ಪ್ರೀತಿಯ ಭಾವನೆಗಳ ಮೇಲೂ ರಾಶಿ ಚಕ್ರದ ಪ್ರಭಾವ ಬೀರಬಹುದು!

By: manu
Subscribe to Boldsky

ಕೆಲವೊಮ್ಮೆ ನಮ್ಮ ಸ್ವಾಭಿಮಾನ ಹಾಗೂ ಅಹಂನಿಂದ ಬಹಳ ಗಟ್ಟಿಯಾಗಿ ಮಾತನಾಡುತ್ತೇವೆ. ಅವು ಸಂದರ್ಭಕ್ಕೆ ಸೂಕ್ತವಾಗಿರಬಹುದು. ಕೆಲವೊಮ್ಮೆ ಸಂದರ್ಭಕ್ಕೆ ಸೂಕ್ತವಲ್ಲದೇ ಇರಬಹುದು. ಇವೆಲ್ಲವೂ ಕೇವಲ ನಮ್ಮ ಸಂತೋಷ, ಕೋಪ ಅಥವಾ ಸನ್ನಿವೇಶಕ್ಕೆ ಸೀಮಿತವಲ್ಲ.

ನಮ್ಮ ಭಾವನೆಗಳು ನಮ್ಮ ರಾಶಿಯನ್ನು ಅವಲಂಭಿಸಿರುತ್ತದೆ. ನಾವು ವರ್ತಿಸುವ ವರ್ತನೆ ಹಾಗೂ ಆಡುವ ಮಾತುಗಳು, ಪ್ರೀತಿ ವಿಚಾರ ಎಲ್ಲವೂ ರಾಶಿಯ ಪ್ರಭಾವವೇ ಆಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

ಅರೇ! ಹೌದಾ? ಎನ್ನುವ ಭಾವ ಉಂಟಾದರೆ ಮುಂದೆ ಓದಿ... ವಿವಿಧ ರಾಶಿಗಳ ವಿಭಿನ್ನ ವರ್ತನೆ ಹಾಗೂ ಮಾನಸಿಕ ಗುಣಗಳ ಬಗ್ಗೆ ಸಂಕ್ಷಿಪ್ತವಾದ ವಿವರಣೆಯಿದೆ. ನಿಮ್ಮ ರಾಶಿ ಯಾವುದೆಂದು ಗುರುತಿಸಿ, ನಿಮ್ಮ ಸ್ವಭಾವ ಹಾಗೂ ಭಾವನೆಗಳ ಬಗ್ಗೆ ತಿಳಿಯಿರಿ....

ಮೇಷ ರಾಶಿಗಳು

ಮೇಷ ರಾಶಿಗಳು

ಈ ರಾಶಿಯವರು ತಮಗೆ ಬೇಕಾದವರ ಗಮನ ಸೆಳೆಯಲು ಅಲ್ಪಾವಧಿ ಅಥವಾ ದೀರ್ಘಾವಧಿಯ ಪ್ರಯತ್ನ ಮಾಡುತ್ತಾರೆ. ತಮ್ಮನ್ನು ಆಕರ್ಷಿತರಾಗುವಂತೆ ಮಾಡುತ್ತಾರೆ. ನಂತರ ಅವರು ಇಷ್ಟವಾಗದೆ ಇದ್ದರೆ ವಿಲಕ್ಷಣವಾಗಿ ವರ್ತಿಸುವುದು, ನಟಿಸುವುದು ಅಥವಾ ಅದೃಶ್ಯರಾಗಲು ಪ್ರಯತ್ನಿಸುತ್ತಾರೆ.

ವೃಷಭ

ವೃಷಭ

ಇವರು ಯಾರೊಬ್ಬರನ್ನೂ ದೀರ್ಘಕಾಲ ತಮ್ಮ ಬಳಿ ಉಳಿಯಲು ಅವಕಾಶ ನೀಡುವುದಿಲ್ಲ. ತಮ್ಮ ಪ್ರೀತಿಯನ್ನು ಮುಚ್ಚಿಡುತ್ತಾರೆ. ಇವರು ಜನರೊಂದಿಗೆ ಸ್ವಲ್ಪ ಮುಕ್ತವಾಗಿ ವರ್ತಿಸಿದಾಗಷ್ಟೇ ಜನರು ಇವರು ಯಾರೆಂದು ಗುರುತಿಸಲು ಸಹಾಯವಾಗುತ್ತದೆ. ಬಹಳ ವಿಚಾರಗಳನ್ನು ಮುಚ್ಚಿಡುವುದು ಹಾಗೂ ಅಭಿನಯಿಸುವುದರಿಂದ ನಿಮ್ಮೊಡನೆ ಬೆರೆಯಲು ಇತರರು ಮುಂದಾಗುವುದಿಲ್ಲ.

ಮಿಥುನ

ಮಿಥುನ

ಇವರು ತಮ್ಮೊಂದಿಗೆ ಹೊಂದಿಕೆಯಾಗದವರೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಒಂದು ದಿನ ಬೇಸರಕ್ಕೆ ಒಳಗಾಗುವ ಒಂಟಿ ಜೀವವಾಗುತ್ತೀರಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಕರ್ಕ

ಕರ್ಕ

ಈ ರಾಶಿಯವರ ಮೂಡಿ ಸ್ವಭಾವದಿಂದಲೇ ತಮ್ಮ ಪ್ರೀತಿ ಪಾತ್ರರೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಅನುಮಾನವನ್ನು ವ್ಯಕ್ತ ಪಡಿಸುವುದರಿಂದಲೂ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಸಿಂಹ

ಸಿಂಹ

ಇವರು ತಮ್ಮ ಪ್ರೀತಿ ಪಾತ್ರರಿಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಹೆಚ್ಚು ಗಮನ ನೀಡುವಲ್ಲಿ ಎಡವುತ್ತಾರೆ. ಸಂಗಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡದೆ ಅವರನ್ನು ಮರೆಯುತ್ತಾರೆ.

ಕನ್ಯಾ

ಕನ್ಯಾ

ನಿಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಇದು ನಿಮ್ಮ ಸಂಗಾತಿಗಳಿಗೆ ಕಷ್ಟವಾಗುವುದು. ಅಲ್ಲದೆ ಒತ್ತಡ ಹೇರುವ ಸಾಧ್ಯತೆ ಇರುತ್ತದೆ. ಅನವಶ್ಯಕವಾಗಿ ತುಂಬಾ ಯೋಚಿಸುವುದರಿಂದ ಸಂಬಂಧದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಸಂಗಾತಿಗಳ ಮನ ಮುರಿಯುವುದಕ್ಕೆ ಕಾರಣವಾಗಬಹುದು.

ತುಲಾ

ತುಲಾ

ಇವರು ಬೇರೆಯವರ ಭಾವನೆಗಳ ಮೇಲೆ ಪ್ರಯೋಗ ಮಾಡುವ ಸ್ವಭಾವ ಹೊಂದಿರುತ್ತಾರೆ. ಇದು ನಿಮ್ಮನ್ನು ಪ್ರೀತಿಸುವವರಿಗೆ ಬೇಸರವನ್ನುಂಟು ಮಾಡುವುದು. ಬೇಡವೆಂದರೆ ನಿಖರವಾಗಿ ಬೇಡವೆಂದು ನಿರ್ಧರಿಸುವುದು ಉತ್ತಮ.

ವೃಶ್ಚಿಕ

ವೃಶ್ಚಿಕ

ಕೆಲವೊಮ್ಮೆ ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಹೃದಯವನ್ನು ಒಡೆಯುವಂತೆ ಮಾಡುತ್ತದೆ. ನಿಮಗಾಗಿ ಯಾವುದೇ ಸಿಹಿ ಸುದ್ದಿ ಇರುವುದಿಲ್ಲ. ಏನಿದ್ದರು ಅದು ಕಪ್ಪು-ಬಿಳುಪಿದ್ದಂತೆ. ಕೆಲವೊಂದು ವಿಚಾರ ನಿಮಗೆ ಆಘಾತ ಉಂಟುಮಾಡಬಹುದು.

ಧನು

ಧನು

ಇವರು ಜೀವನಕ್ಕಿಂತ ಹೆಚ್ಚು ವೃತ್ತಿ ಜೀವನವನ್ನು ಇಷ್ಟಪಡುವುದರಿಂದ ಸಂಬಂಧವು ಮುರಿಯುವ ಸಾಧ್ಯತೆ ಇರುತ್ತದೆ. ಸಂಗಾತಿಗಿಂತ ಆರ್ಥಿಕ ಭದ್ರತೆಯನ್ನು ಮೊದಲು ಆಧ್ಯತೆ ನೀಡುವುದರಿಂದ ಪ್ರೀತಿ ಪಾತ್ರರು ದೂರಾಗುತ್ತಾರೆ.

ಮಕರ

ಮಕರ

ನಿಮ್ಮ ಕಲ್ಪನೆ ಅಥವಾ ಯೋಜನೆ ಪ್ರಕಾರ ಕೆಲಸ ನೆರವೇರದೆ ಇದ್ದಾಗ ಬದಲಾವಣೆಗೆ ಹೊಂದಿಕೊಳ್ಳಲು ನಿಮಗೆ ಕಷ್ಟವಾಗುವುದು. ಬಾಹ್ಯ ಜೀವನ ಘಟನೆಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ ಮತ್ತು ಸಂಬಂಧಕ್ಕೆ ಸಮಯವನ್ನು ಕೊಡಬೇಕು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ಕುಂಬ

ಕುಂಬ

ಬೌದ್ಧಿಕ ಪ್ರಕ್ರಿಯೆಯು ನಿಮ್ಮ ಪ್ರೀತಿಯನ್ನು ಮುರಿಯುತ್ತದೆ. ಪ್ರೀತಿ ಪಾತ್ರರಿಗೆ ನಿಮ್ಮ ಜೊತೆ ಸಂಬಂಧ ಮುಂದುವರಿಸಲು ಕಷ್ಟವಾಗುವುದು. ಅವರು ನಿಮ್ಮಿಂದ ದೂರ ಇರಲು ಬಯಸುವರು.

ಮೀನು

ಮೀನು

ಇವರು ಸದಾ ತಮ್ಮ ಕಲಾತ್ಮಕ ಸ್ವಭಾವದ ಬಗ್ಗೆಯೇ ಮೆಚ್ಚುಗೆ ಪಟ್ಟುಕೊಳ್ಳುತ್ತಿರುತ್ತಾರೆ. ಇದರಿಂದ ಅವರ ಪ್ರೀತಿ ಪಾತ್ರರಲ್ಲಿ ಪ್ರೀತಿ ಕಡಿಮೆಯಾಗುವಂತೆ ಮಾಡುತ್ತದೆ. ನಿಮ್ಮ ಸಂಗಾತಿಯ ಅಂಗೀಕಾರವು ನಿಮ್ಮನ್ನು ವ್ಯವಹಾರದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡುವುದು.

English summary

What Different Zodiac Signs Choose To Break Partner's Heart

We all have different potential to love, hate, break heart or rather act passive aggresive. Dwelling on the astrological aspect of breaking hearts, this is how different zodiacs let go of their feelings.While some get into a cocoon others chose to become cold and insensitive at times.
Subscribe Newsletter