For Quick Alerts
ALLOW NOTIFICATIONS  
For Daily Alerts

ಇಂಟರೆಸ್ಟಿಂಗ್-ನೋಟುಗಳ ಹಿಂದಿರುವ ಈ ಚಿತ್ರಗಳ ಮಹತ್ವವೇನು?

By Arshad
|

ದುಡ್ಡಿದ್ದವನೇ ದೊಡ್ಡಪ್ಪ ಎಂಬುದು ಕನ್ನಡದ ಗಾದೆ. ಇಂದಿನ ದಿನದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಆರೋಗ್ಯದಿಂದ ಪ್ರಾರಂಭಿಸಿ ಸಂತೋಷದವರೆಗೆ ಹಣ ಕೊಳ್ಳಲು ಸಾಧ್ಯವಿಲ್ಲದ್ದು ಏನೂ ಇಲ್ಲ. ನಿತ್ಯದ ಅಗತ್ಯತೆಗಳನ್ನು ಪೂರೈಸಲು ಕರೆನ್ಸಿ ನೋಟುಗಳು ತುಂಬಾ ಅಗತ್ಯ. ಈ ಅಗತ್ಯತೆಯನ್ನು ಆಯಾ ದೇಶದ ರಿಸರ್ವ್ ಬ್ಯಾಂಕ್ ಪೂರೈಸುತ್ತದೆ.

ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ಲಭಿಸುವಂತೆ ವಿತರಿಸುತ್ತದೆ. ಇದನ್ನು ನಕಲು ಮಾಡಲು ಸಾಧ್ಯವಾಗದಂತೆ ವಿನ್ಯಾಸ ಹಾಗೂ ಹಲವು ಸುರಕ್ಷಾ ಕ್ರಮಗಳನ್ನೂ ಕೈಗೊಳ್ಳುತ್ತದೆ. ಪ್ರತಿ ನೋಟಿನ ವಿನ್ಯಾಸದಲ್ಲಿಯೂ ಗಾಂಧೀಜಿಯವರ ಮತ್ತು ಮುಖಬೆಲೆಯ ಚಿತ್ರಗಳು ಕಡ್ಡಾಯವಾಗಿದ್ದರೂ ಹಿಂಬದಿಯಲ್ಲಿ ಮಾತ್ರ ಬೇರೆಬೇರೆಯಾದ ಚಿತ್ರಗಳಿರುತ್ತವೆ.

ಏನೂ ಮಾಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಅನುಸರಿಸಿ

ಈ ಚಿತ್ರಗಳನ್ನು ಏಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ? ಇದರ ಮಹತ್ವವೇನು ಬಲ್ಲಿರಾ? ಪ್ರತಿ ನೋಟಿನ ಹಿಂಭಾಗದಲ್ಲಿರುವ ಚಿತ್ರಕ್ಕೆ ತನ್ನದೇ ಆದ ಮಹತ್ವ, ಕಾರಣ ಹಾಗೂ ಅರ್ಥವಿದೆ. ಬನ್ನಿ, ಈ ಕಾರಣಗಳು ಯಾವುವು, ಇದರ ಮಹತ್ವವೇನು ಎಂಬುದನ್ನು ಅರಿಯೋಣ....

ಒಂದು ರೂಪಾಯಿ ನೋಟು

ಒಂದು ರೂಪಾಯಿ ನೋಟು

ಈ ಚಿತ್ರ ಭಾರತದಲ್ಲಿ ಆದ ಕೈಗಾರಿಕಾ ಕ್ರಾಂತಿಯನ್ನು ಬಿಂಬಿಸುತ್ತದೆ.

ಎರಡು ರೂಪಾಯಿ ನೋಟು

ಎರಡು ರೂಪಾಯಿ ನೋಟು

ಈ ನೋಟಿನ ಹಿಂದೆ ಇರುವ ಉಪಗ್ರಹದ ಚಿತ್ರ ಭಾರತ ಮೊದಲು ಉಡಾಯಿಸಿದ ಆರ್ಯಭಟ ಉಪಗ್ರಹದ್ದಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಭಾರತ ಸಾಧಿಸಿದ ಸಾಧನೆಯನ್ನು ಈ ಮೂಲಕ ಸಂಭ್ರಮಿಸಲಾಗಿದೆ.

ಐದು ರೂಪಾಯಿ ನೋಟು

ಐದು ರೂಪಾಯಿ ನೋಟು

ಈ ಚಿತ್ರದಲ್ಲಿ ಕೃಷಿಯಲ್ಲಿ ಟ್ರಾಕ್ಟರ್ ಬಳಸುತ್ತಿರುವುದನ್ನು ತೋರಿಸಲಾಗಿದ್ದು ಕೃಷಿ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಬಿಂಬಿಸಲಾಗಿದೆ.

ಹತ್ತು ರೂಪಾಯಿ ನೋಟು

ಹತ್ತು ರೂಪಾಯಿ ನೋಟು

ಖಡ್ಗಮೃಗ, ಆನೆ, ಹುಲಿಗಳ ಚಿತ್ರಗಳ ನಡುವೆ ವಿವಿಧ ಸಸ್ಯ ಮತ್ತು ಹೂವುಗಳನ್ನು ಅತ್ಯದ್ಭುತವಾಗಿ ಮೂಡಿಸುವ ಕಲಾವಿದನ ಕೈಚಳಕದ ಮೂಲಕ ಭಾರತದ ಜೀವವೈವಿಧ್ಯತೆಯನ್ನು ವಿವರಿಸಲಾಗುತ್ತಿದೆ.

ಇಪ್ಪತ್ತು ರೂಪಾಯಿ ನೋಟು

ಇಪ್ಪತ್ತು ರೂಪಾಯಿ ನೋಟು

ನಮ್ಮ ದೇಶದ ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ನಲ್ಲಿರುವ ಮೌಂಟ್ ಹ್ಯಾರಿಯೆಟ್ ದೀಪಸ್ಥಂಭದಿಂದ ನೋಡಿದಾಗ ಕಾಣುವ ತೆಂಗಿನ ಮರಗಳ ಸಮೃದ್ಧತೆ ಹಾಗೂ ಸಮುದ್ರವ ಚಿತ್ರವನ್ನು ಕಲಾತ್ಮಕವಾಗಿ ವಿನ್ಯಾಸದ ಚೌಕಟ್ಟಿನಲ್ಲಿ ಹುದುಗಿಸಿ ಭಾರತದ ತೀರಸೌಂದರ್ಯವನ್ನು ಬಿಂಬಿಸಲಾಗಿದೆ.

ಐವತ್ತು ರೂಪಾಯಿ ನೋಟು

ಐವತ್ತು ರೂಪಾಯಿ ನೋಟು

ಈ ಚಿತ್ರದಲ್ಲಿ ನವದೆಹಲಿಯಲ್ಲಿರುವ ಸಂಸತ್ ಭವನ ಕಟ್ಟಡವನ್ನು ಚಿತ್ರಿಸಲಾಗಿದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಂಬಿಸಲಾಗಿದೆ.

ನೂರು ರೂಪಾಯಿ ನೋಟು

ನೂರು ರೂಪಾಯಿ ನೋಟು

ಈ ನೋಟಿನಲ್ಲಿ ಭಾರತದ ಅತ್ಯುನ್ನತ ಪರ್ವತವಾಗಿರುವ ಕಾಂಚನಜುಂಗಾ ಪರ್ವತದ ಹಿಮಾಚ್ಛಾದಿತ ಶಿಖರಗಳನ್ನು ಕಲಾತ್ಮಕ ಚೌಕಟ್ಟಿನೊಳಗೆ ಮೂಡಿಸಲಾಗಿದೆ.

ಹಳೆಯ ಐನೂರು ರೂಪಾಯಿ ನೋಟು

ಹಳೆಯ ಐನೂರು ರೂಪಾಯಿ ನೋಟು

ಪ್ರಸ್ತುತ ಚಲಾವಣೆಯಿಂದ ಹಿಂದೆ ತೆಗೆದುಕೊಂಡಿರುವ ಹಳೆಯ ಐನೂರು ರೂಪಾಯಿ ನೋಟುಗಳಲ್ಲಿ ಸ್ವಾತಂತ್ರ ಸಂಗ್ರಾಮದ ಒಂದು ಅಂಗವಾದ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವ ನೇತೃತ್ವದಲ್ಲಿ ಹೊರಟ ದಂಡಿಯಾತ್ರೆಯನ್ನು ಬಿಂಬಿಸಲಾಗಿದೆ.

ಇಂದು ಚಲಾವಣೆಯಲ್ಲಿರುವ ಹೊಸ ಐನೂರು ರೂಪಾಯಿ ನೋಟು

ಇಂದು ಚಲಾವಣೆಯಲ್ಲಿರುವ ಹೊಸ ಐನೂರು ರೂಪಾಯಿ ನೋಟು

ಭಾರತದ ಇತಿಹಾಸದ ಹಲವು ಪ್ರಮುಖ ಕ್ಷಣಗಳನ್ನು ದಾಖಲಿಸಿರುವ ಕೆಂಪುಕೋಟೆಯಲ್ಲಿ ಭಾರತದ ಧ್ವಜ ಹಾರಾಡುತ್ತಿರುವುದನ್ನು ಈ ಚಿತ್ರದಲ್ಲಿ ವಿವರಿಸಲಾಗಿದ್ದು ಸ್ವತಂತ್ರ ಭಾರತದ ಸಾಕಾರವನ್ನು ಬಿಂಬಿಸಲಾಗಿದೆ.

ಹಳೆಯ ಸಾವಿರ ರೂಪಾಯಿ ನೋಟು

ಹಳೆಯ ಸಾವಿರ ರೂಪಾಯಿ ನೋಟು

ಈ ಚಿತ್ರದಲ್ಲಿ ಭಾರತದ ಆರ್ಥಿಕ ಸ್ಥಿತಿ ಹಾಗೂ ಪ್ರಗತಿಯನ್ನು ಬಿಂಬಿಸಲಾಗಿದೆ.

ಹೊಸ ಸಾವಿರ ರೂಪಾಯಿ ನೋಟು

ಹೊಸ ಸಾವಿರ ರೂಪಾಯಿ ನೋಟು

ಕಳೆದ ವರ್ಷ ಭಾರತ ಮಂಗಳಯಾನ ಎಂಬ ಅಭಿಯಾನದ ಮೂಲಕ ಮಂಗಳನ ಬಳಿ ಸಾಗಿದ ಉಪಗ್ರಹದ ಚಿತ್ರವನ್ನು ಪ್ರಟಿಸುವ ಮೂಲಕ ಖಗೋಳವಿಜ್ಞಾನದಲ್ಲಿ ಆಗಿರುವ ಪ್ರಗತಿಯನ್ನು ಬಿಂಬಿಸಲಾಗಿದೆ.

English summary

What These Images On The Backside Of Indian Currency Notes Signify

Apart from happiness and emotions, there is nothing that money cannot buy! We spend so much of money and use the currency notes every single day. But have you ever taken out the time to check the design on the Indian currency notes? Each single image on the Indian currency notes has its own meaning and a reason for it to be there. Here is the reason for it... Find out what it means...
X
Desktop Bottom Promotion