For Quick Alerts
ALLOW NOTIFICATIONS  
For Daily Alerts

  ನಮ್ಮ ರಾಷ್ಟ್ರ ಧ್ವಜದ ಬಗ್ಗೆ ತಿಳಿದಿರಲೇಬೇಕಾದ ಹತ್ತು ಸಂಗತಿಗಳು

  By Arshad
  |

  ಪ್ರತಿ ಭಾರತೀಯನ ಹೆಮ್ಮೆಯ ಸಂಕೇತ ನಮ್ಮ ರಾಷ್ಟ್ರಧ್ವಜ. ಇದು ಕೇವಲ ನಾಲ್ಕು ಬಣ್ಣಗಳ ಈ ಧ್ವಜ ಕೇವಲ ಸ್ವತಂತ್ರ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆಯುವ ಬಟ್ಟೆಯಲ್ಲ, ಬದಲಿಗೆ ರಾಷ್ಟ್ರದ ಗೌರವವನ್ನು ಕಾಪಾಡುವ ಹಾಗೂ ಗ್ರಾಮದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರತಿ ಭಾರತೀಯನ ರಾಷ್ಟ್ರೀಯತೆಯನ್ನು ಬಿಂಬಿಸುವ ಲಾಂಛನವೂ ಆಗಿದೆ. ಆದರೆ ಈ ರಾಷ್ಟ್ರ ಧ್ವಜದ ಬಗ್ಗೆ ನಾವೆಷ್ಟು ಅರಿತಿದ್ದೇವೆ? ಅರಿವಿಲ್ಲದೇ ನಾವು ತಪ್ಪು ಮಾಡುತ್ತಿಲ್ಲ ತಾನೇ?

  ದೇಶದ ಪ್ರಮುಖ ಸ್ಥಳಗಳಲ್ಲಿ ಬಳಸಲಾಗುವ ಈ ರಾಷ್ಟ್ರಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲಿಯೇ (ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮ) ಎಂಬುದು ನಮಗೊಂದು ಹೆಮ್ಮೆಯ ವಿಷಯ. ಇದನ್ನು ಸುಖಾಸುಮ್ಮನೇ ನಮಗೆ ಮನಸ್ಸಿಗೆ ಬಂದಂತೆ ಹೊಲಿದು ಬಳಸುವಂತಿಲ್ಲ. ಬದಲಿಗೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬನ್ನಿ, ಪ್ರತಿಯೊಬ್ಬ ಭಾರತೀಯನೂ ಅರಿತಿರಲೇಬೇಕಾದ ಈ ಮಾಹಿತಿಗಳನ್ನು ಈಗ ಅರಿಯೋಣ....

  22 ನೇ ಜುಲೈ 1947 ರಂದು

  22 ನೇ ಜುಲೈ 1947 ರಂದು

  ಈ ಧ್ವಜ ಕೆಲವರು ಮಾರ್ಪಾಡುಗಳ ಬಳಿಕ ಭಾರತದ ಸಂವಿಧಾನದ ಪ್ರಮುಖ ಸಭೆಯೊಂದರಲ್ಲಿ 22 ನೇ ಜುಲೈ 1947 ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಅಂದರೆ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುನ್ನ ತಿರಂಗವೇ ನಮ್ಮ ರಾಷ್ಟ್ರಧ್ವಜವಾಗಲಿದೆ ಎಂದು ನಮ್ಮ ನಾಯಕರು ವಿಶ್ವಕ್ಕೆ ಸ್ಪಷ್ಟಪಡಿಸಿದ್ದರು.

  ಈ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ

  ಈ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ

  ಈ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ. ಇವರು ಓರ್ವ ಕೃಷಿಕರಾಗಿದ್ದು ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

  ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ

  ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ

  ಈ ಧ್ವಜವನ್ನು ನಮಗೆ ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ. ಬದಲಿಗೆ, ಕಾನೂನು ಸ್ಪಷ್ಟಪಡಿಸಿದಂತೆ ಇದನ್ನು ಖಾದಿ ಬಟ್ಟೆಯಿಂದಲೇ ತಯಾರಿಸಲಾಗುತ್ತದೆ. ಇದರ ಬಟ್ಟೆಯನ್ನು ಚರಕ ಬಳಸಿ ತಯಾರಿಸಿದ ಹತ್ತಿಯ ನೂಲುಗಳನ್ನು ನೇದಿದ ಬಟ್ಟೆಯನ್ನೇ ಬಳಸಬೇಕಾಗುತ್ತದೆ. ಈ ನೂಲುಗಳನ್ನು ಮಹಾತ್ಮಾಗಾಂಧಿಯವರು ಚರಕದಿಂದ ತಯಾರಿಸುತ್ತಿದ್ದ ರೀತಿಯಲ್ಲಿಯೇ ತಯಾರಿಸಲಾಗುತ್ತದೆ.

  ಈ ಧ್ವಜವನ್ನು ತಯಾರಿಸಲು ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ

  ಈ ಧ್ವಜವನ್ನು ತಯಾರಿಸಲು ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ

  ಈ ಧ್ವಜವನ್ನು ತಯಾರಿಸಲು ಭಾರತ ಸರ್ಕಾರದಿಂದ ಕೇವಲ ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ. ಖಾದಿ ಅಭಿವೃದ್ದಿ ಮತ್ತು ಗ್ರಾಮೋದ್ಯೋಗ ಆಯೋಗ ಸಂಸ್ಥೆ ಈ ಅಧಿಕೃತ ಸಂಸ್ಥೆಯಾಗಿದ್ದು ಸ್ಥಳೀಯವಾಗಿ ಧ್ವಜ ತಯಾರಿಸುವ ಅನುಮತಿಯನ್ನು ಇತರ ಸಂಸ್ಥೆಗಳಿಗೆ ನೀಡುವ ಅಧಿಕಾರವನ್ನು ಹೊಂದಿದೆ.

  ನಮ್ಮ ರಾಷ್ಟ್ರಧ್ವಜ ’ತಿರಂಗಾ’ ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರಿಯವಾಗಿದೆ

  ನಮ್ಮ ರಾಷ್ಟ್ರಧ್ವಜ ’ತಿರಂಗಾ’ ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರಿಯವಾಗಿದೆ

  ನಮ್ಮ ರಾಷ್ಟ್ರಧ್ವಜ 'ತಿರಂಗಾ' ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರಿಯವಾಗಿದೆ. ಹಿಂದಿ ಭಾಷೆಯಲ್ಲಿ ತಿರಂಗ ಎಂದರೆ ಮೂರು ಬಣ್ಣಗಳು ಎಂದರ್ಧ. ವಾಸ್ತವದಲ್ಲಿ ನಾಲ್ಕು ಬಣ್ಣಗಳಿವೆ. ಕೇಸರಿ, ಬಿಳಿ ಹಸಿರು ಮತ್ತು ನಡುವಣ ಅಶೋಕಚಕ್ರ ಗಾಢನೀಲಿಬಣ್ಣದ್ದಾಗಿದೆ. ಅಂಗ್ಲ ಭಾಷೆಯ ಟ್ರೈಕಲರ್ ಅಥವಾ ಹಿಂದಿಯ ತಿರಂಗ ಎರಡೂ ಪದಗಳನ್ನು ಯಾವಾಗ ಉಲ್ಲೇಖಿಸಿದರೂ ಇದು ರಾಷ್ಟ್ರಧ್ವಜವೆಂದೇ ಪರಿಗಣಿಸಬೇಕು.

  ಈ ಮೂರೂ ಬಣ್ಣಗಳು ಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತವೆ

  ಈ ಮೂರೂ ಬಣ್ಣಗಳು ಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತವೆ

  ಈ ಮೂರೂ ಬಣ್ಣಗಳು ಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತವೆ. ಕೇಸರಿ:- ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ. ಬಿಳಿಬಣ್ಣ :-ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.ಹಸಿರು ಬಣ್ಣ;- ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.

  ನೀಲಿಯ ಅಶೋಕ ಚಕ್ರವಿದೆ

  ನೀಲಿಯ ಅಶೋಕ ಚಕ್ರವಿದೆ

  ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುತ್ತದೆ.

  ಧ್ವಜಕ್ಕೂ ಒಂದು ನಿಯಮಾವಳಿ ಇದೆ

  ಧ್ವಜಕ್ಕೂ ಒಂದು ನಿಯಮಾವಳಿ ಇದೆ

  ಭಾರತದ ಧ್ವಜಕ್ಕೂ ಒಂದು ನಿಯಮಾವಳಿ ಇದೆ. ಇದರ ಪ್ರಕಾರ ಉದ್ದ ಮತ್ತು ಅಗಲಗಳು ಎರಡು:ಮೂರರ ಅನುಪಾನದಲ್ಲಿಯೇ ಇರುವುದು ಕಡ್ಡಾಯ. ಅಂದರೆ ಅಗಲಕ್ಕಿಂತಲೂ ಉದ್ದ ಒಂದೂವರೆ ಪಟ್ಟು ಇರಬೇಕು. ಮೂರೂ ಬಣ್ಣಗಳು ಸಮಾನವಾದ ಅಗಲ ಮತ್ತು ಉದ್ದವನ್ನು ಹೊಂದಿರಬೇಕು. ಅಲ್ಲದೇ ಅಶೋಕ ಚಕ್ರವನ್ನು ಧ್ವಜದ ಎರಡೂ ಬದಿಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಸಾಮಾನ್ಯವಾಗಿ ರಾಷ್ಟ್ರಧ್ವಜವನ್ನು ಒಂಭತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅತಿ ಚಿಕ್ಕದ್ದು 6×4 ಇಂಚು ಗಾತ್ರ ಹೊಂದಿದ್ದರೆ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರವನ್ನು ಪ್ರತಿನಿಧಿಸುವ ದೊಡ್ಡ ಧ್ವಜಗಳು 21×14 ಅಡಿಯಷ್ಟು ವಿಶಾಲವಾಗಿರುತ್ತವೆ.ದೆಹಲಿಯ ಕೆಂಪುಕೋಟೆ, ರಾಷ್ಟ್ರಪತಿ ಭವನ ಮೊದಲಾದ ಕಟ್ಟಡಗಳ ಮೇಲೆ ಮಧ್ಯಮ ಗಾತ್ರದ, ಅಂದರೆ 12×8 ಅಡಿಯ ಅಳತೆಯ ಧ್ವಜವನ್ನು ಹಾರಿಸಲಾಗುತ್ತದೆ.

  ಅಶೋಕ ಚಕ್ರದ ಗಾತ್ರ

  ಅಶೋಕ ಚಕ್ರದ ಗಾತ್ರ

  ಅಶೋಕ ಚಕ್ರದ ಗಾತ್ರ ಇಷ್ಟೇ ಇರಬೇಕು ಎಂಬ ಸ್ಪಷ್ಟ ನಿಯಮಾವಳಿಯೇನೂ ಇಲ್ಲ. ಆದರೆ ಇದು ಗಾಢನೀಲಿ ಬಣ್ಣದ್ದಾಗಿದ್ದು ಇದರಲ್ಲಿರುವ ಇಪ್ಪತ್ತನಾಲ್ಕು ಕಡ್ಡಿಗಳೂ ಸಮಾನಾಂತರವಾಗಿರಬೇಕು ಹಾಗೂ ಧ್ವಜದ ನಡುವೆ, ಬಿಳಿಪಟ್ಟಿಯ ಮೇಲೆ ಮಾತ್ರವೇ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಇದರ ಅಂಚು ಬಿಳಿ ಪಟ್ಟಿಯನ್ನು ದಾಟುವಂತಿಲ್ಲ.

  ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ

  ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ

  ಈ ಅಶೋಕ ಚಕ್ರವನ್ನು ಚಕ್ರವರ್ತಿ ಅಶೋಕನ ಲಾಂಛನದಲ್ಲಿರುವಂತೆಯೇ ವಿನ್ಯಾಸಗೊಳಿಸಲಾಗಿದೆ. ಸ್ವತಂತ್ರ ಭಾರತದ ಎರಡನೆಯ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಿಳಿಸಿದಂತೆ ಈ ಲಾಂಛನವನ್ನು ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ.

  ರಾಷ್ಟ್ರಧ್ವಜ ಹಾರಿಸುವವರು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳು

  ರಾಷ್ಟ್ರಧ್ವಜ ಹಾರಿಸುವವರು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳು

  * ರಾಷ್ಟ್ರಧ್ವಜವನ್ನು ಹಗಲಿನಲ್ಲಿ, ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರವೇ ಹಾರಿಸಲು ಅನುಮತಿ ಇದೆ. ಆದ್ದರಿಂದ ಧ್ವಜ ಹಾರಿಸುವ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ತಪ್ಪದೇ ಸೂರ್ಯಾಸ್ತಕ್ಕೂ ಮುನ್ನ ಧ್ವಜವನ್ನು ಇಳಿಸುವುದು

  ಕಡ್ಡಾಯವಾಗಿದೆ. ಒಂದು ವೇಳೆ ಮರೆತು ರಾತ್ರಿಯೂ ಧ್ವಜ ಹಾರುತ್ತಿದ್ದರೆ ಇದು ಕಾನೂನಿನ ಉಲ್ಲಂಘನೆಯಾಗಿದ್ದು ಜವಾಬ್ದಾರಿ ಹೊಂದಿದ ವ್ಯಕ್ತಿಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಲೂ ಬಹುದಾಗಿದೆ.

  ಆದರೆ 2009ರಲ್ಲಿ ಪ್ರಸ್ತುತಪಡಿಸಲಾದ ಪ್ರಣಾಳಿಕೆಯ ಪ್ರಕಾರ ಒಂದು ವೇಳೆ ರಾತ್ರಿ ನಡೆಯುವ ಪ್ರಮುಖ ಕಾರ್ಯಕ್ರಮದಲ್ಲಿ (ಉದಾಹರಣೆಗೆ ಕ್ರೀಡಾಕೂಟ) ರಾಷ್ಟ್ರಧ್ವಜ ಹಾರಿಸುವುದು ಅಗತ್ಯವಾಗಿದ್ದರೆ ರಾಷ್ಟ್ರಧ್ವಜ ಹಾರಿಸಬಹುದು, ಆದರೆ ಇದು ಸ್ಪಷ್ಟವಾಗಿ ಕಾಣುವಂತೆ ಬೆಳಕಿನ ವ್ಯವಸ್ಥೆಯನ್ನು ಒದಗಿಸುವುದು ಸಹಾ ಕಡ್ಡಾಯವಾಗಿದೆ. ಅಲ್ಲದೇ ಈ ಉದ್ದೇಶ ಪೂರ್ಣಗೊಂಡ ಬಳಿಕ ಧ್ವಜವನ್ನು ತಪ್ಪದೇ ಇಳಿಸಬೇಕು.

  * ರಾಷ್ಟ್ರದ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.

  * ಅಪ್ಪಿತಪ್ಪಿಯೂ ಹಸಿರು ಬಣ್ಣ ಮೇಲೆ ಬರದಂತೆ ಎಚ್ಚರ ವಹಿಸಬೇಕು.

  * ಬೆಂಕಿ, ಮಳೆ, ಬಿರುಗಾಳಿ ಮೊದಲಾದ ಸಂದರ್ಭದಲ್ಲಿ ಧ್ವಜ ಹಾಳಾಗುವ ಸಂದರ್ಭವಿದ್ದರೆ ತಕ್ಷಣ ಇಳಿಸಬೇಕು ಹಾಗೂ ಧ್ವಜ ಹಾಳಾಗುವುದನ್ನು ತಪ್ಪಿಸಬೇಕು.

  * ಕ್ರೀಡಾಂಗಣಗಳಲ್ಲಿ, ರಾಷ್ಟ್ರನಾಯಕರ ಆಗಮನ ಮೊದಲಾದ ಸಂದರ್ಭದಲ್ಲಿ ಸಾವಿರಾರು, ಲಕ್ಷಾಂತರ ಕಾಗದದ ಚಿಕ್ಕ ಬಾವುಟಗಳನ್ನು ಬಳಸಲಾಗುತ್ತದೆ. ಆದರೆ ಈ ಸಂದರ್ಭ ಕೊನೆಗೊಂಡ ಬಳಿಕ ಜನರು ಈ ಧ್ವಜಗಳನ್ನು ಎತ್ತೆತ್ತಲೋ ಎಸೆಯುತ್ತಾರೆ.

  *ಆದರೆ ಈ ಬಾವುಟಗಳನ್ನು ತ್ಯಾಜ್ಯದ ರೂಪದಲ್ಲಿ ಎಸೆಯುವುದನ್ನು ಪ್ರತಿಬಂಧಿಸಲಾಗಿದ್ದು ಇವನ್ನು ಒಟ್ಟುಗೂಡಿಸಿ ಪ್ರತ್ಯೇಕವಾಗಿ ಗೌರವಪೂರ್ಣವಾಗಿ ನಾಶಪಡಿಸಬೇಕು.

  ಇಂತಹ ಎಲ್ಲಾ ಕಟ್ಟು ಪಾಡುಗಳನ್ನು https://en.wikisource.org/wiki/Flag_Code_of_India

  ತಾಣದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

  English summary

  Things To Know About The Indian National Flag

  The Indian tricolor is the pride of every Indian. It’s not a simple piece of cloth that we salute on every occasion of National interest like Republic Day or Independence Day. It is designed under strict guidelines set exclusively for the Indian National flag. We bring to you some of the facts and information about the national flag of India that we all Indians should be knowing about....
  Story first published: Monday, August 14, 2017, 11:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more