For Quick Alerts
ALLOW NOTIFICATIONS  
For Daily Alerts

  ಮದುವೆ ಸಂಭ್ರಮವನ್ನೇ ಕಸಿದ, ಈ ಘೋರ ದುರಂತಗಳು

  By Manu
  |

  ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹಿರಿಯರು ಹೇಳುತ್ತಾರೆ. ವಿವಾಹದ ಪ್ರತಿ ಕ್ಷಣವೂ ಸ್ಮರಣೀಯ ಕ್ಷಣಗಳಾಗಿದ್ದು ಜೀವನಪರ್ಯಂತ ನೆನಪಿಟ್ಟುಕೊಳ್ಳುವಂತಹ ಕ್ಷಣಗಳಾಗಿವೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ನಾವು ನಮ್ಮ ಅನುಕೂಲಕ್ಕಾಗಿ ಏರ್ಪಡಿಸಿಕೊಂಡಿರುವ ಕೆಲವು ಸೌಲಭ್ಯಗಳೇ ಅನಾನುಕೂಲತೆಗೆ ಮೂಲ ಕಾರಣಗಳಾಗಿಬಿಡಬಹುದು. ಮದುವೆಯೋ ಅಥವಾ ಶಿಕ್ಷೆಯೋ ಒಂದೂ ಅರ್ಥವಾಗುತ್ತಿಲ್ಲ!

  ಕೆಲವು ಸಂದರ್ಭಗಳಲ್ಲಿ ಅಪಘಾತಕ್ಕೂ ಕಾರಣವಾಗಿ ಪ್ರಾಣಕ್ಕೇ ಅಪಾಯ ಒಡ್ಡಬಹುದು. ಇದು ಕೆಲವು ಮದುವೆಗಳಲ್ಲಿ ಆಗಿದೆ ಸಹಾ! ಇದರಲ್ಲಿ ಮದುಮಕ್ಕಳಿಗೇ ಮಾರಕವಾಗಿ ಪರಿಣಮಿಸಿದ ಕೆಲವು ಸಂದರ್ಭಗಳನ್ನು ಆಯ್ದು ಕೆಳಗಿನ ಲೇಖನದಲ್ಲಿ ನೀಡಲಾಗಿದೆ... 

  ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದ ವಧು

  ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದ ವಧು

  ಬ್ರೆಜಿಲ್ ದೇಶದ ಒಂದು ಮದುವೆಯಲ್ಲಿ ವಧುವನ್ನು ಹೆಲಿಕಾಪ್ಟರ್ ಮೂಲಕ ಮದುವೆಯ ಮಂಟಪಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಹೆಲಿಕಾಪ್ಟರ್‌ನಿಂದ ಇಳಿದ ಕೆಲವೇ ನಿಮಿಷಗಳ ಬಳಿಕ ಆಕೆಯ ಮದುವಯಾಗುವುದಿತ್ತು. ಅಂತಿಮ ಕ್ಷಣದವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಇಳಿಯುವ ಸಂದರ್ಭದಲ್ಲಿ ಹೆಲಿಕಾಪ್ಟರ್ ಅಪಘಾತಗೊಂಡು ಅದರಲ್ಲಿದ್ದ ವಧು ಹಾಗೂ ಇನ್ನೂ ಮೂವರು ದುರಂತದಲ್ಲಿ ಮಡಿದರು. ಆ ಸಮಯದಲ್ಲಿ ಆಕೆ ತನ್ನ ಮದುವೆಯ ಉಡುಗೆಯನ್ನು ಧರಿಸಿ ತಯಾರಾಗಿ ಬಂದಿದ್ದಳು. Image Courtesy

  ನೀಲಗಿರಿ ಮರ ಬಿದ್ದು ವಿಧಿವಶಳಾದ ವಧುವಿನ ತಾಯಿ

  ನೀಲಗಿರಿ ಮರ ಬಿದ್ದು ವಿಧಿವಶಳಾದ ವಧುವಿನ ತಾಯಿ

  ಈ ಮದುವೆಯ ಸಂದರ್ಭದಲ್ಲಿ ಮಂಟಪದ ಪಕ್ಕದಲ್ಲಿದ್ದ ದೊಡ್ಡ ನೀಲಗಿರಿ ಮರವೊಂದು ಅನಿರೀಕ್ಷಿತವಾಗಿ ಬಿದ್ದ ಪರಿಣಾಮವಾಗಿ ಇದರ ಅಡಿಯಲ್ಲಿ ಫೋಟೋ ತೆಗೆಸಿಕೊಳ್ಳಲು ತಯಾರಾಗಿ ನಿಂತಿದ್ದ ಗುಂಪಿನಲ್ಲಿ ಹಲವರು ಗಾಯಗೊಂಡರು. ಆದರೆ ಇವರಲ್ಲೊಬ್ಬರಾದ ವಧುವಿನ ತಾಯಿ ಮರಣ ಹೊಂದಿದ್ದು ಉಳಿದ ಐವರಿಗೆ ಗಂಭೀರ ಸ್ವರೂಪದ ಗಾಯಗಳಾಯಿತು. Image Courtesy

  ಈ ಮದುವೆಯಲ್ಲಿ ಇಪ್ಪತ್ತು ಅತಿಥಿಗಳು ಅಸುನೀಗಿದರು

  ಈ ಮದುವೆಯಲ್ಲಿ ಇಪ್ಪತ್ತು ಅತಿಥಿಗಳು ಅಸುನೀಗಿದರು

  ಯಾವುದೇ ಕಟ್ಟಡಕ್ಕೆ ತನ್ನದೇ ಒಂದು ಸಾಮರ್ಥ್ಯವಿರುತ್ತದೆ. ಈ ಕಟ್ಟಡದ ಮೂರನೆಯ ಅಂತಸ್ತಿನಲ್ಲಿ ಮದುವೆಯ ಕಾರ್ಯಕ್ರಮ ಏರ್ಪಾಡು ಮಾಡಲಾಗಿದ್ದು ಕನಿಷ್ಟ ಏಳುನೂರು ಜನರು ಆಗಮಿಸಿದ್ದರು. ಆದರೆ ಇಷ್ಟೊಂದು ಜನರ ಭಾರವನ್ನು ತಾಳಲು ಈ ಅಂತಸ್ತು ಸಮರ್ಥವಿಲ್ಲದಿದ್ದ ಕಾರಣಕ್ಕೋ ಏನೋ, ಈ ಅಂತಸ್ತಿನ ನೆಲವೇ ಕುಸಿದು ಕೆಳಗಿನ ಮಹಡಿಗಳನ್ನೂ ಸೇರಿಸಿ ಧರೆಗುರುಳಿತು. ಈ ಅಪಘಾತದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಇಪ್ಪತ್ತು ಜನರು ಅಸುನೀಗಿದರೆ ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡರು. Image courtesy

  ಈ ಮದುವೆಯಲ್ಲಿ ವಧುವಿನ ತಂದೆ ನಿಧನರಾದರು

  ಈ ಮದುವೆಯಲ್ಲಿ ವಧುವಿನ ತಂದೆ ನಿಧನರಾದರು

  ಈ ಮದುವೆಯಲ್ಲಿ ಕನ್ಯಾದಾನದ ಕರ್ತವ್ಯ ನಿರ್ವಹಿಸಿದ ಕೆಲವೇ ಕ್ಷಣಗಳಲ್ಲಿ ವಧುವಿನ ತಂದೆ ಹೃದಯಾಘಾತದಿಂದ ನಿಧನರಾದರು. ಈ ಕುಟುಂಬದ ಸಂಸ್ಕೃತಿಯಲ್ಲಿ ಕನ್ಯಾದಾನದ ಬಳಿಕ ತಂದೆ ಮಗಳೊಂದಿಗೆ ನರ್ತಿಸಬೇಕಾಗಿತ್ತು. ಈ ನರ್ತನದ ಸಮಯದಲ್ಲಿಯೇ ಅವರಿಗೆ ಎದೆನೋವು ಕಾಣಿಸಿಕೊಂಡು ಧರೆಗುರುಳಿದರು. Image Courtesy

  ಈ ಮದುವೆಯಲ್ಲಿ 51 ಅತಿಥಿಗಳು ಮರಣಹೊಂದಿದರು

  ಈ ಮದುವೆಯಲ್ಲಿ 51 ಅತಿಥಿಗಳು ಮರಣಹೊಂದಿದರು

  ಮದುವೆಯ ಅಪಘಾತದಲ್ಲಿ ಅತಿ ಹೆಚ್ಚಿನ ಮರಣಗಳು ಸಂಭವಿಸಿದ ದಾಖಲೆ ಪಡೆದಿರುವ ಈ ಮದುವೆ ನಡೆದಿದ್ದು ಟರ್ಕಿಯ ಗಾಜಿಯಾಂಟೆಪ್ ಎಂಬ ಊರಿನಲ್ಲಿ. ಈ ದೇಶದ ನಗರವೊಂದರಲ್ಲಿ ನಡೆಯುತ್ತಿದ್ದ ಮದುವೆ ಪಾರ್ಟಿಗೆ ಕರೆಯದೇ ಬಂದ ಆತ್ಮಹತ್ಯಾ ದಳದ ಭಯೋತ್ಪಾದಕನೊಬ್ಬ ತನ್ನ ಶರೀರದ ಮೇಲೆ ಭಾರಿ ಸ್ಪೋಟಕಗಳನ್ನು ಬೆಲ್ಟುಗಳಲ್ಲಿ ಕಟ್ಟಿಕೊಂಡು ತಂದಿದ್ದ. ಮದುವೆಯ ಸಂದರ್ಭದಲ್ಲಿ ಹೆಚ್ಚು ಜನರು ಗುಂಪುಗೂಡಿದ್ದ ಸಂದರ್ಭವನ್ನು ಕಾದು ಈ ಸಮಯದಲ್ಲಿ ಸ್ಪೋಟಿಸಿಕೊಂಡು ತಾನೂ ಸತ್ತು ಇತರ ಐವತ್ತು ಜನರನ್ನು ಪರಂಧಾಮಕ್ಕೆ ಅಟ್ಟಿದ್ದ. ಈ ಭಾರೀ ಸ್ಫೋಟದಲ್ಲಿ ಜನರ ಶರೀರಗಳೆಲ್ಲಾ ತುಂಡುತುಂಡಾಗಿ ಹರಡಿ ಹೋಗಿ ಶವಸಂಸ್ಕಾರ ನಡೆಸಲೂ ಭಾರೀ ಪಡಿಪಾಟಲು ಪಡಬೇಕಾಗಿ ಬಂದಿತ್ತು. Image courtesy

   

  English summary

  Weddings That Ended In Tragedy

  Amazing facts in kannada, interesting facts in kannada, Weddings That Ended In Tragedy, indian wedding culture, ಕನ್ನಡದಲ್ಲಿ ಆಸಕ್ತಿಕರ ಸಂಗತಿಗಳು, ಮದುವೆ, ಭಾರತೀಯ ಮದುವೆ ಶಾಸ್ತ್ರ
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more