ವ್ಯಕ್ತಿಯ ವ್ಯಕ್ತಿತ್ವ ಹೇಳುವ ಅಂಗೈ ಮೇಲಿನ ಚಿಹ್ನೆಗಳು..

Posted By: Lekhaka
Subscribe to Boldsky

ಜ್ಯೋತಿಷಿಗಳು ಅಂಗೈ ನೋಡಿ ಭವಿಷ್ಯ ಹೇಳುತ್ತಾರೆ. ಇದು ನಮಗೆ ವಿಚಿತ್ರವೆಂದು ಕಂಡರೂ ಅಂಗೈಯಲ್ಲಿ ಇರುವಂತಹ ಕೆಲವೊಂದು ಗೆರೆಗಳು ಮತ್ತು ಆರೋಹಣಗಳ ಬಗ್ಗೆ ಸರಿಯಾಗಿ ಅಧ್ಯಯನ ಮಾಡಿಕೊಂಡರೆ ನಿಮಗೂ ಜ್ಯೋತಿಷ್ಯ ಹೇಳಬಹುದು. ಒಬ್ಬ ವ್ಯಕ್ತಿ ವ್ಯಕ್ತಿತ್ವನ್ನು ಈ ಆರೋಹಣಗಳು ತಿಳಿಸುವುದು. ಈ ಆರೋಹಣಗಳಿಗೆ ತಮ್ಮದೇ ಆಗಿರುವ ಪ್ರಾಮುಖ್ಯತೆ ಹಾಗೂ ಮಹತ್ವವಿದೆ. ಆರೋಹಣಗಳು ನಿಮ್ಮ ಅಂಗೈಯಲ್ಲಿ ಇದ್ದರೆ ಅದು ವೈಯಕ್ತಿಕವಾಗಿ ನಿಮ್ಮ ಶಕ್ತಿಯನ್ನು ಪ್ರತಿನಿಧಿಸುವುದು.

ಈ ಲೇಖನದಲ್ಲಿ ವ್ಯಕ್ತಿಯೊಬ್ಬನ ಶಕ್ತಿಯನ್ನು ಹೇಳುವಂತಹ ಕೆಲವೊಂದು ಚಿಹ್ನೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇ. ಅಂಗೈಯಲ್ಲಿ ಇರುವಂತಹ ಆರೋಹಣಗಳಿಗೆ ಅನುಗುಣವಾಗಿ ಅವುಗಳು ಎಷ್ಟು ಪ್ರಭಾವಶಾಲಿ ಎಂದು ನಿಮಗೆ ತಿಳಿಸಲಿದ್ದೇವೆ. ನಿಮ್ಮ ಅಂಗೈಯಲ್ಲಿ ಈ ಆರೋಹಣಗಳು ಇದೆಯಾ ಎಂದು ತಿಳಿಯಿರಿ...

ಮಂಗಳನ ಆರೋಹಣಗಳು

ಮಂಗಳನ ಆರೋಹಣಗಳು

ಅಂಗೈಯಲ್ಲಿರುವ ಮಂಗಳನ ಆರೋಹಣವು ಎರಡು ಹಂತಗಳನ್ನು ಒಳಗೊಂಡಿದೆ. ಒಂದು ಮೇಲ್ಬಾಗ ಮತ್ತು ಕೆಳಭಾಗ. ಮೇಲ್ಭಾಗದ ಆರೋಹಣವು ಚಂದ್ರ ಮತ್ತು ಗುರುವಿನ ಮಧ್ಯದಲ್ಲಿ ಇರುವುದು. ಕೆಳಭಾಗದ ಆರೋಹಣವು ಜೀವಗೆರೆಯ ಆರಂಭ ಮತ್ತು ಶುಕ್ರನ ಆರೋಹಣದ ಮಧ್ಯದಲ್ಲಿರುವುದು. ಮಂಗಳನ ಆರೋಹಣವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಮಂಗಳನ ಆರೋಹಣದ ವಿವರಣೆ

ಮಂಗಳನ ಆರೋಹಣದ ವಿವರಣೆ

ನಿಮ್ಮ ಅಂಗೈಯಲ್ಲಿರುವ ಮಂಗಳನ ಆರೋಹಣವು ಉಬ್ಬುತ್ತಾ ಇದ್ದರೆ ಆಗ ನೀವು ತುಂಬಾ ಆತ್ಮವಿಶ್ವಾಸಿ, ಧೈರ್ಯವಂತ ಮತ್ತು ಸಮತೋಲಿನ ವ್ಯಕ್ತಿತ್ವ ಇರುವವರು ಎನ್ನಬಹುದು. ಇಂತಹ ಜನರು ಸ್ವಯಂ ಚೇತರಿಕೆ ಪಡೆದುಕೊಳ್ಳುವರು ಮತ್ತು ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕುಂದುವುದಿಲ್ಲ.

ಮೇಲ್ಭಾಗದ ಮಂಗಳನು ಸಂಪೂರ್ಣವಾಗಿ ಬೆಳೆದಿದ್ದರೆ...

ಮೇಲ್ಭಾಗದ ಮಂಗಳನು ಸಂಪೂರ್ಣವಾಗಿ ಬೆಳೆದಿದ್ದರೆ...

ಒಬ್ಬ ವ್ಯಕ್ತಿಯ ಅಂಗೈಯಲ್ಲಿರುವ ಮಂಗಳನ ಆರೋಹಣವು ಸಂಪೂರ್ಣವಾಗಿ ಬೆಳೆದಿದ್ದರೆ ಭಾಗಲಬ್ದ ಮತ್ತು ಸ್ಪಷ್ಟವಾಗಿರುವ. ಇಂತಹ ವ್ಯಕ್ತಿಗಳು ಕಾನೂನು ಮತ್ತು ಸಾರ್ವಜನಿಕರ ಸಂಪರ್ಕ ಹೆಚ್ಚು ಇರುವಂತಹ ಕೆಲಸಗಳಲ್ಲಿ ಯಶಸ್ವಿಯಾಗುವರು. ಇವರು ಸಮಯ ಕಳೆದಂತೆ ತುಂಬಾ ಬಲಿಷ್ಠ ಹಾಗೂ ಶಕ್ತಿಶಾಲಿಯಾಗುವರು.

ಕೆಳಗಿನ ಮಂಗಳವು ಸಂಪೂರ್ಣವಾಗಿ ಬೆಳೆದಿದ್ದರೆ...

ಕೆಳಗಿನ ಮಂಗಳವು ಸಂಪೂರ್ಣವಾಗಿ ಬೆಳೆದಿದ್ದರೆ...

ಕೆಳಭಾಗದ ಮಂಗಳ ಆರೋಹಣವು ಸಂಪೂರ್ಣವಾಗಿ ಬೆಳೆದಿದ್ದರೆ ಆಗ ಇಂತಹ ವ್ಯಕ್ತಿಯನ್ನು ತುಂಬಾ ಕಟು ನಡವಳಿಕೆಯ ವ್ಯಕ್ತಿಯೆನ್ನಬಹುದು. ಇಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಇನ್ನೊಂದು ಬದಿಯಲ್ಲಿ ಇವರು ಹಲವಾರು ಸಮಸ್ಯೆಗಳನ್ನು ಎದುರಿಸುವರು. ಇದನ್ನು ಸರಿಪಡಿಸಲು ಅವರು ಹೆಣಗಾಡುವರು.

ಈ ಚಿಹ್ನೆ ಇರುವಂತಹ ಜನರು ಎದುರಿಸುವಂತಹ ಸಮಸ್ಯೆಗಳು

ಈ ಚಿಹ್ನೆ ಇರುವಂತಹ ಜನರು ಎದುರಿಸುವಂತಹ ಸಮಸ್ಯೆಗಳು

ತಮ್ಮ ಅಂಗೈ ಮೇಲೆ ಕೆಂಪು ವರ್ಣ ಮಂಗಳನ ಆರೋಹಣ ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಲು ತುಂಬಾ ಕಷ್ಟಪಡುವರು ಮತ್ತು ಕೆಲವರು ಯಶಸ್ಸು ಪಡೆಯಬಲ್ಲರು. ಇನ್ನೊಂದು ಕಡೆಯಲ್ಲಿ ಈ ಜನರು ಒಂದು ಹಂತದ ಬಳಿಕ ಜೀವನದಲ್ಲಿ ಒಳ್ಳೆಯ ಹಣ ಸಂಪಾದನೆ ಮಾಡಿಕೊಂಡು ಜೀವನದಲ್ಲಿ ಹೆಸರು ಗಳಿಸಬಲ್ಲರು.

ಮಂಗಳನ ಮೇಲ್ಭಾಗದ ಆರೋಹಣ

ಮಂಗಳನ ಮೇಲ್ಭಾಗದ ಆರೋಹಣ

ಈ ಚಿಹ್ನೆಯು ಪ್ರತಿರೋಧದ ಶಕ್ತಿಯನ್ನು ಸೂಚಿಸುವುದು.ಈ ವ್ಯಕ್ತಿಗಳು ತುಂಬಾ ಶಾಂತ ಮತ್ತು ಯಾವುದೇ ಪರಿಸ್ಥಿತಿಗೂ ಹೊಂದಿಕೊಳ್ಳುವರು. ಇವರು ಯಾವಾಗಲೂ ತುಂಬಾ ಶಾಂತವಾಗಿರುವರು. ಇವರು ಯಾವತ್ತೂ ನಿರುತ್ಸಾಹಗೊಳ್ಳುವುದಿಲ್ಲ. ಇವರು ಯಾವತ್ತೂ ಸೋಲೊಪ್ಪಿಕೊಳ್ಳುವವರಲ್ಲ ಮತ್ತು ನಿಜವಾದ ಹೋರಾಟಗಾರರಾಗಿರುವರು.

ಮಂಗಳನ ಕೆಳಭಾಗದ ಆರೋಹಣ

ಮಂಗಳನ ಕೆಳಭಾಗದ ಆರೋಹಣ

ಕೆಳಭಾಗದಲ್ಲಿ ಮಂಗಳನ ಆರೋಹಣ ಹೊಂದಿರುವಂತಹ ವ್ಯಕ್ತಿಗಳು ತುಂಬಾ ಆಕ್ರಮಣಶೀಲರು ಎಂದು ಹೇಳಲಾಗುತ್ತದೆ. ಸಮಯ ಸಾಗಿದಂತೆ ಇಂತಹ ವ್ಯಕ್ತಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಹೊಂದಿಕೊಂಡು ತಮ್ಮ ಆಕ್ರಮಣಶೀಲತೆ ನಿಯಂತ್ರಣದಲ್ಲಿಡಲು ಕಲಿತುಕೊಳ್ಳುವರು.

English summary

these-signs-on-the-palm-can-make-you-powerful-person

Apart from the palm lines, the mounts on the palms reveal a lot about a person's personality. These mounts have their own importance and significance. Presence of certain mounts on your palm reveals the powers that you have as an individual. Here, in this article, we are sharing the signs that reveal the powers of a person and how powerful they can be based on the mounts present on their palms. Check out if you have these mounts on your palm.