ನಿಮ್ಮ ರಾಶಿಯ ಆಕರ್ಷಕ ಗುಣಗಳನ್ನು ತಿಳಿಯಿರಿ

Posted By: Lekhaka
Subscribe to Boldsky

ನಿಮ್ಮಲ್ಲಿರುವ ಕೆಲವು ವಿಶೇಷ ಗುಣಗಳು ಇತರರಿಗಿಂತ ನಿಮ್ಮನ್ನು ಹೇಗೆ ಭಿನ್ನವಾಗಿಡುವುದು ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯು ಇತರರಗಿಂತ ಭಿನ್ನವಾಗಿರುತ್ತಾನೆ. ಆದರೆ ಆತನಲ್ಲಿ ಇರುವಂತಹ ವಿಶೇಷವಾದ ಗುಣದಿಂದ ಗುರುತಿಸಲ್ಪಡುತ್ತಾನೆ. ಇದರಲ್ಲಿ ನಿಮ್ಮ ರಾಶಿಯು ಮಹತ್ವದ ಪಾತ್ರ ವಹಿಸುವುದು. ಪ್ರತಿಯೊಂದು ರಾಶಿಯು ಮತ್ತೊಂದು ರಾಶಿಗಿಂತ ಭಿನ್ನವಾಗಿರುವುದು. ರಾಶಿಗಳ ಬಗ್ಗೆ ಇರುವ ಈ ವಿಶೇಷವಾದ ಗುಣಗಳು ಮತ್ತು ಅದರ ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಇದನ್ನು ತಿಳಿಯಲು ಮುಂದೆ ಓದುತ್ತಾ ಸಾಗಿ....

ಮೇಷ

ಮೇಷ

ಸಾಹಸವನ್ನು ಇಷ್ಟಪಡುವಂತಹ ಈ ರಾಶಿಯವರ ಸಂಕೇತ ಕುರಿ. ಇದು ಧೈರ್ಯಕ್ಕೆ ಹೆಸರಾಗಿರುವುದು. ಈ ರಾಶಿಯವರಲ್ಲಿ ಒಳ್ಳೆಯ ಆಕಾಂಕ್ಷೆ, ಒಳಶಕ್ತಿ, ಆತ್ಮವಿಶ್ವಾಸ ಮತ್ತು ಚರಿಷ್ಮಾ ಇರುವುದರಿಂದ ತಮಗೆ ಬೇಕಾಗಿರುವುದನ್ನು ಪಡೆಯುವರು. ಇವರಲ್ಲಿ ಸಾಹಸ ಮತ್ತು ಸ್ವಾಭಾವಿಕತೆ ಚೆನ್ನಾಗಿ ತಿಳಿದಿರುವುದು. ಇದರಿಂದ ಅವರು ಇತರರ ಮಧ್ಯೆ ಜನಪ್ರಿಯರಾಗಿರುವರು.

ವೃಷಭ

ವೃಷಭ

ಹೋರಿಯು ಈ ರಾಶಿಯವರ ಸಂಕೇತವಾಗಿದೆ. ಈ ರಾಶಿಯ ಜನರು ತುಂಬಾ ಭೌತಿಕ ಮತ್ತು ಇಂದ್ರಿಯವಾಗಿ ತುಂಬಾ ಬಲಿಷ್ಠವಾಗಿರುವರು. ಅವರು ತಮ್ಮೊಳಗಿನ ವಿಷಯಗಳನ್ನು ತುಂಬಾ ಪ್ರಶಂಸೆ ಮಾಡುವರು. ಇವರು ತುಂಬಾ ಸರಳ, ಪ್ರಾಯೋಗಿಕ ಮತ್ತು ಕ್ರಮ ಬದ್ಧ ವಾಗಿರುವರು. ಇದನ್ನು ಹೊರತುಪಡಿಸಿ ಅವರು ತುಂಬಾ ದಯಾಮಯಿ, ಸೌಮ್ಯ ಮತ್ತು ಕಠಿಣ ಪರಿಶ್ರಮಿಗಳಾಗಿರುವರು. ಇವರು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಅಪರಿಚಿತರಿಗೂ ನೆರವಿನ ಹಸ್ತ ಚಾಚುವರು.

ಮಿಥುನ

ಮಿಥುನ

ಅವಳಿಗಳು ಈ ರಾಶಿಯ ಸಂಕೇತವಾಗಿದೆ. ಇವರು ತುಂಬಾ ಜಾಣ್ಮೆಯ ಹಾಗೂ ಕ್ರಿಯಾತ್ಮಕವಾಗಿರುವವರು. ಇವರು ಒಳ್ಳೆಯ ವಾಗ್ಮಿ ಮತ್ತು ಚಿಂತಕರು. ಇವರು ಜೀವನವನ್ನು ವಿಭಿನ್ನವಾಗಿ ಜೀವಿಸಲು ಬಯಸುವರು. ಒಂದೇ ಸಮಯದಲ್ಲಿ ಹಲವಾರು ವಿಷಯಗಳನ್ನು ಇಷ್ಟಪಡುವರು.

ಕರ್ಕಾಟಕ

ಕರ್ಕಾಟಕ

ಏಡಿಯು ಈ ರಾಶಿಯವರ ಸಂಕೇತವಾಗಿದೆ. ಇವರು ನೈಸರ್ಗಿಕವಾಗಿಯೇ ಪೋಷಕರಾಗಿರುವರು. ಈ ರಾಶಿಯ ಮತ್ತೊಂದು ಹೆಸರೆಂದರೆ ಇದು ಎಲ್ಲಾ ರಾಶಿಗಳ ತಾಯಿ. ಇವರು ಜನ್ಮತಃ ಪರಾನುಭೂತಿ ಶಕ್ತಿಯುಳ್ಳವರು. ಇವರು ವೃಷಭ ರಾಶಿ ಅಥವಾ ಕನ್ಯಾ ರಾಶಿಯದವರ ಜತೆಯಾದರೆ ಆಗ ಇವರ ಅತ್ಯುತ್ತಮ ಕೆಲಸ ನೋಡಬಹುದು.

ಸಿಂಹ

ಸಿಂಹ

ಸಿಂಹವು ಈ ರಾಶಿಯ ಸಂಕೇತವಾಗಿದೆ. ಈ ವ್ಯಕ್ತಿಗಳು ತುಂಬಾ ಉದಾತ್ತ, ವರ್ಚಸ್ಸಿನ ಹಾಗೂ ಉತ್ಸಾಹಭರಿತ ವ್ಯಕ್ತಿಯಾಗಿರುವರು. ಇವರು ತುಂಬಾ ಪ್ರೋತ್ಸಾಹಕಾರಿ, ಪಾರ್ಟಿ ಮಾಡಲು ಇಷ್ಟಪಡುವ ಮತ್ತು ಯಾವಾಗಲೂ ಆಕರ್ಷಣೆಯಾಗಿರುವರು. ಇವರಲ್ಲಿ ಅತ್ಯುತ್ತಮವಾದ ನಾಯಕತ್ವದ ಗುಣಗಳು ಇವೆ.

ಕನ್ಯಾ

ಕನ್ಯಾ

ಕನ್ಯೆಯು ಈ ರಾಶಿಯ ಸಂಕೇತವಾಗಿದೆ. ಈ ರಾಶಿಯವರಿಗೆ ಅದ್ಭುತವಾಗಿರುವಂತಹ ಭಾವನಾತ್ಮಕ ಶಕ್ತಿಯಿರುವುದು. ಇವರ ನಡತೆಯು ತುಂಬಾ ಸೂಕ್ಷ್ಮವಾಗಿರುವುದು. ಇವರು ಇತರರಿಂದಲೂ ಅತ್ಯುತ್ತಮವಾಗಿರುವುದನ್ನು ಪಡೆಯುವರು. ಇದನ್ನು ಹೊರತುಪಡಿಸಿ ಇವರು ಸಮಸ್ಯೆಗಳನ್ನು ನಿವಾರಣೆ ಮಾಡುವರು ಮತ್ತು ಸಂಕಷ್ಟಗಳು ಎದುರಾದಾಗ ತುಂಬಾ ಸ್ಪಷ್ಟವಾಗಿ ಆಲೋಚನೆ ಮಾಡುವರು.

ತುಲಾ

ತುಲಾ

ಈ ರಾಶಿಯವರಿಗೆ ತೂಕವು ಸಂಕೇತವಾಗಿದೆ. ಇದು ನ್ಯಾಯ ಮತ್ತು ಸಮತೋಲನದ ಸಂಕೇತವಾಗಿದೆ. ಇವರು ತುಂಬಾ ವರ್ಚಸ್ಸಿನ, ಜಾಣ್ಮೆ ಮತ್ತು ಗೌರವಯುತ ವ್ಯಕ್ತಿಯಾಗಿರುವರು. ಸಿಂಹ ಹಾಗೂ ಧನು ರಾಶಿಯವರೊಂದಿಗೆ ಈ ರಾಶಿಯವರು ಚೆನ್ನಾಗಿ ಹೊಂದಿಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಚೇಳು ಈ ರಾಶಿಯವರ ಸಂಕೇತವಾಗಿದೆ. ಇದು ರಾಶಿಚಕ್ರಗಳ ರಹಸ್ಯ ಚಿಹ್ನೆಯಾಗಿದೆ. ಈ ರಾಶಿಚಕ್ರವು ವ್ಯಕ್ತಿಯನ್ನು ಲೈಂಗಿಕ, ವ್ಯಕ್ತಿತ್ವ ಧೈರ್ಯ, ಶಕ್ತಿ ಮತ್ತು ಸೃಜನಶೀಲತೆ ಎಂದು ವ್ಯಾಖ್ಯಾನಿಸುವುದು. ಇವರು ಒಳ್ಳೆಯ ಪ್ರೇಮಿಗಳಾಗಿರುವರು ಮತ್ತು ಅದ್ಭುತ ವ್ಯಕ್ತಿತ್ವ ಹೊಂದಿರುವರು. ಈ ವ್ಯಕ್ತಿಗಳು ಸ್ವಯಂನಿಯಂತ್ರಣ ಹೊಂದಿರುವ ಮಕರ ಮತ್ತು ಕನ್ಯಾ ರಾಶಿಯೊಂದಿಗೆ ಹೊಂದಿಕೊಳ್ಳುವರು.

ಧನು

ಧನು

ಈ ರಾಶಿಯ ಸಂಕೇತವು ಒಬ್ಬ ಬಿಲ್ಲುಗಾರನಾಗಿರುವನು. ಆದರೆ ಕುದುರೆಮನುಷ್ಯನಾಗಿರುವ. ಮನುಷ್ಯನ ಅರ್ಧ ಜೀವವು ಕುದುರೆಯಾಗಿರುವುದು. ಈ ವ್ಯಕ್ತಿಗಳು ತುಂಬಾ ಸಾಹಸ, ಹಾಸ್ಯ ಮತ್ತು ಮುಕ್ತ ಮನೋಭಾವದ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುವರು. ಇವರು ಪರಿಪೂರ್ಣವಾಗಿ ಜೀವನವನ್ನು ಆನಂದಿಸಲು ತಿಳಿದಿರುವರು. ಈ ರಾಶಿಯವರಿಗೆ ಸ್ಪಷ್ಟ ಮನಸ್ಸಿನ ತುಲಾ ಅಥವಾ ಸ್ವತಂತ್ರವಾಗಿರುವ ಕುಂಭ ರಾಶಿಯವರು ಹೊಂದಿಕೆಯಾಗುವರು.

ಮಕರ

ಮಕರ

ಆಡು ಈ ರಾಶಿಯ ಸಂಕೇತವಾಗಿದೆ. ಈ ವ್ಯಕ್ತಿಗಳು ತುಂಬಾ ದೃಢತ್ವ ಹೊಂದಿರುವವರು ಎಂದು ಹೇಳಲಾಗುತ್ತದೆ. ಇವರು ವಾಸ್ತವತೆ ಮೇಲೆ ತುಂಬಾ ನಂಬಿಕೆ ಹೊಂದಿರುವರು. ಒಳ್ಳೆಯ ಜವಾಬ್ದಾರಿ ಮತ್ತು ನಿಷ್ಠೆಯು ಇವರಲ್ಲಿ ಇರುವುದು. ಇವರು ತಮ್ಮದೇ ರಾಶಿಯವರು ಅಥವಾ ವೃಶ್ಚಿಕ ರಾಶಿಯವರೊಂದಿಗೆ ಹೊಂದಾಣಿಕೆಯಾಗುವರು.

ಕುಂಭ

ಕುಂಭ

ನೀರಿನ ಧಾರಕವು ಈ ಸಂಕೇತವನ್ನು ಸೂಚಿಸುವುದು. ಈ ರಾಶಿಯ ಜನರು ಯಾವುದೇ ನಿಯಮ ಮತ್ತು ಕಟ್ಟುಪಾಡುಗಳಿಗೆ ಜೋತುಬೀಳುವವರಲ್ಲ. ಇವರು ಸೃಜನಾತ್ಮಕವಾಗಿರುವರು. ಇವರಲ್ಲಿ ಉತ್ತೇಜಾತ್ಮಕ ಸಂಭಾಷಣೆಯ ಗುಣವಿದೆ. ಇದನ್ನು ಹೊರತುಪಡಿಸಿ ಈ ರಾಶಿಯವರು ತುಂಬಾ ನಾಚಿಗೆ ಹಾಗೂ ಮೌನವಾಗಿರುವರು. ಇನ್ನೊಂದು ಕಡೆಯಲ್ಲಿ ಇವರು ತುಂಬಾ ವಾಚಾಳಿ ಮತ್ತು ಶಕ್ತಿಯುವ ಅಪಾಯ ಪಡೆಯುವವರಾಗಿರುವರು.

ಮೀನ

ಮೀನ

ಮೀನು ಈ ರಾಶಿಯ ಸಂಕೇತವಾಗಿದೆ. ಈ ರಾಶಿಯವರು ಯಾವುದೇ ಒಂದು ದೃಢವಾದ ನಿಲುವು ತಳೆಯಲಾರದಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಇವರು ತುಂಬಾ ರೋಮ್ಯಾಂಟಿಕ್ ಆಗಿರುವರು ಮತ್ತು ಕ್ಷಮಿಸುವರಲ್ಲಿ ಉದಾರಿಯಾಗಿರುವರು ಮತ್ತು ನಿಸ್ವಾರ್ಥವಾಗಿ ಇತರರಿಗೆ ನೆರವಾಗುವರು.

English summary

What Is The Most Attractive Quality About Your Zodiac Sign

Can you reveal what is the most attractive quality that you have, which makes you stand out in the crowd? There is something that we all individuals differ with and it marks our identity. There are certain attractive qualities of each zodiac sign that make it different from the other zodiac signs. These attractive traits that each zodiac sign has are not known by many. So, find out about these traits and know more about your zodiac...