ಈ ಊರಿನ ಜನರು 'ಹೆಣ್ಣು ಋತುಮತಿ'ಯಾದರೆ, ಕುಣಿದು ಕುಪ್ಪಳಿಸುತ್ತಾರೆ!!

By: Arshad
Subscribe to Boldsky

ಹಿಂದಿನ ದಿನಗಳಲ್ಲಿ ಭಾರತೀಯ ಮಹಿಳೆಯರನ್ನು ತಿಂಗಳ ರಜಾದಿನಗಳ ಕಾಲ ಪ್ರತ್ಯೇಕವಾದ ಕೋಣೆಯಲ್ಲಿರಿಸಲಾಗುತ್ತಿತ್ತು. ಈ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಸಿಗಲಿ ಎಂದು ಹಿರಿಯರು ಮಾಡಿದ ಕ್ರಮವೇ ಆಗಿತ್ತು. ಕೆಲವು ಸಂಪ್ರದಾಯಗಳಲ್ಲಿ ಈ ಅವಧಿಯಲ್ಲಿ ಮಹಿಳೆಯರು ಮನೆಯ ಹೊರಗಿನ ಹುಲ್ಲಿನ ಮನೆಯೊಂದರಲ್ಲಿ ಯಾರಿಗೂ ಕಾಣದಂತೆಯೂ ಇರಬೇಕಾಗಿತ್ತು.

ಆದರೆ ಒರಿಸ್ಸಾ ರಾಜ್ಯದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪದ್ಧತಿಯೊಂದಿದೆ. ಇಲ್ಲಿನ ಬುಡಕಟ್ಟು ಜನಾಂಗವೊಂದು ತಮ್ಮ ಕುಟುಂಬದ ಹೆಣ್ಣುಮಗಳು ಋತುಮತಿಯಾದರೆ, ಸಂತಸದಿಂದ ಕುಣಿದು ಕುಪ್ಪಳಿಸಿ ದೊಡ್ಡ ಹಬ್ಬವನ್ನೇ ಆಚರಿಸುತ್ತಾರೆ ಹಾಗೂ ಈ ಆಚರಣೆಗೆ 'ರಾಜಾ ಉತ್ಸವ' ಎಂಬ ಹೆಸರನ್ನೂ ನೀಡುತ್ತಾರೆ....

ರಾಜಾ ಉತ್ಸವ

ರಾಜಾ ಉತ್ಸವ

ಬುಡಕಟ್ಟು ಸಂಪ್ರದಾಯದ ಮೂಲಕ ಪ್ರಾರಂಭಗೊಂಡ ರಾಜಾ ಉತ್ಸವ ಕಾಲಕ್ರಮೇಣ ಹಲವು ಬದಲಾವಣೆಗಳನ್ನು ಕಂಡಿದೆ. ಮೂಲತಃ ಇದೊಂದು ತಾಂತ್ರಿಕ ವಿದ್ಯೆಯ ವಿಧಿಯಾಗಿದ್ದು ಈ ಕ್ರಿಯೆಯಲ್ಲಿ ಋತುಮತಿಯ ದೇಹದಿಂದ ವಿಸರ್ಜನೆಗೊಂಡ ರಕ್ತವನ್ನು ಚಿಮುಕಿಸಲಾಗುತ್ತಿತ್ತು. ಈ ರಕ್ತವನ್ನು ಅವರು ಜೀವನದ ಶಕ್ತಿ ಎಂದು ಪರಿಗಣಿಸುತ್ತಾರೆ. ಆದರೆ ಜನಾಂಗದಿಂದ ಜನಾಂಗಕ್ಕೆ ನಿಧಾನವಾಗಿ ಬದಲಾವಣೆಗೆ ಒಳಪಡುತ್ತಾ ಬಂದಿದೆ.

ಹಿಂದಿನ ಪದ್ಧತಿ

ಹಿಂದಿನ ಪದ್ಧತಿ

ಹಿಂದಿನ ಸಮಯದಲ್ಲಿ ಕೃಷಿಯೇ ಪ್ರಧಾನವಾಗಿದ್ದಾಗ ಕಟಾವಿನ ಸಂಭ್ರಮದ ಜೊತೆಗೇ ಈ ಹಬ್ಬವನ್ನೂ ಆಚರಿಸಲಾಗುತ್ತಿತ್ತು.

ಈಗ ಕಾಲಬದಲಾಗಿದೆ...

ಈಗ ಕಾಲಬದಲಾಗಿದೆ...

ಈಗ ಹಲವು ಬದಲಾವಣೆಗಳಾಗಿದ್ದರೂ ಪ್ರಧಾನವಾಗಿ ಹೆಣ್ಣುಮಕ್ಕಳ ಈ ದಿನಗಳನ್ನು ಪವಿತ್ರವೆಂದು ಭಾವಿಸಿ ಅವರಿಗೆ ಅತಿ ಹೆಚ್ಚಿನ ಗೌರವ ನೀಡಿ ಸಂಭ್ರಮಿಸಲಾಗುತ್ತಿದೆ.

ಅನಿಷ್ಟ ಪದ್ಧತಿಗಳಿಂದ ಹೊರಬರುವ ಹೋರಾಟದ ಸಂಕೇತ

ಅನಿಷ್ಟ ಪದ್ಧತಿಗಳಿಂದ ಹೊರಬರುವ ಹೋರಾಟದ ಸಂಕೇತ

ಈ ಹಬ್ಬವನ್ನು ಕೆಲವೇ ಸ್ಥಳಗಳಲ್ಲಿ ಮಾತ್ರವೇ ಅಚರಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಆಚರಣೆಯಲ್ಲಿದ್ದ ಮಹಿಳೆಯರ ಶೋಷಣೆ, ಅವಮಾನ ಹಾಗೂ ಧಾರ್ಮಿಕ ನಿಷೇಧಗಳಂತಹ ಅನಿಷ್ಟ ಪದ್ಧತಿಗಳಿಂದ ಹೊರಬರುವ ಹೋರಾಟದ ಸಂಕೇತವೂ ಆಗಿದೆ.

ಇದು ಮಹಿಳೆಯರಿಗೆ ಸಮಾನ ಗೌರವನ್ನು ನೀಡುವ ಹಬ್ಬ

ಇದು ಮಹಿಳೆಯರಿಗೆ ಸಮಾನ ಗೌರವನ್ನು ನೀಡುವ ಹಬ್ಬ

ಹಿಂದಿನ ದಿನಗಳಲ್ಲಿ ಆಚರಣೆಯಲ್ಲಿದ್ದ ಕೆಲವು ಸಂಪ್ರದಾಯಗಳನ್ನು ಕೊನೆಗೊಳಿಸುವುದು ಇಂದಿನ ಅಗತ್ಯವಾದರೆ ಮಹಿಳೆಯರಿಗೆ ಸಮಾನ ಗೌರವನ್ನು ನೀಡುವ ಇಂತಹ ಹಬ್ಬಗಳನ್ನು ಉಳಿಸಿಕೊಳ್ಳಬೇಕಾಗಿದೆ.

English summary

This-ancient-festival-from-odisha-celebrates-menstruation

India is known for isolating menstruating women, and alienating them from mainstream celebrations and public spaces. However, this peculiar festival—The Raja festival—from Odisha is a breath of fresh liberal air. What initially started as a tribal ritual, the Raja festival has gone through various evolutionary changes from its conception as a tantric practice, that involved sprinkling period blood that symbolises a life force. And as the reigns of Odisha passed on from one dynasty to another, the festival continued to remodel itself, keeping up with the times and traditions.
Subscribe Newsletter