ಯಾವ ರಾಶಿಯವರಿಗೆ ಯಾವ್ಯಾವ ಕೆಲಸ, ಕೈ ಹಿಡಿಯುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

By: Hemanth
Subscribe to Boldsky

ಸ್ಪರ್ಧಾತ್ಮಕವಾಗಿರುವ ಇಂದಿನ ದಿನಗಳಲ್ಲಿ ಎಷ್ಟು ಡಿಗ್ರಿ ಗಳಿಸಿದರೂ ಕೆಲಸ ಸಿಗುವ ಗ್ಯಾರಂಟಿ ಇರುವುದಿಲ್ಲ. ಕೆಲವೊಮ್ಮೆ ದೊಡ್ಡ ಡಿಗ್ರಿ ಸಂಪಾದನೆ ಮಾಡಿದವರೂ ಕೆಲಸ ಸಿಗದೆ ತಮ್ಮದೇ ಆದ ಸಣ್ಣ ವಹಿವಾಟು ಮಾಡಿಕೊಂಡಿರುತ್ತಾರೆ. ಇಂತಹ ಸಣ್ಣಪುಟ್ಟ ಕೆಲಸಗಳು ನಿಮ್ಮ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯಾಕೆಂದರೆ ಓದಿರುವ ವಿದ್ಯೆ ಒಂದು, ಮಾಡುತ್ತಿರುವ ಕೆಲಸ ಇನ್ನೊಂದು. ಇದು ನಿಮ್ಮಲ್ಲಿ ಯಾವಾಗಲೂ ಚಿಂತೆ ಉಂಟು ಮಾಡುತ್ತಿರಬಹುದು. ಆದರೆ ಇದು ನಿಮ್ಮ ತಪ್ಪಲ್ಲ. ಇದೆಲ್ಲವೂ ಆಗುತ್ತಲಿರುವುದು ನಿಮ್ಮ ರಾಶಿಯಿಂದಾಗಿ.

ಯಾಕೆಂದರೆ ನಿಮ್ಮ ರಾಶಿಗೆ ಅನುಗುಣವಾಗಿ ಕೆಲಸ ಮಾಡುತ್ತಲಿದ್ದರೆ ನೀವು ವೃತ್ತಿಯಲ್ಲಿಯು ಉನ್ನತ ಸ್ಥಾನ ಪಡೆಯಬಹುದು, ಹೆಸರು ಗಳಿಸಬಹುದು ಮತ್ತು ಸಂತೋಷವಾಗಿರಬಹುದು. ಯಾವ ರಾಶಿಯವರು ಯಾವ್ಯಾವ ಕೆಲಸ ಮಾಡಿದರೆ ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಪಡೆಯಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ..... 

ಮೇಷ

ಮೇಷ

ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ.

ವೃಷಭ

ವೃಷಭ

ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!. ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು.

ಮಿಥುನ

ಮಿಥುನ

ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ. ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ. ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು.

ಕರ್ಕಾಟಕ

ಕರ್ಕಾಟಕ

ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸದಿಂದ ಹೊರದಬ್ಬಲ್ಪಡುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು.

ಸಿಂಹ

ಸಿಂಹ

ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು.

ಕನ್ಯಾ

ಕನ್ಯಾ

ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.

ತುಲಾ

ತುಲಾ

ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

ವೃಶ್ಚಿಕ

ವೃಶ್ಚಿಕ

ಜ್ಞಾನವು ಶಕ್ತಿಯೆಂದು ಈ ರಾಶಿಯವರು ತಿಳಿದುಕೊಂಡಿರುವರು. ಇವರು ಯಾವುದೇ ರಾಜಕೀಯ, ಆರ್ಥಿಕ ಅಥವಾ ಅಂಗಡಿ ನಡೆಸುವುದಿದ್ದರೂ ಇದು ನಿಜವಾಗಿರುವುದು. ಇವರಿಗೆ ರಹಸ್ಯವೆಂದರೆ ತುಂಬಾ ಇಷ್ಟ. ಕಳೆಕೊಂಡಿರುವುದನ್ನು ಹುಡುಕುವುದು, ಯಾವುದೇ ರಹಸ್ಯ ಮಾಹಿತಿ ಸಂಗ್ರಹ ಅಥವಾ ಇತರರ ಪ್ರೇರಣೆಯನ್ನು ಹೊರತೆಗೆಯುವುದು ಇವರಿಗೆ ಇಷ್ಟವಾದ ಕೆಲಸಗಳು. ಜೀವನದುದ್ದಕ್ಕೂ ತಮ್ಮ ಆಸಕ್ತಿಗಳನ್ನು ಈಡೇರಿಸುವ ಕೆಲಸ ಇವರಿಗೆ ಒಳ್ಳೆಯದು.

ಧನು

ಧನು

ಶಿಸ್ತಿನ ದೈನಂದಿನ ಚಟುವಟಿಕೆಯು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಸ್ವಾತಂತ್ರ್ಯವಾಗಿ ಅಂದರೆ ಯಾವುದೇ ಕಟ್ಟುಪಾಡು ಇಲ್ಲದೆ ಕೆಲಸ ಮಾಡಿದರೆ ತಮ್ಮ ಶ್ರೇಷ್ಠ ಶ್ರಮ ವಹಿಸುವರು. ಪ್ರಯಾಣ ಇರುವಂತಹ ವೃತ್ತಿಯಲ್ಲಿ ಇವರು ಉತ್ತಮವಾಗಿರುವರು. ಯಾವುದೇ ಬದಲಾವಣೆಗೆ ಇವರು ಹೊಂದಿಕೊಳ್ಳುವರು. ಇವರು ತಮ್ಮ ಕೆಲಸದ ಬಗ್ಗೆ ಸಂತೋಷವಾಗಿರುವರು. ಆದರೆ ಬೇರೆ ಯಾರಾದರೂ ಯೋಜನೆಗಳ ವರದಿ ಓದಲಿ ಎಂದು ಬಯಸುವರು.

ಮಕರ

ಮಕರ

ಆರ್ಥಿಕ ಹಾಗೂ ಸ್ಥಾನಮಾನವನ್ನು ಬಯಸುವಂತಹ ರಾಶಿಯವರು ಇವರಾಗಿರುವರು. ಇವರು ತುಂಬಾ ಮುಂದಾಲೋಚನೆ ಮಾಡುವವರು. ಪ್ರಾಯೋಗಿಕವಾಗಿ ಏನು ಸರಿಯಾಗಿದೆಯೋ ಅದನ್ನೇ ಇವರು ನೆಚ್ಚಿಕೊಳ್ಳುವರು. ಇವರಿಗೆ ದೈನಂದಿನ ಚಟುವಟಿಕೆ ಬಗ್ಗೆ ಸಮಸ್ಯೆಯಿಲ್ಲ. ಆದರೆ ಎಲ್ಲವೂ ಮೊದಲೇ ತಿಳಿಯಬೇಕೆಂದು ಬಯಸುವರು. ತಮ್ಮ ಅಧಿಕಾರದಲ್ಲಿ ಯಾರಿಗೂ ಪಾಲು ಕೊಡಲ್ಲ.

ಕುಂಭ

ಕುಂಭ

ಇವರು ತಮ್ಮ ಕೆಲಸದಲ್ಲಿ ಸಂತೋಷವಾಗಿರುವರು. ಇವರು ಎರಡು ರೀತಿಯ ಗೊಂದಲದಲ್ಲಿ ಸಿಲುಕಿಕೊಂಡಿರುವಂತೆ ಇರುವರು. ಒಂದು ಕಡೆ ಇವರು ಏಕಾಂಗಿಯಾಗಿರುವಾಗ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವರು. ಇನ್ನೊಂದೆಡೆಯಲ್ಲಿ ಇವರು ತಮ್ಮ ಕೆಲಸದಲ್ಲಿ ಶಾಂತಿ ಬಯಸುವರು ಮತ್ತು ಯಾರು ಕೂಡ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಬಯಸುವರು.

ಮೀನ

ಮೀನ

ಈ ರಾಶಿಯವರು ಗುಪ್ತ ಶಕ್ತಿಯ ಪ್ರವೀಣರು ಎಂದು ನಂಬಲಾಗಿದೆ. ನಿಷ್ಕ್ರೀಯ ನಿರೋಧಕತೆ ಬಳಸಿಕೊಳ್ಳುವಲ್ಲಿ ಇವರು ಉತ್ತಮವರು. ಇತರರನ್ನು ತುಂಬಾ ಕುಶಲತೆಯಿಂದ ಭಾವನಾತ್ಮಕವಾಗಿ ಮೋಹಗೊಳಿಸುವರು. ಇವರು ರಹಸ್ಯ ತಿಳಿದುಕೊಳ್ಳುವರು. ಕೆಲಸದಿಂದ ಸಂತೋಷವಾಗಿದ್ದರೂ ಇವರು ಉನ್ನತ ಉದ್ದೇಶದಿಂದ ವೃತ್ತಿಯಲ್ಲಿರಲು ಬಯಸುವರು.

English summary

Things That Make Each Zodiac Sign Happy In Job Or Career

Do you realise that the career or job that you are in right now might be the perfect one according to your zodiac sign? Well, it can be! We have revealed the list of best careers and jobs that can make you happy and content in life!Check out on the list and decide for yourself if you are in the best career according to your zodiac sign.
Story first published: Wednesday, September 27, 2017, 23:35 [IST]
Subscribe Newsletter