For Quick Alerts
ALLOW NOTIFICATIONS  
For Daily Alerts

ಈಕೆಗೆ ಇದೆ ಒಂದು ವಿಚಿತ್ರ ಕಾಯಿಲೆ-ಕೇಳಿದರೆ ಅಚ್ಚರಿ ಪಡುವಿರಿ!

ನಂಬುತ್ತೀರೋ, ಬಿಡುತ್ತೀರೋ, ಆದರೆ ಇದು ಮಾತ್ರ ನಿಜ, ಈಕೆ ಪ್ರತೀ ಆರು ವಾರಕ್ಕೊಮ್ಮೆ ತನ್ನ ಚರ್ಮವನ್ನು ಸುಳಿದುಕೊಳ್ಳುತ್ತಾಳಂತೆ! ಏನಿದು ವಿಚಿತ್ರ? ಮುಂದೆ ಓದಿ....

|

ಹಳ್ಳಿಗಳಲ್ಲಿ ಅಥವಾ ಕಾಡಿನಲ್ಲಿ ನೀವು ತಿರುಗಾಡಲು ಹೋದರೆ ಆಗ ಕೇರೆ ಹಾವಿನ ಚರ್ಮವು ಕಾಣಸಿಗುವುದು. ಅದು ಹಾವಿನಂತೆ ಉದ್ದನೆ ಇರುತ್ತದೆ. ಕೇರೆ ಹಾವು ತನ್ನ ಚರ್ಮವನ್ನು ಸುಳಿದುಕೊಳ್ಳುತ್ತಾ ಇರುತ್ತದೆಯಂತೆ. ಜಿರಳೆಯ ಮೈಯ ಹೊರಪದರವನ್ನು ಮನೆಗಳಲ್ಲಿ ನೋಡಿರುವ ಸಾಧ್ಯತೆಗಳು ಇದೆ. ಜಿರಳೆ ಕೂಡ ಹೀಗೆ ಮಾಡುತ್ತದೆ ಎನ್ನಲಾಗಿದೆ.

ಆದರೆ ಮನುಷ್ಯರು ಹೀಗೆ ಮಾಡಿದರೆ ಆಗ ಹೇಗಾಗಬಹುದು ಎಂದು ಯೋಚಿಸಿ. ಇದನ್ನು ಯೋಚಿಸುವುದು ತುಂಬಾ ಕಷ್ಟಕರ. ಆದರೆ ಹುಡುಗಿಯೊಬ್ಬಳು ಚರ್ಮದ ಕಾಯಿಲೆಯಿಂದಾಗಿ ಪ್ರತೀ ಆರು ವಾರಕ್ಕೊಮ್ಮೆ ತನ್ನ ಚರ್ಮವನ್ನು ಸುಳಿದುಕೊಳ್ಳುತ್ತಾಳೆ. ಈ ಹುಡುಗಿಯು ಅತ್ಯಂತ ಅಪರೂಪದ ಚರ್ಮದ ಕಾಯಿಲೆಗೆ ತುತ್ತಾಗಿದ್ದಾಳೆ.

ಇದರಿಂದ ಆಕೆಗೆ ಪ್ರತಿ ದಿನವೂ ಸಂಕಷ್ಟ ಮಾತ್ರವಲ್ಲದೆ ಚರ್ಮವು ಕಿತ್ತುಬರುವಾಗ ಅಸಹನೀಯ ನೋವು ಕಾಣಿಸುತ್ತದೆ. 16ರ ಹರೆಯದ ಶಾಲಿನಿ ಯಾದವ್ ಎನ್ನುವಾಕೆಯೇ ಈ ವಿಚಿತ್ರ ರೋಗದಿಂದ ಬಳಲುತ್ತಾ ಇದ್ದಾಳೆ. ಇದರ ಬಗ್ಗೆ ಮತ್ತಷ್ಟು ತಿಳಿಯಲು ಲೇಖನವನ್ನು ಓದುತ್ತಾ ಸಾಗಿ....

ವಿಚಿತ್ರ ಚರ್ಮ ರೋಗ ಬಳಲುತ್ತಿರುವ ಹುಡುಗಿ

ವಿಚಿತ್ರ ಚರ್ಮ ರೋಗ ಬಳಲುತ್ತಿರುವ ಹುಡುಗಿ

ಪ್ರತೀ ಆರು ವಾರಕ್ಕೊಮ್ಮೆ ಚರ್ಮ ಕಿತ್ತುಬರುವಂತಹ ವಿಚಿತ್ರ ಕಾಯಿಲೆಯಿಂದ 16ರ ಹರೆಯದ ಶಾಲಿನಿ ಯಾದವ್ ಬಳಲುತ್ತಾ ಇದ್ದಾಳೆ.

ಇದು ಅರ್ಥೋಡೆರ್ಮಾ

ಇದು ಅರ್ಥೋಡೆರ್ಮಾ

ಈ ವಿಚಿತ್ರ ಕಾಯಿಲೆಯನ್ನು ಅರ್ಥೋಡೆರ್ಮಾ ಎಂದು ಕರೆಯಲಾಗುತ್ತದೆ. ಈ ನೋವನ್ನು

ಸಹಿಸಿಕೊಳ್ಳಲು ಆಕೆಗೆ ವಿಶೇಷವಾಗಿರುವ ಮಾಯಿಶ್ಚರೈಸರ್‌ನ ಅಗತ್ಯವಿದೆ. ಆದರೆ ಪ್ರತೀ ಸಲ ಮಾಯಿಶ್ಚರೈಸರ್ ಖರೀದಿಸಲು ಆಕೆಯ ಕುಟುಂಬದ ಬಳಿ ಹಣವಿಲ್ಲ.

ಬಾಲ್ಯದಿಂದಲೂ ಈ ಸಮಸ್ಯೆ

ಬಾಲ್ಯದಿಂದಲೂ ಈ ಸಮಸ್ಯೆ

ಶಾಲಿನಿ ತುಂಬಾ ಚಿಕ್ಕವಳಾಗಿದ್ದಾಗಳೇ ಈ ಸಮಸ್ಯೆಯಿಂದ ಬಳಲುತ್ತಾ ಇದ್ದಳು. ಆಕೆಯ ಚರ್ಮವು ಪ್ರತೀ 45 ದಿನಗಳಿಗೊಮ್ಮೆ ಕಿತ್ತುಬರುತ್ತದೆ.

ಯಾವುದೇ ಚಿಕಿತ್ಸೆ ಫಲಕಾರಿಯಾಗಿಲ್ಲ

ಯಾವುದೇ ಚಿಕಿತ್ಸೆ ಫಲಕಾರಿಯಾಗಿಲ್ಲ

ಕುಟುಂಬದವರ ಪ್ರಕಾರ ಹಲವಾರು ಮಂದಿ ವೈದ್ಯರಿಗೆ ಶಾಲಿನಿಯನ್ನು ತೋರಿಸಲಾಗಿದೆ. ಶಾಲಿನಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ಬದುಕನ್ನೇ ಕೊಲ್ಲುತ್ತಿದೆ

ಬದುಕನ್ನೇ ಕೊಲ್ಲುತ್ತಿದೆ

ಈ ಕಾಯಿಲೆಯು ಆಕೆಯ ಪ್ರಾಣಕ್ಕೆ ಏನೂ ಅಪಾಯ ಉಂಟು ಮಾಡುತ್ತಿಲ್ಲ. ಆದರೆ ಪ್ರತೀ ಸಲ ಚರ್ಮ ಬಿರುಕುಬಿಟ್ಟು ರಕ್ತ ಸೋರುವಾಗ ಆಕೆ ಕ್ಷಣಕ್ಷಣವೂ ಸಾಯುತ್ತಾ ಇರುತ್ತಾಳೆ. ಇಂತಹ ಪರಿಸ್ಥಿತಿಯಿಂದ ಬಳಲುತ್ತಿರುವ ಮಗಳನ್ನು ನೋಡುತ್ತಿರುವ ಪೋಷಕರ ದುಃಖ ಹೇಳತೀರದು.

ನನ್ನ ತಪ್ಪೇನಿದೆ? ಆಕೆಯ ಪ್ರಶ್ನೆ

ನನ್ನ ತಪ್ಪೇನಿದೆ? ಆಕೆಯ ಪ್ರಶ್ನೆ

ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಈಕೆಯ ಸ್ಥಿತಿಯನ್ನು ನೋಡಿ ಇತರ ಮಕ್ಕಳು ಹೆದರುತ್ತಿದ್ದ ಕಾರಣ ಶಾಲೆಯಿಂದ ಆಕೆಯನ್ನು ಹೊರಗೆ ಹಾಕಲಾಯಿತು. ಆಕೆಯೊಂದಿಗೆ ಯಾರೂ ಸ್ನೇಹ ಬೆಳೆಸುತ್ತಿಲ್ಲ. ಆಕೆಗೆ ಯಾವ ಭಾವನೆಯಾಗುತ್ತಿದೆ ಎಂದು ಕೇಳಿದಾಗ ಇದರಲ್ಲಿ ನನ್ನ ತಪ್ಪೇನಿದೆ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಹಲವರನ್ನು ಕಾಡಬಹುದು. ಆಕೆಗೆ ಆದಷ್ಟು ಬೇಗೆ ಚಿಕಿತ್ಸೆ ಸಿಕ್ಕಿ ಗುಣಮುಖವಾಗಲಿ ಎಂದು ನಾವೆಲ್ಲರೂ ಹಾರೈಸುವ.

All Image source

English summary

This Girl Sheds Her Skin Every 6 Weeks!

When a girl gets a small pimple or a bruise, the whole world goes upside down for her as that is something that could spoil her beauty. But what if a girl is born with a rare skin disease where her skin peels off every 6 weeks? Scary, right?
X
Desktop Bottom Promotion