2018ರಲ್ಲಿ ಯಾವ ರಾಶಿ ಚಕ್ರದವರಿಗೆ ವಿವಾಹ ಯೋಗವಿದೆ?

By: Divya Pandith
Subscribe to Boldsky

ವಿವಾಹ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿವಾಹದ ಪೂರ್ವಕ್ಕಿಂತ ವಿವಾಹದ ನಂತರ ವ್ಯಕ್ತಿ ಕಲ್ಪನೆಗೂ ಸಿಗದಷ್ಟು ಬದುಕು ಬದಲಾವಣೆಯನ್ನು ಕಾಣುತ್ತದೆ. ಹಿಂದೆಂದು ಕಾಣದ ಜವಾಬ್ದಾರಿ ಹಾಗೂ ಹೊಂದಾಣಿಕೆಯನ್ನು ವಿವಾಹದ ನಂತರ ನಿಭಾಯಿಸ ಬೇಕಾಗುವುದು. ಹಾಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ನಮ್ಮ ವಿವಾಹಕ್ಕೆ ಒಂದು ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ.

ವಿವಾಹವು ನಾವು ಅಂದುಕೊಂಡಂತೆ ನಡೆಯಲು ಸಾಧ್ಯವಿಲ್ಲ. ಅವೆಲ್ಲವೂ ನಮ್ಮ ಜನ್ಮ ಕುಂಡಲಿಯನ್ನು ಅವಲಂಭಿಸಿರುತ್ತದೆ. ವ್ಯಕ್ತಿಯ ಜೀವನದಲ್ಲಿ ಮಂಗಳವನ್ನುಂಟು ಮಾಡುವ ಶಕ್ತಿ ಗುರು ಗ್ರಹಕ್ಕೆ ಇದೆ ಎನ್ನಲಾಗುವುದು. ಗುರುಗ್ರಹದ ಪ್ರಭಾವ ಅಧಿಕ ಹಾಗೂ ಉತ್ತಮ ಫಲಿತಾಂಶವನ್ನು ನೀಡುವಂತಹ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ವಿವಾಹವಾಗುತ್ತದೆ. ಜೊತೆಗೆ ಒಳ್ಳೆಯ ವ್ಯಕ್ತಿಯನ್ನು ವರಿಸುತ್ತಾನೆ ಎನ್ನಲಾಗುವುದು.

ಗುರುಗ್ರಹದ ಪ್ರಭಾವ ಇಲ್ಲದಿರುವಾಗ ಅದೆಷ್ಟೇ ಪ್ರಯತ್ನ ಮಾಡಿದರೂ ವಿವಾಹ ಯೋಗ ಕೂಡಿ ಬರದು. 2018ರಲ್ಲಿ ಯಾವ ರಾಶಿಚಕ್ರದವರಿಗೆ ವಿವಾಹ ಯೋಗವಿದೆ? ಯಾರ ಜೀವನದಲ್ಲಿ ದಾಂಪತ್ಯ ಜೀವನ ಸುಂದರವಾಗಿ ಮುಂದುವರಿಯುವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ. ಜೊತೆಗೆ ತನ್ನ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರು ದಾಂಪತ್ಯ ಜೀವನದಲ್ಲಿ ಅತ್ಯುನ್ನತವಾದ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯಲ್ಲಿರುವ ಅವಿವಾಹಿತರು 2018ರಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಷಭ

ವೃಷಭ

ಇವರು ಆಗಲೇ ಒಂದು ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಲ್ಲದೆ ತಮ್ಮ ಪ್ರೀತಿಯನ್ನು ಖುಷಿಪಡಿಸುವುದು ಹಾಗೂ ಅದರೊಂದಿಗೆ ಉತ್ತಮವಾದ ಜೀವನವನ್ನು ಕಳೆಯುತ್ತಿದ್ದಾರೆ ಎಂದು ಹೇಳಬಹುದು. ಇವರು ತಮ್ಮ ಸಂಗಾತಿಗೆ ಪ್ರಶಂಸೆ ಹಾಗೂ ಆಶ್ಚರ್ಯಕರವಾದ ಉಡುಗೊರೆ ನೀಡುವುದರ ಮೂಲಕ ಪ್ರೀತಿಯನ್ನು ಹೆಚ್ಚಿಸುವರು. ಅವಿವಾಹಿತರು 2018 ಮುಗಿಯುವುದರ ಒಳಗೆ ವಿವಾಹವನ್ನು ನಿಶ್ಚಯಮಾಡಿಕೊಳ್ಳುವ ಸಾಧ್ಯತೆಗಳಿವೆ.

ಮಿಥುನ

ಮಿಥುನ

ಈ ರಾಶಿಯವರು 2018 ಅಕ್ಟೋಬರ್ ವರೆಗೆ ಅತ್ಯುತ್ತಮ ದಾಂಪತ್ಯ ಜೀವನ ನಡೆಸುವರು. ನಿಮ್ಮ ಪ್ರೀತಿಯ ಪ್ರತೀಕವಾಗಿ ಮಗುವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮನೆಗೆ ಬರುವ ಹೊಸ ಅತಿಥಿಯು ನಿಮ್ಮ ಮನೆ ಮನಸ್ಸನ್ನು ಹರುಷಗೊಳಿಸುವರು. ನಿಮ್ಮ ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ, ಜವಾಬ್ದಾರಿಯನ್ನು ನಿಭಾಯಿಸುವಿರಿ. ಧಾರ್ಮಿಕ ಚಿಂತನೆಗಳಿಂದಾಗಿಯೂ ಸಂಬಂಧ ಉತ್ತಮಗೊಳ್ಳುವುದು.

ಕರ್ಕ

ಕರ್ಕ

2018ರಲ್ಲಿ ಇವರಿಗೆ ವಿವಾಹ ಯೋಗ ಲಭಿಸುವುದು ಎನ್ನುವುದಕ್ಕೆ ಯಾವುದೇ ಭರವಸೆಯನ್ನು ನೀಡಲು ಸಾಧ್ಯವಾಗದು. ಕುಂಡಲಿಯಲ್ಲಿರುವ ಕೆಲವು ಗ್ರಹಗತಿಗಳ ಸ್ಥಿತಿಗತಿಗಳ ಅನುಗುಣವಾಗಿ ವಿವಾಹಯೋಗ ಅಲ್ಪಪ್ರಮಾಣದಲ್ಲಿ ಸಿಗಬಹುದು. ಆದರೆ ಯಾವುದೇ ರೀತಿಯ ಹೊಸ ಸಂಬಂಧವು ಚಿಗುರೊಡೆಯದು. ಈ ವರ್ಷ ಈ ರಾಶಿಯವರು ಕೆಲವು ಮಹತ್ತರ ರೀತಿಯ ಪರಿಸ್ಥಿತಿಯನ್ನು ಎದುರಿಸುವುದು ಹಾಗೂ ಶ್ರಮಪಡಬೇಕಾದ ಅನಿವಾರ್ಯತೆ ಇರುವುದು.

ಸಿಂಹ

ಸಿಂಹ

ಇವರ ಸಂಬಂಧಗಳು ನಿರ್ಮಲವಾದ ಆಕಾಶದಂತೆ ಇರದು. ಕೊಂಚ ಗೊಂದಲ ಹಾಗೂ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಮುಂದಿನ 2018ರಲ್ಲಿ ದಾಂಪತ್ಯದ ನಡುವೆ ಸ್ವಲ್ಪ ಬಿರುಕು ಉಂಟಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುವುದು. ನಿಮ್ಮ ಹವ್ಯಾಸ ಹಾಗೂ ವರ್ತನೆಯ ಬಗ್ಗೆ ಕಡಿವಾಣ ಇರಬೇಕು ಉತ್ತಮ ಪ್ರೀತಿ ಹಾಗೂ ಸಂಭಾಷಣೆಯ ಮೂಲಕ ಸಂಬಂಧ ಹೊಂದಾಣಿಕೆ ಕಾಣಬಹುದು.

ಕನ್ಯಾ

ಕನ್ಯಾ

ನೀವು ಸಂಬಂಧದಲ್ಲಿ ಅಥವಾ ಸಂಗಾತಿಯ ವರ್ತನೆ ಹಾಗೂ ನಡವಳಿಕೆಯಲ್ಲಿ ಪರಿಪೂರ್ಣತೆಯನ್ನು ಸದಾ ಹುಡುಕುತ್ತಲೇ ಇರಬೇಕಾಗುವುದು. ಅದರಲ್ಲಿ ಸಂಪೂರ್ಣವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದು. ಏನಾದರೂ ಹೊಸತು ಅಥವಾ ಹೊಸ ಬದಲಾವಣೆಯನ್ನು ನೀವು ಕಾಣಬೇಕು.

ತುಲಾ

ತುಲಾ

2018ರಲ್ಲಿ ನಿಮ್ಮ ಮಾನಸಿಕವಾಗಿ ಹೆಚ್ಚು ನೋವನ್ನು ಅನುಭವಿಸುವ ಸಾಧ್ಯತೆಗಳಿವೆ. ಭಾವನಾತ್ಮ ವಿಚಾರದಲ್ಲಿ ವಿಪರೀತವಾದ ಏರಿಳಿತವನ್ನು ಕಾಣುವಿರಿ. ಇವುಗಳ ನಡುವೆ ನೀವು ದೃಢವಾದ ಒಂದು ನಿರ್ಧಾರಕ್ಕೆ ಬರಬೇಕಾಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗದೆ ವಿಚ್ಛೇದನಪಡೆಯುವ ಸಾಧ್ಯತೆಗಳಿವೆ.

ವೃಶ್ಚಿಕ

ವೃಶ್ಚಿಕ

ಶುಕ್ರ ಮತ್ತು ಮಂಗಳ ಗ್ರಹವು ನಿಮ್ಮ ಕೌಟುಂಬಿಕ ಮನೆಯನ್ನು ಪ್ರವೇಶಿಸುತ್ತವೆ. ಇದು ನಿಮಗೆ ಉತ್ತಮ ಫಲಿತಾಂಶ ನೀಡುವುದು. ಅಲ್ಲದೆ ಸಂಗಾತಿಯ ಹುಡುಕಾದ ವಿಚಾರದಲ್ಲಿ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಜೀವನದ ಉಳಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತಿಸದಿರುವಿರಿ. ದಾಂಪತ್ಯ ಜೀವನದ ಸಿದ್ಧತೆಗಾಗಿ ಒಂದಿಷ್ಟು ಹಣವನ್ನು ವ್ಯಯಿಸುವ ಸಾಧ್ಯತೆಗಳಿವೆ.

ಧನು

ಧನು

ಈ ರಾಶಿಯವರಿಗೆ 2018 ಅಷ್ಟು ಶುಭಕರವಾದದ್ದಲ್ಲ. ಕೌಟುಂಬಿಕ ಮನೆಯಲ್ಲಿ ಮಾನಸಿಕ ನೋವು ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮ ಸಂಗಾತಿಯೆಡೆಗೆ ಹೆಚ್ಚು ಗಮನ ಹಾಗೂ ಪ್ರೀತಿಯನ್ನು ತೋರಿಸುವ ಅನಿವಾರ್ಯತೆಗಳಿವೆ. ಹಾಗೊಮ್ಮೆ ನೀವು ಅವುಗಳಿಂದ ದೂರವಾದರೆ ಸಂಬಂಧವನ್ನು ಕಳೆದುಕೊಳ್ಳುವ ನೋವನ್ನು ಅನುಭವಿಸಬೇಕಾಗುವುದು.

ಮಕರ

ಮಕರ

ನಿಮಗೆ 2018ರಲ್ಲಿ ದಾಂಪತ್ಯ ವಿರಸ ಉಂಟಾಗುವ ಸಾಧ್ಯತೆಗಳಿವೆ ಸೂಕ್ತ ಹೊಂದಾಣಿಕೆ ಹಾಗೂ ಸಂವಹನಗಳ ಕೊರತೆ ಇರುವುದು ಹಾಗೂ ಸಂಗಾತಿಗಳ ನಡುವೆ ಸಾಮರಸ್ಯವಿಲ್ಲದೆ ಇರುವ ಕಾರಣಕ್ಕಾಗಿ ಸಂಬಂಧದಿಂದ ಮುಕ್ತಿ ಹೊಂದಲು ದೃಢವಾದ ನಿಲುವನ್ನು ಹೊಂದುವಿರಿ. ಫಲಿತಾಂಶವಾಗಿ ಸಂಗಾತಿಗಳು ಶಾಶ್ವತವಾಗಿ ದೂರ ಹೋಗುವ ಸಾಧ್ಯತೆಗಳಿವೆ.

ಕುಂಬ

ಕುಂಬ

ಮುಂದಿರುವ 2018ರ ವರ್ಷ ನಿಮಗೆ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಆಸೆ, ಆಕಾಂಕ್ಷೆಗಳಿಗೆ ಹೊಂದುವ ಹಾಗೂ ನಿಮ್ಮ ಚಿಂತನೆಸಂಸ್ಕೃತಿಯಲ್ಲಿ ಸಮನಾದ ಆಸಕ್ತಿ ಹಾಗೂ ಸಹಕಾರ ನೀಡುವಂತಹ ಸಂಗಾತಿಯನ್ನು ಒಲಿಸಿಕೊಳ್ಳುವಿರಿ. ಅಂತೆಯೇ ನಿಮ್ಮ ಸಂಬಂಧವು ಗಟ್ಟಿಯಾಗುವುದು.

ಮೀನ

ಮೀನ

2018ರಲ್ಲಿ ವೈವಾಹಿಕ ಜೀವನದಲ್ಲಿ ಅಪಸಾಮಾನ್ಯವಾದದ್ದು ಎನ್ನುವಂತಹ ಚಿಂತನೆಗಳು ಅಥವಾ ಬದಲಾವಣೆಯೇನು ಉಂಟಾಗದು. ಉತ್ತಮ ನಡತೆ ಹಾಗೂ ಹೊಂದಾಣಿಕೆಯಿಂದ ಸಾಮಾನ್ಯವಾಗಿ ನೆರವೇರುವುದು. ಈಗಾಗಲೇ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದಾದರೆ ಸಂಬಂಧವು ಉತ್ತಮ ಹೊಂದಾಣಿಕೆ ಮತ್ತು ಪ್ರೀತಿ ವಿಶ್ವಾಸದಿಂದ ಮುಂದುವರಿಯುವುದು.

English summary

Which Zodiac Signs Are Getting Married in 2018

Marriage is one of the most magical events of our life and there is a lot that depends on the kind of partner that we get. In this article, we present to the 2018 marriage prospects for all the 12 Zodiac signs. Whether you are single, or in love, or in love and looking out to tie the knot, or married, there ...
Please Wait while comments are loading...
Subscribe Newsletter