ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

By: Divya
Subscribe to Boldsky

ನೀವು ಮಾಡಬೇಕು ಎಂದುಕೊಂಡ ಕೆಲಸ ಕೈಗೂಡಿ ಬರದಿದ್ದರೆ, ಪ್ರತಿ ಹೆಜ್ಜೆ ಹೆಜ್ಜೆಗೂ ತೊಂದರೆಗಳು ಎದುರಾದರೆ, ಕೆಲಸ ಹೋಗುವುದು, ವ್ಯಾಪಾರ ನಷ್ಟ ಹೀಗೆ ಸಮಸ್ಯೆಗಳು ನಿಮ್ಮ ಬೆನ್ನು ಬಿಡುತ್ತಿಲ್ಲ ಎಂದಾದರೆ, ಅದು ಶನಿಯ ಕಾಟ. ನಿಜ, ಜ್ಯೋತಿಷ್ಯದ ಪ್ರಕಾರ ಶನಿ ನಿಮ್ಮ ಮನೆಯೊಳಗೆ ಪ್ರವೇಶಿಸಿದ ಎನ್ನುವುದನ್ನು ಹೇಳುತ್ತದೆ.

ಶನಿಯು ನಿಮ್ಮ ರಾಶಿ ಚಕ್ರದಲ್ಲಿ ಪ್ರವೇಶಿಸಿದಾಗ ವೃತ್ತಿಪರ ಜೀವನದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಅನೇಕ ಅಡೆತಡೆಗಳು ಸಂಭವಿಸುವುದು. ಕರ್ಮ ಹಾಗೂ ಕಾರ್ಯಗಳ ಆಧಾರದ ಮೇಲೆ ಶನಿ ನಿಮ್ಮನ್ನು ಕಾಡುತ್ತಾನೆ.

ಅಚ್ಚರಿ-ಕುತೂಹಲ ಮೂಡಿಸುವ 'ರಾಶಿ ಭವಿಷ್ಯ' ! ಹೀಗೂ ಉಂಟೇ..?

ರಾಶಿಚಕ್ರದ ಮೇಲೆ ಶನಿಯ ಪ್ರಭಾವ ಬೀರುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಬನ್ನಿ ಈ ವರ್ಷ ರಾಶಿ ಚಕ್ರದ ಮೇಲೆ ಯಾವೆಲ್ಲಾ ಪ್ರಭಾವ ಬೀರಬಲ್ಲದು ಎನ್ನುವ ಮಾಹಿತಿಯನ್ನು ತಿಳಿಯೋಣ ಬನ್ನಿ...   

ಮೇಷ

ಮೇಷ

ಶನಿಯು ಮೇಷರಾಶಿಯ ಎಂಟನೇ ಮನೆಯಲ್ಲಿ ನೆಲೆಸಿರುವುದರಿಂದ ಈ ವರ್ಷ ಅನಿರೀಕ್ಷಿತ ಅಸ್ಥಿರತೆ ಉಂಟಾಗುವುದು. ಆರೋಗ್ಯ ಉತ್ತಮವಾಗಿದ್ದು, ಉದ್ಯೋಗ ಮತ್ತು ವ್ಯವಹಾರದ ವಿಚಾರದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗುವುದು. ಶನಿಯು ಅಷ್ಟು ಅನುಕೂಲಕರ ವಾಗಿಲ್ಲದೆ ಇರುವುದರಿಂದ ವ್ಯಾಪಾರಗಳಲ್ಲಿ ಅಧಿಕ ಹಣ ಹೂಡಬಾರದು.

ವೃಷಭ

ವೃಷಭ

ಶನಿಯ ತೊಂದರೆಯಿಂದ ಮೈಗ್ರೇನ್, ಹೊಟ್ಟೆ ಸಮಸ್ಯೆ, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಕಾಡುವುದು. ಈ ವರ್ಷ ನಿಮಗೆ ನಿವಾರಿಸಲಾಗದ ಕೆಲವು ಅಡಚಣೆಗಳು ಮತ್ತು ತೊಂದರೆಗಳು ಉಂಟಾಗುವುದು. ವೃತ್ತಿ ಕ್ಷೇತ್ರದಲ್ಲಿ ನಿಮಗಿಷ್ಟವಾಗದ ಸಂಗತಿಗಳನ್ನು ನೀವು ರಾಜಿ ಮಾಡಿಕೊಳ್ಳಬೇಕಾಗುವುದು.

ಮಿಥುನ

ಮಿಥುನ

ಈ ರಾಶಿಯವರಿಗೆ ಶನಿಯು ಸಂಪತ್ತನ್ನು ನೀಡುವುದು. ಜೊತೆಗೆ ಅಷ್ಟೇ ಖರ್ಚು ಮಾಡುವ ಸಂದರ್ಭಗಳು ಒದಗಿ ಬರುವುದು. ವಿವಾಹಿತರಾಗಿದ್ದರೆ ದಾಂಪತ್ಯದಲ್ಲಿ ಘರ್ಷಣೆ ಉಂಟಾಗುವುದು. ಹಾಗಂತ ಇಬ್ಬರೂ ದೂರವಾಗುವ ಪರಿಸ್ಥಿತಿ ಬರದು.

ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

ಕರ್ಕ

ಕರ್ಕ

ಶನಿಯ ಆಗಮನದಿಂದ ಈ ರಾಶಿ ಚಕ್ರದವರಿಗೆ ಮಧ್ಯಮ ಲಾಭ ಎನ್ನಬಹುದು. ಇದು ಎಲ್ಲಾ ವಿಚಾರದಲ್ಲೂ ವ್ಯಾಪಕವಾಗಿ ಒಳ್ಳೆಯದ್ದಾಗಲೀ, ಕೆಟ್ಟದ್ದಾಗಲೀ ಮಾಡುವುದಿಲ್ಲ. ಒಂದೆಡೆ ಆರ್ಥಿಕವಾಗಿ ಲಾಭ ತಂದುಕೊಟ್ಟರೂ, ಕುಟುಂಬದಲ್ಲಿ ಕಿರಿಯ ಸಹೋದರರಿಂದ ಕೆಡುಕಾಗುವುದು. ಬಂಜೆತನದ ಸಮಸ್ಯೆಯಿದ್ದರೆ ಅದು ಪರಿಹಾರವಾಗುವುದು. ಒಟ್ಟಿನಲ್ಲಿ ಈ ವರ್ಷ ಶುಭವನ್ನು ತಂದುಕೊಡುವುದು ಎನ್ನಲಾಗುತ್ತದೆ.

ಸಿಂಹ

ಸಿಂಹ

ಉತ್ತಮ ಶ್ರಮದಿಂದ ಹಲವು ದಿನಗಳ ಆಸೆ ಈಡೇರುವುದು. ಉತ್ತಮ ಆರೋಗ್ಯವನ್ನು ತಂದುಕೊಡುವುದು. ಯಾರೊಂದಿಗೂ ಹಣವನ್ನು ವಿನಿಯೋಗಿಸಿ, ವ್ಯಾಪಾರ ಮಾಡುವುದು ಸೂಕ್ತವಲ್ಲ.

ಕನ್ಯಾ

ಕನ್ಯಾ

ಇವರಿಗೆ ಇದು ಕಷ್ಟದ ವರ್ಷ ಎನ್ನಬಹುದು. ಅನೇಕ ತೊಂದರೆಗಳು ಕಾಡುವುದು. ಉದ್ಯೋಗದಲ್ಲಿ ನೂರಕ್ಕೆ ಇನ್ನೂರಷ್ಟು ಶ್ರಮ ವಹಿಸಬೇಕಾಗುವುದು. ವ್ಯವಹಾರ, ವೃತ್ತಿ ಜೀವನ ಹಾಗೂ ಖಾಸಗಿ ಜೀವನದಲ್ಲಿ ಅನಗತ್ಯ ತೊಂದರೆ ಎದುರಿಸಬೇಕಾಗುವುದು.

ತುಲಾ

ತುಲಾ

ಈ ರಾಶಿಯಲ್ಲಿ ಶನಿಯು ಸಾಡೇ ಸಾತ್‍ನ ಕೊನೆಯ ಹಂತದಲ್ಲಿದೆ. ಇವರಿಗೆ ಉತ್ತಮ ಆರೋಗ್ಯ, ಮಧ್ಯಮ ರೀತಿಯಲ್ಲಿ ಹಣದ ಹರಿವು ತೋರಿಸುತ್ತದೆ. ಉತ್ತಮ ಕೆಲಸ ಸಿಗುವ ಅವಕಾಶವಿದೆ ಎಂದು ಹೇಳಬಹುದು.

ವೃಶ್ಚಿಕ

ವೃಶ್ಚಿಕ

ಇವರಿಗೆ ಶೀಘ್ರದಲ್ಲಿಯೇ ಒಳ್ಳೆಯ ಸಂಗತಿಗಳು ಸಂಭವಿಸುವುದು. ಆರೋಗ್ಯ ಸಮಸ್ಯೆಯು ಕೆಲಸದ ಮೇಲೆ ಕೇಂದ್ರೀಕರಿಸಲು ಬಿಡದು. ಇದು ಒಳ್ಳಯ ಸಂಗತಿಯಲ್ಲ.

ಧನು

ಧನು

ಕೆಲಸದ ವಿಚಾರದಲ್ಲಿ ಬಹಳ ಕಠಿಣವಾದ ಸಮಯ ಎನ್ನಬಹುದು. ಇವರು ತಾಳ್ಮೆಯಿಂದ ಇರಬೇಕು. ಫಲಿತಾಂಶ ಏನೇ ಇದ್ದರೂ ಕುಟುಂಬದವರು ಜೊತೆಯಲ್ಲಿಯೇ ಇರುತ್ತಾರೆ. ತಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರಬೇಕು.

ಮಕರ

ಮಕರ

ಅನಗತ್ಯ ಪ್ರಯಾಣ ಮತ್ತು ವ್ಯಾಪಾರದ ಏರಿಳಿತ ಮನಃಶಾಂತಿ ಕೆಡಿಸುವುದು. ವ್ಯಾಪಾರ ಮತ್ತು ವ್ಯವಹಾರವನ್ನು ವಿಸ್ತರಿಸಲು ಫಲಪ್ರದ ವಾಗುವುದು ಎನಿಸಿದರೂ ಅಷ್ಟು ಅನುಕೂಲ ಮಾಡಿಕೊಡದು.

ಕುಂಬ

ಕುಂಬ

ಶನಿ 10 ಮತ್ತು 11ನೇ ಮನೆ ಪ್ರವೇಶಿಸುವುದರಿಂದ ಎಲ್ಲಾ ವೈದ್ಯಕೀಯ ಸಮಸ್ಯೆಗಳು ಪರಿಹಾರವಾಗುವುದು. ಆರ್ಥಿಕ ಸ್ಥತಿಯೂ ಉತ್ತಮವಾಗಿರುವುದು. ಹಳೆಯ ಸಮಸ್ಯೆಗಳು ಸಹ ತಮ್ಮದೇ ಆದ ವಿಶ್ಲೇಷಣೆ ಮತ್ತು ಪರಿಹಾರ ಕಂಡುಕೊಳ್ಳುವುದು.

ಧೈರ್ಯ ಶಾಲಿಗಳ 'ಧೈರ್ಯ' ಸೂಚಿಸುವ ರಾಶಿ ಭವಿಷ್ಯ

ಮೀನ

ಮೀನ

ಈ ವರ್ಷ 9 ಮತ್ತು 10ನೇ ಮನೆಯಲ್ಲಿ ಇರುತ್ತಾನೆ. ಆದಾಯ ಮೂಲವು ಈ ವರ್ಷ ಹೆಚ್ಚುವುದು. ವ್ಯಾಪಾರದ ಆರಂಭದಲ್ಲಿ ಯಶಸ್ಸು ದೊರೆಯುವುದು. ಈ ವರ್ಷ ವಿದ್ಯಾರ್ಥಿಗಳಿಗೂ ಒಳ್ಳೆಯದಿದೆ.

ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

English summary

What Happens When Shani Enters Your Zodiac?

If you have been facing any kind of obstacles in the way of getting promotion, or have been getting demoted or even experiencing slow down in your business or career, then it is a sign that Lord Shani has entered your house, as per astrological belief!
Story first published: Monday, June 12, 2017, 7:01 [IST]
Subscribe Newsletter