For Quick Alerts
ALLOW NOTIFICATIONS  
For Daily Alerts

ಅಚ್ಚರಿ ಪಡುವ ಮಾಹಿತಿಗಳು-ಶವವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ನೋಡಿ...

By Arshad
|

ಪ್ರೀತಿ ಪಾತ್ರರು ಇಹಲೋಕವನ್ನು ತ್ಯಜಿಸಿದಾಗ ಆಪ್ತರಿಗೆ ಅಗುವ ದುಃಖವನ್ನು ವರ್ಣಿಸಲು ಅಸಾಧ್ಯ. ಇವರಿಲ್ಲದೇ ಮುಂದಿನ ಜೀವನವನ್ನು ಹೇಗೆ ಸಾಗಿಸಬಹುದು ಎಂಬ ಚಿಂತೆ ಕಾಡುತ್ತದೆ. ಅಲ್ಲದೇ ದೈವೈಕ್ಯರಾದವರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಹಾಗೂ ಅವರ ಆದರ್ಶಗಳನ್ನು ಪಾಲಿಸಲು ಅವರ ನೆನಪು ಬರುತ್ತಿರುವಂತೆ ಪಟಗಳನ್ನು ಮನೆಯ ಗೋಡೆಯಲ್ಲಿ ಇರಿಸಿ ದೇವರ ಪೂಜೆಯೊಂದಿಗೇ ಈ ಪಟಕ್ಕೂ ಪೂಜೆ ಸಲ್ಲಿಸುವುದು ಹಲವು ಧರ್ಮಗಳಲ್ಲಿ ಕಂಡುಬರುವ ಸಂಪ್ರದಾಯವಾಗಿದೆ. ಆದರೆ ಕೆಲವು ಕಡೆ ಶವಗಳನ್ನು ಸುಡುವ ಅಥವಾ ಹೂಳುವ ಬದಲು ಬೇರೆಯೇ ಉಪಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಕೆಲವರು ತಮ್ಮ ಮರಣಾನಂತರ ವೈದ್ಯಕೀಯ ವಿದ್ಯಾಸಂಸ್ಥೆಗಳಿಗೆ ದಾನ ಮಾಡಬೇಕೆಂದು ಉಯಿಲು ಸಹಾ ಬರೆದಿಡುತ್ತಾರೆ. ತಮ್ಮ ಮರಣಾನಂತರವೂ ತಮ್ಮ ದೇಹ ಉಪಯೋಗಕ್ಕೆ ಬರಲಿ ಎಂಬುದೇ ಇವರ ಆಶಯವಾಗಿದೆ. ಆದರೆ ಇದಕ್ಕೂ ಮಿಗಿಲಾದ ಕೆಲವು ಉಪಯೋಗಗಳನ್ನು ಶವಗಳಿಂದ ಪಡೆಯಲಾಗುತ್ತದೆ. ಉದಾಹರಣೆಗೆ ಗೊಬ್ಬರದ ರೂಪದಲ್ಲಿ ಬಳಸುವುದು, ಆಭರಣಗಳ ತಯಾರಿಕೆ, ಬೀಜಗಳನ್ನು ನೆಡಲು ಮೊದಲಾದ, ಯಾರೂ ಇದುವರೆಗೆ ಊಹಿಸದ ಕೆಲಸಗಳಲ್ಲಿಯೂ ಶವಗಳನ್ನು ಬಳಸಲಾಗುತ್ತಿದೆ. ಬನ್ನಿ, ಈ ಜಗತ್ತಿನಲ್ಲಿ ಶವಗಳನ್ನು ಹೀಗೂ ಬಳಸಿಕೊಳ್ಳಲಾಗುತ್ತದೆಯೇ ಎಂದು ಅಚ್ಚರಿ ಪಡುವ ಮಾಹಿತಿಗಳನ್ನು ನೋಡೋಣ..

ಮರಕ್ಕೆ ಗೊಬ್ಬರವಾಗಿ

ಮರಕ್ಕೆ ಗೊಬ್ಬರವಾಗಿ

Bios Urns ಎಂಬ ಸಂಸ್ಥೆಯ ಮುಖ್ಯ ಕಾರ್ಯವೆಂದರೆ ಶವಗಳನ್ನು ಸಮಾಧಿ ಮಾಡುವುದು 2011ರಲ್ಲಿ ಈ ಸಂಸ್ಥೆ ಶವಗಳನ್ನು ಮರಗಳನ್ನು ಬೆಳೆಸುವ ಮೂಲಕ ಸದುಪಯೋಗಿಸಿಕೊಳ್ಳುತ್ತಾ ಬಂದಿದೆ. ಶವವನ್ನು ನೈಸರ್ಗಿಕವಾಗಿ ಕೊಳೆಯಲು ಬಿಟ್ಟು ಈ ಸ್ಥಳದಲ್ಲಿ ಮರದ ಬೀಜವೊಂದನ್ನು ನೆಡಲಾಗುತ್ತದೆ. ಈ ಬೀಜ ಮಣ್ಣಾಗುತ್ತಿರುವ ಶವವನ್ನೇ ಗೊಬ್ಬರವಾಗಿ ಪಡೆದು ಸೊಂಪಾಗಿ ಬೆಳೆಯುತ್ತದೆ.

ವಜ್ರಗಳ ನಿರ್ಮಾಣ

ವಜ್ರಗಳ ನಿರ್ಮಾಣ

ಅಸಾಧ್ಯ ಎಂದು ನಮಗೆಲ್ಲಾ ಅನ್ನಿಸುವ ಈ ಕಾರ್ಯವನ್ನು ಅಮೇರಿಕಾದ ಒಂದು ಸಂಸ್ಥೆ ಸಾಧ್ಯವಾಗಿಸಿ ತೋರಿಸಿದೆ. ಮಾನವ ದೇಹ ಶೇಖಡಾ ಎಪ್ಪತ್ತರಷ್ಟು ನೀರಿನಿಂದ ಕೂಡಿದ್ದರೂ ಉಳಿದ ಜೀವಕೋಶಗಳೆಲ್ಲಾ ಇಂಗಾಲ ಆಧಾರಿತ ಕಣದಿಂದ ಮಾಡಲ್ಪಟ್ಟಿದೆ. ವಜ್ರ ಸಹಾ ಇಂಗಾಲದ ಇನ್ನೊಂದು ರೂಪವಾಗಿದೆ. ಪ್ರತಿಶವದಿಂದಲೂ ಈ ಸಂಸ್ಥೆ ಸರಾಸರಿ ಐವತ್ತಕ್ಕೂ ಹೆಚ್ಚು ವಜ್ರಗಳನ್ನು ಉತ್ಪಾದಿಸುತ್ತದೆ. ಹೇಗೆ ಎಂಬ ಗುಟ್ಟನ್ನು ಈ ಸಂಸ್ಥೆ ಬಿಟ್ಟುಕೊಟ್ಟಿಲ್ಲ.

ಸೋಪು ನಿರ್ಮಾಣ

ಸೋಪು ನಿರ್ಮಾಣ

ಈ ಸೋಪನ್ನು ಶವದಿಂದ ತಯಾರಿಸಿದ್ದು ಎಂದರೆ ನಾವೆಂದೂ ಇದರಿಂದ ಸ್ನಾನ ಮಾಡಲಿಕ್ಕಿಲ್ಲ. ಆದರೆ ಮನುಷ್ಯದೇಹದಲ್ಲಿರುವ ಕೊಬ್ಬನ್ನು ಸೋಪಿನ ತಯಾರಿಕೆಗಾಗಿ ಬಳಸಿಕೊಳ್ಳುವ ಕೆಲವಾರು ಸಂಸ್ಥೆಗಳಿವೆ. ಕೊಬ್ಬನ್ನು ಕೆಲವು ರಾಸಾಯನಿಕಗಳ ಜೊತೆಗೆ ಬೆರೆಸಿ ಕರಗಿಸಿ ಸೋಪಿನ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ಲೋಹಗಳನ್ನು ಪಡೆಯಲು

ಲೋಹಗಳನ್ನು ಪಡೆಯಲು

ನಮ್ಮ ದೇಹದ ಜೀವಕೋಶಗಳಲ್ಲಿ ಅಲ್ಪ ಪ್ರಮಾಣದ ತಾಮ್ರ, ಕಬ್ಬಿಣ, ಚಿನ್ನ, ಮ್ಯಾಂಗನೀಸ್ ಮೊದಲಾದ ಖನಿಜಗಳಿವೆ. 2004ರಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ "Crematorium recycling" ಎಂಬ ಹೆಸರಿನ ಒಂದು ಸಂಸ್ಥೆ ಶವಗಳಿಂದ ಈ ಅಲ್ಪಪ್ರಮಾಣದ ಲೋಹವನ್ನೂ ಹೊರತೆಗೆಯಲು ಯಶಸ್ವಿಯಾಗಿದೆ. ಈ ಲೋಹಗಳನ್ನು ವಿಮಾನದ ಇಂಜಿನ್, ರಸ್ತೆದೀಪ ಮೊದಲಾದ ಉಪಯೋಗಗಳಿಗೆ ಬಳಸಲಾಗುತ್ತಿದೆ.

ಶವಗಳನ್ನು ಪುಡಿಯಾಗಿಸುವ ತಂತ್ರ

ಶವಗಳನ್ನು ಪುಡಿಯಾಗಿಸುವ ತಂತ್ರ

ಸ್ವೀಡನ್ನಿನ ಒಂದು ಸಂಸ್ಥೆ ಶವಗಳ ಅಂತ್ಯ ಸಂಸ್ಕಾರವನ್ನು ಭಿನ್ನರೂಪದಲ್ಲಿ ಮಾಡುತ್ತಿದೆ. ಶವಾಗಾರದೊಂದಿಗೆ ಹೊಂದಿರುವ ಒಪ್ಪಂದದ ಪ್ರಕಾರ ಮೊದಲು ಶವಗಳನ್ನು ಶೈತ್ಯಾಗಾರದಲ್ಲಿರಿಸಿ ಮಂಜುಗಡ್ಡೆಯಾಗಿಸಲಾಗುತ್ತದೆ. ಬಳಿಕ ಇದನ್ನು ತೀವ್ರವಾಗಿ ಕಂಪಿಸುವ ವೈಬ್ರೇಟರ್ ಒಂದರಲ್ಲಿರಿಸಿದಾಗ ಅಲಗುವಿಕೆಗೆ ಈ ಶವ ಪುಡಿಪುಡಿಯಾಗುತ್ತದೆ. ಬಳಿಕ ಈ ಪುಡಿಯಿಂದ ಲೋಹಗಳನ್ನು ಪ್ರತ್ಯೇಕಿಸಲಾಗುತ್ತದೆ. ಉಳಿದ ಪುಡಿಯನ್ನು ಮೆಕ್ಕೆಜೋಳದ ಹಿಟ್ಟಿನೊಂದಿಗೆ ಬೆರೆಸಿ ಒಂದು ಪಾತ್ರೆಯಲ್ಲಿ ಮುಚ್ಚಿಡಲಾಗುತ್ತದೆ. ಒಂದು ವರ್ಷದ ಬಳಿಕ ಈ ಪುಡಿ ಪೂರ್ಣವಾಗಿ ಮಣ್ಣಾಗಿ ಹೋಗುತ್ತದೆ. ಈ ವಿಧಾನ ಅಂತ್ಯಸಂಸ್ಕಾರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಪರ್ಯಾವರಣ ಸ್ನೇಹಿ ವಿಧಾನ ಎಂದು ಪರಿಗಣಿಸಲಾಗಿದೆ.

ಕಾಡುಪಕ್ಷಿಗಳಿಗೆ ಆಹಾರ

ಕಾಡುಪಕ್ಷಿಗಳಿಗೆ ಆಹಾರ

ಟಿಬೆಟ್ ನಲ್ಲಿ ಮೃತ ಶರೀರವನ್ನು ತುಂಡುತುಂಡಾಗಿಸಿ ಗೋಧಿಹಿಟ್ಟು ಮತ್ತು ಬೆಣ್ಣೆಯೊಡನೆ ಬೆರೆಸಲಾಗುತ್ತದೆ. ಬಳಿಕ ಈ ತುಂಡುಗಳನ್ನು ಪರ್ವತದ ಮೇಲೆ ಕೊಂಡೊಯ್ದು ಹದ್ದು ಮೊದಲಾದ ಕಾಡುಪಕ್ಷಿಗಳಿಗೆ ಆಹಾರವಾಗಿ ನೀಡಲಾಗುತ್ತದೆ.

ಕಾರು ಅಪಘಾತದ ಪರೀಕ್ಷೆಗಾಗಿ

ಕಾರು ಅಪಘಾತದ ಪರೀಕ್ಷೆಗಾಗಿ

ಯಾವುದೇ ಕಾರು ಮಾರುಕಟ್ಟೆಗೆ ಬರುವ ಮೊದಲು ಕೆಲವಾರು ಸುರಕ್ಷಾ ಪರೀಕ್ಷೆಗಳನ್ನು ಎದುರಿಸಿ ತೇರ್ಗಡೆಯಾಗಬೇಕಾಗುತ್ತದೆ. ಈ ಪರೀಕ್ಷೆಗಳಲ್ಲಿ ಮಾನವರು ಕುಳಿತುಕೊಳ್ಳುವಲ್ಲಿ ಮಾನವ ಗಾತ್ರದ ಗೊಂಬೆಗಳನ್ನು ಇರಿಸಿ ಕೃತಕ ಅಪಘಾತ ನಡೆಸಿ ಜಖಂಗೊಂಡ ವಾಹನದ ಕೂಲಂಕಶ ತಪಾಸಣೆ ಹಾಗೂ ಇದರಿಂದ ಕನಿಷ್ಟ ಅಪಾಯವಾಗುವಂತೆ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಆಘಾತ ಮಾನವ ದೇಹದ ಮೇಲೆ ಎಷ್ಟು ಮಟ್ಟಿಗೆ ಗಹನವಾಗಿ ಆಗುತ್ತದೆ ಎಂಬುದನ್ನು ಈ ಗೊಂಬೆಗಳ ಮೂಲಕ ಪಡೆಯಲು ಸಾಧ್ಯವಿಲ್ಲ. ಜೀವಂತವಿರುವವರನ್ನು ಬಳಸುವಂತೆಯೂ ಇಲ್ಲ. ಹಾಗಾಗಿ ಶವಗಳನ್ನು ಬಳಸಿ ಪರೀಕ್ಷೆ ನಡೆಸಿ ಆಘಾತದ ವಿವರ ಹಾಗೂ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ.

English summary

Unusual Ways In Which A Dead Body Can Be Used

When we lose our loved ones, departing from them forever seems to be so unreal. We tend to hold them or find a way where we can have them around us. In this state, there are different ways that one can have their departed loved one by their side forever. From making jewels out of the dead to making fertilizers to having seeds grown, there are different ways that people find of making use of dead bodies and thereby not wanting to let go of their dear ones.
Story first published: Tuesday, November 28, 2017, 10:30 [IST]
X
Desktop Bottom Promotion