Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇವರು ಶ್ರಮ ವಹಿಸಿ ಕೆಲಸ ಮಾಡುವ ರಾಶಿಯವರು! ಇವರಿಗೆ ಫಲ ಸಿಕ್ಕಿಯೇ ಸಿಗುತ್ತದೆ
ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲವೆನ್ನುವ ಮಾತಿದೆ. ಯಾವುದೇ ಗುರಿ ಸಾಧಿಸಲು ಕಠಿಣ ಪರಿಶ್ರಮವಿದ್ದರೆ ಮಾತ್ರ ಸಾಧ್ಯ. ಆದರೆ ಕೆಲವರು ಅಡ್ಡಮಾರ್ಗ ಹಿಡಿದು ಗುರಿ ಸಾಧಿಸಲು ಪ್ರಯತ್ನಿಸುವರು. ಇದು ಸರಿಯಾದ ವಿಧಾನವಲ್ಲ. ಇಂತವರೊಂದಿಗೆ ಯಶಸ್ಸು ಹೆಚ್ಚು ಸಮಯ ಉಳಿಯದು. ಕಠಿಣ ಪರಿಶ್ರಮವಿದ್ದರೆ ನಿಮಗೆ ದೇವರು ಕೂಡ ಒಲಿಯುತ್ತಾನೆ. ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಯಶಸ್ಸು ಮಾತ್ರ ಸಿಗುವುದೇ ಇಲ್ಲ.
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವಾಗ ತುಂಬಾ ನಿರಾಶೆಯಾಗುವುದು. ಆದರೆ ನಿಮ್ಮ ಪರಿಶ್ರಮಕ್ಕೆ ರಾಶಿಯ ಬೆಂಬಲವಿದ್ದರೆ ಖಂಡಿತವಾಗಿಯೂ ನೀವು ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು ಎಂದು ಹೇಳಲಾಗುತ್ತದೆ. ಯಾಕೆಂದರೆ ನಿಮ್ಮ ಜೀವನದ ಪ್ರತಿಯೊಂದು ಆಗುಹೋಗುಗಳನ್ನು ರಾಶಿಯು ಅವಲಂಬಿಸಿದೆ. ಅದೇ ರೀತಿ ರಾಶಿಗಳ ಪ್ರಕಾರ ಮೂರು ಲಕ್ಷಣಗಳು ಕಠಿಣ ಪರಿಶ್ರಮಿಗಳನ್ನು ಗುರುತಿಸುವುದು ಎಂದು ತಿಳಿದುಬಂದಿದೆ. ಇದು ಯಾವುದೆಂದು ಮುಂದೆ ಓದುತ್ತಾ ತಿಳಿಯಿರಿ....

ಮಕರ
ಒಟ್ಟು 12 ರಾಶಿಗಳಲ್ಲಿ ಮಕರ ರಾಶಿಯವರು ತುಂಬಾ ಕಠಿಣ ಪರಿಶ್ರಮಿಗಳು ಎಂದು ಹೇಳಲಾಗುತ್ತದೆ. ಇವರಿಗೆ ಯಾವತ್ತೂ ಕೆಲಸದಿಂದ ಆಯಾಸವಾಗುವುದಿಲ್ಲ. ಪುರಾತನ ವೇದಿಕ ಜ್ಯೋತಿಷ್ಯದ ಪ್ರಕಾರ ಆಡು ತುಂಬಾ ಪರಿಶ್ರಮಿ ಮತ್ತು ತಮಗೆ ಬೇಕಿರುವುದನ್ನು ತುಂಬಾ ಪರಿಣಾಮಕಾರಿಯಾಗಿ ಪಡೆದುಕೊಳ್ಳುತ್ತವೆ. ಕೆಲಸ ಸಣ್ಣ ಆಥವಾ ದೊಡ್ಡದಿದ್ದರೂ ಮಕರ ರಾಶಿಯವರು ತುಂಬಾ ಪರಿಶ್ರಮಿಗಳು. ಈ ರಾಶಿಯವರು ಹೆಚ್ಚು ಶ್ರಮ ಜೀವಿಗಳಾಗಿರುತ್ತಾರೆ. ಎಲ್ಲಾ ರಾಶಿಯವರಿಗಿಂತ ಇವರು ಹೆಚ್ಚು ಶ್ರಮ ಪಟ್ಟು ದುಡಿಯುತ್ತಾರೆ ಎಂದು ಹೇಳಬಹುದು. ಇವರಿಗೆ ಕೆಲಸ ಮಾಡಲು ಆಯ್ಕೆಯ ಅಗತ್ಯವಿರುವುದಿಲ್ಲ. ಎಲ್ಲಾ ಕೆಲಸವನ್ನು ಸುಸೂತ್ರವಾಗಿ ನೆರವೇರಿಸುತ್ತಾರೆ. ಅವರು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು ಮಾಡುವುದರಿಂದ ಕೆಲಸದಲ್ಲಿ ಪರಿಪೂರ್ಣತೆ ಇರುವುದನ್ನು ಗಮನಿಸಬಹುದು. ಇನ್ನು ಈ ರಾಶಿಯವರು ಹಠ, ಜವಾಬ್ದಾರಿ ಹಾಗೂ ರಾಜತಾಂತ್ರಿಕತೆ ಸ್ವಭಾವ ಹೊಂದಿರುತ್ತಾರೆ. ಇವರು ತಂದೆಯ ಸ್ಥಾನದಲ್ಲಿ ನಿಂತು ಆರೈಕೆಯನ್ನು ಮಾಡುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ವೃಷಭ
ಭೂಮಿಯ ಚಿಹ್ನೆಯನ್ನು ಹೊಂದಿರುವ ಇವರು ಸ್ಥಿರತೆ ಮತ್ತು ಆಧಾರವಾಗಿರುವ ದೃಷ್ಟಿಕೋನವನ್ನು ಹೊಂದಿರುತ್ತಾರೆ. ವರು ಜೀವನದಲ್ಲಿ ಅನನ್ಯವಾದ ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ತಾವು ಕೈಗೊಂಡ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿ ಶ್ರಮ ಜೀವಿಗಳಾಗಿ ಕೆಲಸ ನಿರ್ವಹಿಸುತ್ತಾರೆ. ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮಿಥುನ
ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿ ಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು. ಇವರು ಸ್ವಭಾವತಹ ಸ್ಥಿರವಾದ ಮನಸ್ಸಿನವರು. ಹಾಗಿದ್ದರೂ ಹೆಚ್ಚು ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳು. ಇವರನ್ನು ಇಷ್ಟ ಪಟ್ಟವರಿಗಾಗಿ ಹಾಗೂ ತಾವು ಕಂಡ ಕನಸನ್ನು ನೆರವೇರಿಸಿಕೊಳ್ಳಲು ಎಷ್ಟೇ ಕಷ್ಟವಾದರೂ ಶ್ರಮದಿಂದ ಪೂರೈಸುತ್ತಾರೆ. ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ.

ಕಟಕ
ಕಟಕ ರಾಶಿ ಇವರು ಹೊಸ ಹೊಸ ಯೋಜನೆ ಕೈಗೊಳ್ಳುವ ಮೊದಲು ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಲುಕ್ ಬದಲಾದರೆ ಲಕ್ ಸಹ ಬದಲಾಗುತ್ತದೆ. ಯಶಸ್ಸು ಸಹ ಸಿಕ್ಕುತ್ತದೆ ಎಂದು ಹೇಳುತ್ತದೆ ರಾಶಿ ಭವಿಷ್ಯ. ಇನ್ನು ಈ ರಾಶಿಯವರು ಕರಣಾಮಯಿಗಳು, ಕಲಾತ್ಮಕತೆ ಹಾಗೂ ರಕ್ಷಣಾತ್ಮಕವಾಗಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಚರ್ಚೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವಲ್ಲಿ ನೈಪುಣ್ಯರು. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ. ಇನ್ನು ಇವರು ಅತ್ಯಂತ ಶ್ರಮಜೀವಿಗಳು ಎಂದು ತೋರುವುದಿಲ್ಲ. ಆದರೂ ಕೆಲಸಗಳನ್ನು ಆಳವಾದ ಆಲೋಚನೆಗಳ ಮೂಲಕ ಪೂರ್ಣಗೊಳಿಸುತ್ತಾರೆ. ಕೈಗೊಂಡ ಕೆಲಸವನ್ನು ಪ್ರೀತಿಯಿಂದ ನೆರವೇರಿಸುತ್ತಾರೆ.

ಸಿಂಹ
ಸಿಂಹದ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಅಧಿಕಾರವನ್ನು ಪ್ರೀತಿಸುತ್ತಾರೆ. ತಮ್ಮ ಕೆಲಸವನ್ನು ಬಹಳ ಸುಲಭವಾಗಿ ಇತರರ ಸಹಾಯ ಪಡೆದುಕೊಂಡು ನೆರವೇರಿಸಿಕೊಳ್ಳುವರು. ಬುದ್ಧಿ ಶಕ್ತಿಯ ಜೊತೆಗೆ ದೈಹಿಕ ಶಕ್ತಿಯನ್ನು ಉಪಯೋಗಿಸಿ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಜನರ ನಡುವೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಿಕೆ ಇವರಿಗೆ ಜನ್ಮಜಾತವಾಗಿ ಬಂದಿರುತ್ತದೆ. ಇದನ್ನು ಬಳಸಿಕೊಂಡರೆ ಸಾಕು ಇವರು ಯಶಸ್ಸು ಗಳಿಸಬಹುದು. ಅಲ್ಲದೆ ಅಧಿಕಾರ ಹಾಗೂ ನಾಯಕತ್ವದ ನಿಜವಾದ ಅಭಿಲಾಷೆ ಇವರಲ್ಲಿ ಇರುತ್ತದೆ. ಇವರು ತುಂಬಾ ಆತ್ಮವಿಶ್ವಾಸ, ಆಶಾವಾದಿ, ವರ್ಚಸ್ವಿ ಮತ್ತು ಹುಟ್ಟು ಮನೋರಂಜಕರಾಗಿರುತ್ತಾರೆ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕನ್ಯಾ
ಕನ್ಯಾ ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಲ್ಲದೆ ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು. ಇವರು ಜೀವನದಲ್ಲಿ ಬಹಳ ಸಂಘಟಿತರಾಗಿರುತ್ತಾರೆ. ಇವರು ಜೀವನದಲ್ಲಿ ಹೆಚ್ಚು ಕಷ್ಟು ಪಟ್ಟು ದುಡಿಯಲು ಇಷ್ಟ ಪಡುವುದಿಲ್ಲ. ಬಹಳ ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ. ಇವರು ಬಯಸಿದ್ದನ್ನು ಪಡೆಯಲು ಇಚ್ಛಿಸುತ್ತಾರೆ. ಆದರೆ ಶ್ರಮವಹಿಸುವುದಿಲ್ಲ.

ತುಲಾ
ಇವರು ಕೆಲಸದ ಮೇಲೆ ನಿಗಾವಹಿಸಬೇಕು ಮತ್ತು ಕೆಲಸದ ನಡುವೆ ವಿಶ್ರಾಂತಿಯನ್ನು ಸಹ ಪಡೆಯಬೇಕಾಗುತ್ತದೆ. ವಿಶ್ರಾಂತಿಗಳು ಇವರ ಗಮನವನ್ನು ಗುರಿಯೆಡೆಗೆ ಕೇಂದ್ರೀಕರಿಸಲು ನೆರವಾಗುತ್ತದೆ ಮತ್ತು ಯಶಸ್ಸನ್ನು ಸಹ ನೀಡುತ್ತದೆ. ಒತ್ತಡ ರಹಿತವಾಗಿ ಕೆಲಸ ಮಾಡಿ ಯಶಸ್ಸು ಪಡೆಯಿರಿ. ಈ ರಾಶಿಯವರು ರಾಜತಾಂತ್ರಿಕ ಮತ್ತು ಸ್ನೇಹಪರರಾಗಿರುತ್ತಾರೆ. ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ. ಇವರಿಗೆ ಸರ್ಕಾರಿ, ಸಾಮಾಜಿಕ ಕೆಲಸ ಮತ್ತು ಕಾನೂನು ಜಾರಿ ವೃತ್ತಿ ಸೂಕ್ತವಾಗಿರುತ್ತದೆ.ಇವರು ಸಾಕಷ್ಟು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ. ಎಲ್ಲಾ ಸಮಯದಲ್ಲೂ ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಇವರ ಕೆಲಸದಲ್ಲಿ ನಿಧಾನಗತಿಯಿದ್ದರೂ ಗುರಿಯು ಪೂರ್ಣಗೊಳ್ಳುವುದು. ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಲ್ಲದೆ ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿ ಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ.

ವೃಶ್ಚಿಕ
ಚೇಳಿನ ಚಿಹ್ನೆಯನ್ನು ಹೊಂದಿರುವ ಇವರು ಸಾಕಷ್ಟು ಕೆಸವನ್ನು ಮಾಡುತ್ತಾರೆ. ಆದರೆ ಅದನ್ನು ಬಹಳ ಶ್ರಮ ಪಟ್ಟು ಮಾಡುವ ಗೋಜಿಗೆ ಹೋಗುವುದಿಲ್ಲ. ಆಸೆಯನ್ನು ಹೊಂದಿರುತ್ತಾರೆಯಾದರೂ ನಿಧಾನವಾಗಿ ಕೆಲಸ ನಿರ್ವಹಿಸುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಅಷ್ಟೇ ಅಲ್ಲದೆ ಸಂಪನ್ಮೂಲ, ವಿಶ್ಲೇಷಾತ್ಮಕ ಹಾಗೂ ಅರ್ಥಗರ್ಭಿತ ಸ್ವಭಾವದವರು ಇವರಾಗಿರುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನು
ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು.ಇವರು ಆಲಸ್ಯ ಪ್ರವೃತ್ತಿಯವರು ಎನ್ನಬಹುದು. ಶ್ರಮಪಟ್ಟು ಕೆಲಸಮಾಡುವವರಲ್ಲಿ ಕೊನೆ ಸ್ಥಾನವನ್ನು ಪಡೆದುಕೊಳ್ಳುವರು. ಇವರಿಗೆ ಯಾವುದೇ ಸಂಘಟಿತ ಯೋಜನೆ, ಆಲೋಚನೆ ಇರುವುದಿಲ್ಲ. ಹಾಗೆಯೇ ಮಾಡಬೇಕೆಂದಿದ್ದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಎನ್ನಬಹುದು. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು. ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

ಮಕರ
ಇವರು ಜನ್ಮತಃ ನಾಯಕರಾಗಿರುತ್ತಾರೆ ಆದರೆ ಇವರು ಯಾವಾಗಲೂ ಇತರರಿಗೆ ಉದಾಹರಣೆಯನ್ನು ನೀಡಲು ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸ್ವಲ್ಪ ಹಿಂದೆ ನಿಂತು ನೋಡುವುದು ಒಳ್ಳೆಯದು. ಯಾವಾಗಲೂ ಮುನ್ನುಗ್ಗಬೇಡಿ. ತಾಳ್ಮೆ ಇರಲಿ. ಇನ್ನು ಈ ರಾಶಿಯವರು ಹಠ, ಜವಾಬ್ದಾರಿ ಹಾಗೂ ರಾಜತಾಂತ್ರಿಕತೆ ಸ್ವಭಾವ ಹೊಂದಿರುತ್ತಾರೆ. ಇವರು ತಂದೆಯ ಸ್ಥಾನದಲ್ಲಿ ನಿಂತು ಆರೈಕೆಯನ್ನು ಮಾಡುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ಕುಂಬ
ನೀರಿನಿಂದ ಕೂಡಿರುವ ಚಿಹ್ನೆ ಇವರದ್ದು. ಶ್ರಮಪಟ್ಟು ಕೆಲಸ ಮಾಡುವುದರಲ್ಲಿ ಇವರದ್ದು ಎರಡನೇ ಸ್ಥಾನ ಎನ್ನಬಹುದು. ಇವರು ಅನೇಕ ಕನಸನ್ನು ಹೊಂದಿರುತ್ತಾರೆ ಅದನ್ನು ನೆರವೇರಿಸಿಕೊಳ್ಳಲು ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕೈಗೆತ್ತಿಕೊಂಡ ಕನಸನ್ನು ಪೂರ್ಣಗೊಳಿಸುವಲ್ಲಿ ನಿಸ್ಸೀಮರು ಎನ್ನಬಹುದು. ಇವರು ಜೀವನದಲ್ಲಿ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ. ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ. ಇವರು ಮೂಲತಃ ಸಂಶೋಧಕರು ಮತ್ತು ಅಸಂಪ್ರದಾಯಿಕ ಚಿಂತಕರಾಗಿರುತ್ತಾರೆ. ಇವರಿಗೆ ಹೊಸ ತಂತ್ರಜ್ಞಾನವು ಕೊಡುಗೆಯಾಗಿ ಬಂದಿರುತ್ತದೆ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಳಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ. ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮೀನ
ಒಬ್ಬ ಸ್ವಯಂಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯ ಹೆಚ್ಚಿನವರು ಹುತಾತ್ಮರಾಗುತ್ತಾರೆಂದು ಹೇಳಲಾಗುತ್ತದೆ. ಇವರು ತಮ್ಮ ಅಗತ್ಯತೆಯನ್ನು ಬದಿಗಿಟ್ಟು ಇತರರ ಅಗತ್ಯತೆಗಳನ್ನು ಮೊದಲು ಪೂರೈಸುವವರು. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.



Click it and Unblock the Notifications











