Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಹುಡುಗಿಯ ಗುಣ ತಿಳಿಯಬೇಕಾದರೆ, 'ರಾಶಿ' ಯಾವುದೆಂದು ಪ್ರಶ್ನಿಸಿ!
ಪ್ರತಿಯೊಬ್ಬ ಹುಡುಗಿಯೂ ತನ್ನ ಸಂಗಾತಿಯಾಗುವವನು ಬುದ್ಧಿವಂತ, ಸುಂದರಾಂಗ, ಚತುರ, ಶೂರ, ಹಣವಂತ, ಆರೋಗ್ಯವಂತ ಹೀಗೆ ಎಲ್ಲಾ ವಿಚಾರದಲ್ಲೂ ಪರಿಪೂರ್ಣನಾಗಿರಬೇಕು ಎಂದು ಬಯಸುತ್ತಾಳೆ. ಇದು ಮೇಲ್ನೋಟಕ್ಕೆ ಸಾಮಾನ್ಯ ವಿಷಯ. ಆದರೆ ಅವರ ಆಸೆಯಂತೆ ಸಂಗಾತಿ ಸಿಗಲು ಸಾಧ್ಯವಿಲ್ಲ. ಸಂಗಾತಿ, ಭವಿಷ್ಯ, ಜೀವನ ಎಲ್ಲವೂ ನಮ್ಮ ರಾಶಿ ಚಕ್ರವನ್ನು ಅವಲಂಬಿಸಿರುತ್ತದೆ. ಅಷ್ಟೇ ಅಲ್ಲ ಹುಡುಗಿಗೆ ತನ್ನ ಜೀವನ ಸಂಗಾತಿ ಹೀಗೆ ಇರಬೇಕು ಎನ್ನುವ ಭಾವನೆ ಹುಟ್ಟಲು ರಾಶಿಕಚ್ರದ ಪ್ರಭಾವ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.
ಹುಡುಗಿಯರು ತಮ್ಮ ಸಂಗಾತಿಯ ಕಲ್ಪನೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಬಯಸುವುದಿಲ್ಲ. ಇದಕ್ಕೆ ತಕ್ಕಂತೆ ಕೆಲವೊಮ್ಮೆ ನಿರಾಶೆಗೆ ಒಳಗಾಗಿ, ತಮ್ಮ ಅದೃಷ್ಟದ ಬಗ್ಗೆ ತಮ್ಮೊಳಗೇ ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಅವರ ರಾಶಿಚಕ್ರದ ಬಗ್ಗೆ ಸರಿಯಾದ ಅಧ್ಯಯನ ನಡೆಸಿದರೆ ಗುಪ್ತ ರೀತಿಯಲ್ಲಿರುವ ವಿಷಯಗಳನ್ನು ಸಹ ಬಹಿರಂಗ ಪಡಿಸಬಹುದು. ಈ ವಿಚಾರದ ಕುರಿತೇ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ...

ಮೇಷ ರಾಶಿ
ಈ ರಾಶಿ ಚಕ್ರದ ಹುಡುಗಿ ತನ್ನ ಸಂಗಾತಿಯಾಗುವವನು ಉತ್ತಮ ನಡವಳಿಕೆ ಹೊಂದಿರಬೇಕೆಂದು ಬಯಸುತ್ತಾಳೆ. ಇವಳು ತನ್ನ ಸಂಗಾತಿ ಹೆಚ್ಚು ವಿಶ್ವಾಸರ್ಹ ವ್ಯಕ್ತಿಯಾಗಿರಬೇಕು. ಅವನ ಪ್ರೀತಿಯಲ್ಲಿ ನಾನೊಬ್ಬಳೇ ಪಾತ್ರದಾರಳಾಗಿರಬೇಕು ಎಂದು ಬಯಸುತ್ತಾಳೆ. ಏಕಾಂತದಲ್ಲಿ ಸಂಗಾತಿಯೊಡನೆ ಕುಳಿತು ಮಾತನಾಡುತ್ತ ಹೆಚ್ಚು ಸಮಯ ಕಳೆಯಬೇಕೆನ್ನುವ ಆಸೆ ಹೊತ್ತಿರುತ್ತಾಳೆ. ಕೆಲವೊಮ್ಮೆ ಇವಳು ಇಷ್ಟ ಪಡುವ ವಸ್ತು, ಪ್ರೀತಿಯ ವಿಧಾನ ಮತ್ತು ಮಾತನಾಡುವ ಶೈಲಿ ಸಂಗಾತಿಗೆ ಬಾಲಿಶ ಎನಿಸಬಹುದು.

ವೃಷಭ ರಾಶಿ
ಈ ರಾಶಿಯ ಹುಡುಗಿ ತನ್ನ ಜೀವನವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾಳೆ. ಸಂಗಾತಿಯಾದವನು ತನ್ನ ಪ್ರೀತಿಯನ್ನು ಸಾಮಾಜಿಕ ಕ್ಷೇತ್ರದಲ್ಲಿ ಹೊಗಳಿಕೆ/ಪ್ರಶಂಸಿಸ ಬೇಕೆನ್ನುವ ಬಯಕೆ ಹೊಂದಿರುತ್ತಾಳೆ. ತನ್ನ ಸಂಗಾತಿ ಆದರ್ಶ ಪ್ರೇಮಿಯಂತಿರಬೇಕು ಎಂದು ಬಯಸುವಳು. ಆಕೆ ಪರಿಪೂರ್ಣ ಸಂಬಂಧದಲ್ಲಿದ್ದಾಳೆ ಎನ್ನುವುದನ್ನು ತೋರಿಸಿಕೊಳ್ಳಲು ಬಯಸುವಳು.

ಮಿಥುನ ರಾಶಿ
ಈ ರಾಶಿಯ ಹುಡುಗಿ ಭಾವೋದ್ರಿಕ್ತ ಸ್ವಭಾವದವಳಾಗಿರುತ್ತಾಳೆ. ಕೆಲವೊಮ್ಮೆ ಕಲ್ಪನಾ ಜೀವನದಲ್ಲಿರುವಂತೆ ವರ್ತಿಸುತ್ತಾಳೆ. ವಾಸ್ತವ ಬದುಕಿನ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಸಂಗಾತಿ ಜೀವನದಿಂದ ಓಡಿ ಹೋಗುವ ಸಾಧ್ಯತೆಗಳಿರುತ್ತದೆ. ಸಂಗಾತಿ ಸದಾ ತನ್ನೆಡೆಗೆ ಗಮನ ನೀಡಬೇಕೆಂದು ಬಯಸುತ್ತಾಳೆ. ಸಂಗಾತಿ ಆದವನು ಜೀವನದ ಎಲ್ಲಾ ವಿಚಾರದಲ್ಲೂ ಕಾಳಜಿ, ಜವಾಬ್ದಾರಿ, ಪ್ರೀತಿಯಲ್ಲಿ ಸಮಾನ ಪಾಲು ಪಡೆಯಬೇಕು ಎಂದು ಬಯಸುತ್ತಾಳೆ.

ಕರ್ಕ ರಾಶಿ
ಈ ರಾಶಿಯ ಹುಡುಗಿ ಸಂಗಾತಿಯಾಗುವವನು ಹೆಚ್ಚು ವಿಶ್ವಾಸರ್ಹ ವ್ಯಕ್ತಿಯಾಗಿರಬೇಕು ಎಂದು ಬಯಸುತ್ತಾಳೆ. ತನ್ನ ರಹಸ್ಯವನ್ನು ಆತನೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಸಂಗಾತಿಯ ಬಗ್ಗೆ ಸಂಪೂರ್ಣ ಭರವಸೆ ಬರುವವರೆಗೂ ಮುಕ್ತವಾಗಿ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ. ಜೀವನದಲ್ಲಿ ಏನೇ ಸಂಭವಿಸಿದರೂ ಸದಾ ಜೊತೆಯಲ್ಲಿದ್ದು ಸಹಕರಿಸಬೇಕೆಂದು ಬಯಸುತ್ತಾಳೆ.

ಸಿಂಹ ರಾಶಿ
ಇವರು ತಮ್ಮ ಸಂಗಾತಿಯಾಗುವವನು ಹೆಚ್ಚು ನಿಷ್ಠಾವಂತನಾಗಿರಬೇಕೆಂದು ಬಯಸುತ್ತಾಳೆ. ನಿಷ್ಠಾವಂತ ಹಾಗೂ ಪ್ರಾಮಾಣಿಕವ್ಯಕ್ತಿಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಸಂಗಾತಿಯೇ ತನ್ನ ಪ್ರಪಂಚ ಎಂದುಕೊಳ್ಳುತ್ತಾಳೆ. ಬೇರೆಯವರು ಏನೆಂದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಚಿಂತೆ ಮಾಡುವುದಿಲ್ಲ.

ಕನ್ಯಾ ರಾಶಿ
ಈ ರಾಶಿಯವರು ತಮಗಾಗಿ ಸಮಯ ನೀಡುವವರನ್ನು, ತಮ್ಮನ್ನು ಗುರುತಿಸುವವರನ್ನು ಪ್ರೀತಿಸುತ್ತಾರೆ. ಸಂಗಾತಿಯೂ ಎಲ್ಲಾ ವಿಚಾರದಲ್ಲೂ ಪರಿಪೂರ್ಣನಾಗಿರಬೇಕೆಂದು ಬಯಸುವರು.

ತುಲಾ ರಾಶಿ
ಈ ರಾಶಿಯವರು ನೈಸರ್ಗಿಕವಾಗಿಯೇ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ಸದಾ ತಮ್ಮ ಸುತ್ತಲು ಅಭಿಮಾನಿಗಳು ಸುತ್ತುವರಿದಿರಬೇಕೆಂದು ಬಯಸುತ್ತಾರೆ. ಇವರು ಜೀವನದಲ್ಲಿ ಹೆಚ್ಚು ಸುಂದರವಾದ ಹಾಗೂ ಶ್ರೀಮಂತಿಕೆಯ ವಿಚಾರಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ತನಗೆ ಇಷ್ಟವಾದ ವ್ಯಕ್ತಿ ಇನ್ನೊಬ್ಬರನ್ನು ಇಷ್ಟ ಪಡುತ್ತಿದ್ದಾರೆ ಎನ್ನುವುದು ತಿಳಿದರೆ, ತಮ್ಮ ಪ್ರೀತಿಯನ್ನು ಅವರ ಮುಂದೆ ವ್ಯಕ್ತ ಪಡಿಸಲು ಹಿಂಜರಿಯುವುದಿಲ್ಲ.

ವೃಶ್ಚಿಕ ರಾಶಿ
ಇವರಿಗೆ ತಮ್ಮ ಸಂಗಾತಿ ತನ್ನನ್ನೇ ಹೆಚ್ಚು ಅಪೇಕ್ಷಿಸಬೇಕೆನ್ನುವ ಭಾವ ಇರುತ್ತದೆ. ಆದರೆ ಅವರ ಸಂಗಾತಿಯಿಂದ ಅದು ಸಾಧ್ಯವಾಗುವುದಿಲ್ಲ. ಸಂಗಾತಿಯೊಂದಿಗೆ ತನ್ನ ಜೀವನದ ಸತ್ಯವನ್ನು ಬಹಿರಂಗವಾಗಿ/ಮುಕ್ತವಾಗಿ ಹೇಳಿಕೊಳ್ಳುವಳು. ಇವರು ಅನ್ಯೋನ್ಯತೆ ಹಾಗೂ ಲೈಂಗಿಕ ವಿಚಾರಗಳನ್ನು ಗೌರವಿಸುತ್ತಾರೆ. ಅಸೂಯೆ ಹಾಗೂ ಸ್ವಾಮ್ಯತೆ ಇವರ ಲಕ್ಷಣ ಎಂದು ಹೇಳಬಹುದು. ಸಂಗಾತಿಯು ಅವರ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ಇಷ್ಟಪಡರು.

ಧನು ರಾಶಿ
ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಬದ್ಧತೆಯಿಂದ ಇರುವುದಕ್ಕೆ ಹೆದರುತ್ತಾರೆ. ಇವರು ಪ್ರೇಮಿಗಾಗಿ ದೀರ್ಘಕಾಲದವರೆಗೆ ಇದ್ದರೂ ಪ್ರೀತಿಯಲ್ಲಿ ಸಿಕ್ಕಿ ಬೀಳುತ್ತಿದ್ದೇನೆ ಎನ್ನುವ ವಿಚಾರಕ್ಕೆ ಭಯ ಭೀತರಾಗಿರುತ್ತಾರೆ. ಇವರೊಂದಿಗೆ ಯಾರು ಹೆಚ್ಚು ಬೆರೆಯುತ್ತಾರೋ ಅವರೊಂದಿಗೆ ನೆಲೆಸಲು ಸಿದ್ಧರಾಗಿರುತ್ತಾರೆ.

ಮಕರ ರಾಶಿ
ಇವರು ತಮ್ಮ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಸಂಗಾತಿಯು ಉತ್ತಮ ಕೆಲಸಗಾರ ಹಾಗೂ ಮಹತ್ವಾಕಾಂಕ್ಷಿಯಾಗಿರಬೇಕೆಂದು ಬಯಸುತ್ತಾರೆ. ಯಾವುದೇ ಅಲ್ಪಾವಧಿಯ ಸಂಬಂಧದಲ್ಲಿ ಇರಲು ಇವರಿಗೆ ಆಸಕ್ತಿ ಇರದು. ಭವಿಷ್ಯದಲ್ಲಿ ಹೆಚ್ಚು ಪ್ರಣಯ ಪೂರ್ಣವಾದ ಜೀವನ ನಡೆಸಲು ಇಷ್ಟ ಪಡುವರು.

ಕುಂಬ ರಾಶಿ
ಇವರು ಬುದ್ಧಿವಂತ ಹಾಗೂ ಸೃಜನಶೀಲರು. ಹೆಚ್ಚು ಸ್ವತಂತ್ರರಾಗಿರಲು ಬಯಸುತ್ತಾರೆ. ಇವರ ಕಲಾತ್ಮಕ ಪ್ರತಿಭೆಯನ್ನು ಮೆಚ್ಚದವರ ಬಗ್ಗೆ ಇಷ್ಟ ಪಡುವುದಿಲ್ಲ. ಇವರು ಭಾವೋದ್ರಿಕ್ತ ಪ್ರೇಮ ಜೀವನವನ್ನು ಹೊಂದುವ ಗುರಿಯನ್ನು ಹೊಂದಿರುತ್ತಾರೆ.

ಮೀನ ರಾಶಿ
ಇವರು ಇತರರನ್ನು ಪ್ರೀತಿಸುವುದಕ್ಕಿಂತ ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ಸದಾ ತನ್ನ ಕಲ್ಪನಾ ಲೋಕದಲ್ಲೇ ಜೀವಿಸುತ್ತಾರೆ. ವಾಸ್ತವಿಕ ಜೀವನವನ್ನು ಸಂಗಾತಿಯೊಡನೆ ಕಳೆಯುತ್ತಾರೆ. ಸಂಗಾತಿಯು ಸೌಮ್ಯ ಮತ್ತು ಪೋಷಣಾ ಗುಣ ಹೊಂದಿರಬೇಕೆಂದು ಬಯಸುತ್ತಾರೆ.



Click it and Unblock the Notifications