Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ಬಳಸುವ ಎಮೋಜಿಗಳ ಗೂಢಾರ್ಥ ಹೀಗೂ ಇದೆ!
ಸಾಮಾಜಿಕ ಜಾಲತಾಣಗಳು ಬಂದ ಬಳಿಕ ನಮ್ಮ ಬರವಣಿಗೆಗಳು ಕೂಡ ಸಣ್ಣದಾಗುತ್ತಾ ಇದೆ. ಹಿಂದೆ ಏನಾದರೂ ಹೇಳಬೇಕಾಗಿದ್ದರೆ ಅದನ್ನು ಸಂಪೂರ್ಣ ಒಂದು ವಾಕ್ಯದಲ್ಲಿ ಬರೆಯಬೇಕಾಗಿತ್ತು. ಆದರೆ ಹೀಗ ಆಗಲ್ಲ, ಎಲ್ಲವನ್ನೂ ಸಣ್ಣದು ಮಾಡಿ ಬರೆಯುತ್ತೇವೆ. ಅದರಲ್ಲೂ ಎಮೋಜಿಗಳು ಬಂದ ಬಳಿಕ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವುಗಳನ್ನೇ ಬಳಸುವುದು ಸಾಮಾನ್ಯ.
ಎಮೋಜಿಗಳು ಇಂದು ವಾಟ್ಸಪ್ ಮತ್ತು ಇತರ ಕೆಲವೊಂದು ಆಪ್‌ಗಳಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಏನೇ ಹೇಳಲು ಇದ್ದರೂ ಎಮೋಜಿಗಳನ್ನು ಬಳಸಲಾಗುತ್ತದೆ. ನಮ್ಮ ಭಾವನೆಗಳನ್ನು ಎದುರಿನ ವ್ಯಕ್ತಿಗೆ ತೋರಿಸಲು ಇದನ್ನು ಬಳಸುತ್ತೇವೆ. ದಿನನಿತ್ಯವು ನಾವು ಬಳಸುವಂತಹ ಎಮೋಜಿಗಳ ನಿಜವಾದ ಅರ್ಥ ತಿಳಿದಿದೆಯಾ? ಈ ಎಮೋಜಿಗಳು ನಾವು ತಿಳಿದುಕೊಂಡಿರುವುದಕ್ಕಿಂತ ತುಂಬಾ ಭಿನ್ನವಾದ ಅರ್ಥ ಹೊಂದಿವೆ. ಇವುಗಳನ್ನು ತಿಳಿದುಕೊಂಡು ಎಮೋಜಿಗಳ ಗೂಢಾರ್ಥ ಆದಷ್ಟು ಬೇಗನೆ ತಿಳಿಯಿರಿ....

ರೆಡ್ ಮಾಸ್ಕ್
ರೆಡ್ ಮಾಸ್ಕ್ ಇಮೋಜಿಯು ತುಂಬಾ ಕೋಪದಲ್ಲಿದ್ದೇನೆ ಎನ್ನುವುದರ ಸಂಕೇತವಾಗಿದೆ. ಇದರ ಮೂಲ ಜಪಾನ್‌ನ 'ನಮಾಹಗೆ' ಯಾಗಿದೆ. ಯಾವುದೇ ವಿಷಯದ ಬಗ್ಗೆ ತುಂಬಾ ಹುಚ್ಚನಂತಾಗಿರುವ ವ್ಯಕ್ತಿಯ ಮುಖವು ಕೋಪದಲ್ಲಿ ಕೆಂಪಾಗಿರುವುದನ್ನು ಇದು ತೋರಿಸುವುದು.

ಮೊಲದ ಕಿವಿಯೊಂದಿಗೆ ಮಹಿಳೆ
ಈ ಎಮೋಜಿಯನ್ನು ಹೆಚ್ಚಿನವರು ನೃತ್ಯ ಮಾಡುತ್ತಿರುವ ಹುಡುಗಿಯೆಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಸ್ನೇಹಿತರೊಂದಿಗೆ ಹೊರಗಡೆ ಹರಟೆ ಹೊಡೆಯುತ್ತಿರುವ ಸಂದರ್ಭದಲ್ಲಿ ಈ ಎಮೋಜಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಇದಕ್ಕೆ ಇರುವಂತಹ ಅರ್ಥ ಸಂಪೂರ್ಣವಾಗಿ ಬೇರೆಯದ್ದೇ ಆಗಿದೆ. ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಛೇಡಿಸುವ ಪುರುಷರಿಗೆ ಜಪಾನ್ ನಲ್ಲಿ ಇರುವಂತಹ ಮೊಲದ ಉಡುಗೆಯಿಂದ ಈ ಎಮೋಜಿಯು ಪ್ರೇರಣೆ
ಪಡೆದುಕೊಂಡಿದೆ. ಇದು ಫ್ಲರ್ಟ್ ಮಾಡುವ ಹಾಗೂ ಉತ್ತೇಜಿಸುವ ಸಂಕೇತ.

ಪೋಪ್ ಎಮೋಜಿ
ಈ ಎಮೋಜಿಯು ತುಂಬಾ ಅಸಹ್ಯ ವಿಷಯಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ತುಂಬಾ ದುರ್ನಾತದ್ದಾಗಿದೆ. ಆದರೆ ಅಚ್ಚರಿಯ ವಿಷಯವೆಂದರೆ ಇದು ಅದೃಷ್ಟದ ಚಿಹ್ನೆಯಾಗಿದೆ. ಜಪಾನ್ ನಲ್ಲಿ ಪೋಪ್ ಶುಭವೆಂದು ಪರಿಗಣಿಸಲಾಗುತ್ತದೆ. ಯಾರಿಗಾದರೂ ತಮ್ಮಿಂದ ಪೋಪ್ ಆಗುತ್ತದೆಯೆಂಬ ಕನಸು ಬಿದ್ದರೆ ಆಗ ಅವರಿಗೆ ಭವಿಷ್ಯದಲ್ಲಿ ಹೆಚ್ಚು ಹಣ ಸಿಗುತ್ತದೆ ಎಂದು ನಂಬಲಾಗಿದೆ.

ಕಟ್ಟಡ ಕಾರ್ಮಿಕ
ಈ ಎಮೋಜಿಯಲ್ಲಿರುವ ವ್ಯಕ್ತಿಯ ತಲೆಯಲ್ಲಿರುವ ಟೋಪಿಯಲ್ಲಿ ಹಸಿರುವ ಬಣ್ಣದ ಕೂಡಿಸು ಗುರುತು ಇರುವ ಕಾರಣದಿಂದ ಇದು ಆಸ್ಪತ್ರೆಗೆ ಸಂಬಂಧಿಸಿದ ಕಾರ್ಮಿಕನೆಂದು ತಪ್ಪು ತಿಳಿಯಲಾಗಿದೆ. ಆದರೆ ಇದು ಕಟ್ಟಡ ಕಾರ್ಮಿಕನಿಗೆ ಸಂಬಂಧಿಸಿದ ಇಮೋಜಿಯಾಗಿದೆ. ಜಪಾನ್ ನಲ್ಲಿ ಕಟ್ಟಡ ಕಾರ್ಮಿಕರು ಇಂತಹ ಹೆಲ್ಮೆಟ್ ಗಳನ್ನು ಧರಿಸುತ್ತಾರೆ ಮತ್ತು ಹಸಿರು ಬಣ್ಣದ ಕೂಡಿಸು ಗುರುತು ಕೂಡ ಇದರಲ್ಲಿರುತ್ತದೆ.

ಹೆಸರಿನ ಗುರುತು
ಇದೊಂದು ಬೆಂಕಿಯ ಹೂವೆಂದು ತಪ್ಪು ಅರ್ಥ ಮಾಡಿಕೊಳ್ಳಲಾಗಿದೆ. ಆದರೆ ಈ ಎಮೋಜಿಯ ನಿಜವಾದ ಅರ್ಥ ಇದೊಂದು ಹೆಸರಿನ ಬ್ಯಾಡ್ಜ್. ಯಾವುದೇ ಒಂದು ಗ್ರೂಪ್ ನಲ್ಲಿ ನೀವು ಅಪರಿಚಿತರಾಗಿದ್ದರೆ ಆಗ ಈ ಎಮೋಜಿಯನ್ನು ಬಳಸಿಕೊಂಡು ಪರಿಚಯ ಮಾಡಿಕೊಳ್ಳಬಹುದು.

ಓಕೆ ಎಮೋಜಿ
ಎಮೋಜಿಯನ್ನು ಅಚ್ಚರಿ ನೀಡಲು ಹೆಚ್ಚಿನವರು ಬಳಸಿಕೊಳ್ಳುತ್ತಾರೆ ಅಥವಾ ಬೆಲ್ಲಿ ನೃತ್ಯ ಮಾಡುವಂತಹ ಹುಡುಗಿಯ ಎಮೋಜಿಯೆಂದು ಹೆಚ್ಚಿನವರು ಭಾವಿಸಿದಂತಿದೆ. ಆದರೆ ಇದು ಸರಿಯಲ್ಲ. ಕೈಯ ಸಂಕೇತದ ಪ್ರಕಾರ ಇದು ಓಕೆ ಹೇಳುವುದು.

ಸೊಶಿನಶಾ ಗುರುತು
ಹೆಚ್ಚಾಗಿ ನಾವು ಪ್ರತಿಯೊಂದು ರಾಷ್ಟ್ರದ ಧ್ವಜಗಳನ್ನು ವಿಶ್ಲೇಷಿಸಲು ತುಂಬಾ ಉದಾಸೀನ ತೋರಿಸುತ್ತೇವೆ. ಈ ಎಮೋಜಿ ಕೂಡ ಹಾಗೆಯೇ. ಜಪಾನ್ ನಲ್ಲಿ ಈ ಎಮೋಜಿಯನ್ನು ಹೊಸ ಚಾಲಕರು ಬಳಸಿಕೊಳ್ಳುತ್ತಾರೆ. ಡ್ರೈವಿಂಗ್ ಲೈಸನ್ಸ್ ಪಡೆದಂತಹ ಜಪಾನ್ ನವರು ಇಂತಹ ಚಿತ್ರವನ್ನು ತಮ್ಮ ಕಾರುಗಳಲ್ಲಿ ಬಳಸುವುದು ಅನಿವಾರ್ಯವಾಗಿದೆ. ಇದರಿಂದ ಚಾಲಕ ಹೊಸಬ ಎನ್ನುವುದು ಇತರರಿಗೆ ಅರ್ಥವಾಗುತ್ತದೆ.

ನಿದ್ರಿಸುವ ಮುಖ
ಈ ಎಮೋಜಿಯನ್ನು ತುಂಬಾ ಭಿನ್ನವಾಗಿ ಬಳಸಲಾಗುತ್ತಾ ಇದೆ. ಆದರೆ ಈ ಎಮೋಜಿಯು ನಿಶ್ಯಕ್ತಿ ಅಥವಾ ನಿದ್ರೆ ಕಳಕೊಂಡಿರುವುದು ಅಥವಾ ನಿದ್ರಿಸುವಾಗ ಕೆನ್ನೆಯ ಮೇಲಿಂದ ಕಣ್ಣೀರು ಹರಿದು ಬರುವುದರ ಸಂಕೇತವಾಗಿದೆ.

ಮಾಹಿತಿ ನೀಡುವ ಡೆಸ್ಕ್ ವ್ಯಕ್ತಿ
ಈ ಎಮೋಜಿಯು ಯಾವುದರ ಬಗ್ಗೆಯಾದರೂ ಮಾಹಿತಿ ನೀಡುವ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ ಅಥವಾ ಯಾರಾದರೂ ನೀಡುವಂತಹ ಮಾಹಿತಿಯನ್ನು ಸಂಗ್ರಹಿಸುವಂತಹ ಅರ್ಥವು ಈ ಎಮೋಜಿಗೆ ಇದೆ. ಆದರೆ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹುಡುಗಿಯೆಂದು ಭಾವಿಸಿ, ಆಕೆ ತನ್ನ ಭಾವನೆಗಳನ್ನು ವ್ಯಕ್ತಿಪಡಿಸುತ್ತಿದ್ದಾಳೆ ಎನ್ನುತ್ತೇವೆ.

ಕೈಯ ಸೂಚನೆ
ಇದು ಅಪ್ಪುಗೆಗೆ ಇರುವ ಸೂಚನೆ ಅಥವಾ ನಿಲ್ಲಿಸಲು ಇರುವ ಸೂಚನೆಯೆಂದು ಪ್ರತಿಯೊಬ್ಬರು ಭಾವಿಸಿದ್ದಾರೆ. ಆದರೆ ಈ ಎಮೋಜಿಯ ನಿಜವಾದ ಅರ್ಥವೆಂದರೆ ಇದು ಮುಕ್ತ ಹಾಗೂ ಪ್ರಾಮಾಣಿಕತೆಯನ್ನು ತೋರಿಸುತ್ತದೆ.



Click it and Unblock the Notifications