ಸಂಖ್ಯೆಯಲ್ಲಿ ಅಡಗಿದೆ ಸಾವಿರ ವಿಚಾರ...ಇದನ್ನು ನೀವು ಅರಿತಿರಬೇಕು!

Posted By: manu
Subscribe to Boldsky

ನಮ್ಮ ಕಲ್ಪನೆಗೂ ಮೀರಿದ ಶಕ್ತಿ ನಮ್ಮ ಸುತ್ತಲೂ ಇದೆ. ಅದನ್ನು ನೋಡಲು ಸಾಧ್ಯವಾಗದಿದ್ದರೂ ಕೆಲವೊಂದು ಬಗೆಯಲ್ಲಿ ಅನುಭಕ್ಕೆ ಬರುತ್ತದೆ. ಈ ವಿಚಾರವಾಗಿ ಕೆಲವರು ಮೂಗು ಮುರಿಯುತ್ತಾರೆಯಾದರೂ, ಇದು ಸತ್ಯ. ವಾಸ್ತುಶಾಸ್ತ್ರ, ಜ್ಯೋತಿಷ್ಯ, ಹಸ್ತ ಮುದ್ರಿಕೆ ಹಾಗೂ ಸಂಖ್ಯಾ ಶಾಸ್ತ್ರಗಳು ಮಹತ್ತರವಾದ ಶಕ್ತಿಯನ್ನು ಒಳಗೊಂಡಿವೆ.

ಇವುಗಳನ್ನು ನಂಬಿ ಗೌರವಿಸಿದಾಗ ಅದರ ಸತ್ಯ ನಮಗರಿಯುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಾವು ಆಯ್ಕೆ ಮಾಡುವ ಸಂಖ್ಯೆಗಳು ನಮ್ಮ ಸ್ವಭಾವ ಹಾಗೂ ಭವಿಷ್ಯವನ್ನು ಹೇಳುತ್ತದೆ ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. 

ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಲಕ್ಕಿ ಸಂಖ್ಯೆಗಳು'

ಅದೇ ಕೆಲವು ಸಂಖ್ಯೆಗಳ ಕ್ರಮಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎನ್ನುವುದನ್ನು ಅನೇಕರು ತಿಳಿದಿರುವುದಿಲ್ಲ. ನಿಜ, ಸಂಖ್ಯೆಗಳ ಹಿಂದಿರುವ ರಹಸ್ಯಗಳನ್ನು ನೀವು ತಿಳಿದುಕೊಂಡರೆ ಆಶ್ವರ್ಯ ಪಡುವುದರಲ್ಲಿ ಸಂದೇಹವಿಲ್ಲ. ಅಂತಹ ಸಂಖ್ಯೆಗಳ ಮಹಿಮೆಯ ವಿಚಾರ ಇಲ್ಲಿದೆ ನೋಡಿ... 

ಅನುಕ್ರಮ-1

ಅನುಕ್ರಮ-1

ಈ ಸಂಖ್ಯೆಯ ಪುನರಾವರ್ತನೆಯು ನಿಮ್ಮ ಮಾರ್ಗ ಸರಿಯಾಗಿದೆ ಎನ್ನುವುದನ್ನು ಬಿಂಬಿಸುತ್ತದೆ. ಇವು ಸಕಾರಾತ್ಮಕ ಶಕ್ತಿ ಹಾಗೂ ಉತ್ಪಾದಕ ನಿರ್ಧಾರಗಳ ದೃಢೀಕರಣವೆಂದು ಹೇಳಲಾಗುತ್ತದೆ.

ಅನುಕ್ರಮ-2

ಅನುಕ್ರಮ-2

ಈ ಸಂಖ್ಯೆಗಳು ಜೀವನದಲ್ಲಿ ಮುಂಬರುವ ಅಡೆತಡೆಗಳನ್ನು ತೋರಿಸುತ್ತದೆ. ನಿಮ್ಮಲ್ಲಿ ಸ್ವಂತ ವಿಚಾರ ಹಾಗೂ ದೃಢವಾದ ನಂಬಿಕೆಯಿದ್ದರೆ ತೊಂದರೆಗಳನಡುವೆಯೂ ಗೆಲ್ಲುವ ಸಾಧ್ಯತೆ ಇರುತ್ತದೆ.

ಅನುಕ್ರಮ-3

ಅನುಕ್ರಮ-3

ಇದು ಕ್ರಿಯಾತ್ಮ ಅಂಶಗಳನ್ನು ತೋರಿಸುವ ಶಕ್ತಿಯುತವಾದ ಸಂಖ್ಯೆ . ಆಗಾಗ ಈ ಸಂಖ್ಯೆಯನ್ನು ನೋಡುವುದರಿಂದ ಸಕಾರಾತ್ಮಕ ಶಕ್ತಿಯು ನಕಾರಾತ್ಮಕ ಶಕ್ತಿಯ ವಿರುದ್ಧ ರಕ್ಷಣೆ ನೀಡುತ್ತದೆ.

ಜನ್ಮದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ...!

ಅನುಕ್ರಮ-4

ಅನುಕ್ರಮ-4

ಆರ್ಥಿಕ ಮತ್ತು ಭಾವನಾತ್ಮಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಸಂಖ್ಯೆಯು ಅತ್ಯಂತ ಫಲಕಾರಿ ಪ್ರಯೋಜನವನ್ನು ನೀಡುತ್ತದೆ. ಸಕಾರಾತ್ಮ ಶಕ್ತಿಯು ನಿಮ್ಮನ್ನು ಬಲಗೊಳಿಸುತ್ತದೆ.

ಅನುಕ್ರಮ-5

ಅನುಕ್ರಮ-5

ಈ ಸಂಖ್ಯೆಯು ನಿಶ್ಚಲತೆ ಮತ್ತು ನಕಾರಾತ್ಮಕ ಶಕ್ತಿಯ ಅಂತ್ಯ ಮಾರ್ಗವನ್ನು ಸೂಚಿಸುತ್ತದೆ. ಅದ್ಭುತವಾದ ಶಕ್ತಿ ಜೀವನದಲ್ಲಿ ಪ್ರವೇಶಿಸುವಂತೆ ಮಾಡುತ್ತದೆ.

ಅನುಕ್ರಮ-6

ಅನುಕ್ರಮ-6

ಈ ಸಂಖ್ಯೆಯನ್ನು ಪ್ರತಿಭೆಯುಳ್ಳ ಶಕ್ತಿ ಮತ್ತು ಪ್ರಭಾವದಿಂದ ಗೌರವಿಸಲಾಗುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಈ ಸಂಖ್ಯೆಯೇ ದೊರೆಯುತ್ತದೆ ಎಂದಾದರೆ ನಕಾರಾತ್ಮಕ ಶಕ್ತಿಯಿಂದ ಪ್ರಭಾವಿತರಾಗುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ.

ಅನುಕ್ರಮ-7

ಅನುಕ್ರಮ-7

ಈ ಅನುಕ್ರಮ ಸಂಖ್ಯೆಯನ್ನು ನೋಡುವುದರಿಂದ ಉತ್ತಮ ಶಕುನ ಎನ್ನುವುದನ್ನು ತಿಳಿಯಬಹುದು. ಈ ಸಂಖ್ಯೆಯು ಅನೇಕ ಮೂಲಗಳಿಂದ ಲಾಭ ತಂದುಕೊಡುವುದು ಎನ್ನುವುದನ್ನು ತಿಳಿಸುತ್ತದೆ.

ಅನುಕ್ರಮ-8

ಅನುಕ್ರಮ-8

ಇದೊಂದು ಅಪರೂಪದ ಅನುಭವವನ್ನು ತಂದು ಕೊಡುವ ಸಂಖ್ಯೆ ಎನ್ನಬಹುದು. ಇದು ಗುಪ್ತ ಜಗತ್ತಿನ ಸಂಪರ್ಕವನ್ನು ಸೂಚಿಸುವುದು. ಮಾಂತ್ರಿಕ ಶಕ್ತಿಯನ್ನು ಬಿಂಬಿಸುತ್ತದೆ.

ಅನುಕ್ರಮ-9

ಅನುಕ್ರಮ-9

ಇದು ಕೊನೆಯ ಸಂಖ್ಯೆ ಆಗಿರುವುದರಿಂದ ಒಂದು ಅಧ್ಯಾಯ ಮುಚ್ಚುತ್ತದೆ ಮತ್ತು ಇನ್ನೊಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಪೂರಕ ಸಂದರ್ಭದಲ್ಲಿ ಉತ್ತಮ ಪಾಠವನ್ನು ಈ ಸಂಖ್ಯೆ ಸೂಚಿಸುತ್ತದೆ.

English summary

What Is The Mystery Behind Repeating Numbers

Here, in this article, we are about to share the mystery on repeating numbers. Know what it means to watch the same numbers repeat in a sequence. Check out what exactly seeing numbers in the same sequence mean and the hidden meaning behind these same sequence numbers will simply shock you!