Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮವರಿಗೆ ಈ ಐದು ರೀತಿಯ ಉಡುಗೊರೆ ಅಪ್ಪಿತಪ್ಪಿಯೂ ನೀಡಬೇಡಿ!
ಮದುವೆ, ಮುಂಜಿ, ಗೃಹ ಪ್ರವೇಶ, ಹುಟ್ಟು ಹಬ್ಬ ಹಾಗೂ ಹಬ್ಬ ಹರಿದಿನಗಳಲ್ಲಿ ಆತ್ಮೀಯರಿಗೆ ಉಡುಗೊರೆಯನ್ನು ನೀಡುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಹೊಸ ಜೀವನಕ್ಕೆ ಕಾಲಿಡುತ್ತಿರುವಾಗ, ಒಳ್ಳೆಯ ಕೆಲಸ ಮಾಡಿದಾಗ ಪ್ರೀತಿಯಿಂದ ಶುಭ ಹಾರೈಕೆ ಮಾಡುವುದಕ್ಕೆ ಈ ಉಡುಗೊರೆ ಪದ್ಧತಿ ಜಾರಿಗೆ ಬಂದಿದೆ. ಕಾಲ ಉರಿಳಿದಂತೆ, ತಲೆ ಮಾರುಗಳ ಬದಲಾವಣೆ ಆಗುತ್ತಿದ್ದಂತೆ ಉಡುಗೊರೆಯ ಆಯ್ಕೆ ಹಾಗೂ ಪದ್ಧತಿಯಲ್ಲೂ ವಿಭಿನ್ನ ಬದಲಾವಣೆಯಾಗುತ್ತಿದೆ.
ನಿಜ, ಉಡುಗೊರೆ ನೀಡಲು ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಜನರೂ ಸಹ ಬದಲಾವಣೆಯ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ಪರಿ ಸರಿಯಾಗಿದೆ ಎನಿಸಿದರೂ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಹಾಗೊಮ್ಮೆ ನೀಡಿದರೂ ಅದನ್ನು ಪಡೆದವರಿಗೆ ಹಾಗೂ ನೀಡಿದವರಿಗೂ ಸಹ ಅಶುಭ ಎನ್ನುವ ಮಾತಿದೆ. ಹಾಗಾದರೆ ಆ ವಸ್ತುಗಳು ಯಾವುದು? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ....

ಮೊನಚಾದ ವಸ್ತುಗಳು
ಕೊಟ್ಟ ಉಡುಗೊರೆ ಉಪಯೋಗಕ್ಕೆ ಬರಬೇಕೆನ್ನುವ ಉದ್ದೇಶದಿಂದ ಕತ್ತಿ, ಚಾಕು, ನೇಲ್ ಕಟರ್ ಹೀಗೆ ಮೊನಚಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಇಂತಹ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಿದರೆ ಅನಪೇಕ್ಷಿತವಾಗಿ ದುರದೃಷ್ಟವನ್ನು ಹೆಚ್ಚಿಸುವುದು ಎಂದು ಹೇಳಲಾಗುವುದು.

ಕರವಸ್ತ್ರ
ಮೈ ಒರೆಸುವ ಬಟ್ಟೆ, ಕರವಸ್ತ್ರ ಇಂತಹ ವಸ್ತುವನ್ನು ನೀಡಬಾರದು. ಇವು ಅಳು ಹಾಗೂ ಬೆವರನ್ನು ಒರೆಸುವ ವಸ್ತುವಾದ್ದರಿಂದ ಭವಿಷ್ಯದಲ್ಲಿ ದುಃಖದ ಸಂಗತಿಗಳೇ ಹೆಚ್ಚಾಗುವುದು. ಇದನ್ನು ನೀಡಿದ ಹಾಗೂ ಪಡೆದ ವ್ಯಕ್ತಿಗಳಿಗೂ ಹಾನಿಕಾರಕ ಎಂದು ಹೇಳಲಾಗುವುದು.

ಪಾದರಕ್ಷೆ
ವಿವಿಧ ವಿನ್ಯಾಸದ ಪಾದರಕ್ಷೆಗಳು ದುಬಾರಿ ಬೆಲೆಯಲ್ಲಿ ಸಿಗುತ್ತವೆ. ಹಾಗಂತ ಇದನ್ನು ಉಡುಗೊರೆ ನೀಡುವ ಉದ್ದೇಶದಿಂದ ಖರೀದಿಸಬಾರದು. ಏಕೆಂದರೆ ಇದನ್ನು ಉಡುಗೊರೆಯಾಗಿ ನೀಡುವುದರಿಂದ ಪಡೆದವರಿಗೆ ಕೆಟ್ಟದ್ದಾಗುವುದು.

ಗಡಿಯಾರ
ಅಲಾರಾಂ, ಗೋಡೆ ಗಡಿಯಾರ, ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದನ್ನು ನೀಡುವುದರಿಂದ ಪಡೆದವರ ಜೀವಿತಾವಧಿಯು ಕಡಿಮೆಯಾಗುತ್ತದೆ ಎನ್ನಲಾಗುವುದು.

ಕಪ್ಪು ಬಟ್ಟೆ
ಕಪ್ಪು ಬಟ್ಟೆಯು ಅಶುಭ, ದುಃಖ, ನೋವಿನ ಸಂಕೇತವಾದ್ದರಿಂದ ಇದನ್ನು ನೀಡಬಾರದು. ಈ ರೀತಿಯ ಉಡುಗೊರೆ ಪಡೆದವರಿಗೆ ಮುಂದಿನ ದಿನದಲ್ಲಿ ಅಶುಭವಾಗುವುದು.



Click it and Unblock the Notifications
