ರಾಶಿ ನೋಡಿ, ಸ್ನೇಹ ಬೆಳೆಸಿ!! ಎಲ್ಲವೂ ಅಂದುಕೊಂಡಂತೆ ನಡೆಯಲಿದೆ...

By: Deepu
Subscribe to Boldsky

ಪ್ರತಿಯೊಂದು ರಾಶಿಗೂ ತನ್ನದೇ ಆಗಿರುವಂತಹ ವ್ಯಕ್ತಿತ್ವ ಹಾಗೂ ನಡವಳಿಕೆ ಇರುವುದು ಸಹಜ. ಒಂದು ರಾಶಿಯವರು ಮತ್ತೊಂದು ರಾಶಿಯವರಂತೆ ಇರಲ್ಲ. ಅದೇ ರೀತಿ ರಾಶಿಯನ್ನು ನೋಡಿಕೊಂಡು ವ್ಯಕ್ತಿಯ ಬಗ್ಗೆ ಮತ್ತು ಆತನ ಗುಣಸ್ವಭಾವ ಯಾವ ರೀತಿಯದ್ದಾಗಿರುತ್ತದೆ ಎಂದು ಹೇಳಬಹುದು.

ಬೇರೆ ಬೇರೆ ರಾಶಿಯವರ ವ್ಯಕ್ತಿತ್ವ ತಿಳಿದುಕೊಂಡರೆ ಅದರಿಂದ ಸ್ನೇಹ ಬೆಳೆಸಲು ಸಹಾಯವಾಗಲಿದೆ. ರಾಶಿಯಲ್ಲಿನ ಕೆಲವೊಂದು ಗುಣಲಕ್ಷಣಗಳು ನಿಮ್ಮ ಸ್ನೇಹಪರತೆ ಬಗ್ಗೆ ತಿಳಿಸಲಿದೆ. ಇದು ಹೇಗೆ ಎಂದು ತಿಳಿಯಿರಿ....

ಮೇಷ

ಮೇಷ

ಒಬ್ಬ ವ್ಯಕ್ತಿಯಾಗಿ ನಿಮ್ಮ ಉಪಸ್ಥಿತಿಯು ಯಾವಾಗಲೂ ತಿಳಿದುಬರುವುದು. ನಿಮ್ಮ ವ್ಯಕ್ತಿತ್ವವು ತುಂಬಾ ಬಲವಾಗಿರುವುದು. ನೀವು ತುಂಬಾ ಆತ್ಮವಿಶ್ವಾಸಿ, ಧೈರ್ಯವಂತ ಮತ್ತು ಮಹಾತ್ವಾಕಾಂಕ್ಷಿಯಾಗಿರುವಿರಿ. ನೀವು ತುಂಬಾ ಕ್ರಿಯಾತ್ಮಕವಾಗಿರಲಿದ್ದೀರಿ ಮತ್ತು ಸ್ನೇಹಿತರಿಗೆ ಸವಾಲಾಗುವಂತಹ ಹೊಸ ಹಾಗೂ ಮನೋರಂಜನೆಯ ವಿಚಾರಗಳತ್ತ ನೀವು ಎದುರು ನೋಡುತ್ತಿರುತ್ತೀರಿ.

ವೃಷಭ

ವೃಷಭ

ಈ ರಾಶಿಯವರು ತುಂಬಾ ಸರಳ, ಬದ್ಧತೆ ಹಾಗೂ ತಾಳ್ಮೆಯವರು. ನಿನ್ನ ಸುತ್ತಲು ಇರುವ ಜನರಿಗೆ ನೀವು ಯಾವಾಗಲೂ ತುಂಬಾ ಪ್ರಾಮಾಣಿಕವಾಗಿರಲಿದ್ದೀರಿ ಮತ್ತು ಅವರಿಗೆ ಆರಾಮದಾಯಕ ಭಾವನೆ ಉಂಟು ಮಾಡಲಿದ್ದೀರಿ. ಸ್ನೇಹಿತರಿಗೆ ನೀವು ತುಂಬಾ ತಾಳ್ಮೆ ಮತ್ತು ಪ್ರಾಮಾಣಿಕರಾಗಿರಲಿದ್ದೀರಿ.

ಮಿಥುನ

ಮಿಥುನ

ಮಿಥುನ ರಾಶಿಯವರು ತುಂಬಾ ಸಾಮಾಜಿಕ, ಹೊಂದಾಣಿಕೆಯ ಮತ್ತು ಯಾರೊಂದಿಗಾದರೂ ಬೇಗನೆ ಸಂಭಾಷಣೆಯನ್ನು ಆರಂಭಿಸಲಿರುವ ವ್ಯಕ್ತಿಯಾಗಿರಲಿದ್ದೀರಿ. ಸ್ನೇಹಿತರು ಕೂಡ ನಿಮ್ಮೊಂದಿಗೆ ಸೇರಿಕೊಂಡು ಹೊಸ ಹಾಗೂ ಮನೋರಂಜನೆಯ ವಿಚಾರಗಳನ್ನು ಮಾಡಲಿರುವರು. ಕುತೂಹಲಕಾರಿ ನಡವಳಿಕೆಯು ನಿಮ್ಮ ಸ್ನೇಹಿತರಿಗೆ ವಿಶ್ರಾಂತಿಯಿಲ್ಲದಂತೆ ಮಾಡುವುದು. ಇದರ ಕಡೆ ನೀವು ಗಮನಹರಿಸಬೇಕಾಗಿದೆ.

ಕರ್ಕಾಟಕ

ಕರ್ಕಾಟಕ

ಈ ರಾಶಿಯವರನ್ನು ಬೇರೆಯವರಿಗೆ ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗುವುದು. ನೀವು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಯಾದರೂ ಇದನ್ನು ಬೇರೆಯವರ ಮುಂದೆ ತೋರಿಸಿಕೊಡುವುದಿಲ್ಲ. ಸ್ನೇಹಿತರಿಗೆ ನೀವು ಯಾವಾಗಲು ಬೆಂಬಲಕ್ಕಿರುತ್ತೀರಿ. ನಿಮಗೆ ತುಂಬಾ ಹತ್ತಿರವಾಗಿರುವವರಿಗೆ ಯಾವಾಗಲೂ ನೀವು ಪ್ರಾಮಾಣಿಕವಾಗಿರುವಿರಿ. ಆದರೆ ಕೆಲವೊಂದು ಸಲ ನೀವು ತುಂಬಾ ಭಾವನಾತ್ಮಕಾಗಿ ವರ್ತಿಸುವುದರಿಂದ ಪರಿಸ್ಥಿತಿಯು ವಿರುದ್ಧವಾಗಬಹುದು.

ಸಿಂಹ

ಸಿಂಹ

ಸ್ನೇಹಿತರಿಗೆ ಈ ರಾಶಿಯವರು ತುಂಬಾ ಉದಾರ ಹಾಗೂ ಪ್ರಾಮಾಣಿಕರಾಗಿರುವರು. ಸ್ನೇಹಿತರು ಯಾವುದೇ ರೀತಿಯ ಸಂಕಷ್ಟದಲ್ಲಿರುವಾಗ ನೀವು ಅವರಿಗೆ ನೆರವು ನೀಡಲು ಸಮಯ ಹಾಗೂ ಶಕ್ತಿ ವ್ಯಯಿಸಲಿದ್ದೀರಿ. ನೀವು ಗುಂಪಿನ ನಾಯಕನಾಗಲಿದ್ದೀರಿ ಮತ್ತು ಆತ್ಮವಿಶ್ವಾಸ ನಿಮ್ಮಲ್ಲಿರಲಿದೆ. ಇದರಿಂದಾಗಿ ಕೆಲವು ಸಲ ಇತರರ ಸಮಸ್ಯೆಯ ಬಗ್ಗೆ ಕುಪಿರಾಗುವ ಅಥವಾ ನಿರ್ಲಕ್ಷ್ಯ ತಾಳಬಹುದು.

ಕನ್ಯಾ

ಕನ್ಯಾ

ಈ ರಾಶಿಯವರು ಸ್ನೇಹದಲ್ಲಿ ತುಂಬಾ ಪ್ರಾಮಾಣಿಕ, ಪ್ರೀತಿಯ ಮತ್ತು ತುಂಬಾ ದೀರ್ಘ ಕಾಲ ಸಂಬಂಧ ಉಳಿಸಿಕೊಳ್ಳಲಿದ್ದೀರಿ. ನಿಮ್ಮದು ತುಂಬಾ ಬಲಿಷ್ಠ ಹಾಗೂ ಬದಲಾಗದ ನಡವಳಿಕೆ. ಇದು ನಿಮಗೆ ಜೀವನದಲ್ಲಿ ನೈತಿಕ ಬಲವಾಗಿ ಕೆಲಸ ಮಾಡಲಿದೆ. ಕಾಗದದ ಮೇಲೆ ನೀವು ತುಂಬಾ ಚೆನ್ನಾಗಿ ಬರೆಯಬಲ್ಲೀರಿ. ಅದೇ ಮಾತನ್ನು ಇತರರ ಮುಂದೆ ಹೇಳಬೇಕೆಂದಾಗ, ಅದು ನಿಮಗೆ ತುಂಬಾ ಕಷ್ಟವಾಗಬಹುದು.

ತುಲಾ

ತುಲಾ

ನೀವು ತುಂಬಾ ಸಾಮಾಜಿಕ, ಬೆಂಬಲ ನೀಡುವ ಮತ್ತು ಗೌರವಯುತ ಸ್ನೇಹಿತರಾಗಿರಲಿದ್ದೀರಿ. ನೀವು ಯಾವಾಗಲೂ ಏಕಾಂಗಿಯಾಗಿದ್ದೇನೆಂದು ಭಾವಿಸುವುದೇ ಇಲ್ಲ. ಇದರಿಂದಾಗಿಯೇ ನಿಮ್ಮ ಸುತ್ತಲು ಇರುವಂತವರ ಜತೆಗೆ ನೀವು ಯಾವಾಗಲೂ ಮಾತನಾಡುತ್ತಾ ಅಥವಾ ಚರ್ಚಿಸುತ್ತಾ ಇರುತ್ತೀರಿ. ನೀವು ತುಂಬಾ ತಾಳ್ಮೆಯ ವ್ಯಕ್ತಿಯಾಗಿರುತ್ತೀರಿ ಮತ್ತು ಆದಷ್ಟು ಮಟ್ಟಿಗೆ ಜಗಳವಾಗುವುದನ್ನು ತಡೆಯುತ್ತೀರಿ.

ವೃಶ್ಚಿಕ

ವೃಶ್ಚಿಕ

ನೀವು ನಿಜವಾದ ಸ್ನೇಹಿತರಾಗಿರುತ್ತೀರಿ. ಅದೇ ಬೇರೆಯವರು ಕೂಡ ನಿಜವಾದ ಸ್ನೇಹಿತರಾಗಬೇಕೆಂದು ಬಯಸುತ್ತೀರಿ. ನೀವು ತುಂಬಾ ಭಾವೋದ್ರೀಕ್ತ, ಸಮರ್ಥ ಹಾಗೂ ಪ್ರಾಮಾಣಿಕ ಸ್ನೇಹಿತರಾಗಿರುತ್ತೀರಿ. ನಿಮ್ಮಂತೆ ಚುರುಕು ಬುದ್ಧಿ ಹಾಗೂ ಜಾಣ್ಮೆ ಹೊಂದಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಲು ನೀವು ಬಯಸುತ್ತೀರಿ.

ಧನು

ಧನು

ಈ ರಾಶಿಯವರು ತುಂಬಾ ಉದಾರ, ಉತ್ಸಾಹ ಮತ್ತು ತೆರೆದ ಮನಸ್ಸಿನ ವ್ಯಕ್ತಿಯಾಗಿರುತ್ತಾರೆ. ನೀವು ಒಳ್ಳೆಯ ತಮಾಷೆಯ ವ್ಯಕ್ತಿ ಮತ್ತು ನಿಮ್ಮ ಸುತ್ತಲು ಸ್ನೇಹಿತರು ತುಂಬಿರುವರು. ಪ್ರಯಾಣದ ಮೂಲಕ ಸಂಸ್ಕೃತಿ ಮತ್ತು ವಿವಿಧತೆಯ ಅನುಭವ ಪಡೆಯಲು ನೀವು ಹೆಚ್ಚು ಇಷ್ಟಪಡುತ್ತೀರಿ. ವ್ಯಕ್ತಿಯಾಗಿ ನೀವು ತಮಾಷೆಯ ಮತ್ತು ಸಂಬಂಧಕ್ಕೆ ಬದ್ಧತೆಯ ವ್ಯಕ್ತಿಯಾಗಿರುತ್ತೀರಿ. ಆದರೆ ಇದನ್ನು ಅನುಭಸಿದರೆ ಮಾತ್ರ ನಿಮ್ಮ ಗಮನಕ್ಕೆ ಬರುವುದು.

ಮಕರ

ಮಕರ

ಸ್ನೇಹಿತರಿಗೆ ನೀವು ಜವಾಬ್ದಾರಿಯ, ಪ್ರಾಮಾಣಿಕ ಮತ್ತು ವಿಶ್ವಾಸರ್ಹ ವ್ಯಕ್ತಿಯಾಗಿರುತ್ತೀರಿ. ಕೆಲವೊಂದು ಸಲ ನೀವು ತುಂಬಾ ಗಂಭೀರ ಹಾಗೂ ನಿಮ್ಮದೇ ಆಲೋಚನೆಯಲ್ಲಿ ಮುಳುಗಿರುತ್ತೀರಿ. ಆದರೆ ನಿಮ್ಮ ಸುತ್ತಲು ಹಾಗೂ ಹತ್ತಿರವಿರುವ ವ್ಯಕ್ತಿಗಳಿಗೆ ನೀವು ತುಂಬಾ ಬೆಂಬಲ ನೀಡಲಿದ್ದೀರಿ. ಆದರೆ ಬೇರೆಯವರು ನಿಮಗೆ ನೋವು ಉಂಟು ಮಾಡಲು ಪ್ರಯತ್ನಿಸಿದರೆ ಆಗ ಖಂಡಿತವಾಗಿಯೂ ನೀವು ಅವರನ್ನು ಕ್ಷಮಿಸಲ್ಲ.

ಕುಂಭ

ಕುಂಭ

ಈ ರಾಶಿಯವರು ವಿಶ್ವದ ಅದ್ಭುತ ಸ್ನೇಹಿತರಾಗಿರುವರು. ಆದರೆ ಇದನ್ನು ತಿಳಿಯಲು ಬೇರೆಯವರು ಸಮಯ ನೀಡಬೇಕು ಮತ್ತು ನಿಮ್ಮೊಂದಿಗೆ ಆರಾಮದಾಯಕವಾಗಿರಬೇಕು. ಪರಿಸ್ಥಿತಿ ಬಗ್ಗೆ ನೀವು ತುಂಬಾ ಆಳವಾಗಿ ಯೋಚನೆ ಮಾಡಲಿದ್ದೀರಿ ಮತ್ತು ಸಮಸ್ಯೆ ಪರಿಹಾರ ಮಾಡಲು ಪ್ರಯತ್ನಿಸುತ್ತೀರಿ. ನೀವು ಒಳ್ಳೆಯ ಪ್ರೇರಣೆ ನೀಡುವ, ಸಲಹೆ ನೀಡುವ ಮತ್ತು ಸಮಸ್ಯೆ ಬಗೆಹರಿಸುವ ವ್ಯಕ್ತಿ.

ಮೀನ

ಮೀನ

ಈ ರಾಶಿಯವರು ತುಂಬಾ ಸ್ನೇಹಮಹಿ ಹಾಗೂ ಸಹಾನೂಭೂತಿಯವರಾಗಿರುವರು. ಉದಾರಿ ಹಾಗೂ ನಿಸ್ವಾರ್ಥಿಯಾಗಿರುವುದು ನಿಮ್ಮ ಒಳಗಿರುವ ಒಳ್ಳೆಯ ಗುಣ. ನೀವು ಭಾವನಾತ್ಮಕವಾಗಿ ತುಂಬಾ ಜಾಣರಾಗಿರುವಿರಿ. ಭಾವನೆಗಳನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ನಿಮ್ಮಲ್ಲಿರುವುದಿಲ್ಲ. ಅಂತಃಪ್ರಜ್ಞೆ ನಿಮಗೆ ಸಿಕ್ಕಿರುವ ಉಡುಗೊರೆಯಾಗಿದೆ. ಏನಾದರೂ ತಪ್ಪಾಗುತ್ತಾ ಇದ್ದರೆ ನಿಮಗೆ ಮೊದಲೇ ಅದನ್ನು ಗ್ರಹಿಸಬಲ್ಲೀರಿ.

English summary

What Type Of A Friend Are You Based On Your Zodiac Sign

Each zodiac sign has its own significant traits. These traits help us understand ourselves in a better way.Traits of your zodiac are deeply ingrained within your personality and they have a large effect on who you are as a person and as a friend. So, here are some of the traits that define you as a friend, which are based on your zodiac signs. Check them out!
Subscribe Newsletter