಿಷ ಅಥವಾ ಆಂಟಿಬಾಡಿಗಳು, ಜೀವಂತ ಕೋಶಗಳು, ಕಿಣ್ವಗಳು, ಹಾರ್ಮೋನುಗಳು, ಕೊಬ್ಬಿನ ಆಮ್ಲ ಮೊದಲಾದವು ಬೇರಾವುದೇ ಆಹಾರದಲ್ಲಿ ಸಿಗಲು ಸಾಧ್ಯವೇ ಇಲ್ಲ. ಆದ್ದರಿಂದ ಮಕ್ಕಳಿಗೆ ಕುಡಿಸಲು ಈ ಹಾಲಿಗೆ ಸದಾ ಬೇಡಿಕೆ ಇರುತ್ತದೆ.

ಆದರೆ ಮಕ್ಕಳಿಗೆ ಅದರ ಸ್ವಂತ ತಾಯಿಯ ಹಾಲು ಸಾಕಾಗದೇ?

ಆದರೆ ಮಕ್ಕಳಿಗೆ ಅದರ ಸ್ವಂತ ತಾಯಿಯ ಹಾಲು ಸಾಕಾಗದೇ?

ಇಲ್ಲೇ ಇರುವುದು ಈ ಭಾರೀ ವ್ಯವಹಾರದ ಗುಟ್ಟು. ಪ್ರೌಢ ವ್ಯಕ್ತಿಗಳು ತಮ್ಮ ಮಗುವಿದೆ ಎಂದು ಹೇಳಿ ಹಾಲನ್ನು ಕೊಳ್ಳುತ್ತಿದ್ದರೂ ಈ ಹಾಲನ್ನು ಕುಡಿಯಲು ಅವರ ಮನೆಯಲ್ಲಿ ಮಗು ಇರುವುದೇ ಅನುಮಾನ. ಏಕೆಂದರೆ ಮಕ್ಕಳ ಹೆಸರು ಹೇಳಿ ಹಿರಿಯರೇ ಈ ಹಾಲನ್ನು ಕುಡಿಯುವುದೇ ನಿಜವಾದ ಬೇಡಿಕೆಗೆ ಕಾರಣವಾಗಿದೆ. ಕೆಲವರಂತೂ ಇನ್ನೂ ಮುಂದಕ್ಕೆ ಹೋಗಿ ಬಾಡಿಗೆ ತಾಯನ್ನು ಮನೆಗೇ ಕರೆತಂದು ನೇರವಾಗಿ ಹಾಲನ್ನು ಕರೆಸಿಕೊಂಡು ಹಣ ನೀಡುತ್ತಿದ್ದಾರೆ.

ಈ ವ್ಯಾಪಾರ ಇರುವುದು ಚೀನಾದಲ್ಲಿ ಮಾತ್ರ ಅಲ್ಲ

ಈ ವ್ಯಾಪಾರ ಇರುವುದು ಚೀನಾದಲ್ಲಿ ಮಾತ್ರ ಅಲ್ಲ

ಚೀನಾದಲ್ಲಿ ಕಾನೂನಿಗೆ ವಿರುದ್ದವಾಗಿ ಈ ವ್ಯಾಪಾರ ನಡೆಯುತ್ತಿದ್ದರೂ ಅತ್ತ ಇಂಗ್ಲೆಂಡಿನಲ್ಲಿ ಕಾನೂನಿನ ಅಧಿಕೃತ ಮುದ್ರೆ ಪಡೆದೇ ಸಂಸ್ಥೆಯೊಂದು ತಾಯಿಹಾಲನ್ನು ಬಳಸಿ ತಯಾರಿಸಿದ ಐಸ್ ಕ್ರೀಂಗಳನ್ನು ಮಕ್ಕಳಿಗಾಗಿ ಮಾರಾಟ ಮಾಡುತ್ತಿದೆ. ಬೇಬೇ ಗಾಗಾ ಡೆಸರ್ಟ್ ಎಂಬ ಹೆಸರಿನ ಈ ಉತ್ಪನ್ನವನ್ನು ಒಂದು ರಸ್ಕ್ ತುಂಡಿನ ಜೊತೆಗೇ ಮಾರಲಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

Why Are These Chinese Mothers Selling Their Breast Milk?

Though selling of breast milk is said to be illegal, there are people who are still selling this and then those who are buying it as well. Though selling of breast milk is said to be illegal, there are people who are still selling this and then those who are buying it as well. Check out the bizarre reason for what is making women sell their breast milk.
Subscribe Newsletter