ಇದು ಕೈಬೆರಳಿಗೆ ತೊಡುವ ಉಂಗುರದ ರಹಸ್ಯ! ನಂಬಲೇಬೇಕು...

By: manu
Subscribe to Boldsky

ಕೆಲವರು ರಾಶಿಗೆ ಅನುಗುಣವಾಗಿ ಕೈಬೆರಳುಗಳಿಗೆ ಉಂಗುರ ಧರಿಸಿದರೆ ಇನ್ನು ಕೆಲವರು ಬಂಗಾರ ಇದೆ ಎಂದು ತೋರಿಸಿಕೊಳ್ಳಲು, ಉಳಿದವರು ಫ್ಯಾಷನ್‌ಗಾಗಿ ಉಂಗುರ ಧರಿಸುತ್ತಾರೆ. ಭಾರತದಲ್ಲಿ ಮದುವೆಗೆ ಮೊದಲು ವಧು ಹಾಗೂ ವರ ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯವಿದೆ.

ಉಂಗುರ ಯಾವತ್ತೂ ಉಂಗುರ ಬೆರಳಿಗೇ ಮೀಸಲು! ಏನಿದರ ರಹಸ್ಯ?

ಇದು ವಿದೇಶಗಳಲ್ಲೂ ಇರುವುದನ್ನು ನಾವು ನೋಡಿದ್ದೇವೆ. ಕೈಬೆರಳಿಗೆ ಉಂಗುರ ಧರಿಸುವ ಮಹತ್ವವೇನು ಮತ್ತು ಅದರ ಸಂಕೇತವೇನು ಎಂದು ತಿಳಿಯುವ ಸಲುವಾಗಿ ಬೋಲ್ಡ್ ಸ್ಕೈ ನಿಮಗಾಗಿ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದೆ....

ತೋರು ಬೆರಳು

ತೋರು ಬೆರಳು

ಈ ಬೆರಳು ನಾಯಕತ್ವ, ಸ್ವಾಭಿಮಾನ ಮತ್ತು ಅಧಿಕಾರವನ್ನು ತೋರಿಸುತ್ತದೆ. ಈ ಬೆರಳಿಗೆ ಉಂಗುರ ಧರಿಸಿದರೆ ನೀವು ಆತ್ಮವಿಶ್ವಾಸಿ, ಸ್ವಾಭಿಮಾನಿ ಮತ್ತು ಒಳ್ಳೆಯ ನಾಯಕತ್ವದ ಗುಣಗಳು ನಿಮ್ಮಲ್ಲಿ ಇದೆ ಎಂದರ್ಥ. ವ್ಯಕ್ತಿಯೊಬ್ಬ ನಿಷ್ಕ್ರೀಯ ಕೈಯಲ್ಲಿ ಇದನ್ನು ಧರಿಸಿದ್ದರೆ ಆತನು ಬೇರೆಯವರ ನಾಯಕತ್ವ ಸ್ವೀಕರಿಸಲು ತಯಾರಾಗಿದ್ದಾನೆ ಎಂದರ್ಥ.

ಮಧ್ಯದ ಬೆರಳು

ಮಧ್ಯದ ಬೆರಳು

ಇದು ಜವಾಬ್ದಾರಿ, ಸೌಂದರ್ಯ ಮತ್ತು ಸ್ವವಿಶ್ಲೇಷಣೆಯನ್ನು ವಿವರಿಸುತ್ತದೆ. ಮಧ್ಯದ ಬೆರಳಿಗೆ ಉಂಗುರ ಧರಿಸುವುದು ಅಸಾಮಾನ್ಯ ಹಾಗೂ ಅಚ್ಚರಿ ಮೂಡಿಸುವುದು. ಮಧ್ಯದ ಬೆರಳಿಗೆ ಉಂಗುರ ಧರಿಸಿದಾಗ ಅದು ವ್ಯಾಖ್ಯಾನಕ್ಕೆ ಮುಕ್ತವಾಗಿರುದಾಗಿ ಸೂಚಿಸುತ್ತದೆ. ಈ ಬೆರಳಿಗೆ ಉಂಗುರ ಧರಿಸಲು ನೀವು ನಿಮ್ಮದೇ ಆಗಿರುವ ಸಂಕೇತ ಆಯ್ಕೆ ಮಾಡಬಹುದು.

ಉಂಗುರ ಬೆರಳು

ಉಂಗುರ ಬೆರಳು

ಇದು ಸೌಂದರ್ಯದ ಮೇಲಿನ ಪ್ರೀತಿ, ಕ್ರಿಯಾತ್ಮಕತೆ ಮತ್ತು ಇತರರೊಂದಿಗಿನ ಸಂಬಂಧವನ್ನು ಸೂಚಿಸುತ್ತದೆ. ಇದು ಚಂದ್ರ, ಕ್ರಿಯಾತ್ಮಕತೆ, ಸೌಂದರ್ಯ ಮತ್ತು ಪ್ರಣಯದ ಸಂಬಂಧದ ಸಂಕೇತವಾಗಿದೆ. ವಿಶ್ವದ ಹೆಚ್ಚಿನ ದೇಶಗಳಲ್ಲಿ ಉಂಗುರ ಬೆರಳಿಗೆ ಉಂಗುರ ಧರಿಸುವುದು ಮದುವೆಯ ಸಂಕೇತವಾಗಿದೆ.

ಕಿರು ಬೆರಳು

ಕಿರು ಬೆರಳು

ಇದು ಅಂತಃಪ್ರಜ್ಞೆ, ಸಂವಹನ ಮತ್ತು ಶೀಘ್ರ ಚಾಣಕ್ಯತೆಯನ್ನು ತೋರಿಸುತ್ತದೆ. ಈ ಬೆರಳಿಗೆ ಉಂಗುರ ಧರಿಸುವುದು ಯಾವುದೇ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ವಿಷಯವಲ್ಲ ಎಂದು ವಿಶ್ವದಲ್ಲಿನ ಹೆಚ್ಚಿನ ಜಾತಿ ಹಾಗೂ ಧರ್ಮಗಳು ಪ್ರತಿಪಾದಿಸಿವೆ. ಈ ಬೆರಳಿಗೆ ಉಂಗುರ ಧರಿಸುವುದು ದೇಹದಿಂದ ಅದು ಏಕಾಂಗಿಯಾಗಿದ ಎನ್ನುವುದನ್ನು ಸೂಚಿಸುತ್ತದೆ. ಈ ವ್ಯಕ್ತಿ ತುಂಬಾ ಬೆಡಗಿನ ಮತ್ತು ಆತ ಒಳ್ಳೆಯ ಸಂಧಾನಕಾರ ಎನ್ನಲಾಗಿದೆ. ಬಲದ ಕೈಯ ಕಿರು ಬೆರಳು ವೃತ್ತಿಪರ ಅಂತಸ್ತನ್ನು ಸೂಚಿಸುತ್ತದೆ.

 ಹೆಬ್ಬೆರಳು

ಹೆಬ್ಬೆರಳು

ಇದು ವೈಯಕ್ತಿಕ ಮತ್ತು ಸ್ವಯಂ ಸಮರ್ಥನೆಯನ್ನು ವಿವರಿಸುತ್ತದೆ. ಬಲದ ಕೈಯ ಹೆಬ್ಬೆರಳಿಗೆ ಉಂಗುರ ಧರಿಸುವುದರಿಂದ ಆ ವ್ಯಕ್ತಿಯು ಮಹತ್ವಾಕಾಂಕ್ಷೆಗೆ ಹಿಂಜರಿಯುವುದನ್ನು ತೋರಿಸುತ್ತದೆ. ಎಡ ಹೆಬ್ಬೆರಳಿಗೆ ಧರಿಸುವುದು ವ್ಯಕ್ತಿಯ ಒಳಸಂಘರ್ಷವನ್ನು ತೋರಿಸುತ್ತದೆ.

ಬೆರಳಿನಲ್ಲಿ ಮೂಡಿರುವ ಉಂಗುರದ ಗುರುತಿನ ನಿವಾರಣೆ ಹೇಗೆ?

English summary

What Does Wearing A Ring On Each Finger Symbolise?

We all have seen people wear different rings on different fingers. But do you realise that wearing finger rings on different fingers has its own importance and significance? Wearing colourful stones on your fingers is not all about the fashion statement. It means a lot more than that. Read to know the symbolic meaning of wearing a finger ring on each finger.
Subscribe Newsletter