ಮರಣದ ನಂತರ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಅಕೌಂಟ್ ಏನಾಗಲಿದೆ..?

By: Deepu
Subscribe to Boldsky

ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರುವುದು. ಹೆಚ್ಚಿನ ಜನರಲ್ಲಿ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಿಂದ ಬೇರೆಯವರೊಂದಿಗೆ ಪರಿಚಯವಾಗುವುದು, ಹೊಸ ಹೊಸ ವಿಚಾರಗಳು ತಿಳಿದುಬರುವುದು.

ಸಾಮಾಜಿಕ ಜಾಲತಾಣಗಳನ್ನು ನೀವು ಬಳಸುತ್ತಾ ಇದ್ದರೆ ತುಂಬಾ ಒಳ್ಳೆಯದು. ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ? ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳಿಗೆ ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್ ಬುಕ್ ನಿಂದ ಹಿಡಿದು ಟ್ವಿಟ್ಟರ್ ತನಕ ನಿಮ್ಮ ಸಾವಿನ ಬಳಿಕ ಇದನ್ನು ಯಾರು ನಿರ್ವಹಿಸಬಹುದು ಎಂದು ತಿಳಿಯಿರಿ....

ಫೇಸ್ ಬುಕ್

ಫೇಸ್ ಬುಕ್

ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾಗುವಂತಹ ಸಾಮಾಜಿಕ ಜಾಲತಾಣವೆಂದರೆ ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಮೃತಪಟ್ಟವರಿಗಾಗಿಯೇ ಕೆಲವೊಂದು ವಿಶೇಷ ಕಾನೂನುಗಳಿವೆ. ಮೃತರ ಖಾತೆಯನ್ನು ಡಿಲೀಟ್ ಮಾಡಬಹುದು ಅಥವಾ ನೆನಪಿಗಾಗಿ ಮುಂದುವರಿಸಬಹುದು. ನೆನಪಿಗಾಗಿ ಮೃತರ ಖಾತೆಯ ಮುಂದುವರಿಸಲು ಬಯಸಿದರೆ, ಆ ಖಾತೆಯ ಹೆಸರಿನ ಮುಂದೆ `ನೆನಪಿಗಾಗಿ' ಪದವು ಬರುವುದು. ಮೃತ ವ್ಯಕ್ತಿಗೆ ನಿಮ್ಮ ಸಂಬಂಧ ಮತ್ತು ಮೃತರ ಬಳಿಕ ಆ ಖಾತೆ ನಿರ್ವಹಿಸುವವರ ಹೆಸರಿನ ಕಾನೂನು ಒಪ್ಪಂದ ಫೇಸ್ ಬುಕ್ ಗೆ ಕಳುಹಿಸಬೇಕು. ಮರಣಪತ್ರ ಸಿಕ್ಕಿದ ಬಳಿಕ ಒಪ್ಪಂದದಂತೆ ಫೇಸ್ ಬುಕ್ ಕಾರ್ಯನಿರ್ವಹಿಸುವುದು.

ಯೂ ಟ್ಯೂಬ್

ಯೂ ಟ್ಯೂಬ್

ಯೂ ಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಯೂ ಟೂಬ್ ಅವಕಾಶ ನೀಡುವುದು. ಯೂ ಟೂಬ್ ನಲ್ಲಿ ಹಣ ಸಂಪಾದನೆ ಮಾಡುವಂತಹ ಲಕ್ಷಾಂತರ ಮಂದಿಗೆ ಇದು ತುಂಬಾ ಒಳ್ಳೆಯ ಆಯ್ಕೆ. ಸಾವಿನ ಬಳಿಕ ನಿಮ್ಮ ಚಾನೆಲ್ ನ್ನು ಯಾರು ನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟೂಬ್ ಮುಚ್ಚುವುದು. ನೀವು ಗೂಗಲ್ ನ ಇನ್ ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.

ಇನ್ ಸ್ಟಾಗ್ರಾಮ್

ಇನ್ ಸ್ಟಾಗ್ರಾಮ್

ಇನ್ ಸ್ಟಾ ಗ್ರಾಮ್ ನ ನಿಯಮಗಳು ಅದರ ಮೂಲ ಕಂಪನಿ ಫೇಸ್ ಬುಕ್ ಗೆ ಸಮಾನವಾಗಿದೆ. ಖಾತೆಯನ್ನು ನೆನಪಿಗಾಗಿ ಅಥವಾ ಖಾಯಂ ಆಗಿ ಮುಚ್ಚಿಬಿಡಬಹುದು. ಆದರೆ ಇದು ನಿಮ್ಮ ಕೈಯಲ್ಲಿ ಇಲ್ಲ. ಇನ್ ಸ್ಟಾ ಗ್ರಾಮ್ ಗೆ ನಿಮ್ಮ ಮರಣಪತ್ರ ಸಲ್ಲಿಸುವ ವ್ಯಕ್ತಿಯು ಖಾತೆ ಡಿಲೀಟ್ ಮಾಡುವ ಅಥವಾ ನೆನಪಿಗಾಗಿ ಮುಂದುವರಿಸುವ ನಿರ್ಧಾರ ಮಾಡಬಹುದು.

ಟ್ವಿಟ್ಟರ್

ಟ್ವಿಟ್ಟರ್

ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟ್ಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟ್ಟರ್ ಗೆ ಮನವಿ ಮಾಡಿಕೊಳ್ಳಬಹುದು. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.

ಕೊರಾ

ಕೊರಾ

ಕಳೆದ ಕೆಲವು ವರ್ಷಗಳಿಂದ ತುಂಬಾ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣವೆಂದರೆ ಕೊರಾ. ಮನವಿಯ ಬಳಿಕ ನಿಮ್ಮ ಖಾತೆಯನ್ನು ನೆನೆಪಿಗಾಗಿ ಇಡುವಂತಹ ನಿಯಮವು ಕೊರಾದಲ್ಲಿದೆ. ಆದರೆ ಖಾತೆದಾರನ ಮರಣಪ್ರಮಾಣ ಪತ್ರ ನೀಡುವುದು ಕಡ್ಡಾಯ.

ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಳಕೆದಾರರ ಹೆಸರು ಏನಾಗುವುದು?

ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಳಕೆದಾರರ ಹೆಸರು ಏನಾಗುವುದು?

ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾ ಗ್ರಾಮ್ ಮತ್ತು ಇತರ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಖಾತೆದಾರನು ವಿಶಿಷ್ಟ ಗುರುತಿನ ಹೆಸರು(ಬಳಕೆದಾರನ ಹೆಸರು) ಹೊಂದಿರುತ್ತಾರೆ. ಲಿಂಕ್ಡ್ ಇನ್ ಮತ್ತು ಫೇಸ್ ಬುಕ್ ನಲ್ಲಿ ಬೇರೆಯವರು ನಿಮ್ಮ ಬಳಕೆದಾರನ ಹೆಸರು ಪಡೆಯಬಹುದು. ಆದರೆ ಇನ್ ಸ್ಟಾ ಗ್ರಾಮ್, ಟ್ವಿಟ್ಟರ್ ಮತ್ತು ಗೂಗಲ್ ಬಳಕೆದಾರರ ಹೆಸರನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ.

ಮರಣದ ಬಳಿಕ ಎಷ್ಟು ಸಮಯ ಖಾತೆ ಸಕ್ರಿಯವಾಗಿರುವುದು?

ಮರಣದ ಬಳಿಕ ಎಷ್ಟು ಸಮಯ ಖಾತೆ ಸಕ್ರಿಯವಾಗಿರುವುದು?

ನಿಮ್ಮ ಸಾವಿನ ಬಗ್ಗೆ ಯಾರಾದರೂ ತಿಳಿಸುವ ತನಕ ಫೇಸ್ ಬುಕ್ ಖಾತೆಯು ಸಕ್ರಿಯವಾಗಿರುವುದು. ಲಿಕ್ಡ್ ಇನ್ ಖಾತೆಯು ಸಾವಿನ ಸುದ್ದಿ ತಿಳಿದ ತಕ್ಷಣ ಮುಚ್ಚಲ್ಪಡುವುದು. ಟ್ವಿಟ್ಟರ್ ಖಾತೆ ನಿಷ್ಕ್ರೀಯವಾಗಲು ಆರು ತಿಂಗಳು ಬೇಕು. ಮರಣದ ಬಗ್ಗೆ ಗೂಗಲ್ ಗೆ ವರದಿ ನೀಡಿದ ತಕ್ಷಣವೇ ಖಾತೆಯು ನಿಷ್ಕ್ರೀಯವಾಗುವುದು. ಸಾಮಾಜಿಕ ಜಾಲತಾಣಗಳು ನೀಡಿರುವಂತಹ ಖಾಸಗಿ ನಿಯಮಗಳು ಸತ್ತ ವ್ಯಕ್ತಿ ಖಾತೆ ನಿರ್ವಹಿಸಲು ಸರಿಯಾಗಿದೆಯಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

English summary

Who Operates Your Social Media Account After Death?

Social media plays a very important role in our lives, as it opens up the possibility of socializing with others, discovering new things, making new friends and expressing our opinion and thoughts. Social media life is good when you manually operate it, but have you ever thought about the digital selves after you die? In the terms of different social media platform, the answer depends upon the privacy policy introduced by that particular platform. From Facebook to Twitter, here's who operates your social media account after death.
Story first published: Tuesday, October 3, 2017, 23:40 [IST]
Subscribe Newsletter