ವಿಸ್ಮಯ ಜಗತ್ತು: ಅನ್ಯಗ್ರಹ ಜೀವಿಗಳು ನಿಜವಾಗಿಯೂ ಇದೆಯಾ?

By: Hemanth
Subscribe to Boldsky

ಹಾರುವ ತಟ್ಟೆಗಳು ಮತ್ತು ಅನ್ಯಗ್ರಹ ಜೀವಿಗಳ ಬಗ್ಗೆ ವಿಶ್ವದೆಲ್ಲೆಡೆಯಲ್ಲಿ ಈಗಲೂ ಕುತೂಹಲ ಹಾಗೆ ಇದೆ. ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಯಾವುದಾದರೂ ಜೀವಿಗಳು ಇದೆಯಾ? ಇದ್ದರೆ ಅವುಗಳ ಸ್ವರೂಪ ಮತ್ತು ಬದುಕು ಹೇಗಿರಬಹುದು ಎನ್ನುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇದೆ.

ಅದರಲ್ಲೂ ಭೂಮಿ ಮೇಲಿರುವ ಮನುಷ್ಯರಿಗೆ ಭೀತಿಯೆಂದರೆ ಅನ್ಯಗ್ರಹದಿಂದ ದಾಳಿ (ಏಲಿಯನ್ಸ್‌) ನಡೆಯುತ್ತದೆ ಎನ್ನುವುದು. ಅನ್ಯಗ್ರಹಗಳಲ್ಲಿ ಜೀವಿಗಳು ಇವೆ ಎನ್ನುವ ವಾದವನ್ನು ಒಂದು ವರ್ಗವು ಒಪ್ಪಿಕೊಂಡರೆ ಇನ್ನೊಂದು ವರ್ಗವು ಇದನ್ನುತಳ್ಳಿಹಾಕುತ್ತದೆ. ಅನ್ಯಗ್ರಹಗಳು ಇದೆ ಎನ್ನುವುದನ್ನು ಇಲ್ಲಿ ಕೊಟ್ಟಿರುವ ಕೆಲವೊಂದು ಸಿದ್ಧಾಂತಗಳ ಮೂಲಕ ನಂಬಹುದು...!  

 ಅನ್ಯಗ್ರಹ ಜೀವಿಗಳು ನಿಜ

ಅನ್ಯಗ್ರಹ ಜೀವಿಗಳು ನಿಜ

ಏರಿಯಾ 51 ವಿಜ್ಞಾನಿಯಾಗಿದ್ದ ಡಾ. ಬೊಯ್ಡ್ ಬುಶ್ಮೆನ್ ಪ್ರಕಾರ ಅನ್ಯಗ್ರಹ ಜೀವಿಗಳು ನಿಜವಾಗಿಯೂ ಇದೆ ಮತ್ತು ಅವುಗಳು ತುಂಬಾ ಸ್ನೇಹಪರವಾಗಿದೆ. ಅಮೆರಿಕಾದ ವಾಯುನೆಲೆಯಲ್ಲಿ ಉಫ್ಕೋ ದ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವೇಳೆ ಅನ್ಯಗ್ರಹ ಜೀವಿಗಳು ಸ್ನೇಹಪರವಾಗಿದ್ದವಂತೆ. ಹಾರುವ ತಟ್ಟೆಯ ತಂತ್ರಜ್ಞಾನವನ್ನು ಬುಶ್ಮನ್ ರಕ್ಷಣಾ ಕಂಪನಿಯೊಂದಕ್ಕೆ ನೀಡಿದ್ದರು.

ನೆಪೋಲಿಯನ್ ಬೋನೊಪಾರ್ಟ್ ಸಿದ್ಧಾಂತ

ನೆಪೋಲಿಯನ್ ಬೋನೊಪಾರ್ಟ್ ಸಿದ್ಧಾಂತ

ಬೋನೋಪಾರ್ಟ್ ಪ್ರಕಾರ ಆತನನ್ನು ಅನ್ಯಗ್ರಹ ಜೀವಿಗಳು ಅಪಹರಣ ಮಾಡಿದ್ದವು. 1794ರ ಜುಲೈಯಲ್ಲಿ ಬೋನೋಪಾರ್ಟ್ ನಾಪತ್ತೆಯಾಗಿದ್ದರು. ತುಂಬಾ ವಿಚಿತ್ರವಾಗಿ ಕಾಣಿಸುವ ಜನರು ಅಪಹರಣ ಮಾಡಿದ್ದರು ಎಂದು ಹೇಳಿದ್ದರು. ತನಿಖಾ ತಂಡವು ಪರೀಕ್ಷೆ ನಡೆಸಿದಾಗ ಅಸ್ಥಿಪಂಜರದಲ್ಲಿ ಮೈಕ್ರೋಚಿಪ್ ಕಂಡುಬಂದಿತ್ತು.

ಚೆಸ್‌ನ ಆಟ

ಚೆಸ್‌ನ ಆಟ

ವಿಶ್ವ ಚೆಸ್ ಫೆಡರೇಶನ್ ನ ಅಧ್ಯಕ್ಷ ಇಲೈಮುಝಿನೋವ್ ಪ್ರಕಾರ ಚೆಸ್ ಆಟವನ್ನು ಅನ್ಯಗ್ರಹ ಜೀವಿಗಳು ಕಂಡುಹಿಡಿದಿದ್ದಂತೆ. 1997 ಸಪ್ಟೆಂಬರ್ 17ರಂದು ನನ್ನನ್ನು ಅನ್ಯಗ್ರಹ ಜೀವಿಗಳು ಹಳದಿ ಬಣ್ಣದ ಗಗನಯಾತ್ರಿಗಳ ದಿರಿಸಿನಲ್ಲಿ ಅಪಹರಿಸಿದ್ದರು ಎಂದು ಹೇಳಿದ್ದಾರೆ. ಇದು ನಂಬಲು ಕಷ್ವಲ್ಲವೇ?

ನಿದ್ರಾ ಪಾರ್ಶ್ವವಾಯು

ನಿದ್ರಾ ಪಾರ್ಶ್ವವಾಯು

ಜನಪ್ರಿಯ ಮನಶಾಸ್ತ್ರಜ್ಞ ಅಲನ್ ಚೈನೆ ಪ್ರಕಾರ ಅನ್ಯಗ್ರಹ ಜೀವಿಗಳಿಂದ ಅಪಹರಣಕ್ಕೊಳಗಾಗಿರುವವರು ನಿದ್ರಾ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದಾರೆ. ಎನ್ನುತ್ತಾರೆ

ಭೂಮಿ ಮೇಲಿನ ಚಟುವಟಿಕೆ

ಭೂಮಿ ಮೇಲಿನ ಚಟುವಟಿಕೆ

ಭೂಮಿ ಮೇಲೆ ನಡೆಯುತ್ತಿರುವ ಪ್ರತಿಯೊಂದು ಚಟುವಟಿಕೆಗಳನ್ನು ಅನ್ಯಗ್ರಹ ಜೀವಿಗಳು ವೀಕ್ಷಿಸುತ್ತಾ ಇರುತ್ತದೆ ಎಂದು ನಂಬಲಾಗಿದೆ. 2015ರಲ್ಲಿ ಮೇ 29ರಂದು ಜಪಾನ್ ನ ಕುಚಿನೊರಬು-ಜಿಮಾದ ಶಿಂಡಕೆ ಶಿಖರದ ವೀಡಿಯೋ ಚಿತ್ರಣದಿಂದ ಇದು ಸಾಬೀತಾಗಿದೆ. ಈ ಘಟನೆ ನಡೆಯುತ್ತಿರುವಂತೆ ಉಫೋ ಆಗಸದಿಂದ ಇದನ್ನು ವೀಕ್ಷಿಸುತ್ತಾ ಇತ್ತು ಎಂದು ವೀಡಿಯೋದಿಂದ ತಿಳಿದುಬಂದಿದೆ.

 

English summary

Things That Will Make You Believe In Aliens

The existence of extraterrestrials and flying saucers is a well-known fact to top public officials of every major country on the planet. People around the world are often confused with a simple question about aliens existence and wonder if they really do exist or not.
Subscribe Newsletter