For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಈ ವಿಷಯಗಳನ್ನೆಲ್ಲಾ ಮೊದಲು ನಿಷೇಧಿಸಬೇಕು..

By Manu
|

ಕಾನೂನು ಇರುವುದೇ ಮುರಿಯುವುದಕ್ಕೆ ಎಂಬುದು ಭಾರತೀಯರು ನಂಬಿಕೊಂಡು ಬಂದಂತಹ ಕ್ರಮವಾಗಿ ಬಿಟ್ಟಿದೆ. ಉನ್ನತ ಅಧಿಕಾರಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರೂ ಕಾನೂನನ್ನು ಪಾಲಿಸುವುದನ್ನು ಗಮನಿಸುವವರು ಯಾರಾದರೂ ಇದ್ದಾರೆಯೇ ಎಂದು ಗಮನಿಸಿಯೇ ಆ ಪ್ರಕಾರ ಕಾನೂನನ್ನು ಪಾಲಿಸುವ ಕ್ರಮವಿದೆ.

ಉದಾಹರಣೆಗೆ ನೋ ಎಂಟ್ರಿಯಲ್ಲಿ ನುಗ್ಗಬಯಸಿದ ಬೈಕ್ ಸವಾರ ಅತ್ತ ಬದಿ ಪೋಲೀಸ್ ಅಧಿಕಾರಿ ಇದ್ದರೆ ಎಂದಿಗೂ ಕಾನೂನು ಮುರಿಯಲಾರ. ಆದರೆ ಅಲ್ಲಿ ಯಾರೂ ಇಲ್ಲ ಎಂದರೆ ಎಲ್ಲರೂ ನೋ ಎಂಟ್ರಿಯಲ್ಲಿಯೇ ನುಗ್ಗುವವರು. ಯಾರೇ ಕೂಗಾಡಲಿ, ಆದರೆ ನಾವು ಮಾತ್ರ ಇರುವುದೇ ಹೀಗೆ!

ಈ ಮನಃಸ್ಥಿತಿಯಲ್ಲಿರುವ ಭಾರತದಲ್ಲಿ ನೂರಾರು ಪ್ರಕರಣಗಳು ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿವೆ. ಆದರೆ ಕೆಲವಾರು ವಿಷಯಗಳು ಕಾನೂನುಬದ್ಧವಾಗಿಯೇ, ಇತರರಿಗೆ ಭಾರೀ ಅನಾನುಕೂಲತೆ ಯಾದರೂ ಸರಿ, ನಡೆಯುತ್ತಿವೆ. ಅಪ್ಪಟ ಉದಾಹರಣೆ ಎಂದರೆ ಬಂದ್‌ಗಳು. ವಿಚಿತ್ರ, ಹುಚ್ಚು ಹುಚ್ಚಾದ, ತಲೆಚಿಟ್ಟು ಹಿಡಿಸುವ ಕಾನೂನು!

ಈ ಬಂದ್ ಮೂಲಕ ಏನು ಸಾಧಿಸಲಾಗುತ್ತದೋ ಇಲ್ಲವೋ ಬೇರೆ ಪ್ರಶ್ನೆ, ಆದರೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುವುದಂತೂ ಖಂಡಿತ. ಈ ಬಂದ್‌ಗಳು ಮೊದಲು ನಿಷೇಧಗೊಳ್ಳಬೇಕು ಎಂದು ಹೆಚ್ಚಿನವರ ಅಭಿಪ್ರಾಯವಾಗಿದೆ. ಬನ್ನಿ, ತಕ್ಷಣವೇ ಯಾವ ವಿಷಯಗಳನ್ನು ಬಂದ್ ಮಾಡಬೇಕು ಎಂಬುದನ್ನು ನೋಡೋಣ....


ಸಿಗರೇಟ್ ಸೇವನೆ

ಸಿಗರೇಟ್ ಸೇವನೆ

ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಬರುತ್ತದೆ ಎಂದೆಲ್ಲಾ ಹೇಳಿ, ಪ್ಯಾಕೆಟ್ಟಿನ ಮೇಲೆಯೇ ಕ್ಯಾನ್ಸರ್ ಪೀಡಿತ ಶ್ವಾಸಕೋಶದ ಚಿತ್ರವನ್ನು ಮುದ್ರಿಸಿದರೂ ಧೂಮಪಾನಿಗಳು ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಬದಲಿಗೆ ತಮಗೆ ಬುದ್ಧಿ ಹೇಳಲು ಬಂದವರಿಗೆ ತಮ್ಮ ಧೂಮಪಾನದ ಹೊಗೆಯನ್ನು ಒಂದು ಕರವಸ್ತ್ರ ಅಥವಾ ಟಿಶ್ಯೂ ಕಾಗದದ ಮೂಲಕ ಹಾಯಿಸಿ ಆ ಭಾಗದಲ್ಲಿ ಕಪ್ಪಗೆ ಅಂಟಿ ಕುಳಿತ ಟಾರನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ.ಇನ್ನು ಮುಲಾಜಿಲ್ಲದೆ ಸಿಗರೇಟ್‌ಗೆ ಗುಡ್ ಬೈ ಹೇಳಿ!

ಸಿಗರೇಟನ್ನು ಕಟ್ಟುನಿಟ್ಟಾಗಿ ನಿಷೇಧಿಸಲೇಬೇಕು

ಸಿಗರೇಟನ್ನು ಕಟ್ಟುನಿಟ್ಟಾಗಿ ನಿಷೇಧಿಸಲೇಬೇಕು

ಆದ್ದರಿಂದ ಇವರಿಗೆ ನಯವಾಗಿ ಬುದ್ಧಿ ಹೇಳುವ ಮೂಲಕ ಇವರಿಂದ ಸಿಗರೇಟಿನ ವ್ಯಸನ ಬಿಡಿಸಲು ಸಾಧ್ಯವಿಲ್ಲ. ಬದಲಿಗೆ ಭಾರತದಲ್ಲಿ, ಬದಲಿಗೆ ಇಡಿಯ ವಿಶ್ವದಲ್ಲಿಯೇ ಸಿಗರೇಟನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು

ಅಪಾಯಕಾರಿ ಮಾದಕ ದ್ರವ್ಯಗಳು

ಅಪಾಯಕಾರಿ ಮಾದಕ ದ್ರವ್ಯಗಳು

ಇತ್ತೀಚೆಗೆ ರೇವ್ ಪಾರ್ಟಿ, ಬಾರ್ ಮೊದಲಾದ ಸ್ಥಗಳಲ್ಲಿ ಮಾದಕ ದ್ರವ್ಯಗಳ ಸೇವನೆ ಹೆಚ್ಚುತ್ತಿವೆ. ಈ ಪಾರ್ಟಿಗಳನ್ನೇ ನೆಪವಾಗಿಸಿ ಯುವಜನತೆ ಹೆಚ್ಚು ಹೆಚ್ಚಾಗಿ ಮಾದಕ ಪಾನೀಯಗಳನ್ನು ಸೇವಿಸುತ್ತಿದ್ದಾರೆ. ಒಮ್ಮೆ ಪರಮಾತ್ಮ ಹೊಟ್ಟೆ ಸೇರಿದನೋ, ಆಗ ವಿವೇಕ ತಲೆಯಿಂದ ಹಾರಿಹೋಗುತ್ತದೆ. ಹೊಸವರ್ಷದ ಹಿಂದಿನ ದಿನ ಮದ್ಯದ ಅಮಲಿನಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಕೈ ಹಾಕಿದ ಹೇಯ ಕೃತ್ಯ ಇಡಿಯ ವಿಶ್ವದ ದೃಷ್ಟಿಯಲ್ಲಿ ನಮ್ಮ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ. ಜಗತ್ತಿನ ಪ್ರಾಣಾಂತಿಕ ಮಾದಕ ದ್ರವ್ಯಗಳ ಬಗ್ಗೆ ಗೊತ್ತೇ?

ಅಪಾಯಕಾರಿ ಮಾದಕ ದ್ರವ್ಯಗಳು

ಅಪಾಯಕಾರಿ ಮಾದಕ ದ್ರವ್ಯಗಳು

ಮದ್ಯದ ಅಮಲಿನಲ್ಲಿ ವಾಹನ ಓಡಿಸುವವರು ತಮಗೂ, ದಾರಿಯಲ್ಲಿರುವವರ ಇತರರಿಗೂ ಪ್ರಾಣಾಪಾಯ ತಂದೊಡ್ಡುತ್ತಾರೆ. ಖ್ಯಾತ ಗಜಲ್ ಗಾಯಕ ಜಗಜೀತ್ ಸಿಂಗ್ ಅವರ ಪುತ್ರ ಸಹಾ ಹೀಗೇ ಮದ್ಯದ ಅಮಲಿನಲ್ಲಿದ್ದ ಚಾಲಕನ ತಪ್ಪಿನಿಂದ ಮರಣ ಹೊಂದಿದ್ದರು. ಯಾವುದೇ ಮಾದಕ ಪಾನೀಯಗಳನ್ನು ಮೊದಲಾಗಿ ನಿಷೇಧಿಸುವುದು ಅಥವಾ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.

ನೈತಿಕ ಪೋಲೀಸ್ ಗಿರಿ

ನೈತಿಕ ಪೋಲೀಸ್ ಗಿರಿ

ಕರ್ನಾಟಕದಲ್ಲಿ, ವಿಶೇಷವಾಗಿ ಮಂಗಳೂರು ಮತ್ತು ಸುತ್ತಮುತ್ತ ಈ ರೀತಿಯ ಗುಂಡಾಗಿರಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶೇಷವಾಗಿ ಪ್ರೇಮಿಗಳು ಮತ್ತು ದಂಪತಿಗಳು ಇವರ ಕಾಟಕ್ಕೆ ತುತ್ತಾಗುತ್ತಿದ್ದಾರೆ. ಈ ಪೋಲೀಸರು ತಮ್ಮನ್ನು ತಾವು ಧರ್ಮರಕ್ಷಕರು ಎಂದು ಕರೆದುಕೊಂಡು ಗುಂಪಾಗಿ ಕೆಲವು ವ್ಯಕ್ತಿಗಳ ಮೇಲೆ ಗುರಿಯಿಟ್ಟು ಹಲ್ಲೆ ನಡೆಸುವುದು, ಬೆದರಿಕೆ ಒಡ್ಡುವುದು ಮೊದಲಾದವನ್ನು ಮಾಡುತ್ತಿದ್ದಾರೆ. ಈ ಪ್ರಕ್ರಿಯೆಗೆ ಮೊದಲು ನಿಷೇಧ ಬರಬೇಕು.

ಎಲ್ಲೆಂದಲ್ಲಿ ಕಸ ಹಾಕುವುದು

ಎಲ್ಲೆಂದಲ್ಲಿ ಕಸ ಹಾಕುವುದು

ಈ ಕೆಲಸ ಭಾರತದಲ್ಲಿ ಮೊತ್ತ ಮೊದಲಾಗಿ ಆಗಬೇಕು. ಏಕೆಂದರೆ ಈಗಿನ ಸರ್ಕಾರದ ಸ್ವಛ್ ಭಾರತ್ ಹಾಗೂ ಹಿಂದಿನ ಸರ್ಕಾರದ ನಿರ್ಮಲ ಭಾರತ ಯೋಜನೆ ಅನುಷ್ಠಾನಕ್ಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ, ಜನರು ಫೋಟೋಗೆ ಪೋಸ್ ಕೊಟ್ಟು ಪೊರಕೆ ಹಿಡಿದು ಕಸ ಗುಡಿಸಿದ್ದೇ ಗುಡಿಸಿದ್ದು, ಆಗ ಸ್ವಚ್ಛವಾದ ರಸ್ತೆ ಮರುದಿನ ಬಂದಾಗ ಹಿಂದಿನ ದಿನದಂತೆಯೇ ಇದ್ದುದನ್ನು ಕಂಡರೆ ಕಸ ಹಾಕುವ ಮನೋಭಾವ ಬದಲಾಗುವವರೆಗೂ ಯಾವುದೇ ಯೋಜನ ಯಶಸ್ವಿಯಾಗುವುದಿಲ್ಲ ಎಂಬುದು ಖಚಿತವಾಗುತ್ತದೆ. ಆದ್ದರಿಂದ ತೊಂದರೆಯನ್ನು ಮೂಲದಿಂದ ಚಿವುಟಲು ಕಸ ಹಾಕುವುದನ್ನೇ ಕಟ್ಟುನಿಟ್ಟಾಗಿ ನಿಷೇಧಿಸಿ ಕ್ರಮ ಕೈಗೊಳ್ಳಬೇಕು. ನಂಬಲೇಬೇಕು, ಸ್ವೀಡನ್‪ನಲ್ಲಿ ಕಸಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಂತೆ!

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವುದು

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವುದು

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಬಾರದು ಎಂದು ಫಲಕಗಳೇನೋ ಇವೆ. ಕೆಲವರು ಇಲ್ಲಿ ದೇವರ ಪಟಗಳಿರುವ ಟೈಲುಗಳನ್ನೂ ಅಳವಡಿಸಿದ್ದಾರೆ. ಆದರೂ ದೇಹಬಾಧೆ ತೀರಿಸಿಕೊಳ್ಳಲು ಕೊಂಚವೂ ಸುತ್ತಮುತ್ತಲ ಶೌಚಾಲಯಗಳಿಗಾಗಿ ಹುಡುಕಾಡದ ಜನರು ಎಲ್ಲಿದ್ದಾರೋ ಅಲ್ಲೇ, ಮೂಲೆಯಲ್ಲಿ ಬಾಧೆ ತೀರಿಸಿಕೊಂಡು ಬಿಡುತ್ತಾರೆ. ಈ ಅಭ್ಯಾಸದೊಂದಿಗೆ ಪಾನ್ ಜಗಿದು ಉಗುಳುವ ಅಭ್ಯಾಸವನ್ನೂ ಕಾಣಬಹುದು. ಈ ಪ್ರಕ್ರಿಯೆಯನ್ನು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.

English summary

Things That Need To Be Banned In India

India is a place where it is believed that rules are meant to be broken and banning things around us does no good as we often break the rules and hardly follow them. Yet there are certain things that need to be immediately banned in India. Here we are about to share a list of the things that need to be banned right away!
X
Desktop Bottom Promotion