ಸಂಖ್ಯಾ ಶಾಸ್ತ್ರ: ಹುಟ್ಟಿದ ದಿನಾಂಕ ಹೇಳಿ ಅದೃಷ್ಟದ ವರ್ಷ ತಿಳಿಯಿರಿ!

Posted By: Divya Pandith
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವು ಆತ ಹುಟ್ಟಿದ ಕ್ಷಣವೇ ನಿರ್ಧರಿಸುತ್ತದೆ ಎನ್ನುವುದನ್ನು ಜ್ಯೋತಿಷ್ಯಾಸ್ತ್ರ ಹೇಳುತ್ತದೆ. ಹಾಗೆಯೇ ಹುಟ್ಟಿದ ದಿನಾಂಕವು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಅದೃಷ್ಟದ ವರ್ಷವನ್ನು ಹೇಳುತ್ತದೆ ಎನ್ನುವುದನ್ನು ಸಹ ವ್ಯಾಖ್ಯಾನಿಸುತ್ತದೆ. ಇವುಗಳ ಬಗ್ಗೆ ನಮಗೆ ನಂಬಿಕೆ ಹಾಗೂ ವಿಶ್ವಾಸ ಇರಬೇಕು ಅಷ್ಟೆ.

ವ್ಯಕ್ತಿಗೆ ಸುಖವಿದ್ದಾಗ ಅದೃಷ್ಟ ಹಾಗೂ ದೈವಶಕ್ತಿಯ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅದೇ ಸಮಸ್ಯೆಗಳು ಒಂದಾದ ಮೇಲೊಂದರಂತೆ ಬರುತ್ತಿರುವಾಗ ಬೇಡವೆಂದರೂ ಮನಸ್ಸು ಭವಿಷ್ಯದ ಬಗ್ಗೆ ಯೋಚಿಸುತ್ತದೆ. ಅದೃಷ್ಟದ ದಿನ ಎಂದು ಬರುವುದು ಎಂದು ಕಾಯುತ್ತಿರುತ್ತದೆ. ನಿಜ, ಇಂತಹ ಮನಸ್ಸಿಗೆ ಸಾಂತ್ವನ ನೀಡುವ ವಿಚಾರದ ಬಗ್ಗೆ ಅಧಿಕ ಚಿಂತನೆ ನಡೆಸುವ ಅಗತ್ಯವಿಲ್ಲ.

ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ನಂಬರ್ 7'

ನಾವು ಹುಟ್ಟಿದ ತಾರೀಖು ಯಾವುದು? ಎನ್ನುವುದರ ಆಧಾರದಿಂದ ಅದೃಷ್ಟದ ವರ್ಷವನ್ನು ತಿಳಿಯಬಹುದು. ಅದು ಹೇಗೇ? ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಈ ಲೇಖವನವನ್ನು ಓದಿ....

ಸಂಖ್ಯೆ 1ರ ಅದೃಷ್ಟದ ವರ್ಷ

ಸಂಖ್ಯೆ 1ರ ಅದೃಷ್ಟದ ವರ್ಷ

ಸಂಖ್ಯಾ ಶಾಸ್ತ್ರದ ಪ್ರಕಾರ, ದಿನಾಂಕ 1ರ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ 22 ಎಂದು ಹೇಳಲಾಗುತ್ತದೆ. ಈ ವರ್ಷದಲ್ಲಿ ವ್ಯಕ್ತಿ ಎಲ್ಲಾ ವಿಚಾರದಲ್ಲೂ ಯಶಸ್ಸು ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಲಾಭವನ್ನು ಅನುಭವಿಸಲು ಆರಂಭವಾಗುವುದು. ಈ ವರ್ಷದಲ್ಲಿ ಬಹಳಷ್ಟು ಹಣದ ಹರಿವನ್ನು ಅನುಭವಿಸುತ್ತಾರೆ.

ಸಂಖ್ಯೆ 2ರ ಅದೃಷ್ಟದ ವರ್ಷ

ಸಂಖ್ಯೆ 2ರ ಅದೃಷ್ಟದ ವರ್ಷ

ದಿನಾಂಕ 2, 11 ಮತ್ತು 20ರಲ್ಲಿ ಜನಿಸಿದವರ ಜನನದ ಸಂಖ್ಯೆ 2 ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳಿಗೆ ಅವರ ಅದೃಷ್ಟದ ವರ್ಷವು 24ನೇ ವರ್ಷ. ಈ ವರ್ಷದಿಂದ ವ್ಯಕ್ತಿಯು ಕೆಲಸ ಮಾಡಲು ಆರಂಭಿಸುತ್ತಾನೆ. ಜೊತೆಗೆ ಉತ್ತಮ ಆದಾಯ ಹಾಗೂ ಹಣಕಾಸಿನ ಲಾಭವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗುತ್ತದೆ.

ಜನ್ಮ ನಕ್ಷತ್ರ-ಹುಟ್ಟಿದ ದಿನಾಂಕ ಆಧರಿಸಿ ಹೇಳುವ 'ಸಂಖ್ಯಾಶಾಸ್ತ್ರ'

ಸಂಖ್ಯೆ 3ರ ಅದೃಷ್ಟ ವರ್ಷ

ಸಂಖ್ಯೆ 3ರ ಅದೃಷ್ಟ ವರ್ಷ

ದಿನಾಂಕ 3ರ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ 32ನೇ ವರ್ಷ ಎಂದು ಹೇಳಲಾಗುತ್ತದೆ. ಈ ವರ್ಷದಿಂದ ಅವರ ಕಷ್ಟಗಳು ಕರಗುತ್ತಾ ಬರುತ್ತವೆ. ಕಷ್ಟಪಟ್ಟು ಕೆಲಸ ಮಾಡುತ್ತಿರುವುದಕ್ಕೆ ಯಶಸ್ಸು ಸಾಧಿಸಲು ಸಹಾಯವಾಗುವುದು ಎಂದು ಹೇಳಲಾಗುವುದು.

ಸಂಖ್ಯೆ 4ರ ಅದೃಷ್ಟ ವರ್ಷ

ಸಂಖ್ಯೆ 4ರ ಅದೃಷ್ಟ ವರ್ಷ

ದಿನಾಂಕ 4ರಲ್ಲಿ ಜನಿಸಿದವರಿಗೆ ಅದೃಷ್ಟದ ವರ್ಷ 36 ಮತ್ತು 42 ಎಂದು ಹೇಳಲಾಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ ವ್ಯಕ್ತಿಗಳು ಹೆಚ್ಚು ಸಾಮಾಜಿಕ ಮನ್ನಣೆ, ಪ್ರಚಾರ, ವಿತ್ತೀಯ ಲಾಭ ಸೇರಿದಂತೆ ಇನ್ನಿತರ ಯಶಸ್ಸು ಸಾಧಿಸಲು ಆರಂಭವಾಗುವುದು ಎನ್ನಲಾಗುವುದು.

ಸಂಖ್ಯೆ 5ರ ಅದೃಷ್ಟದ ವರ್ಷ

ಸಂಖ್ಯೆ 5ರ ಅದೃಷ್ಟದ ವರ್ಷ

ದಿನಾಂಕ 5ರಲ್ಲಿ ಜನಿಸಿದವರ ಅದೃಷ್ಟದ ವರ್ಷ 32 ನೇ ವರ್ಷ ಎಂದು ಹೇಳಲಾಗುತ್ತದೆ. ಇದು ಅವರ ಅದೃಷ್ಟದ ವರ್ಷವಷ್ಟೇ ಅಲ್ಲ, ಒಟ್ಟಾರೆ ಖ್ಯಾತಿಯನ್ನು ಪಡೆಯಲು ಸಹಾಯ ಮಾಡುವ ವರ್ಷ ಎಂದು ಹೇಳಲಾಗುವುದು.

ಸಂಖ್ಯೆ 6ರ ಅದೃಷ್ಟದ ವರ್ಷ

ಸಂಖ್ಯೆ 6ರ ಅದೃಷ್ಟದ ವರ್ಷ

ದಿನಾಂಕ 6ರಲ್ಲಿ ಜನಿಸಿದವರ ಅದೃಷ್ಟ ಅವರ 25ನೇ ವರ್ಷದಿಂದಲೇ ಆರಂಭವಾಗುತ್ತದೆ ಎನ್ನಲಾಗುವುದು. ಇದು ಅವರ ಕನಸನ್ನು ನನಸಾಗಿಸಿಕೊಳ್ಳುವ ವರ್ಷವಾಗಿರುತ್ತದೆ. ಅಲ್ಲದೆ ಬಯಸಿದವರೊಂದಿಗೆ ಜೊತೆಗೂಡಿ ಕೆಲಸ ನಿರ್ವಹಿಸಲು ಹಾಗೂ ಯಶಸ್ಸನ್ನು ಸಾಧಿಸಲು ಅನುವುಮಾಡಿಕೊಡುವ ವರ್ಷ ಎಂದು ಹೇಳಲಾಗುವುದು.

ಸಂಖ್ಯೆ 7ರ ಅದೃಷ್ಟ ವರ್ಷ

ಸಂಖ್ಯೆ 7ರ ಅದೃಷ್ಟ ವರ್ಷ

ದಿನಾಂಕ 7ರಲ್ಲಿ ಜನಿಸಿದವರ ಅದೃಷ್ಟದ ವರ್ಷ 38 ಮತ್ತು 44 ಎಂದು ಹೇಳಲಾಗುವುದು. ಈ ವರ್ಷಗಳಿಂದ ವ್ಯಕ್ತಿ ಹಂತ ಹಂತವಾಗಿಯೇ ಅದೃಷ್ಟವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅಲ್ಲದೆ ಕಷ್ಟ ಪಟ್ಟು ಕೆಲಸ ಮಾಡಿರುವುದಕ್ಕೆ ಉತ್ತಮ ಫಲಿತಾಂಶ ಪಡೆಯಲು ಪ್ರಾರಂಭಿಸುತ್ತಾರೆ.

ಸಂಖ್ಯೆ 8ರ ಅದೃಷ್ಟದ ವರ್ಷ

ಸಂಖ್ಯೆ 8ರ ಅದೃಷ್ಟದ ವರ್ಷ

ದಿನಾಂಕ 8ರಲ್ಲಿ ಜನಿಸಿದವರಿಗೆ 36 ಮತ್ತು 42ನೇ ವರ್ಷ ಎಂದು ಹೇಳಲಾಗುವುದು. 8ನೇ ಸಂಖ್ಯೆಯು ಸಂಕೀರ್ಣವಾದ ಸಂಖ್ಯೆ ಎಂದು ಹೇಳಲಾಗುವುದು. ಇವರ ಭವಿಷ್ಯ ಗುಲಾಬಿ ಹಾಸಿಗೆಯಂತಿದ್ದರೂ ಮುಳ್ಳುಗಳು ಜೊತೆಯಲ್ಲಿಯೇ ಇರುತ್ತವೆ. ಇವರಿಗೆ 36 ಮತ್ತು 42ನೇ ವರ್ಷದ ನಂತರ ಒಳ್ಳೆಯ ದಿನ ಪ್ರಾರಂಭವಾಗುವುದು.

ಸಂಖ್ಯೆ 9ರ ಅದೃಷ್ಟದ ವರ್ಷ

ಸಂಖ್ಯೆ 9ರ ಅದೃಷ್ಟದ ವರ್ಷ

ದಿನಾಂಕ 9ರಲ್ಲಿ ಜನಿಸಿದವರಿಗೆ 28ನೇ ವರ್ಷ ಅದೃಷ್ಟದ ವರ್ಷವಾಗಿರುತ್ತದೆ. ಈ ವರ್ಷದಲ್ಲಿ ವ್ಯಕ್ತಿ ಖ್ಯಾತಿ ಮತ್ತು ಬಹಳಷ್ಟು ಹಣವನ್ನು ಗಳಿಸುತ್ತಾನೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

English summary

Which Year Will Your Lady Luck Favour You Based On Your Birth Date

Number games are real cool, as there is a lot that one can understand based on just numbers. A person's personality can be defined by just having a look at their birth date or by knowing what their lucky numbers are. Most of the times, when we are low and run out of luck, the first thing that comes to our mind is when will our luck factor shine on us and when will our lucky time begin?