ಇವೆಲ್ಲಾ ಅದೃಷ್ಟವನ್ನೇ ಬದಲಾಯಿಸುವ ಸಂಖ್ಯೆ!, ನಿಮ್ಮದೂ ಪರಿಶೀಲಿಸಿಕೊಳ್ಳಿ

Posted By: Divya pandith
Subscribe to Boldsky

ನಮ್ಮ ವಾಹನದ ಸಂಖ್ಯೆ, ಮನೆಯ ಸಂಖ್ಯೆ, ಮೊಬೈಲ್ ನಂಬರ್ ಅಥವಾ ಇನ್ಯಾವುದೋ ಒಂದು ಕೆಲಸಕ್ಕೆ ಸಂಬಂಧಿಸಿದ ಸಂಖ್ಯೆಗಳು ನಮ್ಮ ಅದೃಷ್ಟಗಳಿಗೆ ಕಾರಣವಾಗುತ್ತವೆ ಎಂದು ಸಂಖ್ಯಾ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಹೇಳುತ್ತವೆ. ಹಾಗೊಮ್ಮೆ ಆ ಸಂಖ್ಯೆಗಳಿಂದ ನಮಗೆ ಅದೃಷ್ಟ ಇಲ್ಲವೆಂದಾದರೆ ಅದರಿಂದ ಯಾವುದೇ ಉಪಯೋಗ ಅಥವಾ ಲಾಭ ಉಂಟಾಗುವುದಿಲ್ಲ. ಬದಲಿಗೆ ನಷ್ಟ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ.

ಹೊಸವರ್ಷದ ಹೊಸ ಪಯಣದಲ್ಲಿ ಗ್ರಹಗತಿಗಳ ಸಂಚಾರವು ಕೆಲವು ಪರಿಣಾಮವನ್ನು ಬೀರಬಲ್ಲವು. ಅವುಗಳಿಂದ ಉತ್ತಮ ಫಲವನ್ನೇ ಪಡೆದುಕೊಳ್ಳಬೇಕು ಎಂದಾದರೆ ಕೆಲವು ಉತ್ತಮ ಸಂಖ್ಯೆಗಳು ನಿಮ್ಮ ಪರವಾಗಿ ನಿಲ್ಲಬೇಕಾಗುತ್ತವೆ. ಹಾಗಾದರೆ ಆ ಉತ್ತಮ ಸಂಖ್ಯೆಗಳು ಯಾವವು? ಅವು ನಮ್ಮ ರಾಶಿ ಚಕ್ರಕ್ಕೆ ಅನುಗುಣವಾಗಿವೆಯೇ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಹಂಬಲವಿದ್ದರೆ ಮುಂದೆ ಓದಿ...  

ಮೇಷ

ಮೇಷ

ಮಂಗಳ ಗ್ರಹ ಮೇಷ ರಾಶಿಯವರಿಗೆ ಆಡಳಿತಾತ್ಮಕ ಗ್ರಹವಾಗಿದೆ. ಈ ರಾಶಿಯ ಜನರು ಸಾಕಷ್ಟು ಬಹುಮುಖ, ಶಕ್ತಿಯುತ, ಕೆಚ್ಚೆದೆಯ, ಸಾಹಸಮಯ ಮತ್ತು ಕುತೂಹಲಕಾರಿ ಕೆಲಸವನ್ನು ಮಾಡುತ್ತಾರೆ. ಈ ರಾಶಿ ಚಕ್ರದವರ ಅದೃಷ್ಟ ಸಂಖ್ಯೆಗಳು 6, 18, 41, 77 ಮತ್ತು 83 ಆಗಿವೆ. ಈ ಸಂಖ್ಯೆಗಳು ಅದೃಷ್ಟವನ್ನು ತರುತ್ತವೆ ಮತ್ತು ಜೀವನದ ವಿಚಿತ್ರತೆಯನ್ನು ತಗ್ಗಿಸುತ್ತವೆ.

ವೃಷಭ

ವೃಷಭ

ಈ ರಾಶಿಯವರು ಪ್ರಣಯ, ತಾರ್ಕಿಕ ಹಾಗೂ ನಿರ್ಣಾಯಕ ಕೆಲಸದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವರು. ಇವರು ಶುಕ್ರ ಗ್ರಹಗದ ಆಳ್ವಿಕೆಗೆ ಒಳಪಡುತ್ತಾರೆ. ಇವರಿಗೆ ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 5, 35, 50, 57, ಮತ್ತು 82.

ಮಿಥುನ

ಮಿಥುನ

ಈ ರಾಶಿಚಕ್ರದವರಿಗೆ ಮುಂಬರುವ ವರ್ಷವು ಒಂದು ಆಕರ್ಷಣೀಯ ಸಂದರ್ಬಗಳನ್ನು ತಂದುಕೊಡುತ್ತದೆ. ಇವರು ಆದಷ್ಟು ಆಧ್ಯಾತ್ಮಿಕ ವಿಚಾರದ ಬಗ್ಗೆ ಗಮನ ನೀಡಬೇಕಿದೆ. ಇವರಿಗೆ 1, 10, 18, 35 ಮತ್ತು 86 ರ ಸಂಖ್ಯೆಗಳು ಎಲ್ಲಾ ಪ್ರಯತ್ನಗಳಿಗೆ ಫಲದಾಯಕವೆಂದು ಸಾಬೀತುಪಡಿಸುತ್ತವೆ.

ಕರ್ಕ

ಕರ್ಕ

ಈ ರಾಶಿಚಕ್ರ ಚಿಹ್ನೆಯ ಜನರು ವಿಶೇಷ ಸಂವೇದನಾ ಶಕ್ತಿಯನ್ನು ಹೊಂದಿದ್ದಾರೆ. ಅದು ಅವರ ಒಂದು ದೊಡ್ಡ ಕಾಲ್ಪನಿಕ ಶಕ್ತಿ ಎನ್ನಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರ ಆಡಳಿತದ ಗ್ರಹವು ಸೂರ್ಯ. ಇವರಿಗೆ ಈ ವರ್ಷ ಅದೃಷ್ಟ ಸಂಖ್ಯೆಗಳು 1, 21, 24, 58, ಮತ್ತು 66.

ಸಿಂಹ

ಸಿಂಹ

ಈ ರಾಶಿಚಕ್ರ ಚಿಹ್ನೆಯ ಜನರು ಧಾರ್ಮಿಕ, ನಿಷ್ಠಾವಂತ ಮತ್ತು ಉತ್ಸಾಹಶಾಲಿಯಾಗಿರುತ್ತಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರದವರು ಸೂರ್ಯನಿಂದ ಆಳಲ್ಪಡುತ್ತಾರೆ. ಮುಂಬರುವ ವರ್ಷ ಅವರು ನಿರೀಕ್ಷಿಸುತ್ತಿದ್ದ ಹೆಚ್ಚು ನಿರೀಕ್ಷಿತ ಧನಾತ್ಮಕ ಬದಲಾವಣೆಗಳನ್ನು ತರಬಹುದು. ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 6, 24, 39, 59, ಮತ್ತು 83.

ಕನ್ಯಾ

ಕನ್ಯಾ

ಈ ರಾಶಿಚಕ್ರ ಚಿಹ್ನೆಯು ತನ್ನೊಳಗೆ ರಕ್ಷಕನನ್ನು ಕಂಡುಕೊಳ್ಳುತ್ತದೆ. ಈ ರಾಶಿಚಕ್ರ ಜನರು ಸಹಾಯ ಮಾಡುವ ನೈಸರ್ಗಿಕ ಸ್ವಭಾವ ಹೊಂದಿದ್ದಾರೆ. ಸೊಗಸಾದ ವರಾಗಿರುವ ಇವರು ಇತರರಿಗೆ ಸಾಧಾರಣವಾಗಿ ತಿರುಗುತ್ತಾರೆ. ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 16, 29, 79, 80, ಮತ್ತು 90.

ತುಲಾ

ತುಲಾ

ಈ ರಾಶಿಚಕ್ರ ಚಿಹ್ನೆಯ ಜನರು ಬಲವಾದ ಸಾಮಾಜಿಕ ಕೌಶಲ್ಯ, ಮೋಡಿ, ಮತ್ತು ಸೌಂದರ್ಯ ಹೊಂದಿರುವ ಅತ್ಯಂತ ಆದರ್ಶವಾದಿ ವ್ಯಕ್ತಿಗಳಾಗಿರುತ್ತಾರೆ. ಇವರು ಶುಕ್ರ ಗ್ರಹದಿಂದ ಆಳಲ್ಪಡುತ್ತಾರೆ. ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 7, 20, 55, 77 ಮತ್ತು 86.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರನ್ನು ಆಳುವ ಗ್ರಹಗಳು ಮಂಗಳ ಮತ್ತು ಪ್ಲುಟೋ ಗುಣಗಳನ್ನು. ಅವರು ಸಾಕಷ್ಟು ನಿಗೂಢ, ತರ್ಕಬದ್ಧ ಮತ್ತು ಸ್ವತಂತ್ರ ಗುಣಗಳನ್ನು ಹೊಂದಿರುತ್ತಾರೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 27, 29, 45, 53 ಮತ್ತು 89.

ಧನು

ಧನು

ಅವರು ಧೈರ್ಯಶಾಲಿ, ಆಶಾವಾದಿ ಮತ್ತು ಸ್ವಭಾವತಃ ಸಾಕಷ್ಟು ಕಲಿತಿರುತ್ತಾರೆ. ಮುಂಬರುವ ವರ್ಷದಲ್ಲಿ ಈ ಚಿಹ್ನೆಯ ಜನರು ಅದೃಷ್ಟ ಸಂಖ್ಯೆಗಳೊಂದಿಗೆ ಕೆಲವು ಪರಿಹಾರವನ್ನು ನೋಡುತ್ತಾರೆ - 6, 16, 23, 60, ಮತ್ತು 81. ಮತ್ತೊಂದೆಡೆ ಈ ರಾಶಿಚಕ್ರ ಬರುವ ವರ್ಷದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಸ್ವಲ್ಪ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ.

ಮಕರ

ಮಕರ

ಈ ರಾಶಿಚಕ್ರ ಜನರು ತಮ್ಮ ಗುರಿಗಳ ಕಡೆಗೆ ಒಂದು ಅತ್ಯುತ್ತಮ ವಿಧಾನವನ್ನು ಹೊಂದಿರುತ್ತಾರೆ. ವಿಶ್ವಾಸಾರ್ಹ, ಉದಾರ, ಮತ್ತು ನಿರಂತರವಾಗಿ ಇರುವಂತಹ ಗುಣಗಳು ನೈಸರ್ಗಿಕವಾಗಿಯೇ ಬಂದಿರುತ್ತದೆ. ಅವರು ಸ್ವಲ್ಪ ಮೊಂಡುತನದ ಮತ್ತು ಸಂಶಯಾಸ್ಪದವರಾಗಿರಬಹುದು. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 3, 21, 66, 83, ಮತ್ತು 84.

ಕುಂಭ

ಕುಂಭ

ಈ ರಾಶಿಚಕ್ರ ಚಿಹ್ನೆಯ ಜನರು ಸಹಿಷ್ಣು, ಆದರ್ಶ, ಶಾಂತ ಮತ್ತು ಸ್ನೇಹಪರರಾಗಿದ್ದಾರೆ. ಅಗತ್ಯವಿದ್ದಾಗ ಅವರು ಸಾಕಷ್ಟು ಬಂಡಾಯಗಾರರಾಗಬಹುದು. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಯ ಅದೃಷ್ಟ ಸಂಖ್ಯೆಗಳು 17, 40, 46, 61, ಮತ್ತು 76.

ಮೀನ

ಮೀನ

ಈ ಚಿಹ್ನೆಯ ಜನರಿಗೆ ಸಾಕಷ್ಟು ಪ್ರಜ್ಞೆ ಮತ್ತು ಅನುಯಾಯಿಗಳಾಗಿ ಇರಬಹುದು. ಅವರು ತಮ್ಮ ಒಳ್ಳೆಯ ಸ್ವಭಾವದಿಂದ ಆಶೀರ್ವದಿಸಲ್ಪಡುತ್ತಾರೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 8, 10, 27, 56 ಮತ್ತು 69.

English summary

What Is Your Lucky Number According To Your Zodiac Sign?

With the new year round the corner, most of us are looking out for ways in which we can ring in the new year with the best side of our luck. Learning about the Shani's effect on your zodiac to finding your lucky colours as per your zodiac signs, we make sure we are well informed about all the good things that can improve on our luck and let us lead a happy, prosperous life.