ಕಾಲುಬೆರಳಿನ ಆಕಾರ ನೋಡಿದರೆ ಸಾಕು, ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬಹುದು!

By: Arshad
Subscribe to Boldsky

ವ್ಯಕ್ತಿಯ ಅಂಗಾಂಗಗಳು ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹಲವಾರು ಸೂಚನೆಗಳನ್ನು ನೀಡುತ್ತವೆ. ಇವುಗಳಲ್ಲಿ ಕಾಲುಬೆರಳುಗಳೂ ಮಹತ್ವದ ಮಾಹಿತಿಗಳನ್ನು ನೀಡುತ್ತವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಇದು ನಿಜವೆಂದು ನಂಬದೇ ಇದ್ದವರಿಗೂ ಈ ಬಗ್ಗೆ ಮಾಹಿತಿಯನ್ನು ಒರೆಹಚ್ಚಿ ನೋಡಲು ಒಂದು ವಿನೋದದ ಚಟುವಟಿಕೆಯೂ ಆಗಿರಬಹುದು.

ಇದರೊಂದಿಗೆ ಆ ವ್ಯಕ್ತಿಯ ಮುಖದ ಚಹರೆ ಹಾಗೂ ಇತರ ದೈಹಿಕ ಲಕ್ಷಣಗಳೂ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತವೆ. ಆದರೆ ಅಷ್ಟೊಂದು ಲಕ್ಷಣಗಳನ್ನು ವಿಶ್ಲೇಷಿಸುವುದು ಕಷ್ಟವಾಗಬಹುದು. ಬದಲಿಗೆ ಕೇವಲ ಕಾಲುಬೆರಳುಗಳನ್ನು ಗಮನಿಸಿ ವ್ಯಕ್ತಿತ್ವ ತಿಳಿದುಕೊಳ್ಳಲೇಕೆ ಪ್ರಯತ್ನಿಸಬಾರದು? ಪ್ರಯತ್ನಿಸಲು ಕೆಳಗಿನ ವಿವರಗಳು ನಿಮಗೆ ನೆರವಾಗಲಿವೆ....

ಅಗ್ನಿಜ್ವಾಲೆಯ ಪಾದ

ಅಗ್ನಿಜ್ವಾಲೆಯ ಪಾದ

ಪಾದದ ಅಚ್ಚನ್ನು ಒಂದು ಚೌಕಟ್ಟಿನೊಳಗೆ ಇರಿಸಿದರೆ ಬೆಂಕಿಯ ಮುಖ್ಯ ಜ್ವಾಲೆಯನ್ನು ಎರಡು ಉಪಜ್ವಾಲೆಗಳು ಜೊತೆನೀಡಿದಂತೆ ಕಾಣುವ ಕಾರಣಕ್ಕೇ ಇದಕ್ಕೆ ಅಗ್ನಿಪಾದ ಅಥವಾ ಗ್ರೀಕ್ ಫುಟ್ ಎಂದೂ ಕರೆಯುತ್ತಾರೆ. ಈ ಪಾದಗಳ ಎರಡನೆಯ ಬೆರಳು ಅಂದರೆ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತಲೂ ಉದ್ದವಿದ್ದು ಉಳಿದ ಬೆರಳುಗಳು ಇಳಿಜಾರಾದ ಎತ್ತರವನ್ನು ಪಡೆದಿರುತ್ತವೆ. ಈ ವ್ಯಕ್ತಿಗಳು ಕ್ರಿಯಾತ್ಮಕರೂ, ಸದಾ ಚಟುವಟಿಕೆಯುಳ್ಳವರೂ, ಕ್ರೀಡೆಯಲ್ಲಿ ಅಭಿರುಚಿ ಉಳ್ಳವರೂ ಆಗಿರುತ್ತಾರೆ. ಇವರು ಇತರರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದು ಸದಾ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವತ್ತ ಒಲವು ತೋರುತ್ತಾರೆ. ಇವರು ಸಾಮಾನ್ಯವಾಗಿ ಇತರರಿಗೆ ಪ್ರೇರಣೆ ನೀಡುವಂತಹ ಜೀವನ ನಡೆಸುತ್ತಾರೆ. ಕೆಲವೊಮ್ಮೆ ಇವರು ಹಿಂದೆ ಮುಂದೆ ಯೋಚಿಸದೇ ಮುನ್ನುಗ್ಗುವವರಾಗಿದ್ದು ಇದೇ ಕಾರಣಕ್ಕೆ ತೊಂದರೆಗೂ ಸಿಲುಕಿಕೊಳ್ಳುತ್ತಾರೆ.

ರೋಮನ್ ಪಾದ

ರೋಮನ್ ಪಾದ

ಈ ಪಾದದಲ್ಲಿ ಹೆಬ್ಬೆರಳು ಹಾಗೂ ನಂತರದ ಎರಡು ಬೆರಳುಗಳು ಸರಿಸಮನಾಗಿ ಉದ್ದವಿರುತ್ತವೆ. ಅಲ್ಲದೇ ಮೂರೂ ಬೆರಳುಗಳು ನೇರವಾಗಿದ್ದು ಹೆಬ್ಬೆರಳು ಅತಿ ಹೆಚ್ಚು ದಪ್ಪ ಹಾಗೂ ನಂತರದ ಬೆರಳುಗಳು ಕ್ರಮೇಣ ಚಿಕ್ಕದಾಗುತ್ತಾ ಹೋಗಿರುತ್ತವೆ. ಈ ಪಾದ ಹೆಚ್ಚು ಸಾಮಾನ್ಯವಾಗಿದ್ದು ಈ ವ್ಯಕ್ತಿಗಳು ಹೊರಗೆ ತಿರುಗುವುದನ್ನು ಹೆಚ್ಚು ಇಷ್ಟಪಡುತ್ತಾರೆ ಹಾಗೂ ಸಾಮಾಜಿಕ ಜೀವನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಹೆಚ್ಚಿನ ವರ್ಚಸ್ಸು ಹೊಂದಿರುವ ವ್ಯಕ್ತಿಗಳೂ, ಉತ್ತಮ ವಾಗ್ಮಿಗಳೂ ಹಾಗೂ ವ್ಯಾಪಾರದಲ್ಲಿ ಹೆಚ್ಚು ನಿಷ್ಣಾತರೂ ಆಗಿರುತ್ತಾರೆ.

ಚೌಕಾಕಾರದ ಪಾದ

ಚೌಕಾಕಾರದ ಪಾದ

ಈ ಪಾದದಲ್ಲಿ ಹೆಬ್ಬೆರಳಿನ ಸಹಿತ ಎಲ್ಲಾ ಬೆರಳುಗಳು ಸಮನಾಗಿ ಉದ್ದವಾಗಿದ್ದರೆ ಈ ಪಾದ ಹೆಚ್ಚೂ ಕಡಿಮೆ ಆಯತಾಕಾರವನ್ನು ಹೋಲುವುದರಿಂದ ಈ ಹೆಸರು ಬಂದಿದೆ. ಇದಕ್ಕೆ ಬೇಸಾಯಗಾರನ ಪಾದ ಎಂದೂ ಕರೆಯುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಸೂಕ್ಷ್ಮಮತಿಗಳಾಗಿದ್ದು ಪ್ರತಿ ವಿಷಯದ ಸೂಕ್ಷ್ಮತೆಗಳನ್ನು ಗಮನಿಸಿಯೇ ಮುಂದುವರೆಯುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಕ್ರಿಯಾತ್ಮಕರೂ ನಂಬಲರ್ಹ ವ್ಯಕ್ತಿಗಳೂ ಆಗಿರುತ್ತಾರೆ.

ಚೂಪಾದ ಪಾದ

ಚೂಪಾದ ಪಾದ

ಈ ಪಾದದ ಚೌಕಟ್ಟು ನಡುವಿನಲ್ಲಿ ಕೊಂಚ ಚೂಪಾಗಿರುವುದರಿಂದ ಈ ಹೆಸರು ಬಂದಿದೆ. ಈ ಪಾದದಲ್ಲಿ ಹೆಬ್ಬೆರಳು ಉಳಿದ ಬೆರಳುಗಳಿಗಿಂತ ಹೆಚ್ಚು ದಪ್ಪ ಹಾಗೂ ಉದ್ದವಿರುತ್ತದೆ ಹಾಗೂ ಉಳಿದ ಬೆರಳುಗಳು ಇಳಿಜಾರಾಗಿರುತ್ತವೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಗೌಪ್ಯತೆ ಕಾಪಾಡುವವರಾಗಿದ್ದು ಏಕಾಂತತೆಯನ್ನು ಇಷ್ಟಪಡುವವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಹಿಂದುಮುಂದು ನೋಡದೆ ನುಗ್ಗುವ ಅಭ್ಯಾಸದಿಂದ ತೊಂದರೆಗೆ ಒಳಗಾಗುತ್ತಾರೆ ಹಾಗೂ ಇವರ ಮನೋಭಾವ ಥಟ್ಟನೇ ಬದಲಾಗುತ್ತಲೂ ಇರುತ್ತದೆ.

ಎರಡನೆಯ ಬೆರಳ ಬುಡ ಕಿರಿದಾಗಿರುವುದು

ಎರಡನೆಯ ಬೆರಳ ಬುಡ ಕಿರಿದಾಗಿರುವುದು

ಒಂದು ವೇಳೆ ಎರಡನೆಯ ಬೆರಳಿನ ಬುಡ ಕಿರಿದಾಗಿದ್ದು ತುದಿ ಕೊಂಚ ದಪ್ಪನಾಗಿದ್ದರೆ ಈ ವ್ಯಕ್ತಿಗಳು ತಮ್ಮ ಭಾವನೆಯನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ವ್ಯಕ್ತಪಡಿಸುವವರಾಗಿರುತ್ತಾರೆ. ಇವರು ಯಾವುದೇ ವಿಷಯವನ್ನು ಇರುವುದಕ್ಕಿಂತಲೂ ದೊಡ್ಡದಾಗಿ ತೋರಿಸುವ ಹಾಗೂ ಉತ್ಪ್ರೇಕ್ಷಿಸುವ ಗುಣ ಹೊಂದಿರುತ್ತಾರೆ. ಇವರು ಉತ್ತಮ ಮನೋಭಾವದಲ್ಲಿರುವಾಗ ಇವರು ಅತಿ ಕ್ರಿಯಾತ್ಮಕರಾಗಿದ್ದು ಅದ್ಭುತಗಳನ್ನೇ ಸಾಧಿಸಬಲ್ಲವರಾಗಿರುತ್ತಾರೆ. ಇವರ ಸಂಗದಲ್ಲಿ ಎಲ್ಲರೂ ಸಂತಸ ಪಡೆಯುತ್ತಾರೆ. ಆದರೆ ಇವರ ಮನೋಭಾವ ಕೆಟ್ಟದ್ದಾಗಿದ್ದಾಗ ಇವರನ್ನು ಒಂಟಿಯಾಗಿ ಬಿಡುವುದೇ ಒಳ್ಳೆಯದು.

ಅಂಟಿಕೊಂಡಂತಿರುವ ಕಿರುಬೆರಳು

ಅಂಟಿಕೊಂಡಂತಿರುವ ಕಿರುಬೆರಳು

ಒಂದು ವೇಳೆ ಕಿರುಬೆರಳು ಅದರ ಪಕ್ಕದ ಬೆರಳಿಗೆ ಹೆಚ್ಚೂ ಕಡಿಮೆ ಅಂಟಿಕೊಂಡಂತೆ ಇದ್ದು ಪ್ರತ್ಯೇಕಿಸಲೇ ಆಗದಷ್ಟು ಬಿಗಿಯಾಗಿದ್ದರೆ ಈ ವ್ಯಕ್ತಿಗಳು ಅತ್ಯಂತ ಪ್ರಾಮಾಣಿಕರೂ ಹಾಗೂ ನಂಬಲರ್ಹ ವ್ಯಕ್ತಿಗಳೂ ಆಗಿರುತ್ತಾರೆ. ಇವರು ತಮಗೆ ವಹಿಸಿದ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುವವರು ಹಾಗೂ ಕ್ರಮಬದ್ದವಾಗಿ ಕೆಲಸ ಮಾಡುವವರೂ ಆಗಿರುತ್ತಾರೆ. ಇವರ ಸಂಗವನ್ನು ಎಲ್ಲರೂ ಇಷ್ಟಪಡುತ್ತಾರೆ.

ಬಿಡಿಯಾಗಿರುವ ಕಿರುಬೆರಳು

ಬಿಡಿಯಾಗಿರುವ ಕಿರುಬೆರಳು

ಪಕ್ಕದ ಬೆರಳುಗಳೊಂದಿಗೆ ಜಗಳ ಮಾಡಿಕೊಂಡು ಮುಖ ತಿರುಗಿಸಿಕೊಂಡು ನಿಂತಿರುವಂತೆ ಕಾಣುವ ಕಿರುಬೆರಳಿನ ಪಾದದ ಒಡೆಯರು ಸದಾ ವೈವಿಧ್ಯತೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಏಕತಾನತೆ ಇಷ್ಟವಿಲ್ಲದಿದ್ದು ಇವರು ಸದಾ ಸಾಹಸಕಾರ್ಯಗಳತ್ತ ಒಲವು ತೋರುತ್ತಾರೆ. ಇವರು ಸುಲಭವಾಗಿ ಬೇಸರಗೊಳ್ಳುವ ವ್ಯಕ್ತಿಗಳಾಗಿದ್ದು ಈ ಬೇಸರವನ್ನು ಕಳೆಯಲು ಕೆಲವೊಮ್ಮೆ ಇವರು ಅಪಾಯಕ್ಕೆ ಆಹ್ವಾನ ನೀಡುವ ಚಟುವಟಿಕೆಯತ್ತಲೂ ಒಲವು ತೋರಬಹುದು.

English summary

What Exactly Does The Shape Of Your Toes Reveal

You might be very surprised to learn that ones' foot and toe shape can tell you something about their personality. This is a fun way to know about the personality. Our physical and facial features really can tell a lot about us. Intrigued? Well, to know what your personality is like, check the shape of your toes and read below to know your personality type.
Subscribe Newsletter