Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ನಂಬರ್ 7'
ಸಂಗೀತದ ಸಪ್ತ ಸ್ವರಗಳು, ಏಳು ಸಾಗರಗಳು, ಕಾಮನಬಿಲ್ಲಿನ ಏಳು ಬಣ್ಣಗಳು,ಏಳು ಖಂಡಗಳು ಹೀಗೆ ಪ್ರತಿಯೊಂದು ಕೂಡ ಏಳು ಆಗಿರುವುದು. ಈ ಏಳು ಸಂಖ್ಯೆಯು ವಿಶ್ವದಲ್ಲಿ ಹೆಚ್ಚಿನವರಿಗೆ ತುಂಬಾ ಅದೃಷ್ಟವಂತೆ. ಕೆಲವರಿಗೆ ರಾಶಿ ಪ್ರಕಾರವಾಗಿ ಈ ಸಂಖ್ಯೆಯು ಅದೃಷ್ಟವಾದರೆ ಇನ್ನು ಕೆಲವರು ಇದನ್ನು ಹೀಗೆಯೇ ಅದೃಷ್ಟವೆಂದು ನಂಬಿಕೊಂಡಿದ್ದಾರೆ.
7 ಸಂಖ್ಯೆಯು ಹೆಚ್ಚಿನವರಿಗೆ ಅದೃಷ್ಟವಾಗಲು ಕಾರಣವೇನು ಎನ್ನುವ ರಹಸ್ಯವನ್ನು ಬೋಲ್ಡ್ ಸ್ಕೈ ಹೊರಹಾಕಲಿದೆ. ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಮತ್ತು ಫುಟ್ಬಾಲ್ ತಾರೆ ರೊನಾಲ್ಡೊ ಜರ್ಸಿ ಮೇಲಿರುವ ಸಂಖ್ಯೆ ಕೂಡ ಏಳು. ಇದು ಎಲ್ಲರಿಗೂ ಅದೃಷ್ಟವಾಗಲು ಕಾರಣವೇನೆಂದು ತಿಳಿಯಿರಿ....

ಇದು ತುಂಬಾ ಪವಿತ್ರ ಸಂಖ್ಯೆ
ಆಧ್ಯಾತ್ಮಿಕ ಜಗತ್ತಿನಲ್ಲಿ 7 ಸಂಖ್ಯೆಯು ಸತ್ಯವನ್ನು ಅನ್ವೇಷಿಸಲು ಹೋಗುವ ಸಂಕೇತವೆಂದು ನಂಬಲಾಗಿದೆ. ಸಂಖ್ಯೆಯು ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ. ಆದರೆ ಇದು ತುಂಬಾ ಪವಿತ್ರವೆನ್ನಲಾಗಿದೆ.

ಈ ಸಂಖ್ಯೆಯನ್ನು ಅದೃಷ್ಟವೆಂದು ನಂಬಿರುವವರು....
7 ಸಂಖ್ಯೆಯನ್ನು ಪವಿತ್ರವೆಂದು ನಂಬಿಕೊಂಡಿರುವವರು ತುಂಬಾ ಆಧ್ಯಾತ್ಮಿಕ, ಜ್ಞಾನಿ, ವಿಶ್ಲೇಷಾತ್ಮಕ ಹಾಗೂ ಆತ್ಮಾಲೋಕನ ಮಾಡುವವರು ಆಗಿರುವರು. ಇದನ್ನು ಹೊರತುಪಡಿಸಿ ಇವರು ತುಂಬಾ ಅರ್ಥಗರ್ಭಿತ, ತಿಳುವಳಿಕೆ ಹಾಗೂ ಜ್ಞಾನ ಹೊಂದಿರುವವರು.

ಇವರು ಒಳಗಿನ ಸ್ವತಂತ್ರ್ಯ ಪ್ರದರ್ಶಿಸುವರು
7 ಸಂಖ್ಯೆಯನ್ನು ತುಂಬಾ ಅದೃಷ್ಟವೆಂದು ಪರಿಗಣಿಸುವಂತಹ ಜನರು ಚಿಂತನಶೀಲ ಗಂಭೀರ, ಸಂಸ್ಕರಿತ ಮತ್ತು ಗೌರವಯುತ ಲಕ್ಷಣಗಳು ಹೊಂದಿರುವರು. ಇವರು ತಮ್ಮ ಒಳಗಿನ ಸ್ವಾತಂತ್ರ್ಯವನ್ನು ಶ್ರೇಷ್ಠ ರೀತಿಯಲ್ಲಿ ಪ್ರದರ್ಶಿಸಿವರು.

ಇವರು ಯಾವತ್ತೂ ತಪ್ಪು ನಿರ್ಧಾರ ಮಾಡಲ್ಲವಂತೆ
ಏಳು ಸಂಖ್ಯೆಯನ್ನು ಅದೃಷ್ಟವೆಂದು ನಂಬಿರುವ ಜನರಿಗೆ ಹಣವೆಂದರೆ ಏನೂ ಅಲ್ಲ. ಇವರು ಯಾವತ್ತೂ ತಪ್ಪು ನಿರ್ಧಾರ ಮಾಡಲ್ಲ ಮತ್ತು ಆರ್ಥಿಕ ಫಲಿತಾಂಶದ ದೃಷ್ಟಿಕೋನದಿಂದ ಯಾವುದೇ ನಿರ್ಧಾರ ಮಾಡಲ್ಲ. ಇವರಿಗೆ ಗಾಳಿಸುದ್ದಿಯೆಂದರೆ ತುಂಬಾ ದ್ವೇಷ ಮತ್ತು ಬೆನ್ನಿಗೆ ಚೂರಿ ಇರಿಯುವವರಿಗೆ ಇವರು ಪ್ರತಿರೋಧವಾಗಿರುವರು.

ಈ ಸಂಖ್ಯೆಯನ್ನು ಅದೃಷ್ಟವೆನ್ನುವ ಮಹಿಳೆಯರು….
ಏಳನ್ನು ಅದೃಷ್ಟವೆಂದು ನಂಬಿರುವ ಮಹಿಳೆಯರು ತುಂಬಾ ಅದೃಷ್ಟವಂತರಾಗಿರುವರು. ಇವರು ಕನ್ನಡಿ ಮುಂದೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದರೆ ಇವರು ಸೌಂದರ್ಯವತಿಗಳು. ಇವರಲ್ಲಿ ಕೆಲವರ ತಲೆಯಲ್ಲಿ ಬೇರೆಯದ್ದೇ ಆಲೋಚನೆಗಳಿರುವುದು ಎಂದು ಅವರಿಗೆ ತಿಳಿದಿರಲ್ಲ.

ಈ ಅದೃಷ್ಟ ಸಂಖ್ಯೆಯ ನಕಾರಾತ್ಮಕ ಅಂಶಗಳು
ಈ ಸಂಖ್ಯೆಯನ್ನು ಆಯ್ಕೆ ಮಾಡಿರುವವರಲ್ಲಿ ಕೆಲವು ನಕಾರಾತ್ಮಕ ಅಂಶಗಳು ಕೂಡ ಇದೆ. ಇವರು ತುಂಬಾ ದೂರವಿರುವರು ಮತ್ತು ತಮ್ಮನ್ನು ತಾವೇ ದೂರವಿರಿಸಿಕೊಳ್ಳುವರು. ಇವರು ಸಾಮಾಜಿಕವಾಗಿಯೂ ವಿಚಿತ್ರವಾಗಿರುವರು. ಇವರು ತಮ್ಮ ಕೆಟ್ಟ ಸಮಯದಲ್ಲಿ ಬೆನ್ನಿಗೆ ಚೂರಿ ಇರಿಯಲು ಹೇಸಲ್ಲ.



Click it and Unblock the Notifications
