Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈದ್ಯರಿಗೇ ಶಾಕ್!! ಇವನ ಬಾಯಲ್ಲಿ ಬರೋಬ್ಬರಿ 232 ಹಲ್ಲುಗಳು ಇತ್ತು!
ಮನುಷ್ಯನ ಬಾಯಿಯಲ್ಲಿ ಎಷ್ಟು ಹಲ್ಲುಗಳು ಇರುತ್ತವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಹುಟ್ಟಿದ ಬಳಿಕ ಕೆಲವು ತಿಂಗಳಲಲ್ಲಿ ಬರುವಂತಹ ಹಲ್ಲುಗಳು ಮತ್ತೆ ಉದುರು ಹೋಗಿ ಹೊಸ ಹಲ್ಲುಗಳು ಬರುವುದು. ಹೀಗೆ ಬರುವ ಹಲ್ಲುಗಳು ಮತ್ತೆ ಉದುರುವುದು ವೃದ್ಧಾಪ್ಯದ ವೇಳೆಗೆ.
ಇಲ್ಲಿ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಹಲ್ಲಿನ ಬಗ್ಗೆ ಅಲ್ಲ, 232 ಹಲ್ಲುಗಳನ್ನು ಹೊಂದಿರುವ ಅಶಿಕ್ ಗವಾಯಿ ಎನ್ನುವವನ ಬಗ್ಗೆ. ಇದನ್ನು ಓದುತ್ತಾ ನಿಮಗೆ ಅಚ್ಚರಿಯಾಗಿರಬಹುದು. ಆದರೆ ಈತನ ಹಲ್ಲುಗಳನ್ನು ನೋಡಿರುವ ವೈದ್ಯರು ಕೂಡ ಬೆಸ್ತು ಬಿದ್ದಿದ್ದಾರೆ. ಬಾಲಕನ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿ.....

ಆತನಿಗೆ ತನ್ನ ಸ್ಥಿತಿ ಬಗ್ಗೆ ತಿಳಿದಿರಲಿಲ್ಲ
ಸುಮಾರು 18 ತಿಂಗಳ ಕಾಲ ಆಶಿಕ್ ಬಾಯಿ ಮತ್ತು ದವಡೆ ನೋವಿನಿಂದ ಬಳಲುತ್ತಾ ಇದ್ದ. ಈತನ ಸ್ಥಿತಿಗೆ ಸರಿಯಾದ ಕಾರಣ ತಿಳಿಯಲು ಗ್ರಾಮದ ವೈದ್ಯರಿಗೆ ಸಾಧ್ಯವಾಗದಿರುವ ಕಾರಣ ಆತ ನಗರಕ್ಕೆ ಬಂದು ಪರೀಕ್ಷಿಸಿದ.

ಆತ ವೈದ್ಯಕೀಯ ಪರಿಸ್ಥಿತಿಯಿಂದ ಬಳಲುತ್ತಿದ್ದ
ಆತ ಒಡೊಂಟೊಮಾಸ್ ಎನ್ನುವ ವೈದ್ಯಕೀಯ ಪರಿಸ್ಥಿತಿಯಿಂದ ಬಳಲುತ್ತಿದ್ದ. ಈ ಪರಿಸ್ಥಿತಿಯಲ್ಲಿ ಅವ್ಯವಸ್ಥಿತವಾಗಿ ಬಾಯಿ ತುಂಬಾ ಹಲ್ಲುಗಳು ಬೆಳೆಯುತ್ತವೆ. ದಂತಕವಚ ಮತ್ತು ದಂತದ್ರವ್ಯದಿಂದ ಕೂಡಿರುವಂತಹ ಹಳದಿ ಬಣ್ಣದ ಬಣ್ಣದ ಅಂಗಾಂಶವು ಹಲ್ಲುಗಳ ಬೆಳವಣಿಗೆಗೆ ನೆರವಾಗುವುದು.

ಶಸ್ತ್ರಚಿಕಿತ್ಸೆ
ಈ ಸ್ಥಿತಿಯನ್ನು ಪರೀಕ್ಷಿಸಲು ಎಷ್ಟು ಕಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನು ತುಂಡು ಮಾಡಲು ಸಾಧ್ಯವಾಗದೆ ಇರುವ ಕಾರಣದಿಂದಾಗಿ ಸಾಮಾನ್ಯ ಉಳಿ ಮತ್ತು ಸುತ್ತಿಗೆ ಬಳಸಿದೆವು. ಸ್ವಲ್ಪ ಇದನ್ನು ತೆಗೆಯುತ್ತಿದ್ದಂತೆ ಮುತ್ತಿನಂತಹ ಹಲ್ಲುಗಳು ಕಾಣಿಸಿಕೊಂಡಿವೆ. ಒಂದೊಂದನ್ನೇ ತೆಗೆಯುತ್ತಾ ಹೋದಾಗ ಇವುಗಳು ಸಣ್ಣ ಮುತ್ತಿನಂತಿದ್ದವು. ಎಲ್ಲವನ್ನು ಸಂಗ್ರಹಿಸುವ ವೇಳೆ ತುಂಬಾ ಸುಸ್ತಾಗಿತ್ತು. ಸುಮಾರು 232 ಹಲ್ಲುಗಳನ್ನು ಸಂಗ್ರಹಿಸಿದ್ದೆವು ಎಂದು ವೈದ್ಯರು ಹೇಳಿದ್ದಾರೆ.

ಆತ ಅದೃಷ್ಟವಂತ
ಯುವಕನಾಗಿರುವ ಕಾರಣದಿಂದಾಗಿ ವೈದ್ಯಕೀಯ ತಜ್ಞರಿಗೆ ಎಲ್ಲಾ 232 ಹಲ್ಲುಗಳನ್ನು ತೆಗೆಯಲು ಸಾಧ್ಯವಾಗಿದೆ. ದವಡೆಯ ಮೂಳೆಗಳ ವಿನ್ಯಾಸವು ಅದೇ ರೀತಿ ಉಳಿದುಕೊಂಡಿದೆ. ಒಂಡೊಟೊಮಾಸ್ ಮರಳಿ ಬರುವುದಿಲ್ಲವೆನ್ನುವುದು ಧನಾತ್ಮಕ ವಿಚಾರ. ಆತ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ.



Click it and Unblock the Notifications
