ಕೃತಕ ಮೊಲೆತೊಟ್ಟು-ಫ್ಯಾಷನ್ ಜಗತ್ತಿನಲ್ಲಿ ಬರುತ್ತಿರುವ ಹೊಸ ಅಲೆ!!

Posted By: Deepu
Subscribe to Boldsky

ನಾಲ್ಕು ಜನರ ನಡುವೆ ಗುರುತಿಸಿಕೊಳ್ಳಲು ನಮ್ಮ ಅಲಂಕಾರ, ವಸ್ತ್ರಗಳು ಹಾಗೂ ಪಾದರಕ್ಷೆ ಮೊದಲಾದ ಪರಿಕರಗಳು ಭಿನ್ನವಾಗಿರಬೇಕು ಎಂಬ ಅಗತ್ಯತೆಯೇ ಫ್ಯಾಷನ್. ನಾವು ತೊಡುವ ಅಥವಾ ಅಲಂಕಾರದ ಒಂದು ವಿನ್ಯಾಸ ಹೊಸದಾಗಿದ್ದು ಮಾರುಕಟ್ಟೆಗೆ ಪರಿಚಯಿಸಿದಾಕ್ಷಣ ಎಲ್ಲರೂ ಇದೇ ಬಗೆಯನ್ನು ಅನುಸರಿಸುವುದೇ ಫ್ಯಾಷನ್.

ಇದು ಕಾಲಕಾಲಕ್ಕೆ ಬದಲಾಗುತ್ತಿರಬೇಕು ಹಾಗೂ ಭಿನ್ನವಾಗಿರಬೇಕು ಎಂಬುದೇ ಇದರ ಮೂಲ ತಂತ್ರ. ಇದೇ ಕಾರಣದಿಂದ ಚಿತ್ರವಿಚಿತ್ರವಾದ ಬಟ್ಟೆ ಹಾಗೂ ಅಲಂಕಾರಿಕ ಸಾಮಾಗ್ರಿಗಳು ಪ್ರದರ್ಶನಗೊಳ್ಳುತ್ತಿವೆ. ಇಂದಿನ ದಿನಗಳಲ್ಲಿ ಕಾಣಬರುತ್ತಿರುವ ಪಾರದರ್ಶಕ ಪುರುಷರ ಒಳ ಉಡುಪುಗಳಿಂದ ಹಿಡಿದು ಪ್ರಖರ ಬಣ್ಣದ ಹೊರಚೆಡ್ಡಿಗಳವರೆಗೆ ವಿಚಿತ್ರವಾದ ಉತ್ಪನ್ನಗಳು ಫ್ಯಾಷನ್ ಜಗತ್ತಿನಲ್ಲಿ ರಾರಾಜಿಸುತ್ತಿವೆ.

ಈ ನಡುವೆ ಮಹಿಳೆಯರ ಉಡುಪುಗಳ ಸಂತೆಯಲ್ಲಿ ಹೊಸದಾದ ಒಂದು ಪರ್ವ ಪ್ರಾರಂಭವಾಗಿದೆ. ಅದೆಂದರೆ ಹೆಣ್ತನದ ಸಂಕೇತವಾದ ಮೊಲೆತೊಟ್ಟನ್ನು ಸ್ಪಷ್ಟವಾಗಿ ಉಡುಪಿನ ಒಳಗಿನಿಂದ ಎದ್ದು ಕಾಣುವಂತೆ ಉಬ್ಬಿಸುವುದು!! ನೈಸರ್ಗಿಕ ಮೊಲೆತೊಟ್ಟಿಗೆ ಇದು ಸಾಧ್ಯವಿಲ್ಲದ ಕಾರಣ ಮೇಲುಡುಪಿನ ಅಡಿಯಲ್ಲಿ ಕೃತಕವಾದ ಮೊಲೆತೊಟ್ಟನ್ನಿರಿಸಿ ಎದುರಿನವರ ದೃಷ್ಟಿಯನ್ನು ಅರಳಿಸುವುದು ಇಂದಿನ ಹೊಸ ಫ್ಯಾಷನ್ಆ ಗಿದೆ. ಅಷ್ಟಕ್ಕೂ ಈ ಫ್ಯಾಷನ್ ಅನ್ನು ಧರಿಸಿ ಎಗ್ಗಿಲ್ಲದೇ ಪ್ರದರ್ಶಿಸುತ್ತಿರುವ ಮಹಿಳೆಯರು ಈ ಬಗ್ಗೆ ಏನೆನ್ನುತ್ತಾರೆ ನೋಡೋಣ..

ಇದೇ ಲೇಟೆಸ್ಟ್ ಫ್ಯಾಷನ್!

ಇದೇ ಲೇಟೆಸ್ಟ್ ಫ್ಯಾಷನ್!

ಅತ್ಯಂತ ತಡವಾಗಿ ಯಾವುದೇ ಫ್ಯಾಷನ್ ಬಂದರೂ ಇದನ್ನು ಅಳವಡಿಸಿಕೊಳ್ಳದೇ ಇದ್ದರೆ ನಾವು ಹಿಂದೆ ಉಳಿದುಬಿಡುತ್ತೇವೆ, ಹಾಗಾಗಿ ಎಲ್ಲರೂ ಧರಿಸುವಾಗ ನಾವೂ ಧರಿಸಬೇಕಾಗುತ್ತದೆ ಎಂಬ ಹೇಳಿಕೆಯನ್ನು ಹೆಚ್ಚಿನವರು ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿಟ್ಟ ಮಹಿಳೆಯರಂತೂ ನಾವು ಇದನ್ನು ಧರಿಸಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಸ್ಟಿಕ್ಕರುಗಳನ್ನು ಅಂಟಿಸಿಕೊಂಡೇ ತಿರುಗುತ್ತಿದ್ದಾರೆ.

ಇವು ಆನ್ಲೈನ್‌ನಲ್ಲಿ ಸುಲಭವಾಗಿ ಸಿಗುತ್ತಿವೆ!

ಇವು ಆನ್ಲೈನ್‌ನಲ್ಲಿ ಸುಲಭವಾಗಿ ಸಿಗುತ್ತಿವೆ!

ಪ್ಲಾಸ್ಟಿಕ್‌ನಿಂದ ತಯಾರಾದ ಈ ಉತ್ಪನ್ನಗಳು ಆನ್ಲೈನ್‌ನಲ್ಲಿ ಸುಲಭವಾಗಿ ಲಭ್ಯವಿದ್ದು ಇವುಗಳನ್ನು ಮಹಿಳೆಯರು ತಮ್ಮ ಸ್ತನತೊಟ್ಟಿನ ಮೇಲೆ ನೇರವಾಗಿ ಅಳವಡಿಸಿಕೊಂಡು ತಮ್ಮ ಉಡುಪುಗಳನ್ನು ಧರಿಸುವ ಮೂಲಕ ನೋಡುಗರಲ್ಲಿ ಮೈಬಿಸಿಯುಂಟುಮಾಡುತ್ತಿದ್ದಾರೆ.

"ಈ ಮೊಲೆತೊಟ್ಟನ್ನು ಬಿಡುಗಡೆಗೊಳಿಸಿ" ಅಭಿಯಾನ

ಇತ್ತೀಚಿನ ದಿನಗಳಲ್ಲಿ ಈ ಫ್ಯಾಶನ್ ಅನ್ನು ಜನಪ್ರಿಯಗೊಳಿಸಲು ಕೆಲವು ಮಹಿಳೆಯರು "free the nipple" ಎಂಬ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಈ ಮೂಲಕ ಒಂದು ವೇಳೆ ಪುರುಷರು ಮೇಲ್ವಸ್ತ್ರ ಧರಿಸದೇ ತಿರುಗಾಡಬಹುದಾದರೆ ಈ ಹಕ್ಕು ತಮಗೂ ಬೇಕು ಎಂಬ ದಿಟ್ಟ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಈ ವಿಷಯ ತೀರಾ ವೈಯಕ್ತಿಕ ಹಾಗೂ ವಿವಾದಿತವಾದುದರಿಂದ ಹೆಚ್ಚಿನ ಗಮನವನ್ನೂ ಪಡೆದುಕೊಳ್ಳುತ್ತಿದೆ.

ಈ ಅಭಿಯಾನವನ್ನು ಹೆಚ್ಚಿನ ಮಹಿಳೆಯರು ಪ್ರೋತ್ಸಾಹಿಸುತ್ತಿದ್ದಾರೆ

ಈ ಅಭಿಯಾನವನ್ನು ಹೆಚ್ಚಿನ ಮಹಿಳೆಯರು ಪ್ರೋತ್ಸಾಹಿಸುತ್ತಿದ್ದಾರೆ

ಬೆಂಬಲಿಸಿ ಕೃತಕ ಮೊಲೆತೊಟ್ಟಿನ ಮೂಲಕ ತಮ್ಮನ್ನು ಗಮನಿಸುವುದನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲದುದನ್ನು ಗಮನಿಸುವ ಮೂಲಕ ಕೆಲವು ಮಹಿಳೆಯರು ಈ ಅಭಿಯಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ.

ಫ್ಯಾಷನ್ ಪ್ರಿಯರು ಹೀಗೆನ್ನುತ್ತಾರೆ....

ಫ್ಯಾಷನ್ ಪ್ರಿಯರು ಹೀಗೆನ್ನುತ್ತಾರೆ....

ಈ ಮೊಲೆತೊಟ್ಟನ್ನು ನೀವು ಫ್ಯಾಷನ್‌ಗಾಗಿಯೇ ತೊಡಿರಿ ಅಥವಾ ಸ್ತ್ರೀ ಸಮಾನತಾ ವಾದವನ್ನು ಬೆಂಬಲಿಸಲು (ಅಥವಾ ಎರಡೂ) ಬೇಕಾದರೂ ತೊಡಿ. ಇದರಿಂದ ನೀವು ಆತ್ಮವಿಶ್ವಾಸದಿಂದ ಎದೆಯುಬ್ಬಿಸಿ ಸಮಾಜವನ್ನು ಎದುರಿಸಬಹುದು, ಇದರಲ್ಲಿ ಮುಚ್ಚಿಡುವಂತಹದ್ದೇನೂ ಇಲ್ಲ ಎಂದು ಫ್ಯಾಷನ್ ಪ್ರಿಯರು ತಿಳಿಸುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

For Quick Alerts
ALLOW NOTIFICATIONS
For Daily Alerts

    English summary

    Why Are Fake Nipples The Latest “In Thing”

    Amidst this, most of us would have heard about the word 'fake nipples'. Though this makes you raise your eyebrows, you would be shocked to know that these fake nipples are the "in thing" in the fashion industry these days. Find out how women are making a bold statement by flaunting these fake nipples as assets!
    Story first published: Monday, June 12, 2017, 23:55 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more