ಮನುಷ್ಯರಂತೆ ಈ ಹುಲಿಗಳೂ ಬೊಜ್ಜನ್ನು ಬೆಳಸಿಕೊಂಡಿವೆ!

By: Deepu
Subscribe to Boldsky

ಮನುಷ್ಯ ಇದ್ದಬದ್ದದೆಲ್ಲವನ್ನು ತಿಂದುಕೊಂಡು ಬೊಜ್ಜು ಬೆಳೆಸಿರುವುದನ್ನು ನೀವು ನೋಡಿರುತ್ತೀರಿ. ಬೊಜ್ಜಿನ ಸಮಸ್ಯೆಯಿಂದಾಗಿ ಮನುಷ್ಯನ ದೇಹದಲ್ಲಿ ಹಲವಾರು ರೀತಿಯ ರೋಗಗಳು ಕೂಡ ಕಾಣಿಸಿಕೊಳ್ಳುತ್ತವೆ. ಅದೇ ಬೊಜ್ಜನ್ನು ನಿವಾರಣೆ ಮಾಡಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಆದರೆ ಮನುಷ್ಯರಂತೆ ಪ್ರಾಣಿಗಳಿಗೆ ಬೊಜ್ಜು ಬಂದರೆ ಹೇಗಿರಬಹುದು? ಹುಲಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಟವಾದ ಗುಣಗಳಿವು!

ಈಗ ಮನುಷ್ಯರಂತೆ ಪ್ರಾಣಿಗಳು ಕೂಡ ಬೊಜ್ಜು ಬೆಳೆಸಿಕೊಂಡಿವೆ. ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿರುವ ಸೈಬೀರಿಯಾದ ಹುಲಿಗಳು ಅತಿಯಾಗಿ ತಿಂದುಕೊಂಡು ಈಗ ಬೊಜ್ಜು ಬೆಳೆಸಿಕೊಂಡಿವೆ. ಆದರೆ ಇದು ಅವುಗಳ ಜೀವಕ್ಕೆ ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ.   ಅಂತಾರಾಷ್ಟ್ರೀಯ ಹುಲಿ ದಿನಾಚರಣೆ-ಮೈನವಿರೇಳಿಸುವ ಸಂಗತಿ

ಈ ಹುಲಿಗಳು ಬೊಜ್ಜನ್ನು ಬೆಳಸಿಕೊಂಡಿವೆ. ಆದರೆ ಆರೋಗ್ಯವಾಗಿಲ್ಲ. ಇದರಿಂದ ಅವುಗಳಿಗೆ ಹಲವಾರು ಸಮಸ್ಯೆಗಳು ಕಾಣಿಸುತ್ತಾ ಇದೆ. ಈ ಫೋಟೋಗಳನ್ನು ನೋಡಿದರೆ ಹುಲಿಗಳು ಯಾವ ರೀತಿ ಬೊಜ್ಜು ಬೆಳೆಸಿಕೊಂಡಿವೆ ಎಂದು ನಿಮಗೆ ಅರ್ಥವಾಗುತ್ತದೆ...

ಚೀನಾದ ಸೈಬೀರಿಯಾ ಹುಲಿಗಳ ಪ್ರಾಣಿಸಂಗ್ರಹಾಲಯದಲ್ಲಿ

ಚೀನಾದ ಸೈಬೀರಿಯಾ ಹುಲಿಗಳ ಪ್ರಾಣಿಸಂಗ್ರಹಾಲಯದಲ್ಲಿ

ಈ ಬೊಜ್ಜಿನ ಹುಲಿಗಳು ಚೀನಾದ ಸೈಬೀರಿಯಾ ಹುಲಿಗಳ ಪ್ರಾಣಿಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ವಿಶ್ವದಲ್ಲಿ ಸೈಬೀರಿಯಾದ ಹುಲಿಗಳೀಗೆ ಅತ್ಯಂತ ದೊಡ್ಡ ಪ್ರಾಣಿಸಂಗ್ರಹಾಲಯ ಇದಾಗಿದೆ. ಈ ಪ್ರಾಣಿಸಂಗ್ರಹಾಲಯದಲ್ಲಿ 2016ರಲ್ಲಿ ಸುಮಾರು 90 ಹುಲಿಗಳು ಜನಿಸಿದ್ದವು.

ವೈರಲ್ ಆದ ಫೋಟೋಗಳು

ವೈರಲ್ ಆದ ಫೋಟೋಗಳು

ಚೀನಾದ ಈಶಾನ್ಯ ಭಾಗ ಹರ್ಬಿನ್ ಪ್ರಾಂತ್ಯದಲ್ಲಿ ಇರುವಂತಹ ಸೈಬೀರಿಯನ್ ಹುಲಿಗಳ ಪ್ರಾಣಿಸಂಗ್ರಹಾಲಯದಲ್ಲಿ ಈ ಬೊಜ್ಜು ದೇಹದ ಹುಲಿಗಳು ಪತ್ತೆಯಾಗಿವೆ. ಈ ಹುಲಿಗಳ ಫೋಟೊಗಳು ಈಗ ಕಾಡ್ಗಿಚ್ಚಿನಂತೆ ಪ್ರತಿಯೊಂದು ಕಡೆಯೂ ಹಬ್ಬಿದೆ. ಹುಲಿಗಳ ಬೊಜ್ಜಿನ ಬಗ್ಗೆ ಪ್ರತಿಯೊಬ್ಬರು ಚಿಂತೆ ವ್ಯಕ್ತಪಡಿಸಿದ್ದಾರೆ.

ಹುಲಿಗಳಿಗೆ ಬೊಜ್ಜು ಬರುವುದು ಸ್ವಾಭಾವಿಕ

ಹುಲಿಗಳಿಗೆ ಬೊಜ್ಜು ಬರುವುದು ಸ್ವಾಭಾವಿಕ

ಚಳಿಗಾಲದ ಸಮಯದಲ್ಲಿ ಹುಲಿಗಳು ಅತಿಯಾಗಿ ತಿನ್ನುವುದು ಸ್ವಾಭಾವಿಕವಾಗಿದೆ ಎಂದು ಹುಲಿಗಳನ್ನು ನೋಡಿಕೊಳ್ಳುತ್ತಾ ಇರುವವರು ಹೇಳಿದ್ದಾರೆ. ಸೈಬೀರಿಯಾದ ಚಳಿಯನ್ನು ಸಹಿಸಿಕೊಳ್ಳುವ ಸಲುವಾಗಿ ಹುಲಿಗಳು ಈ ರೀತಿ ತಿಂದು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ ಎನ್ನುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ

ಸಾಮಾಜಿಕ ಜಾಲತಾಣಗಳಲ್ಲಿ

ಚೀನಾದ ಸ್ಪ್ರಿಂಗ್ ಹಬ್ಬದ ವೇಳೆ ಹುಲಿಗಳಿಗೆ ಸ್ವಲ್ಪ ಅತಿಯಾಗಿಯೇ ತಿನ್ನಲು ನೀಡಲಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಹುಲಿಗಳ ಆರೋಗ್ಯದ ದೃಷ್ಟಿಯಿಂದ ಅವುಗಳು ಆದಷ್ಟು ಬೇಗನೆ ತಮ್ಮ ಹಿಂದಿನ ತೂಕಕ್ಕೆ ಮರಳಲಿ ಎಂದು ನಾವು ಹಾರೈಸುತ್ತೇವೆ. Image courtesy

 
English summary

These Tigers Are Grabbing Attention For All The Wrong Reasons!

There Can One Find These Chubby Tigers? These tigers are seen in the Siberian Tiger Park, which is the largest natural park for wild Siberian tigers in the world at present. There are 90 big cats that were born in 2016 alone in this zoo.
Please Wait while comments are loading...
Subscribe Newsletter