ಅಚ್ಚರಿ ಜಗತ್ತು: ಈ ವ್ಯಕ್ತಿಗೆ 54 ಮಕ್ಕಳು ಮತ್ತು 6 ಪತ್ನಿಯರಂತೆ!!

By: manu
Subscribe to Boldsky

ಬೆಲೆ ಏರಿಕೆ, ಅತಿಯಾದ ಖರ್ಚಿನಿಂದ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಒಂದು ಮಗು ಸಾಕು ಎಂದು ಅಂದುಕೊಳ್ಳುತ್ತಾರೆ. ಹೆಚ್ಚು ಮಕ್ಕಳಾದರೆ ಅವರನ್ನು ಸರಿಯಾಗಿ ಸಾಕಲು ಕಷ್ಟವಾಗುವುದು ಎನ್ನುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುವರು. ಆದರೆ ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಕುಟುಂಬ ದೊಡ್ಡದು ಇದ್ದಷ್ಟು ಚಂದ ಎನ್ನುತ್ತಿದ್ದಾನೆ..! 

ಈಗಾಗಲೇ ಆರು ಮದುವೆಯಾಗಿರುವ ಈತ 54 ಮಕ್ಕಳಿಗೆ ತಂದೆಯಾಗಿದ್ದಾನೆ. ಲಾರಿ ಚಾಲಕನಾಗಿರುವ ಈತನಿಗೆ ಆರು ಮಂದಿ ಪತ್ನಿಯರು ಹಾಗೂ 54 ಮಂದಿ ಮಕ್ಕಳನ್ನು ಸಾಕುವುದೇ ಈಗ ದೊಡ್ಡ ತಲೆನೋವಾಗಿದೆ. 70ರ ಹರೆಯದ ಈತ ದೈನಂದಿನ ಖರ್ಚುವೆಚ್ಚ ಸರಿದೂಗಿಸಲು ಭಾರೀ ಕಷ್ಟಪಡುತ್ತಿದ್ದಾನೆ. ಈತನಿಗೆ ಒಬ್ಬ ಮಗ ಮಾತ್ರ ಹಣ ಸಂಪಾದಿಸಲು ನೆರವಾಗುತ್ತಿದ್ದಾನೆ. ಇದರ ಬಗ್ಗೆ ಮತ್ತಷ್ಟು ಓದಿಕೊಳ್ಳಿ...

ತುಂಬಾ ಕುಟುಂಬ

ತುಂಬಾ ಕುಟುಂಬ

ಅಬ್ದುಲ್ ಮಜೀದ್ ಮೆಂಗಲ್ ಮತ್ತು ಆತನ ಬಹುದೊಡ್ಡ ಕುಟುಂಬವು ಏಳು ಕೋಣೆಗಳ ಮನೆಯಲ್ಲಿ ವಾಸವಾಗಿದೆ. ಇಲ್ಲಿ ಮಕ್ಕಳು ತಮ್ಮ ತಾಯಂದಿರೊಂದಿಗೆ ಪ್ರತ್ಯೇಕವಾಗಿ ಮಲಗುತ್ತಾರೆ. ತುಂಬಾ ಬಡತನದ ಕುಟುಂಬವಾಗಿರುವ ಇಲ್ಲಿನ ಮಕ್ಕಳು ಶಾಲೆಗೆ ಕೂಡ ಹೋಗುತ್ತಿಲ್ಲ.

ಆತ ಮತ್ತು ಹಿರಿಯ ಮಗ ಮಾತ್ರ ಸಂಪಾದಿಸುವುದು

ಆತ ಮತ್ತು ಹಿರಿಯ ಮಗ ಮಾತ್ರ ಸಂಪಾದಿಸುವುದು

ಈ ದೊಡ್ಡ ಕುಟುಂಬದಲ್ಲಿ ಮಜೀದ್ ಮತ್ತು ಆತನ 34ರ ಹರೆಯದ ಮಗ ಅಬ್ದುಲ್ ಮಾತ್ರ ಸಂಪಾದನೆ ಮಾಡುತ್ತಾರೆ. ಮೂಲಗಳ ಪ್ರಕಾರ ಇಬ್ಬರು ಪತ್ನಿಯರು ಮತ್ತು 12 ಮಕ್ಕಳು ಸಾವನ್ನಪ್ಪಿದ್ದಾರೆ. ಅನಾರೋಗ್ಯದ ವೇಳೆ ಚಿಕಿತ್ಸೆ ನೀಡಲು ಹಣವಿಲ್ಲದಿದ್ದ ಕಾರಣದಿಂದ ಈ ಘಟನೆ ನಡೆದಿದೆ.

ಸಂಪಾದನೆ

ಸಂಪಾದನೆ

ಮಜೀದ್ ತಿಂಗಳಲ್ಲಿ 10ರಿಂದ 15 ರೂಪಾಯಿ ಮಾತ್ರ ಸಂಪಾದನೆ ಮಾಡುತ್ತಾನೆ. ಇಷ್ಟು ದೊಡ್ಡ ಕುಟುಂಬವನ್ನು ಸಲಹಲು ಇದು ಸಾಕಾಗಲ್ಲ. ಎಲ್ಲಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆಂದು ಬಯಸಿದ್ದ ಮಜೀದ್ ಹಣಕಾಸಿನ ಮುಗ್ಗಟ್ಟಿನಿಂದಾಗಿ ಇದು ಸಾಧ್ಯವಾಗಿಲ್ಲ. ಈ ವಾಸ್ತವ ಕಥೆಯ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಸಂಪಾದನೆ

ಸಂಪಾದನೆ

ಮಜೀದ್ ತಿಂಗಳಲ್ಲಿ 10ರಿಂದ 15 ರೂಪಾಯಿ ಮಾತ್ರ ಸಂಪಾದನೆ ಮಾಡುತ್ತಾನೆ. ಇಷ್ಟು ದೊಡ್ಡ ಕುಟುಂಬವನ್ನು ಸಲಹಲು ಇದು ಸಾಕಾಗಲ್ಲ. ಎಲ್ಲಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆಂದು ಬಯಸಿದ್ದ ಮಜೀದ್ ಹಣಕಾಸಿನ ಮುಗ್ಗಟ್ಟಿನಿಂದಾಗಿ ಇದು ಸಾಧ್ಯವಾಗಿಲ್ಲ. ಈ ವಾಸ್ತವ ಕಥೆಯ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

This Pakistani Man Has An Unbelievable Number Of 54 Kids-6 Wives

Can you imagine of having a big family and then realise that people do have HUGE families than yours? A truck driver from Pakistan is trying hard to meet his ends, as he has 54 children and 6 wives to look after! This man is now 70 years old and yet is struggling to cope up with his daily life, as only one son of his is helping him in earning money. Read on to find out more.
Subscribe Newsletter