For Quick Alerts
ALLOW NOTIFICATIONS  
For Daily Alerts

  ಅಂದು ಕೆಲಸವಿಲ್ಲದೇ ಊರೂರು ಅಲೆದಾಟ- ಇಂದು 4.4 ಕೋಟಿಯ ಒಡೆಯರು!!

  By Arshad
  |

  ಗೆಲುವಿಗೆ ಸೋಲೇ ಸೋಪಾನ ಎಂಬ ಮಾತೊಂದಿದೆ. ಕೆಲವರು ಸೋಲನ್ನು ಎಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಾರೆ ಎಂದರೆ ಇದು ಜೀವನದಲ್ಲಿ ಪ್ರಮುಖವಾದ ತಿರುವಿಗೆ ಕಾರಣವಾಗಬಹುದು. ನಮ್ಮ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳನ್ನು ಅರಿಯಲು ಸಹಾಹ ಮಾಡಬಹುದು. ಯಶಸ್ವೀ ವ್ಯಕ್ತಿಗಳು ತಮ್ಮ ತಪ್ಪುಗಳಿಂದ ಕಲಿತು ತಮ್ಮನ್ನು ತಾವೇ ತಿದ್ದಿ ಮುಂದುವರೆದಿರುವುದರಿಂದಲೇ ಯಶಸ್ವೀ ವ್ಯಕ್ತಿಗಳಾಗಿರುವುದು ಸತ್ಯ.

  ತಪ್ಪು ಮಾಡಿದ ಕ್ಷಣಗಳೆಂದರೆ ನಮಗೆ ಯಾವ ವಿಷಯದ ಮೇಲೆ ಹೆಚ್ಚಿನ ಗಮನ ನೀಡಬೇಕಿತ್ತು ಹಾಗೂ ಏನು ಮಾಡಬೇಕಿತ್ತು ಎಂಬುದನ್ನು ಅರಿಯುವುದು, ಇದನ್ನು ಸರಿಪಡಿಸುವ ಮೂಲಕ ಜೀವನವನ್ನೂ ಸರಿಪಡಿಸಬಹುದು. ಇಂತಹದ್ದೇ ಒಂದು ಕಥೆ ತನ್ನ ಉದ್ಯೋಗವನ್ನು ಅಕಾಸ್ಮಾತ್ತಾಗಿ ಕಳೆದುಕೊಂಡ ಯುವಕನೊಬ್ಬದದ್ದಾಗಿದೆ. ಬಳಿಕ ಈ ಯುವ ಕೈಗೊಂಡ ನಿರ್ಧಾರಗಳೆಲ್ಲಾ ಮುಂದಿನ ಯಶಸ್ವೀ ಜೀವನಕ್ಕೆ ನಾಂದಿಯಾಯಿತು.

  ಸುಜಯ್ ಸೋಹಾನಿ ಎಂಬುವರೇ ಈ ಯುವಕರಾಗಿದ್ದು ಕೆಲಸ ಕಂಡುಕೊಂಡಿದ್ದನ್ನು ಒಂದು ಸೋಲು ಎಂದು ಭಾವಿಸದೇ ಒಂದು ಅವಕಾಶವಾಗಿ ಪರಿಗಣಿಸಿದರು. ಇವರಿಗೆ ನೆರವು ನೀಡಿದ ಇವರ ಸ್ನೇಹಿತರ ಬೆಂಬಲದ ಪರಿಣಾಮವಾಗಿ ಇಂದು ಇವರ ವಡಾ ಪಾವ್ ಮಾರುವ ವ್ಯಾಪಾರ ಲಂಡನ್ನಿನಲ್ಲಿಯೇ ಯಶಸ್ವಿ ಉದ್ಯಮವಾಗಿದೆ....

  ಇವರು ಆರ್ಥಿಕ ಹಿಂಜರಿತದ ದಿನಗಳಲ್ಲಿ ವ್ಯಾಪಾರ ಪ್ರಾರಂಭಿಸಿದರು

  ಇವರು ಆರ್ಥಿಕ ಹಿಂಜರಿತದ ದಿನಗಳಲ್ಲಿ ವ್ಯಾಪಾರ ಪ್ರಾರಂಭಿಸಿದರು

  ಅಂದು 2010 ಆಗಿತ್ತು, 2008ರ ಆರ್ಥಿಕ ಹಿಂಜರಿತದ ಪರಿಣಾಮಗಳು ಇನ್ನೂ ಸರಿಯಾಗಿರಲಿಲ್ಲ. ಲಂಡನ್ ನಲ್ಲಿ ಉದ್ಯೋಗಿಯಾಗಿದ್ದ ಸುಜಯ್ ಸೋಹಾನಿ ಎಂಬುವರಿಗೆ ತಮ್ಮ ಬಾಸ್ ನಿಂದ ಮೊಬೈಲ್ ಸಂದೇಶವೊಂದು ಬಂದಿತ್ತು. ಈ ಸಂದೇಶದಲ್ಲಿ ಅವರು ಕೆಲಸ ಮಾಡುತ್ತಿದ್ದ ಪಂಚತಾರಾ ಹೋಟಿಲಿನ ಉದ್ಯೋಗವನ್ನು ಕೊನೆಗೊಳಿಸಲಾಗಿದೆ ಎಂದು ಬರೆಯಲಾಗಿತ್ತು.

  ಸುಜಯ್ ಖಿನ್ನತೆಗೆ ಒಳಗಾದರು

  ಸುಜಯ್ ಖಿನ್ನತೆಗೆ ಒಳಗಾದರು

  ತನಗೀಗ ಕೆಲಸವಿಲ್ಲ ಎಂದು ತಿಳಿಯುತ್ತಲೇ ಸುಜಯ್ ಅಧೀರರಾದರು. ಆ ಕ್ಷಣದಲ್ಲಿ ತಮ್ಮ ಬಳಿ ಏನಿದೆ ಎಂದು ನೋಡಿದಾಗ ಅವರಲ್ಲಿ ಒಂದು ವಡಾ ಪಾವ್ ಕೊಳ್ಳಲು ಸಹಾ ಹಣವಿರಲಿಲ್ಲ. ಈ ಸಮಯದಲ್ಲಿ ಹೆತ್ತವರಿಗಿಂತ ಹೆಚ್ಚಾಗಿ ಸ್ನೇಹಿತರೇ ನೆನಪಿಗೆ ಬರುತ್ತಾರಂತೆ. ಇವರಿಗೂ ತಮ್ಮ ಆತ್ಮೀಯ ಸ್ನೇಹಿತರ ನೆನಪಾಗಿ ತಮ್ಮ ದುಃಖವನ್ನು ತೋಡಿಕೊಂಡರು. ಸ್ನೇಹಿತನೊಂದಿಗೆ ನಡೆಸಿದ ಸಂಭಾಷಣೆ ಮುಂದಿನ ಜೀವನವನ್ನೇ ಬದಲಿಸಿತ್ತು.

  ’ನಿನಗೊಂದು ವಡಾ ಪಾವ್ ಅನ್ನೂ ಕೊಡಿಸಲು ಶಕ್ತನಿಲ್ಲ’ ಈ ವಾಕ್ಯವೇ ಬದಲಾವಣೆಗೆ ಮೂಲ

  ’ನಿನಗೊಂದು ವಡಾ ಪಾವ್ ಅನ್ನೂ ಕೊಡಿಸಲು ಶಕ್ತನಿಲ್ಲ’ ಈ ವಾಕ್ಯವೇ ಬದಲಾವಣೆಗೆ ಮೂಲ

  ಸುಜಯ್ ತಮ್ಮ ಆತ್ಮೀಯ ಸ್ನೇಹಿತ ಹಾಗೂ ಕಾಲೇಜಿನ ಸಹಪಾಠಿ ಸುಬೋಧ್ ಜೋಶಿಯವರನ್ನು ಭೇಟಿಯಾದಾದ ಸುಬೋಧ್ ಸಹಾ ಇದೇ ಸ್ಥಿತಿಯಲ್ಲಿದ್ದು ಹಣವಿಲ್ಲದ ಸ್ಥಿತಿಯಲ್ಲಿದ್ದರು. ಆಗ ಇವರ ಹತಾಶರಾಗಿ 'ನಿನಗೊಂದು ವಡಾ ಪಾವ್ ಅನ್ನೂ ಕೊಡಿಸಲು ಶಕ್ತನಿಲ್ಲ' ಎಂದು ಉದ್ಗರಿಸಿದರು. ಈ ವಾಕ್ಯ ಇಬ್ಬರ ಮುಂದಿನ ಜೀವನವನ್ನೇ ಬದಲಿಸಿತು.

  ಇವರ ಪ್ರಸ್ತುತ ಉದ್ಯೋಗದ ಸ್ಥಿತಿ

  ಇವರ ಪ್ರಸ್ತುತ ಉದ್ಯೋಗದ ಸ್ಥಿತಿ

  ಈಗ ಇವರ ಉದ್ಯಮಕ್ಕೆ ಏಳು ವರ್ಷವಾಗಿದ್ದು ಇವರು ತಮ್ಮ ವ್ಯಾಪಾರವನ್ನು ಮೂರು ಮಳಿಗೆಗಳಿಗೆ ವಿಸ್ತರಿಸಿದ್ದಾರೆ. ಒಟ್ಟಾರೆ ವಾರ್ಷಿಕ ವಹಿವಾಟು £5,00,000 ಪೌಂಡುಗಳು ಅಂದರೆ ಸುಮಾರು 4.39 ಕೋಟಿ ರೂಪಾಯಿಗಳಷ್ಟಿದೆ.

  ತಮ್ಮ ವ್ಯಾಪಾರ ಪ್ರಾರಂಭಿಸಲು ಚಿಕ್ಕ ಸ್ಟಾಲ್ ಗಾಗಿ ಹುಡುಕಾಟ ನಡೆಸಿದರು

  ತಮ್ಮ ವ್ಯಾಪಾರ ಪ್ರಾರಂಭಿಸಲು ಚಿಕ್ಕ ಸ್ಟಾಲ್ ಗಾಗಿ ಹುಡುಕಾಟ ನಡೆಸಿದರು

  ವಡಾ ಪಾವ್ ಮಾರಲೆಂದು ಒಂದು ಪುಟ್ಟ ಸ್ಟಾಲ್ ಗಾಗಿ ಇವರು ಸ್ಥಳಕ್ಕಾಗಿ ಹುಡುಕಾಟ ನಡೆಸಿದರು. ಆಗ ನಷ್ಟದಲ್ಲಿ ನಡೆಯುತ್ತಿದ್ದ Polish Ice Cream Café ಎಂಬ ಐಸ್ ಕ್ರೀಂ ಪಾರ್ಲರ್ ಒಂದರ ಮಾಲಿಕರನ್ನು ಭೇಟಿಯಾಗಿ ಇದರ ಕೊಂಚ ಸ್ಥಳವನ್ನು ತಮಗೆ ಬಾಡಿಗೆಗೆ ಕೊಡಲು ವಿನಂತಿಸಿಕೊಂಡರು.

  ನಾನೂರು ಪೌಂಡುಗಳಿಗೆ ಬಾಡಿಗೆಗೆ ದೊರೆತ ಸ್ಥಳ

  ನಾನೂರು ಪೌಂಡುಗಳಿಗೆ ಬಾಡಿಗೆಗೆ ದೊರೆತ ಸ್ಥಳ

  ಹೇಗೂ ನಷ್ಟದಲ್ಲಿದ್ದಾಗ ಕೊಂಚ ಸ್ಥಳ ನೀಡಿ ನಷ್ಟವನ್ನೇಕೆ ಕಡಿಮೆ ಮಾಡಬಾರದು ಎಂದು ಯೋಚಿಸಿದ ಮಾಲಿಕರು ತಿಂಗಳಿಗೆ ನಾನ್ನೂರು ಪೌಂಡ್ ( 35,000 ರೂ) ಗಳ ಬಾಡಿಗೆಗೆ ಕೊಂಚ ಸ್ಥಳಾವಕಾಶ ಒದಗಿಸಿದರು. ಆರ್ಥಿಕ ಹಿಂಜರಿತದ ಕಾರಣ ಯಾರಲ್ಲೂ ಹಣವಿರಲಿಲ್ಲ ಹಾಗೂ ಯಾರಿಗೂ ವಡಾಪಾವ್ ಬೇಡವಾಗಿತ್ತು. ಈ ಸಮಯದಲ್ಲಿ ಭಾರತದ ಅಪ್ಪಟ ದೇಸೀ ರುಚಿಯನ್ನು ಲಂಡನ್ನಿಗರಿಗೆ ತೋರಿಸಲು ಉಚಿತವಾಗಿ ವಡಾ ಪಾವ್ ನ ಚಿಕ್ಕ ಭಾಗವನ್ನು ವಿತರಿಸತೊಡಗಿದರು.

  ಇದು ದೊಡ್ಡ ಯಶಸ್ಸಿಗೆ ಕಾರಣವಾಯಿತು

  ಇದು ದೊಡ್ಡ ಯಶಸ್ಸಿಗೆ ಕಾರಣವಾಯಿತು

  ಸೋಹಾನಿಯವರು ಉದ್ಗರಿಸುವ ಪ್ರಕಾರ " ಮೊದಮೊದಲು ನಾವು ಕೇವಲ ಒಂದು ಪೌಂಡು (ಎಂಭತ್ತು ರೂಪಾಯಿಗೆ) ವಡಾಪಾವ್ ಹಾಗೂ ಒಂದೂವರೆ ಪೌಂಡ್ ಗೆ (131 ರೂ) ಡಾಬೇಲಿ ಎಂಬ ತಿನಿಸನ್ನು ಮಾರಾಟ ಮಾಡುತ್ತಿದ್ದೆವು. ನಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ನಮಗೆ ಇದನ್ನು ಜಾಹೀರಾತಿನ ಮೂಲಕ ಜನರಿಗೆ ತಿಳಿಸಬೇಕಿತ್ತು. ಆದರೆ ನಾವು ಉಚಿತ ಸ್ಯಾಂಪಲ್ ನೀಡುವ ಮೂಲಕ ಜಾಹೀರಾತು ನಡೆಸಿದೆವು ಹಾಗೂ ಇದು ಅಪಾರ ಜನಪ್ರಿಯತೆ ಗಳಿಸಿತು"

  ಇವರಿಗೆ ಭಾರತೀಯ ರೆಸ್ಟೋರೆಂಟ್ ಒಂದು ವ್ಯಾಪಾರದ ಒಪ್ಪಂದಕ್ಕೆ ಕರೆಯಿತು

  ಇವರಿಗೆ ಭಾರತೀಯ ರೆಸ್ಟೋರೆಂಟ್ ಒಂದು ವ್ಯಾಪಾರದ ಒಪ್ಪಂದಕ್ಕೆ ಕರೆಯಿತು

  ಯಾವಾಗ ಇವರ ವಡಾಪಾವ್ ಡಾಬೇಲಿಗಳು ಲಂಡನ್ ನಗರದಲ್ಲಿ ಜನಪ್ರಿಯತೆ ಪಡೆದುಕೊಂಡಿತೋ ಆಗ ಉಳಿದ ವ್ಯಾಪಾರ ಮಳಿಗೆಗಳ ಹುಬ್ಬುಗಳೂ ಮೇಲೇರಿದವು. ಇವರ ಬಗ್ಗೆ ಕುತೂಹಲ ತೋರಿದ ಬಿಗ್ ಬೈಟ್ ಎಂಬ ಭಾರತೀಯ ರೆಸ್ಟೋರೆಂಟ್ ಒಂದರ ಮಾಲಿಕರು ಇವರ ವ್ಯಾಪಾರವನ್ನು ವೃದ್ದಿಸಲು ನೆರವಿನ ಹಸ್ತ ಚಾಚಿದರು. ಇದು ಇವರ ಉದ್ಯಮ ಗಗನಕ್ಕೇರಲು ನಾಂದಿ ಹಾಡಿತು.

  ಪ್ರಸ್ತತ ಇವರ ವಾರ್ಷಿಕ ವಹಿವಾಟು 4.4 ಕೋಟಿ

  ಪ್ರಸ್ತತ ಇವರ ವಾರ್ಷಿಕ ವಹಿವಾಟು 4.4 ಕೋಟಿ

  ಇವರ ಉದ್ಯಮದಲ್ಲಿ ಈಗ ಸುಮಾರು ಮೂವತ್ತೈದು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಹಾಗೂ ಮೂರು ಮಳಿಗೆಗಳಿಗೆ ವ್ಯಾಪಾರ ವಿಸ್ತರಣೆಗೊಂಡಿದೆ. ವಾರ್ಷಿಕ ನಾಲ್ಕೂವರೆ ಕೋಟಿಯ ಆಸುಪಾಸು ವಹಿವಾಟು ನಡೆಸುತ್ತಿದ್ದಾರೆ. ಈ ಯಶಸ್ಸಿನ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ.

  Image Courtesy

  English summary

  They Make Rs 4.4 Crore A Year By Selling Vada Pav In London

  One such is a case of a young man whose perfect life went for a toss when he lost his job unexpectedly. However, what he did post that is worth reading again and again to be inpired. Sujay Sohani and his friend are so successful in their business that they are making a net profit by just selling vada pav in London!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more