For Quick Alerts
ALLOW NOTIFICATIONS  
For Daily Alerts

ಕೈ ಬೆರಳುಗಳ ಗಾತ್ರ-ಉದ್ದ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

By Arshad
|

ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಆತನ ಹಸ್ತಗಳು ಬಹಳಷ್ಟು ಹೇಳುತ್ತವಂತೆ. ವಿಶೇಷವಾಗಿ ಉದ್ಯೋಗ, ಹವ್ಯಾಸದ ಬಗ್ಗೆ ಬಹಳಷ್ಟು ಮಾಹಿತಿ ದೊರಕುತ್ತದೆ. ಆದರೆ ಹಸ್ತಗಳಿಗಿಂತಲೂ ಹೆಚ್ಚಾಗಿ ಬೆರಳುಗಳೇ ವ್ಯಕ್ತಿತ್ವದ ಬಗ್ಗೆ ವಿವರಗಳನ್ನು ನೀಡುತ್ತವೆ. ಹೌದು, ಇತ್ತೀಚಿನ ಸಂಶೋಧನೆಗಳ ಪ್ರಕಾರ ಬೆರಳುಗಳ ಗಾತ್ರ ಹಾಗೂ ಉದ್ದ ಮೊದಲಾದ ಮಾಹಿತಿಗಳು ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬೆಳಕು ಚೆಲ್ಲುತ್ತವೆ.

ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

ಒಂದು ವೇಳೇ ನಿಮ್ಮ ತೋರುಬೆರಳು ಉಂಗುರಬೆರಳಿಗಿಂತಲೂ ಚಿಕ್ಕದಿದ್ದರೆ ಈ ಅನುಪಾತವನ್ನು 2D:4D ಎಂದು ಕರೆಯುತ್ತಾರೆ. ಅಂದರೆ ಎರಡನೆಯ ಅಂಕೆಯ ಉದ್ದವನ್ನು ನಾಲ್ಕನೆಯ ಅಂಕೆಯ ಉದ್ದದಿಂದ ಭಾಗಿಸುವುದು. ಈ ಅನುಪಾತ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಬನ್ನಿ, ಬೆರಳುಗಳು ವ್ಯಕ್ತಿತ್ವದ ಯಾವ ವಿವರಗಳನ್ನು ನೀಡುತ್ತವೆ ಎಂಬ ಬಗ್ಗೆ ಮುಖ್ಯವಾದ ಐದು ವಿಷಯಗಳನ್ನು ತಿಳಿದುಕೊಳ್ಳೋಣ....

ಸ್ವಚ್ಛಂದತೆ

ಸ್ವಚ್ಛಂದತೆ

ಒಂದು ವೇಳೆ ಉಂಗುರಬೆರಳು ತೋರುಬೆರಳಿಗಿಂತಲೂ ಉದ್ದವಿದ್ದರೆ ಈ ವ್ಯಕ್ತಿಗಳು ಸ್ವಚ್ಛಂದ ವ್ಯಕ್ತಿಗಳಾಗಿರುತ್ತಾರೆ. ಅಂದರೆ ಈ ವ್ಯಕ್ತಿಗಳು ತಮ್ಮ ಜೀವನಸಂಗಾತಿಯರಿಗೆ ಮೋಸ ಮಾಡುವ ಸಾಧ್ಯತೆ ಇತರರಿಗಿಂತ ಹೆಚ್ಚು. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ 53% ರಷ್ಟು ಮಹಿಳೆಯರು ಹಾಗೂ 43% ರಷ್ಟು ಪುರುಷರು ತಮ್ಮ ಸಂಗಾತಿಯರಿಗೆ ಬದ್ದರಾಗಿದ್ದರು ಹಾಗೂ ಉಳಿದ 57% ರಷ್ಟು ಮಹಿಳೆಯರು ಹಾಗೂ 47% ರಷ್ಟು ಪುರುಷರು ಸ್ವಚ್ಛಂದ ಪ್ರವೃತ್ತಿಯವರಾಗಿದ್ದರು.

ನಯವಂತಿಕೆ, ನಾಜೂಕುತನ

ನಯವಂತಿಕೆ, ನಾಜೂಕುತನ

ಈ ಸಂಶೋಧನೆಯಲ್ಲಿ ಕಂಡುಕೊಂಡಂತೆ ಕಿರುಬೆರಳು ಉಂಗುರಬೆರಳಿಗಿಂತಲೂ ತುಂಬಾ ಚಿಕ್ಕದಾಗಿದ್ದರೆ ಈ ಪುರುಷರು ಮಹಿಳೆಯರೊಂದಿಗೆ ಅತಿ ಹೆಚ್ಚು ನಯವಂತಿಕೆ ಹಾಗೂ ನಾಜೂಕುತನವನ್ನು ಪ್ರಕಟಿಸುತ್ತಾರೆ. ಆದರೆ ಇದೇ ಹೊತ್ತಿನಲ್ಲಿ 2D:4D ಅನುಪಾತ ಹೆಚ್ಚಾಗಿದ್ದರೆ ಈ ವ್ಯಕ್ತಿಗಳು ಜಗಳಗಂಟರೂ ಆಗಿರುತ್ತಾರೆ.

ಹೆಚ್ಚು ಮಕ್ಕಳನ್ನು ಪಡೆಯುವ ಬಯಕೆ

ಹೆಚ್ಚು ಮಕ್ಕಳನ್ನು ಪಡೆಯುವ ಬಯಕೆ

2D:4D ಪರಿಮಾಣ ಕಡಿಮೆ ಇದ್ದರೆ ಈ ವ್ಯಕ್ತಿಗಳು ಹೆಚ್ಚು ಮಕ್ಕಳನ್ನು ಪಡೆಯುವ ಬಯಕೆ ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಇವರು ಒಬ್ಬರಿಗಿಂತಲೂ ಹೆಚ್ಚು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದು ಈ ಸಂಬಂಧಗಳು ಒಬ್ಬರಿಗೊಬ್ಬರು ಗೊತ್ತಾಗದಿರುವಂತೆ ನೋಡಿಕೊಳ್ಳುವುದು ಇವರಿಗೆ ಸ್ವಾಭಾವಿಕವಾಗಿ ಒಲಿದಿರುವ ವಿದ್ಯೆಯಾಗಿದೆ.

ರಾಜಿ ಮಾಡಿಕೊಳ್ಳಲು ಉತ್ಸುಕತೆ

ರಾಜಿ ಮಾಡಿಕೊಳ್ಳಲು ಉತ್ಸುಕತೆ

ಒಂದು ವೇಳೆ ಪುರುಷರಲ್ಲಿ ಕಡಿಮೆ ಅನುಪಾತವಿದ್ದರೆ ಈ ಪುರುಷರಲ್ಲಿ ಸರಿಸುಮಾರು ಮೂರನೆಯ ಒಂದರಷ್ಟು ಪುರುಷರಿಗೆ ಯಾವುದೇ ಸಂದರ್ಭವನ್ನು ಒಪ್ಪಿಕೊಳ್ಳುವ ಗುಣವಿರುತ್ತದೆ. ಉಳಿದ ಮೂರನೆಯ ಒಂದರಷ್ಟು ಪುರುಷರು ಸಂದರ್ಭವನ್ನು ಒಪ್ಪಿಕೊಳ್ಳದೇ ಜಗಳಕ್ಕೆ ಮುಂದಾಗುವ ಗುಣ ಹೊಂದಿರುತ್ತಾರೆ. ಉಳಿದ ಮೂರನೆಯ ಒಂದರಷ್ಟು ಪುರುಷರು ರಾಜಿ ಸಂಧಾನಕ್ಕೆ ಉತ್ಸುಕರಾಗಿರುತ್ತಾರೆ.

ಆಲಿಸುವ ಗುಣ

ಆಲಿಸುವ ಗುಣ

ಒಂದು ವೇಳೆ ಪುರುಷರಲ್ಲಿ ಕಡಿಮೆ ಅನುಪಾತವಿರುವ ಪುರುಷರು ಮಹಿಳೆಯರೊಂದಿಗಿದ್ದಾಗ ಅವರ ಮಾತನ್ನು ಗಮನವಿಟ್ಟು ಕೇಳುವವರಾಗಿರುತ್ತಾರೆ. ಇವರು ಎದುರಿನವರು ಮಾತನಾಡುವಾಗ ಸದಾ ಹಸನ್ಮುಖರಾಗಿದ್ದು ಚಿಕ್ಕ ಪುಟ್ಟ ನಗೆಚಟಾಕಿಗೂ ನಗುತ್ತಾ ಮುಂದಿನವರಲ್ಲಿ ಸ್ಥೈರ್ಯ ತುಂಬುತ್ತಾರೆ. ಈ ಗುಣಗಳಲ್ಲಿ ಒಂದಾದರೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸರಿಯಾದ ವಿವರ ನೀಡಿದೆಯೇ? ನಿಮ್ಮ ಪರಿಚಯದ ಪುರುಷರ ಬೆರಳುಗಳನ್ನು ಗಮನಿಸಿ.ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

Ways Your Fingers Reveal The Type Of Man You Are

about your grooming habits, your occupation and lots more... But do you realize that fingers also reveal a lot more than this? Yes, as per certain studies, a man's finger (its length and size) can reveal a lot about the kind of man he is.
X
Desktop Bottom Promotion