ಸಿಂಪಲ್ಲಾಗ್ ಒಂದು ಹುಡುಗ-ಹುಡುಗಿಯ ವೈರಲ್ ಆದ ಲವ್ ಸ್ಟೋರಿ!

By: manu
Subscribe to Boldsky

ವಿಶ್ವ ಸುಂದರಿಯ ಗಂಡನಾ? ಇಲ್ಲವೇ ಭುವನ ಸುಂದರಿಯ ಗಂಡನಾ? ಹೋಗಲಿ ಮಿಸ್ ಇಂಡಿಯಾ, ಮಿಸ್ ಯುಎಸ್, ಮಿಸ್ ಯುಕೆಯ ಗಂಡನಾದನೇ? ಅದೂ ಇಲ್ಲ ಸ್ವಾಮಿ! ನಾವು ಹೇಳುತ್ತಿರುವುದು ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಸುಂದರಿ ಮತ್ತು ಆತನ ಗಂಡನ ಬಗ್ಗೆ. ಪ್ರೇಮ ಕುರುಡು ಎಂಬುದಕ್ಕೆ ಮತ್ತೊಂದು ಹೊಸ ನಿದರ್ಶನವಾಗಿ ಸೇರ್ಪಡೆಯಾಗಿರುವ ಕಥೆ ಇದು.  ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ನಾವು ಹಂಚಿಕೊಂಡಿರುವ ಚಿತ್ರಗಳನ್ನು ನೋಡಿ, ನಾವು ಹೇಳುವ ಕತೆ ನಿಮಗೆ ಅರ್ಥವಾದೀತು. "ಪ್ರೀತಿ ಮಾಯ ಬಜಾರೋ..." ಬನ್ನಿ ಮುಂದೆ ನೋಡೋಣ. ದಂತದ ಗೊಂಬೆಯು ನಾಚುವಂತಹ ಬೆಡಗಿಯ ಕೈ ಹಿಡಿದ ಈ ಹುಡುಗನ ಬಗ್ಗೆ ವಿಶ್ವದ ಎಲ್ಲಾ ಹುಡುಗರು ಅಸೂಯೆಪಡುತ್ತಿದ್ದಾರೆ ಎಂದು ಆನ್‌ಲೈನ್ ಅಸೂಯೆ ಅಂಕಿ ಅಂಶಗಳು ವರದಿ ಮಾಡುತ್ತಿವೆ!. ಬಹುಶಃ ನಿಮಗೂ ಅಸೂಯೆ ಶುರುವಾಗಿರಬಹುದಲ್ಲವೇ? ಮುಂದೆ ಓದಿ ಸಿಂಪಲ್ಲಾಗ್ ಒಂದು ಸುಂದರಿಯ ಲವ್ ಸ್ಟೋರಿ.....  

ಆಕೆ ಅಪ್ಸರೆ

ಲೂಸಿ ಲವ್‍ಎಲ್ಲಾ ಎಂಬ ಸುಂದರಿಯನ್ನು ಭೂಲೋಕದ ಅಪ್ಸರೆ ಎಂದು ಹೇಳಬಹುದು. ಆಕೆಯು ಅಪ್ಸರೆಯರು ನನ್ನಂತೆ ಇರಬಹುದು ಎಂದು ಹೇಳಿಕೊಳ್ಳುವ ಕೆಲವರ ಪೈಕಿ ಒಬ್ಬಳಾಗಿದ್ದಾಳೆ. ಈಕೆ ತನ್ನ ಗಂಡ ಮತ್ತು ಮಗಳ ಜೊತೆಗೆ ತೆಗೆದುಕೊಂಡ ಫೋಟೋಗಳೇ ಈಗ ನಾವು ಹೇಳುತ್ತಿರುವ ಕತೆ.

ಆಕೆಯ ಫೇಸ್‌ಬುಕ್ ಹೇಳುತ್ತಿದೆ ನೂರಾರು ಕಥೆಗಳನ್ನು....

ಆಕೆಗೆ ಈಗಾಗಲೇ 90,000 ಹಿಂಬಾಲಕರಿದ್ದಾರೆ!. ನೀವು ಈ ಲೇಖನವನ್ನು ಓದುವುದರೊಳಗೆ ಅದು ಇನ್ನೂ ಹೆಚ್ಚಾಗಿರುತ್ತದೆ. ಜೊತೆಗೆ ಆಕೆ ಸೌಂದರ್ಯ ಮತ್ತು ತ್ವಚೆಯ ರಕ್ಷಣೆಗಾಗಿ ಒಂದು ಸಂಸ್ಥೆ ಸಹ ನಡೆಸುತ್ತಿದ್ದಾಳೆ.

ಆಕೆಯ ಪೋಸ್ಟ್ ವೈರಲ್ ಆಗಿದೆ..

ಆಕೆ ತನ್ನ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾಳೆ ಮತ್ತು ಅದೀಗ ವಿಶ್ವದಾದ್ಯಂತ ವೈರಲ್ ಆಗಿದೆ. ಜನ ಇವರ ಬಗ್ಗೆ ಎಷ್ಟು ಆಸಕ್ತಿಯನ್ನು ಹೊಂದಿದ್ದಾರೆ ಎಂದರೆ ಈಗಾಗಲೇ 36,000 ಲೈಕ್‌ಗಳು, 21,000 ಶೇರ್‌ಗಳು ಮತ್ತು ಆಲ್ಬಂ ಮೇಲೆ 4000 ಕಾಮೆಂಟ್‌ಗಳು ಬಂದಿವೆ.

ಮಿಶ್ರ ಪ್ರತಿಕ್ರಿಯೆಗಳ ಮಹಾಪೂರ

ಲೂಸಿಯ ಫೋಟೋಗಳನ್ನು ನೋಡಿ "ನೆಟಿಜನರು" ಹಲವಾರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಹುತೇಕ ಜನ ಈ ಸುಂದರಿಗೆ ಮನಸೋತು ಕಾಮೆಂಟ್ ಮಾಡಿದ್ದರೇ, ಅದಕ್ಕಿಂತ ಹೆಚ್ಚಿನ ಜನ ಆಕೆಯ ಗಂಡ ಭೂಲೋಕದ "ಅದೃಷ್ಟವಂತ" ಎಂದು ಕಾಮೆಂಟ್ ಮಾಡಿದ್ದಾರೆ.

ಟೀಕೆಗಳಿಗೆ ಇವರು ಡೋಂಟ್ ಕೇರ್!!

ಫ್ನೋಮ್ ಫೆನ್ಃ, ಕಾಂಬೋಡಿಯಾದಲ್ಲಿ ನೆಲೆಸಿರುವ ಇವರಿಗೆ ಹಲವಾರು ರೀತಿಯ ಟೀಕೆಗಳು ಬಂದರೂ ಅನ್ಯೋನ್ಯವಾಗಿ ಇಂದಿಗೂ ಬದುಕುತ್ತಿದ್ದಾರೆ. ಆ ಮೂಲಕ ಪ್ರೀತಿಯ ಸಂದೇಶವನ್ನು ಎತ್ತಿ ಹಿಡಿದಿದ್ದಾರೆ. ಮತ್ತಷ್ಟು ಫೋಟೋಗಳನ್ನು ಆಕೆಯ ಸಾಮಾಜಿಕ ಜಾಲ ತಾಣದಲ್ಲಿ ನೋಡಿ.

 
English summary

This-guy-has-the-most-beautiful-wife-and-the-world-is-jealous-about-it

Love is blind and this perfect couple proves it right by sharing their happiness with the world. Check out the beautiful images of the couple…
Subscribe Newsletter