ಅಂಗೈಯಲ್ಲಿರುವ 'ಮದುವೆ ರೇಖೆ'- ಕೌಟುಂಬಿಕ ರಹಸ್ಯ ಬಿಚ್ಚಿಡುತ್ತದೆ!

By: Deepu
Subscribe to Boldsky

ಅಂಗೈಯಲ್ಲಿನ ರೇಖೆಗಳು ನಮ್ಮ ಜೀವನದ ಪ್ರತಿಯೊಂದು ಕಷ್ಟ-ಸುಖವನ್ನು ಬಿಚ್ಚಿಡುತ್ತದೆ ಎಂದು ಜೋತಿಷ್ಯಶಾಸ್ತ್ರವು ಹೇಳುತ್ತದೆ. ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯು ನಮ್ಮ ಜೀವನದ ಒಂದೊಂದು ವಿಷಯವನ್ನು ಬಿಚ್ಚಿಡುತ್ತದೆ. ಅದೃಷ್ಟ, ದುರಾದೃಷ್ಟ, ಸುಖ-ದುಃಖ ಹೀಗೆ ಪ್ರತಿಯೊಂದು ನಮ್ಮ ಅಂಗೈಯಲ್ಲಿ ಕಾಣಿಸುತ್ತಾ ಇರುತ್ತದೆ.

ಆದರೆ ಇದು ಎಲ್ಲರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಲಿತುಕೊಂಡಿರುವವರಿಗೆ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ವೃತ್ತಿ, ಮದುವೆ ಹೀಗೆ ಹಲವಾರು ರೇಖೆಗಳು ನಮ್ಮ ಅಂಗೈಯಲ್ಲಿ ಇರುತ್ತದೆ. ಅದರಲ್ಲೂ ಜೀವನದ ಪ್ರಮುಖ ಅಂಗವಾಗಿರುವಂತಹ ಮದುವೆಯು ಸುಖಕರವಾಗಿದ್ದರೆ ಅದು ಜೀವನದ ಸಂತೋಷವನ್ನು ಹೆಚ್ಚಿಸುತ್ತದೆ. 

ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಅಂಗೈಯಲ್ಲಿ ಇರುವಂತಹ ಮದುವೆ ರೇಖೆಯಿಂದ ವೈವಾಹಿಕ ಜೀವನ, ಪ್ರೀತಿ ಮತ್ತು ಸಂಬಂಧ ಇತ್ಯಾದಿ ಬಗ್ಗೆ ತಿಳಿದುಕೊಳ್ಳಬಹುದು. ಅಂಗೈಯಲ್ಲಿರುವ ಮದುವೆಯ ರೇಖೆಗಳು ನಿಜವಾಗಿಯೂ ಏನನ್ನು ಹೇಳುತ್ತದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ರೇಖೆಯು ನೇರವಾಗಿರುವುದು ಯಾವಾಗ?

ರೇಖೆಯು ನೇರವಾಗಿರುವುದು ಯಾವಾಗ?

ನೇರ ಹಾಗೂ ಉದ್ದವಾಗಿರುವಂತಹ ಮದುವೆಯ ರೇಖೆಯು ವ್ಯಕ್ತಿಯ ದೀರ್ಘ ಪ್ರೀತಿಯ ಜೀವನದ ಬಗ್ಗೆ ಹೇಳುತ್ತದೆ. ಅವರಿಗೆ ಜೀವನದ ಬಗ್ಗೆ ಫ್ಯಾಶನ್ ಇರುತ್ತದೆ ಮತ್ತು ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಅಂಗೈಯಲ್ಲಿ ಒಂದೇ ಮದುವೆಯ ರೇಖೆಯು ದೀರ್ಘ ಹಾಗೂ ಉದ್ದವಾಗಿ ಇದು ಸೂರ್ಯನ ರೇಖೆಗೆ ಸ್ಪರ್ಶಿಸುತ್ತಾ ಇದ್ದರೆ ಇವರು ಕೇವಲ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣುವುದು ಮಾತ್ರವಲ್ಲದೆ ಮದುವೆ ಬಳಿಕ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.

ರೇಖೆಯು ಸಣ್ಣದಾಗಿದ್ದರೆ

ರೇಖೆಯು ಸಣ್ಣದಾಗಿದ್ದರೆ

ಮದುವೆ ರೇಖೆಯು ತುಂಬಾ ಸಣ್ಣದಾಗಿದ್ದರೆ ಆ ವ್ಯಕ್ತಿಯು ವಿರುದ್ಧ ಲಿಂಗದ ವ್ಯಕ್ತಿಯ ಕಡೆ ಹೆಚ್ಚು ಆಕರ್ಷಣೆ ಹೊಂದಿಲ್ಲವೆಂದು ಹೇಳಬಹುದು. ರೇಖೆಯಲ್ಲಿ ಆಳವಿಲ್ಲದೆ ಇದ್ದರೆ ವಿರುದ್ಧ ಲಿಂಗವನ್ನು ಪಡೆಯುವ ತಾಳ್ಮೆಯನ್ನು ಕಳಕೊಂಡಿದ್ದಾರೆ ಎನ್ನಬಹುದು. ಅವರು ಆಳವಾಗಿ ಪ್ರೀತಿಯಲ್ಲಿ ಮುಳುಗುವುದು ತುಂಬಾ ಕಷ್ಟ. ಇವರು ತುಂಬಾ ವಿಳಂಬವಾಗಿ ಮದುವೆಯಾಗುತ್ತಾರೆ.

ಕುತೂಹಲದ ರಹಸ್ಯಗಳನ್ನು ಬಿಚ್ಚಿಡುವ 'ಹಸ್ತ ರೇಖೆಗಳು'

 ರೇಖೆಯು ವಕ್ರವಾಗಿ ಕೆಳಮುಖವಾಗಿದ್ದರೆ

ರೇಖೆಯು ವಕ್ರವಾಗಿ ಕೆಳಮುಖವಾಗಿದ್ದರೆ

ಈ ಚಿತ್ರದಲ್ಲಿ ತೋರಿಸಿರುವಂತೆ ಮದುವೆ ರೇಖೆಯು ಅಂತ್ಯದಲ್ಲಿ ಕೆಳಮುಖವಾಗಿ ಸಾಗಿದರೆ ಅದು ಒಳ್ಳೆಯ ಸೂಚನೆಯಲ್ಲ. ಸಂಗಾತಿಯು ಅವರಿಗಿಂತ ಮೊದಲು ಸಾಯುತ್ತಾರೆ ಎನ್ನುವುದು ಇದರ ಸೂಚನೆಯಾಗಿದೆ. ವಕ್ರವಾಗಿ ಒಮ್ಮೆಲೇ ಕೆಳಮುಖವಾಗಿದ್ದರೆ ಸಂಗಾತಿಗೆ ಯಾವುದಾದರೂ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತದೆ. ಇದನ್ನು ಹೊರತುಪಡಿಸಿ ಮದುವೆಯ ಕಿರಿಕಿರಿ ಮತ್ತು ಸಂಗಾತಿ ಜತೆ ವ್ಯಕ್ತಿತ್ವದ ಜಗಳವನ್ನು ಇದು ತೋರಿಸುತ್ತದೆ.

ರೇಖೆಯು ವಕ್ರವಾಗಿ ಮೇಲ್ಮುಖವಾಗಿ ಸಾಗಿದಾಗ

ರೇಖೆಯು ವಕ್ರವಾಗಿ ಮೇಲ್ಮುಖವಾಗಿ ಸಾಗಿದಾಗ

ಮದುವೆಯ ರೇಖೆಯು ವಕ್ರವಾಗಿ ಮೇಲ್ಮುಖವಾಗಿ ಸಾಗಿದಾಗ ಆ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ನೆಲೆನಿಂತಿದ್ದಾನೆ ಮತ್ತು ಪ್ರೀತಿಯನ್ನು ಕಂಡುಕೊಂಡಿದ್ದಾನೆ ಎನ್ನಬಹುದು. ಅವರು ಯಾವತ್ತೂ ತಮ್ಮ ಆರ್ಥಿಕತೆ ಬಗ್ಗೆ ಚಿಂತೆ ಮಾಡುವುದಿಲ್ಲ ಮತ್ತು ಸಂಗಾತಿ ಜತೆಗೆ ಸೇರಿಕೊಂಡು ಶ್ರೀಮಂತ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಮದುವೆ ರೇಖೆಯು ಮೇಲಕ್ಕೆ ಹೋದಷ್ಟು ಆ ವ್ಯಕ್ತಿಯು ಸಂತೋಷವಾಗಿರುತ್ತಾನೆ.

ಈ ನಿರ್ದೇಶನದಲ್ಲಿ ಕವಲೊಡೆದಿದ್ದರೆ......

ಈ ನಿರ್ದೇಶನದಲ್ಲಿ ಕವಲೊಡೆದಿದ್ದರೆ......

ರೇಖೆಯು ಆರಂಭದಲ್ಲೇ Y ಆಕಾರದಲ್ಲಿ ಕವಲೊಡೆದಿದ್ದರೆ ಇದು ತುಂಬಾ ಕೆಟ್ಟ ಸಂಕೇತವಾಗಿದೆ. ಇದು ಸಂಗಾತಿಯಿಂದ ಬೇರ್ಪಡುವ ಅಥವಾ ವಿಚ್ಛೇದನದ ಸೂಚನೆಯಾಗಿದೆ. ಕವಲು ದೊಡ್ಡದಾಗಿರದಿದ್ದರೆ ಅದು ಅಷ್ಟು ಕೆಟ್ಟದೇನಲ್ಲ. ಸ್ವಲ್ಪ ಸಮಯ ದೂರವಿದ್ದ ಬಳಿಕ ಮತ್ತೆ ಜತೆಯಾಗುವುದನ್ನು ಇದು ತೋರಿಸುತ್ತದೆ.

ಬೇರೆ ದಾರಿಯಲ್ಲಿ ಕವಲೊಡೆದಿದ್ದರೆ.....

ಬೇರೆ ದಾರಿಯಲ್ಲಿ ಕವಲೊಡೆದಿದ್ದರೆ.....

ರೇಖೆಯು ಅಂತ್ಯದಲ್ಲಿ ಕವಲೊಡೆದಿದ್ದರೆ ಆಗ ವ್ಯಕ್ತಿಯ ವೈವಾಹಿಕ ಜೀವನವು ತುಂಬಾ ಸಮಸ್ಯೆಗಳನ್ನು ಎದುರಿಸಲಿದೆ ಮತ್ತು ವಿಚ್ಛೇದನವಾಗುವ ಸಾಧ್ಯತೆಯಿದೆ ಎನ್ನಬಹುದು. ಅವರ ಸಂಪೂರ್ಣ ಜೀವನವು ಗೊಂದಲದಲ್ಲೇ ನಿಂತಿರುತ್ತದೆ.

ಮದುವೆ ರೇಖೆ ತುಂಬಾ ಸಣ್ಣದಾಗಿ ಮೇಲೆ ಹಾಗೂ ಕೆಳಗಿದ್ದರೆ

ಮದುವೆ ರೇಖೆ ತುಂಬಾ ಸಣ್ಣದಾಗಿ ಮೇಲೆ ಹಾಗೂ ಕೆಳಗಿದ್ದರೆ

ಮದುವೆ ರೇಖೆಯ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಸಣ್ಣ ರೇಖೆಯಿದ್ದರೆ ಆ ವ್ಯಕ್ತಿಯು ಹಲವಾರು ಜಗಳ ಮಾಡಿರುತ್ತಾನೆ, ಸಂಬಂಧವು ಚೆನ್ನಾಗಿರುವುದಿಲ್ಲ ಮತ್ತು ಆತನ ಸ್ವ ನಡತೆಯು ಸರಿಯಾಗಿರುವುದಿಲ್ಲ. ಅವರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಮದುವೆ ರೇಖೆಯು ಅಲೆಅಲೆಯಾಗಿದ್ದಾಗ

ಮದುವೆ ರೇಖೆಯು ಅಲೆಅಲೆಯಾಗಿದ್ದಾಗ

ಮದುವೆ ರೇಖೆಯು ಅಲೆಅಲೆಯಾಗಿ ಇದ್ದಾಗ ಆ ವ್ಯಕ್ತಿಯು ಭಾವನಾತ್ಮಕವಾಗಿ ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸುತ್ತಾನೆ. ಅವರು ಮೊಂಡುತನ, ನಿರ್ದಯಿ ಮತ್ತು ಗೃಹವಿರಹಿಯಾಗಿರುತ್ತಾರೆ. ಇದರಿಂದ ಅವರು ಬೇಗನೆ ಸಂಗಾತಿಯಿಂದ ದೂರವಾಗುತ್ತಾರೆ ಅಥವಾ ವಿಚ್ಛೇದನ ಪಡೆಯುತ್ತಾರೆ.

ಎರಡು ಮದುವೆ ರೇಖೆಗಳು ಇದ್ದರೆ

ಎರಡು ಮದುವೆ ರೇಖೆಗಳು ಇದ್ದರೆ

ಹೆಚ್ಚಿನವರಲ್ಲಿ ಎರಡು ಮದುವೆಯ ರೇಖೆಗಳು ಇರುತ್ತದೆ. ರೇಖೆಗಳು ಆಳವಾಗಿ ಸ್ಪಷ್ಟತೆಯಿಂದ ಕೆಂಪು ಬಣ್ಣದಿಂದ ಇದ್ದರೆ ಆ ವ್ಯಕ್ತಿಯು ಒಳ್ಳೆಯ ವೈವಾಹಿಕ ಜೀವನ ನಡೆಸುತ್ತಾನೆ. ಅಂಗೈಯಲ್ಲಿ ಎರಡು ಮದುವೆ ರೇಖೆಯು ಸಮಾನಾಂತರವಾಗಿ ಒಂದೇ ರೀತಿಯ ಉದ್ದವನ್ನು ಹೊಂದಿದ್ದರೆ ತಿರುಚಿದ ವೈವಾಹಿಕ ಜೀವನ ಅವರದ್ದಾಗುತ್ತದೆ.

ಮಣಿಕಟ್ಟಿನ ರೇಖೆಗಳು-ವ್ಯಕ್ತಿಯ ಆಯಸ್ಸು, ಆರೋಗ್ಯದ ರಹಸ್ಯ ಬಿಚ್ಚಿಡುತ್ತದೆ!

ಸಮಾನಾಂತರ ರೇಖೆಗಳು

ಸಮಾನಾಂತರ ರೇಖೆಗಳು

ಉದ್ದದಲ್ಲಿ ವ್ಯತ್ಯಾಸವಿರುವಂತಹ ಎರಡು ಸಮಾನಾಂತರ ಮದುವೆ ರೇಖೆಗಳೂ ಇದ್ದರೆ ಆಗ ವ್ಯಕ್ತಿಯು ತ್ರಿಕೋನ ಪ್ರೇಮದ ಪರಿಸ್ಥಿತಿಯಲ್ಲಿ ಸಿಲುಕುತ್ತಾನೆ.

ಈ ಹಾದಿಯಲ್ಲಿ ಸಮಾನಾಂತರ ರೇಖೆಗಳು ಇದ್ದರೆ

ಈ ಹಾದಿಯಲ್ಲಿ ಸಮಾನಾಂತರ ರೇಖೆಗಳು ಇದ್ದರೆ

ಎರಡು ಮದುವೆ ರೇಖೆಗಳಲ್ಲಿ ಒಂದು ಉದ್ದಗೆ ಮತ್ತೊಂದು ಗಿಡ್ಡದಾಗಿದ್ದರೆ ಮತ್ತು ಆ ರೇಖೆಗಳು ಸಮಾನಾಂತರವಾಗಿ ಇರದಿದ್ದರೆ ಇದು ವಿಚ್ಛೇದನ ಮತ್ತು ಸಂಗಾತಿಯಿಂದ ದೂರವಾಗುವುದನ್ನು ಸೂಚಿಸುವುದು.

ಮೂರು ಮದುವೆ ರೇಖೆಗಳು

ಮೂರು ಮದುವೆ ರೇಖೆಗಳು

ವ್ಯಕ್ತಿಯ ಅಂಗೈಯಲ್ಲಿ ಮೂರು ಮದುವೆ ರೇಖೆಗಳೂ ಇದ್ದರೆ ಆ ವ್ಯಕ್ತಿಯು ಭಾವನಾತ್ಮಕವಾಗಿ ಮಿಶ್ರವಾಗಿರುತ್ತಾನೆ ಮತ್ತು ದುರ್ಬಲ ನೈತಿಕ ಪರಿಕಲ್ಪನೆಯನ್ನು ಹೊಂದಿರುತ್ತಾನೆ. ಜೀವನದ ಬಗ್ಗೆ ಅವರ ಕಲ್ಪನೆ ತುಂಬಾ ಬಡವಾಗಿರುತ್ತದೆ. ಅವರು ನಿಜವಾಗಿಯೂ ಪ್ರತಿಭಾವಂತರು, ರೋಮ್ಯಾಂಟಿಕ್ ಮತ್ತು ವಿರುದ್ಧ ಲಿಂಗದ ಬಗ್ಗೆ ಫ್ಯಾಷನ್ ಹೊಂದಿರುತ್ತಾರೆ.

ಮಣಿಕಟ್ಟಿನಲ್ಲಿರುವ ರೇಖೆಗಳು -ಎಷ್ಟಿವೆ? ಏನು ಹೇಳುತ್ತವೆ?

English summary

What Does Your Marriage Line On The Palm Signify

Check out and learn about the details of what marriage line reveals about your life. It is said to reveal the details about the importance of love. The marriage line generally reflects the situation of a person's married life, their love relationships,e tc. Apart from all this, it reveals about their attitude towards love. Read on to know more about what exactly the marriage line reveals...
Subscribe Newsletter