ರಾಶಿ ಚಕ್ರದ ಆಧಾರದ ಮೇಲೆ ಸ್ವಭಾವ ಹಾಗೂ ಕಾರ್ಯಗಳ ಸಿದ್ಧಿ ರೂಪ

By: Divya pandith
Subscribe to Boldsky

ನಮ್ಮವರು ಎಂದಾಗ ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು, ಅವರ ಸ್ವಭಾವ ಹಾಗೂ ನಮ್ಮ ಸ್ವಭಾವಕ್ಕೆ ಸಾಮ್ಯತೆ ಇದೆಯೇ? ಎನ್ನುವ ವಿಚಾರದ ಬಗ್ಗೆ ತುಲನೆ ಮಾಡಿಕೊಳ್ಳಬೇಕಾಗುವುದು. ಇಂತಹ ಲೆಕ್ಕಚಾರಕ್ಕೆ ಸಹಾಯ ಮಾಡುವ ಒಂದು ಪರಿ ಎಂದರೆ ಅದು ರಾಶಿಚಕ್ರಗಳ ಮೊರೆ ಹೋಗುವುದು.

ರಾಶಿ ಭವಿಷ್ಯ: ರಾಶಿ ಚಕ್ರದಲ್ಲಿ ಅಡಗಿದೆ ನಿಮ್ಮ ಕೆಟ್ಟ ಚಟಗಳ ಗುಟ್ಟು!

ಪ್ರತಿಯೊಬ್ಬರ ವರ್ತನೆ ಹಾಗೂ ಗುಣಗಳು ಅವರ ರಾಶಿ ಚಕ್ರಕ್ಕೆ ಅನ್ವಯವಾಗಿರುತ್ತದೆ. ಅದರಂತೆಯೇ ಸ್ವಭಾವವೂ ರೂಢಿಯಾಗಿರುತ್ತದೆ ಎನ್ನಲಾಗುವುದು. ಹೌದು, ಇಂತಹ ಒಂದು ವಿಶೇಷ ವಿಧಾನದಿಂದ ಸ್ವಭಾವವನ್ನು ತಿಳಿದುಕೊಳ್ಳುವುದು ಹೇಗೆ? ಎನ್ನುವ ಕಿರು ಬರಹವನ್ನು ನಾವಿಲ್ಲಿ ನೀಡಿದ್ದೇವೆ. ನೀವು ನಿಮ್ಮ ದೌರ್ಬಲ್ಯ ಹಾಗೂ ನಿಮ್ಮವರ ಸ್ವಭಾವವನ್ನು ರಾಶಿಚಕ್ರದೊಂದಿಗೆ ತಾಳೆ ಮಾಡಿ ನೋಡಿ, ನಿಜವನ್ನು ಅರಿಯಬಹುದು..... 

ಮೇಷ

ಮೇಷ

ಇವರು ಅತ್ಯಂತ ಧೈರ್ಯಶಾಲಿಗಳು. ಭವಿಷ್ಯದಲ್ಲಿ ಯಾವ ಯೋಜನೆ ಕೆಲಸ ಮಾಡಬಹುದು ಅಥವಾ ಇಲ್ಲಾ ಎನ್ನುವ ವಿಚಾರದ ಬಗ್ಗೆ ಸೂಕ್ಷ್ಮವಾಗಿಯೇ ನಿರ್ಧರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹೆಚ್ಚು ವಾಸ್ತವಿಕವಾದ ನಿಲುವು ಹಾಗೂ ಚಿಂತನೆಗಳನ್ನು ಹೊಂದಿರುತ್ತಾರೆ. ಇವರ ಸಾಧನೆಗೆ ಇವರ ಸ್ಫೂರ್ತಿದಾಯಕ ವಿಧಾನವೂ ಕಾರಣವಾಗಿರುತ್ತದೆ.

ವೃಷಭ

ವೃಷಭ

ಇವರ ಕೆಲವು ಭಾವನೆಗಳು ಹಾಗೂ ನಿರ್ಧಾರಗಳು ವಿವೇಚನೆ ಹಾಗೂ ಸ್ಥಿರತೆಯಿಂದ ಕೂಡಿರುವ ಒಂದು ಬಂಡೆಕಲ್ಲು ಎಂದು ಹೇಳಬಹುದು. ಇವರು ಸಾಮಾನ್ಯವಾಗಿ ಒಂದು ವಿಚಾರದ ಬಗ್ಗೆ ಎರಡು ಬಾರಿ ಪರೀಕ್ಷಿಸುತ್ತಾರೆ. ಆಳವಾಗಿ ಬೇರೂರಿದ ಓಕ್ ಮರ ಗಾಳಿ ಬಂದಾಗ ತೂರಾಡುತ್ತಾ ಬಾಗುವಂತೆ, ಇವರು ಕೆಲವೊಂದು ವಿಚಾರಕ್ಕೆ ನಟನೆ ಮಾಡುತ್ತಾರೆ. ಇವರು ಇವರ ಹೃದಯದ ಮಾತನ್ನು ಕೇಳಿದರೆ ಇವರ ಆಂತರಿಕ ಶಕ್ತಿ ಹೆಚ್ಚುವುದು.

ಮಿಥುನ

ಮಿಥುನ

ಇವರು ಒಂದು ಮಹಾನ್ ಚಿಂತಕರು ಹಾಗೂ ಭಾಷಣಕಾರರು ಎಂದು ಹೇಳಬಹುದು. ಸದಾ ಮುಂದೆ ಸಾಗಲು ಇಚ್ಛಿಸುವ ಇವರು ಬದಲಾವಣೆಗಾಗಿ ಬೇಸರ ವ್ಯಕ್ತ ಪಡಿಸುವುದಿಲ್ಲ. ಪ್ರಸ್ತುತ ಯೋಜನೆಯ ಬಗ್ಗೆ ಆಳವಾಗಿ ಚಿಂತಿಸಲು ಅಥವಾ ಅದನ್ನು ಕೈಗೊಳ್ಳಲು ಪ್ರಯತ್ನಿಸುವುದಿಲ್ಲ. ಮಣ್ಣಿನಲ್ಲಿ ಗೀಚುವ ಕೋಲಿನಂತೆ ತಮ್ಮ ಆಲೋಚನೆಗಳಲ್ಲಿ ಪುನಃ ಹಿಂತಿರುಗಲಾರರು. ತಮ್ಮ ಪ್ರಯತ್ನ ಸೂಕ್ತವಾಗಿದೆ ಎಂದು ಭಾವಿಸುತ್ತಾರೆ.

ಕರ್ಕ

ಕರ್ಕ

ಸೂಕ್ಷ್ಮ ಮತ್ತು ಸೃಜನಶೀಲರಾದ ಇವರು ಹತಾಶೆಯ ಭಾವನೆಯಲ್ಲಿ ಸಕ್ರಿಯರಾಗಿರುತ್ತಾರೆ. ಇವರು ಹೃದಯದ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ನಿರ್ದಯೆಯ ಭಾವನೆ ಇವರ ಗೊಂದಲವನ್ನು ಮುಚ್ಚುತ್ತದೆ. ಸನ್ನಿವೇಶದ ಬಗ್ಗೆ ಸೂಕ್ತ ನಿರ್ಧಾರ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಇವರಿಗಿದೆ ಎನ್ನಬಹುದು.

 ಸಿಂಹ

ಸಿಂಹ

ಸದಾ ಹೊರಗಡೆ ಸಂಚಾರದಲ್ಲೇ ಇರಲು ಬಯಸುವ ಇವರು ನೈಸರ್ಗಿಕವಾಗಿಯೇ ಆಶಾವಾದಿಗಳು. ಒಂದು ಕಾರ್ಯಕ್ಕೆ ಕೈ ಹಾಕುವ ಮುನ್ನ ಅಥವಾ ವಿಚಾರವನ್ನು ವ್ಯಕ್ತ ಪಡಿಸುವ ಮುನ್ನ ಇವರು ಹೆಚ್ಚು ಚಿಂತಿಸಬೇಕಾಗುವುದು. ಸೂಕ್ತವಾದ ಸಮಯದಲ್ಲಿ ನಿಮ್ಮ ವೈಯಕ್ತಿಕ ವಿಚಾರಕ್ಕೆ ಮಹತ್ವವನ್ನು ನೀಡಿದರೆ, ಪ್ರತಿಯೊಬ್ಬರೂ ನೀವು ಅದ್ಭುತ ವ್ಯಕ್ತಿ ಎಂದು ಗುರುತಿಸುವರು. ಇದನ್ನು ನೀವೇ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು.

ಕನ್ಯಾ

ಕನ್ಯಾ

ಇವರು ಇವರಲ್ಲಿ ಅಡಗಿರುವ ಚಿಂತನೆ ಹಾಗೂ ದುಃಖವನ್ನು ಇವರೇ ಗುರುತಿಸಬೇಕು. ನಿಮ್ಮಲ್ಲಿರುವುದಕ್ಕಿಂತ ಹೆಚ್ಚು ದೃಢವಾಗಿ ಮತ್ತು ಕ್ರಿಯಾತ್ಮಕವಾಗಿ ಆಶಾದಾಯಕರಾಗಿ ವರ್ತಿಸಬಹುದು. ಇವರ ಹೊಸ ಚೈತನ್ಯವು ಇವರನ್ನು ಹೊಸ ವಿಜಯಕ್ಕೆ ಗುರಿಮಾಡುತ್ತದೆ.

ತುಲಾ

ತುಲಾ

ಇವರು ಸ್ನೇಹಶೀಲ ಮತ್ತು ಆಕರ್ಷಕ ಭಾಷಣಕಾರರಾಗಿದ್ದು, ನೈಸರ್ಗಿಕವಾಗಿಯೇ ಮಧ್ಯವರ್ತಿಗಳು ಎಂದು ಹೇಳಬಹುದು. ನಿಮ್ಮ ಮೇಲೆ ಅನುಮೋದನೆ ಪಡೆಯುವುದು ಮತ್ತು ಗೌರವಾನ್ವಿತರಾಗಿರುವುದನ್ನು ಮರೆತು ಬಿಡಿ. ಬೇರೆಯವರ ಕೊಳಕು ಮತ್ತು ಇರತ ಸಮಸ್ಯೆಯನ್ನು ಗುರುತಿಸಿ ಪರಿಹರಿಸುವ ಮೊದಲು ನೀವು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಮೊದಲು ಕೇಂದ್ರಿಕರಿಸಬೇಕು.

ವೃಶ್ಚಿಕ

ವೃಶ್ಚಿಕ

ಇವರು ಭಾವೋದ್ರಿಕ್ತ ಸ್ವಭಾವದಲ್ಲಿ ಜೀವಿಸುತ್ತಾರೆ. ಇವರು ಕೆಲವು ದೃಢವಾದ ಭಾವನೆಯನ್ನು ಹೊಂದಿರಬೇಕಾದ ಅಗತ್ಯವಿದೆ. ಇವರು ತೋರುವ ಭಾವನೆಗಳು ತೋರಿಕೆಗಾಗಿರುವುದಿಲ್ಲ. ಆದರೆ ತೋರಿಕೆ ರೀತಿಯಲ್ಲಿ ಇರುವವರು ತನ್ನ ಸ್ವಭಾವಕ್ಕೆ ಬೇರೆ ಆಯಾಮವನ್ನು ಸೇರಿಸಿ ಮಾತನಾಡುತ್ತಾರೆ ಎಂದು ಭಾವಿಸುತ್ತಾರೆ.

ಧನು

ಧನು

ಉತ್ಸಾಹಿಗಳಾದ ಇವರು ಭರವಸೆ ಮತ್ತು ಪ್ರಕ್ಷುಬ್ಧವಾಗಿ ವರ್ತಿಸುತ್ತಾರೆ. ಇವರು ವಾಸ್ತವಿಕವಾಗಿ ಕನಸು ಕಂಡರೂ ಅದರಲ್ಲಿ ತೊಡಕಾಗುವುದು ಎಂದು ಭಾವಿಸುತ್ತಾರೆ. ಇವರು ತಮ್ಮ ಸ್ಫೂರ್ತಿಯಮೇಲೆ ಮಿತಿಯನ್ನು ಹೇರಿಕೊಳ್ಳಬಾರದು. ಬದಲಿಗೆ ಕಡಿಮೆ ಚಿಂತನೆಗೆ ಒಳಗಾದರೆ ಒಳಿತು.

ಮಕರ

ಮಕರ

ಇವರು ಸಹ ಸಂವೇದನಾ ಶೀಲರು ಹಾಗೂ ಮಹತ್ವಾಕಾಂಕ್ಷಿಗಳು ಎಂದು ಹೇಳಬಹುದು. ಇವರು ದೂರದೃಷ್ಟಿಯನ್ನು ಆಂತರಿಕವಾಗಿ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ತಮ್ಮ ಕನಸನ್ನು ಪೋಷಿಸಿ, ಗುರಿ ತಲುಪುತ್ತೇನೆ ಎಂಬ ನಂಬಿಕೆ ಬೆಳೆಸಿಕೊಳ್ಳಬೇಕು. ನಿರಾಸೆಯ ಭಾವನೆಯಲ್ಲಿಯೇ ಹೆಚ್ಚಾಗಿ ಇರುವ ಇವರು ಆಶಾವಾದಗಳನ್ನು ಬೆಳೆಸಿಕೊಳ್ಳಬೇಕು. ಕೆಲವು ಸ್ವಾಭಾವಿಕ ಸಂತೋಷಗಳು ಇವರ ಜೀವನದಲ್ಲಿ ಕೈಗೂಡಿ ಬರುತ್ತವೆ.

ಕುಂಬ

ಕುಂಬ

ಇವರು ಸದಾ ಶಾಂತ ಚಿತ್ತರಾಗಿ ಹಾಗೂ ದೃಢ ಸ್ವಭಾವದವರಾಗಿರುತ್ತಾರೆ. ಕೆಲವೊಮ್ಮೆ ತಮ್ಮ ಸ್ವಭಾವ ಹಾಗೂ ಗುರಿಯ ಬಗ್ಗೆ ಹೆದರಿಕೆಗೆ ಒಳಗಾಗುತ್ತಾರೆ. ಇದರ ಅಗತ್ಯ ಇಲ್ಲ. ನಿಮ್ಮ ಗುರಿಯೇ ನಿಮ್ಮ ಬಯಕೆಯನ್ನು ಈಡೇರಿಸುತ್ತದೆ. ಹೃದಯ, ಧೈರ್ಯ, ಆರೋಗ್ಯ ಚಿಂತನೆಯಿಂದ ಹೊರ ಬಂದು ಚಿಂತಿಸಿದರೆ ಒಳ್ಳೆಯದು.

ಮೀನ

ಮೀನ

ಇವರು ಬ್ರಹ್ಮಾಂಡ ಹಾಗೂ ಸಾಗರಗಳ ಜೀವಿಗಳು ಎಂದು ಹೇಳಬಹುದು. ಇವರ ಮಾರ್ಗವನ್ನು ಇವರು ಬಹು ಸುಲಭವಾಗಿ ಕಂಡುಕೊಳ್ಳುತ್ತಾರೆ. ಕಲ್ಪನೆಯಲ್ಲಿರುವ ಕನಸುಗಳನ್ನು ಆದಷ್ಟು ವಾಸ್ತವಿಕ ರೂಪಕ್ಕೆ ತರಲು ಪ್ರಯತ್ನಿಸಬೇಕು. ಅವು ಕಡಿಮೆ ಪ್ರಮಾಣದಲ್ಲಿ ಸಾಧ್ಯವಾಗಬಹುದಾದರೂ ಪರಿಪೂರ್ಣ ಫಲಿತಾಂಶ ದೊರೆಯುವುದು. ಆತ್ಮವಿಶ್ವಾಸದಿಂದ ಸಾಗಬೇಕಷ್ಟೆ.

English summary

Traits That Define Each Zodiac Sign

Learning about zodiac signs makes it easy to understand a person. When it comes to understanding their characterstic, all one needs to find out is about the particular traits of the zodiac sign, which are more or less common for each zodiac. This piece of writing reveals the weak points and a few general aspects of each zodiac sign. These are the signs that are like a signature definition of each zodiac sign.
Subscribe Newsletter