Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಏನೋ ಹೊಸ ಪ್ರಯೋಗ ಮಾಡಲು ಹೋಗಿ, ಈತ ಮಾಡಿದ ಎಡವಟ್ಟು ನೋಡಿ....
ದಂಪತಿಗಳ ಅತ್ಯಂತ ವೈಯಕ್ತಿಕ ಸಮಯದಲ್ಲಿ ನಡೆಸುವ ಕಾಮದಾಟದಲ್ಲಿ ಪರಸ್ಪರ ಒಪ್ಪಿಗೆಯಾಗುವ ಯಾವ ಕ್ರಿಯೆಯಾದರೂ ಚೆನ್ನವೇ. ಇದಕ್ಕಾಗಿ ಕೆಲವು ಉಪಕರಣಗಳನ್ನೂ ಬಳಸುವುದು ತಪ್ಪಲ್ಲ. ಆದರೆ ಇವುಗಳ ಬಳಕೆಯಲ್ಲಿ ಏನಾದರೂ ಎಡವಟ್ಟಾದರೆ ಮಾತ್ರ ಇದು ವಿಷಮಸ್ಥಿತಿಗೆ ತಲುಪಬಹುದು ಹಾಗೂ ಮುಜಗರದ ಕಾರಣ ವೈದ್ಯರ ಹೊರತಾಗಿ ಬೇರೆಯವರ ನೆರವನ್ನೂ ಪಡೆಯಲು ಸಾಧ್ಯವಾಗದಿರುವುದು ಇನ್ನೊಂದು ತೊಂದರೆಯಾಗಿದೆ.
ಚೀನಾದ ಓರ್ವ ವ್ಯಕ್ತಿಗೆ ಆಗಿದ್ದೂ ಇದೇ! ಕಾಮದಾಟದಲ್ಲಿ ಏನೋ ಹೊಸ ಪ್ರಯೋಗ ನಡೆಸಲು ಹೋಗಿ ಎಡವಟ್ಟಾದ ಬಳಿಕ ಈ ಪುರುಷನನ್ನು ಆಸ್ಪತ್ರೆಗೆ ಕರೆತಂದು ವಿಲಿವಿಲಿ ಒದ್ದಾಡುತ್ತಿದ್ದವನ ನೋವಿಗೆ ಕಾರಣವೇನೆಂದು ವೈದ್ಯರು ಪರಿಶೀಲಿಸಿದಾಗ ಅವರಿಗೆ ಜೀವಮಾನದ ಅಚ್ಚರಿ ಕಾದಿತ್ತು. ಈತನ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿತ್ತು....ಮುಂದೇನಾಯಿತು ನೋಡೋಣ...

ಈತನ ಪರಿಚಯವನ್ನು ಬಚ್ಚಿಡಲಾಗಿದೆ
ಚೀನಾ ನಾಗರಿಕನಾದ ಈ ಮೂವತ್ತಮೂರು ವರ್ಷದ ಪುರುಷರ ಪರಿಚಯವನ್ನು ಬಚ್ಚಿಡಲಾಗಿದ್ದು ಈತ ವಿವಾಹಿತನಾಗಿದ್ದು ನಾಲ್ವರು ಮಕ್ಕಳ ತಂದೆಯೂ ಆಗಿದ್ದಾನೆ. ಒಂದು ದಿನ ನಡುರಾತ್ರಿ ಎರಡು ಗಂಟೆಗೆ ತಾಳಲಾರದ ನೋವಿನಿಂದ ವಿಲಿವಿಲಿಗುಟ್ಟುತ್ತಿದ್ದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕರೆತರಲಾಗಿತ್ತು.

ಈ ಸ್ಥಿತಿಯಲ್ಲಾತ ಎರಡು ದಿನ ಇದ್ದ!
ಯಾವುದೋ ಪ್ರಯೋಗ ಮಾಡಲೆಂದು ಹೋಗಿ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದು ಬಳಿಕ ಹೊರತೆಗೆಯಲಾಗದೇ ಹಾಗೇ ಉಳಿದು ಹೋಗಿತ್ತು. ಕೊಂಚ ಹೊತ್ತು ಕಾದು ನೋಡುವ ಎಂದು ಎರಡು ದಿನ ಇತ ಕಾದ ಬಳಿಕ ನೋವು ತಾಳಲಾರದಷ್ಟು ಹೆಚ್ಚಿದ್ದರಿಂದ ಕಡೆಗೂ ಆತ್ಮೀಯರ ನೆರವಿನಿಂದ ಈತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಈತನ ಹಿಂಭಾಗ ಭಾರೀ ಒತ್ತಡದಿಂದ ಊದಿಕೊಂಡಿದ್ದು ನೋವು ಅಪಾರವಾಗಿತ್ತು.

ವೈದ್ಯರಿಗೂ ಎದುರಾದ ಗೊಂದಲ
ರೋಗಿಯ ದೇಹವನ್ನು ತಪಾಸಿಸಿ ನೋವಿಗೆ ಕಾರಣ ಏನೆಂದು ಹುಡುಕಿದ ವೈದ್ಯರಿಗೆ ಈತನ ಗುದದ್ವಾರದಲ್ಲಿ ಇಡಿಯ ಒಂದು ದೊಡ್ಡ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದುದು ಕಂಡುಬಂದಿತ್ತು. ಈಗ ವೈದ್ಯರಿಗೆ ನಿಜವಾಗಿಯೂ ಗೊಂದಲ ಹಾಗೂ ಗಾಬರಿ ಉಂಟಾಗಿತ್ತು. ಏಕೆಂದರೆ ಗಾಜು ಸುಲಭವಾಗಿ ಪುಡಿಯಾಗುವ ವಸ್ತುವಾಗಿದ್ದು ಇದರ ಮೇಲೆ ಯಾವುದೇ ಒತ್ತಡ ಹೇರಿದರೂ ಇದು ದೇಹದ ಒಳಗೇ ಸ್ಫೋಟಗೊಂಡಂತೆ ಒಡೆದು ಗಾಜಿನ ಚೂರುಗಳೆಲ್ಲಾ ದೇಹದ ಮುಖ್ಯ ಅಂಗಗಳಿಗೆಲ್ಲ ಚುಚ್ಚಿ ಹರಿದು ಪರಿಸ್ಥಿತಿಯನ್ನು ವಿಷಮವಾಗಿಸುತ್ತಿತ್ತು. ಇದು ಸಾವಿಗೂ ಕಾರಣವಾಗಬಹುದು.

ಶಸ್ತ್ರಕ್ರಿಯೆ ಅನಿವಾರ್ಯವಾಗಿತ್ತು
ತಕ್ಷಣವೇ ಕಟುನಿರ್ಧಾರ ತೆಗೆದುಕೊಂಡ ವೈದ್ಯರ ತಂಡ ಕೂಡಲೇ ಈ ವ್ಯಕ್ತಿಯ ಹಿಂಭಾಗಕ್ಕೆ ಅರವಳಿಕೆಯ ಇಂಜೆಕ್ಷನ್ ನೀಡಿ ಮರಗಟ್ಟಿಸಿದರು. ಆದರೂ ಅಪಾಯವಿಲ್ಲದಂತೆ ಕಪ್ ಅನ್ನು ಹೊರತೆಗೆಯುವ ಭರವಸೆಯಂತೂ ಆ ಹೊತ್ತಿನಲ್ಲಿ ಯಾವ ವೈದ್ಯರೂ ನೀಡಲು ತಯಾರಿರಲಿಲ್ಲ. ಏಕೆಂದರೆ ಗಾಜು ಅತಿ ನಯವಾಗಿದ್ದು ಜಾರುತ್ತಿದ್ದ ಕಾರಣ ಹಿಡಿತಕ್ಕೇ ಸಿಗುತ್ತಿರಲಿಲ್ಲ. ಬಳಿಕ ಶಸ್ತ್ರಕ್ರಿಯೆ ನಡೆಸಿ ಗಾಜು ಒಡೆಯದಂತೆ ಸುರಕ್ಷಿತವಾಗಿ ಹೊರತೆಗೆಯಲಾಯ್ತು. ಬಳಿಕ ಈ ವ್ಯಕ್ತಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಈ ಕಪ್ ತನ್ನ ದೇಹದೊಳಗೆ ಹೇಗೆ ಬಂದಿತ್ತು ಎಂಬ ಪ್ರಶ್ನೆಗೆ ಆತ ಉತ್ತರ ನೀಡಬಯಸದೇ ಗೌಪ್ಯತೆ ಕಾಪಾಡಿಕೊಂಡಿದ್ದಾನೆ. ಈತನ ದೇಹದೊಳಗೆ ಕಪ್ ಹೋಗಿದ್ದಾದರೂ ಹೇಗೆ? ಏನು ಸಂಭವಿಸಿರಬಹುದು? ಈ ಬಗ್ಗೆ ನಿಮ್ಮ ಕಲ್ಪನೆಯನ್ನು ಬರೆದು ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications
