ರಾಶಿ ಭವಿಷ್ಯ: ರಾಶಿ ಚಕ್ರದಲ್ಲಿ ಅಡಗಿದೆ ನಿಮ್ಮ ಕೆಟ್ಟ ಚಟಗಳ ಗುಟ್ಟು!

By: Deepu
Subscribe to Boldsky

ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಬಗೆಯ ಚಟ ಅಥವಾ ಹವ್ಯಾಸ ಇರುತ್ತದೆ. ಒಳ್ಳೆಯದ್ದೇ ಆಗಿರಬಹುದು ಅಥವಾ ಕೆಟ್ಟದ್ದೇ ಆಗಿರಬಹುದು. ಇಂತಹ ಚಟಗಳು ವ್ಯಕ್ತಿಯ ಅಭ್ಯಾಸದಿಂದಷ್ಟೇ ಮೈಗೂಡಿ ಕೊಂಡಿರುವುದಿಲ್ಲ. ಅವುಗಳ ಮೇಲೆ ರಾಶಿಚಕ್ರದ ಪ್ರಭಾವವೂ ಇರುತ್ತದೆ. ಜ್ಯೋತಿಷ್ಯಾಸ್ತ್ರದ ಪ್ರಕಾರ ರಾಶಿಗಳಿಗೆ ಅನುಗುಣವಾಗಿ ವ್ಯಕ್ತಿಯ ಸ್ವಭಾವ ಹಾಗೂ ಅಭ್ಯಾಸಗಳು ರೂಢಿಯಾಗಿರುತ್ತವೆ ಎಂದು ಹೇಳಲಾಗುತ್ತದೆ.

ಮದುವೆಗೆ ಈ 4 ರಾಶಿಗಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಅವರೇ ಅದೃಷ್ಟವಂತರು!

ಸಾಮಾನ್ಯವಾಗಿ ಆಯಾ ರಾಶಿಯ ವ್ಯಕ್ತಿಗಳಿಗೆ ಒಂದೇ ಬಗೆಯ ಚಟಗಳಿರುತ್ತವೆ. ಅವುಗಳನ್ನು ನಾವು ಗಮನಿಸಬೇಕು. ಪ್ರತಿ ರಾಶಿಚಕ್ರವೂ ತನ್ನದೇ ಆದ ವಿಭಿನ್ನ ಚಟಗಳನ್ನು ಹೊಂದಿರುವುದು ವಿಶೇಷ. ನಿಮಗೂ ಈ ವಿಷಯದ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತಿದ್ದರೆ ತಡ ಮಾಡದೆ ನಿಮ್ಮ ರಾಶಿಗೆ ಯಾವ ಚಟವಿದೆ ಎಂದು ಪರಿಶೀಲಿಸಿ...

ಮೇಷ

ಮೇಷ

ಈ ರಾಶಿಯವರಿಗೆ ಹೆಚ್ಚಾಗಿ ಕಾಫಿ ಅಥವಾ ಚಹಾ ಕುಡಿಯುವ ಚಟವಿರುತ್ತದೆ. ಇವರಿಗೆ ಎಲ್ಲಾ ಚಟಗಳಿಗಿಂತ ಹೆಚ್ಚು ಕಿಕ್ ಚಹಾ ಮತ್ತು ಕಾಫಿ ನೀಡುತ್ತದೆ. ಹಾಗಾಗಿ ಇವರು 24/7 ಆಗಾಗ ಕುಡಿಯುತ್ತಲೇ ಇರುತ್ತಾರೆ.

ವೃಷಭ

ವೃಷಭ

ಇವರಿಗೆ ಬಾಯಿ ರುಚಿ ಬಹಳ ಮುಖ್ಯವಾಗಿರುತ್ತದೆ. ಆನೆ ಗಾತ್ರದ ಹಸಿವು ಹೊಂದಿರುವಂತೆ ವರ್ತಿಸುತ್ತಾರೆ. ಇವರು ಊಟ ತಿಂಡಿ ಮಾಡುವಾಗ ಯಾರಾದರೂ ಕಂಪನಿ ಕೊಡಬೇಕೆಂದು ಬಯಸುವುದಿಲ್ಲ. ಬೇಕೆಂದಾಗ ಒಬ್ಬರೇ ಬೇಕಾದರೂ ಸೇವಿಸುತ್ತಾರೆ!

ಮಿಥುನ

ಮಿಥುನ

ಇವರು ಧೂಮಪಾನವನ್ನು ಅತಿಯಾಗಿ ಪ್ರೀತಿಸುತ್ತಾರೆ. ಇವರು ಕೆಲವೊಮ್ಮೆ ಸಾರ್ವಜನಿಕವಾಗಿ ತೋರಿಸಿಕೊಳ್ಳಬಾರದೆಂದು ಇಷ್ಟಪಡುತ್ತಾರೆ. ಧೂಮಪಾನದಿಂದ ಇವರು ತಮ್ಮ ದುಃಖವನ್ನು ಮರೆಯಲು ಪ್ರಯತ್ನಿಸುತ್ತಾರೆ.

ಕರ್ಕ

ಕರ್ಕ

ಇವರು ಅತ್ಯಂತ ಸಂವೇದನಾ ಶೀಲರು. ಇವರಿಗೆ ಆರೋಗ್ಯದಲ್ಲಿ ಬಹಳ ಬೇಗ ವ್ಯತ್ಯಾಸಗಳುಂಟಾಗುತ್ತವೆ. ಅವುಗಳ ನಿವಾರಣೆಗೆ ಮಾತ್ರೆ ಹಾಗೂ ಔಷಧವನ್ನು ಸೇವಿಸುತ್ತಾರೆ. ಇವರಿಗೆ ಅದೆಷ್ಟೇ ಬಾರಿ ಔಷಧಿಗಳನ್ನು ಸೇವಿಸಿದರೂ ಬೇಸರ ಉಂಟಾಗದು.

ಸಿಂಹ

ಸಿಂಹ

ಇವರು ಸದಾ ಶಾಪಿಂಗ್ ಮಾಡುವುದರಲ್ಲಿ ಉತ್ಸುಕರಾಗಿರುತ್ತಾರೆ. ಒಳ್ಳೊಳ್ಳೆ ವಸ್ತುಗಳ ಖರೀದಿ ಮಾಡುವ ಸಾಮರ್ಥ್ಯ ಇವರದ್ದು. ಕೆಲವೊಮ್ಮೆ ಶಾಪಿಂಗ್ ಮಾಡುವುದು ಅತಿರೇಕಕ್ಕೆ ಹೋಗುವ ಸಾಧ್ಯತೆಯೂ ಇರುತ್ತದೆ.

ಕನ್ಯಾ

ಕನ್ಯಾ

ಸದಾ ಇನ್ನೊಬ್ಬರ ಸ್ನೇಹವನ್ನು ಬಯಸುವ ಇವರು ಚಂಚಲತೆಯನ್ನು ಹೊಂದಿರುತ್ತಾರೆ. ಅನೈತಿಕ ಸಂಬಂಧಗಳಲ್ಲಿ ಇರಲು ಬಯಸುತ್ತಾರೆ. ಕೆಲವೊಮ್ಮೆ ಇತರರಿಗೆ ಬೇಸರವನ್ನುಂಟುಮಾಡುವ ಸಾಧ್ಯತೆಯೂ ಇರುತ್ತದೆ.

ತುಲಾ

ತುಲಾ

ಇವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ಹೆಚ್ಚು ಪ್ರಚಾರ ಗೊಳಿಸಿಕೊಳ್ಳುವುದು ಎಂದರೆ ಬಹಳ ಇಷ್ಟ. ತಮ್ಮ ಭಾವಚಿತ್ರಗಳನ್ನು ಪದೇ ಪದೇ ಬದಲಾಯಿಸುವುದು, ಅನೇಕ ಪೋಸ್ಟ್‌ಗಳನ್ನು ಹಾಕುವುದು. ಹಾಕಿರುವ ಪೋಸ್ಟ್‌ಗಳ ಬಗ್ಗೆ ಹೆಚ್ಚು ಕಮೆಂಟ್‍ಗಳನ್ನು ಹಾಕುತ್ತಾರೆ. ದಿನವಿಡೀ ಈ ಕೆಲಸದಲ್ಲೇ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರಿಗೆ ಲೈಂಗಿಕ ಕೌಶಲ್ಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಸದಾ ಈ ವಿಚಾರದ ಬಗ್ಗೆಯೇ ಹೆಚ್ಚು ತಲ್ಲೀನರಾಗಿರುತ್ತಾರೆ. ಇದರ ಬಗ್ಗೆಯೇ ಹೆಚ್ಚು ಪ್ರಚಾರವನ್ನು ಬಯಸುತ್ತಾರೆ.

ಧನು

ಧನು

ಇವರು ಸದಾ ಸಾಹಸ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ. ದೂರದ ಸ್ಥಳಗಳಿಗೆ ಹೋಗುವುದು ಅಲ್ಲಿಯ ಸಾಹಸ ಕ್ರೀಡೆ, ಚಾರಣ ಮಾಡಲು ಇಷ್ಟ ಪಡುತ್ತಾರೆ.

ಮಕರ

ಮಕರ

ಇವರು ನೈಸರ್ಗಿಕವಾಗಿಯೇ ಉತ್ತಮ ಕೆಲಸಗಾರರು ಎಂದು ಹೇಳಬಹುದು. ಇವರು ತಮ್ಮ ಗುರಿಯನ್ನು ಸಾಧಿಸಲು ಸದಾ ಕೆಲಸ ಮಾಡುತ್ತಾರೆ. ಕಾಲಾಹರಣ ಮಾಡದೆಯೇ ಹೆಚ್ಚು ಸಮಯವನ್ನು ಕೆಲಸ ಮಾಡುವುದರಲ್ಲಿಯೇ ಕಳೆಯುತ್ತಾರೆ.

ಕುಂಬ

ಕುಂಬ

ವಿಡಿಯೋ ಗೇಮ್ಸ್ ಮತ್ತು ಪುಸ್ತಕ ಇವರ ಜೀವನದ ತಂಗಾಳಿ ಎಂದು ಭಾವಿಸುತ್ತಾರೆ. ಇವೆರಡು ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟು ಅವಲಂಬಿತರಾಗಿರುತ್ತಾರೆ. ದಿನದಲ್ಲಿ ಹೆಚ್ಚು ಸಮಯವನ್ನು ಇವುಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ.

ಮೀನ

ಮೀನ

ಇವರು ರೊಮ್ಯಾಂಟಿಕ್ ಮತ್ತು ರೊಮ್ಯಾನ್ಸ್‌ಗಳ ವ್ಯಸನಿಗಳು ಎನ್ನಬಹುದು. ಬಹಳ ಸಂವೇದನಾಶೀಲರಾದ ಇವರು ತಮ್ಮ ಭಾವನೆ ಮತ್ತು ಮನಸ್ಸು ಬಯಸಿದ್ದನ್ನು ಪಡೆಯಲು ಹೆಚ್ಚು ಉತ್ಸುಕರಾಗಿರುತ್ತಾರೆ.

ಅಚ್ಚರಿ-ಕುತೂಹಲ ಮೂಡಿಸುವ 'ರಾಶಿ ಭವಿಷ್ಯ' ! ಹೀಗೂ ಉಂಟೇ..?

English summary

What You Are Addicted To, According To Your Zodiac Sign

Studying about different zodiac signs can make you realise how vast the subject is. It confuses many, but when you understand the depth of it, you can totally relate to it, as each zodiac is unique in itself. Every zodiac sign has its own addiction. So, here are some common addictions that you might relate to, which are based as per the zodiac signs. Take a look.
Subscribe Newsletter