Latest Updates
-
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ!
ಇದು ಖಾಲಿ ಬಿಯರ್ ಬಾಟಲ್‌ಗಳಿಂದ ನಿರ್ಮಿಸಲಾದ ದೇವಾಲಯ!!
ವಿಶ್ವದಲ್ಲಿ ಅಚ್ಚರಿಗಳು ಪ್ರತೀದಿನ ನಡೆಯುತ್ತಲೇ ಇರುತ್ತದೆ. ಮಾನವರು ಕೂಡ ಕೆಲವೊಂದು ಅಚ್ಚರಿ ಮೂಡಿಸುವಂತಹ ಕೆಲಸ ಮಾಡುತ್ತಾ ಇರುತ್ತಾರೆ. ಪ್ರಕೃತಿ ನಿರ್ಮಿತ ಅಚ್ಚರಿಗಳು ಒಂದು ಕಡೆಯಾದರೆ ಮಾನವ ನಿರ್ಮಿತ ಅಚ್ಚರಿಗಳು ನಮ್ಮನ್ನು ಮತ್ತಷ್ಟು ಬೆರಗುಗೊಳಿಸುವುದು. ಅದರಲ್ಲೂ ಥೈಲ್ಯಾಂಡ್‌ನಲ್ಲಿ ಇರುವಂತಹ ದೇವಾಲಯವೊಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಯಾಕೆಂದರೆ ಇದನ್ನು ಖಾಲಿ ಬಿಯರ್ ಬಾಟಲಿಗಳಿಂದ ನಿರ್ಮಿಸಲಾಗಿದೆ. ಕೆಲವರು ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟಿಸಿದ್ದಾರೆ. ಆದರೆ ಇದನ್ನು ನಿರ್ಮಿಸಿದವರು ಮಾತ್ರ ಕೇವಲ ಬಿಯರ್ ಬಾಟಲಿಗಳನ್ನು ಬಳಸಿಕೊಂಡು ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾರೆ.

ಈ ಅಚ್ಚರಿ ಮೂಡಿಸುವ ದೇವಾಲಯದ ಬಗ್ಗೆ ಓದುತ್ತಾ ಸಾಗಿ....
ಗೆಳೆಯರು ತಮ್ಮ ಮನೆಗಳನ್ನು ಬಿಯರ್ ಬಾಟಲಿಗಳಿಂದ ಶೃಂಗರಿಸುವುದನ್ನು ನೋಡಿದಂತಹ ಸನ್ಯಾಸಿಯೊಬ್ಬರು ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಯಾಕೆ ಮಾಡಬಾರದು ಎಂದು 80ರ ದಶಕದಲ್ಲೇ ಆಲೋಚಿಸಿದ್ದರು. ಈ ಆಲೋಚನೆಯನ್ನು ಮುಕ್ತವಾಗಿ ಸ್ವಾಗತಿಸಿದ ಜನರು ತಮ್ಮ ಮನೆಯಲ್ಲಿ ಇದ್ದ ಬಾಟಲಿಗಳನ್ನು ನೀಡಲು ಆರಂಭಿಸಿದರು. ಮಂದಿರ ನಿರ್ಮಾಣ ಮಾಡುವಷ್ಟು ಬಾಟಲಿಗಳು ಈಗ ಲಭ್ಯವಾಗಿದೆ.

ಖಾಲಿ ಬಾಟಲಿಗಳ ರಾಶಿ!
ಸನ್ಯಾಸಿಯು ಹಲವಾರು ವಿಧದ ಬಾಟಲಿಗಳನ್ನು ಕೋಟಿಗಟ್ಟಲೆ ಸಂಗ್ರಹಿಸಿದ್ದಾರೆ. ಇದರ ಬಳಿಕ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಇದು ನೋಡಲು ಸುಂದರ ಮಂದಿರವಾಗಿದೆ.

ಬಿಯರ್ ಬಾಟಲಿಗಳಿಂದಲೇ ಸಂಪೂರ್ಣ ದೇಗುಲ!
ಮಂದಿರ ನಿರ್ಮಾಣದ ಪ್ರತಿಯೊಂದು ಹಂತವನ್ನು ಖಾಲಿ ಬಿಯರ್ ಬಾಟಲಿಗಳಿಂದಲೇ ಮಾಡಲಾಗಿದೆ. ಇಡೀ ಬಾಟಲಿಯಿಂದ ಹಿಡಿದು ಅದನ್ನು ತುಂಡು ಮಾಡಿ ಕೂಡ ಬಳಸಲಾಗಿದೆ. ಈಗ ಮಂದಿರವು ತುಂಬಾ ಸುಂದರವಾಗಿ ಕಾಣಿಸುತ್ತಾ ಇದೆ. ಒಬ್ಬ ವಾಸ್ತುಶಿಲ್ಪಿಗೂ ಇದು ಸವಾಲಾಗಿದೆ. ಶೌಚಾಲಯದಿಂದ ಹಿಡಿದು ಸ್ಮಶಾನದ ತನಕ ಪ್ರತಿಯೊಂದನ್ನು ಬಾಟಲಿಯಿಂದಲೇ ತಯಾರಿಸಲಾಗಿದೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಮಂದಿರದಲ್ಲಿ ಎರಡು ಬುದ್ಧನ ಪ್ರತಿಮೆಯಿದೆ. ಇದನ್ನು ಬಾಟಲಿಗಳಿಂದ ಮಾಡಲಾಗಿಲ್ಲ. ಆದರೆ ಇದನ್ನು ಬಂಗಾರದ ಗಾಜಿನ ಮೊಸಾಯಿಕ್ ನಿಂದ ತಯಾರಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಅಲ್ಲಿ ದಢೂತಿ ಬುದ್ಧನನ್ನು ನೋಡಬಹುದು. ಇದನ್ನು ಹೆಚ್ಚಿನವರು ಬುದೈ ಎಂದು ಕರೆಯುತ್ತಾರೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯ ಆಲೋಚನೆಯಾ ಎಂದು ತಿಳಿದಿಲ್ಲ. ಆದರೆ ಬಿಸಾಕುವ ವಸ್ತುಗಳನ್ನು ಬಳಸಿಕೊಳ್ಳುವುದು ಒಳ್ಳೆಯ ವಿಚಾರ. ಇದರ ಬಗ್ಗೆ ನಿಮ್ಮ ಯಾವುದೇ ಅನಿಸಿಕೆಗಳು ಇದ್ದರೆ ಅದನ್ನು ನಮಗೆ ಕಮೆಂಟ್ ಬಾಕ್ಸ್‌ನಲ್ಲಿ ಹಾಕಿ ತಿಳಿಸಿ.



Click it and Unblock the Notifications