ಹೌದು ಸ್ವಾಮಿ! ಈ ಬೋರ್ಡುಗಳು ಇಂಗ್ಲಿಷ್ ಭಾಷೆಯ ಚಿಂದಿ ಉಡಾಯಿಸಿವೆ!

Posted By: manu
Subscribe to Boldsky

ಬ್ರಿಟಿಷರು ನಮಗೆ ಹತ್ತಿಸಿಹೋದ ವ್ಯಸನಗಳಲ್ಲಿ ಇಂಗ್ಲಿಷ್ ಹಾಗೂ ಕ್ರಿಕೆಟ್ ಪ್ರಮುಖವಾದವು. ನಮ್ಮ ಶಿಕ್ಷಣ ವ್ಯವಸ್ಥೆ ಇಂಗ್ಲಿಷ್ ಆಧರಿಸಿದ್ದು ಇಂದು ಇಡಿಯ ಭಾರತದಲ್ಲಿ ಚಲಾವಣೆಯಾಗುವ ಭಾಷೆಯಾಗಿದೆ. ಆದ್ದರಿಂದ ನಮ್ಮ ಅಂಗಡಿಗಳ ಫಲಕಗಳು, ಜಾಹೀರಾತುಗಳು ಮೊದಲಾದವೆಲ್ಲಾ ಯಾವುದೇ ರಾಜ್ಯದ ಕಡ್ಡಾಯ ಭಾಷೆಯನ್ನು ಮೊದಲು ಹೊಂದಿದ್ದರೂ ಇಂಗ್ಲಿಷ್ ಅಕ್ಷರಗಳನ್ನು ಮಾತ್ರ ಹೊಂದಿರಲೇಬೇಕು. ಆದರೆ ಇದನ್ನು ಬರೆಯುವವರಿಗೆ ಇಂಗ್ಲಿಷ್‌ನ ಪೂರ್ಣ ಜ್ಞಾನ ಇರಲೇಬೇಕೆಂದಿಲ್ಲ.

ಇವರು ತಮಗೆ ಹೇಳಿದ ವಿಷಯವನ್ನು ತಮ್ಮ ತರ್ಕಕ್ಕೆ ಅನುಗುಣವಾಗಿ ಬರೆದು ದುಬಾರಿ ಫ್ಲೆಕ್ಸ್ ಗಳನ್ನೂ ಮುದ್ರಿಸಿಬಿಡುತ್ತಾರೆ. ಎಷ್ಟೋ ಕಡೆಗಳಲ್ಲಿ ಇಂಗ್ಲಿಷ್ ಕಲಿಸುತ್ತೇವೆ ಎಂದು ಎದೆತಟ್ಟಿ ಹೇಳಿಕೊಳ್ಳುವ ಸಂಸ್ಥೆಗಳ ಜಾಹೀರಾತುಫಲಕಗಳಲ್ಲಿಯೇ ಭಾರೀ ಕಾಗುಣಿತ ಲೋಪಗಳಿವೆ. ಈ ತಪ್ಪುಗಳು ಅಪಾರ್ಥಕ್ಕೆ ಎಡೆಮಾಡಿಕೊಡುತ್ತಾ ಓದುಗರಲ್ಲಿ ನಗೆ ಮೂಡಿಸುತ್ತವೆ. ವ್ಯಂಗ್ಯವೆಂದರೆ ಇವುಗಳ ಚಿತ್ರಗಳನ್ನು ತೆಗೆದು ಮಾಧ್ಯಮಗಳಲ್ಲಿ ಹರಡುವ ಮೂಲಕ ಭಾರತದ ಬಗ್ಗೆ ವಿದೇಶೀಯರಲ್ಲಿ ತಪ್ಪುಭಾವನೆಯನ್ನೂ ಮೂಡಿಸುತ್ತವೆ. 

ವಿಶ್ವದ ಅತಿ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು

ಹೀಗೇ ಭಾರತದ ವಿವಿಧ ಪಟ್ಟಣಗಳಿಂದ ಅನಾಮಧೇಯರು ತೆಗೆದ ಚಿತ್ರಗಳನ್ನು ಸಂಗ್ರಹಿಸಲಾಗಿದ್ದು ಈ ಜಾಹೀರಾತುಗಳು ಮಾಡಿರುವ ಭಾರೀ ಪ್ರಮಾದಗಳನ್ನು ನಿಮ್ಮ ಮುಂದಿಡಲಾಗಿದೆ. ವಿಶೇಷವಾಗಿ ಒಂದು ರಾಜ್ಯದ ಮುಖ್ಯಮಂತ್ರಿಗಳನ್ನು ಸನ್ಮಾನ್ಯ ಎಂದು ಅರ್ಥ ಬರುವ ಪದವನ್ನು 'ಭಯಾನಕ' ಎಂದು ಬರೆದಿರುವುದು ಗಾಬರಿ ಮೂಡಿಸುತ್ತದೆ. ಬನ್ನಿ, ಇವನ್ನು ನೋಡಿ ನಕ್ಕು ಹಗುರಾಗಿ. ಇಂತಹ ಚಿತ್ರಗಳು ನಿಮ್ಮಲ್ಲೂ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಬಹುದಲ್ಲ!.....

ಚಿತ್ರ #1

ಚಿತ್ರ #1

ಈ ವಕೀಲರು ನಿಜವಾಗಿಯೂ ಈ ಪದವಿಗೆ ಅರ್ಹರೇ ಎಂದು ನಮಗೆ ಅನುಮಾನವಾಗುತ್ತಿದೆ.

ಚಿತ್ರ #2

ಚಿತ್ರ #2

ಈ ಫಲಕದ ಮೊದಲ ಪದ ನಾಮಪದವಾಗಿರಬಹುದು. ಕ್ರಿಯಾಪದವನ್ನಾಗಿಸಿದರೆ ಮಾತ್ರ ತೊಂದರೆ ತಪ್ಪಿದ್ದಲ್ಲ

ಚಿತ್ರ #3

ಚಿತ್ರ #3

ಓಹೋ, ಈ ಸೂಕ್ಷ್ಮ ವ್ಯತ್ಯಾಸದಲ್ಲಿಯೇ ಭಾರೀ ಅಪಾರ್ಥವಿದೆ!

ಚಿತ್ರ #4

ಚಿತ್ರ #4

ಈ ಚಿತ್ರದಲ್ಲಿ ಒಂದು ಪತಿಯ ಬೆಲೆ ಒಂದು ಸಾವಿರ ಎಂದು ಹೇಳುತ್ತಿದೆ...!!

ಚಿತ್ರ #5

ಚಿತ್ರ #5

ಅಂದ ಹಾಗೆ 'ಬಿ-ಗ್ರೇಡ್' ನರ್ಸ್ ಗಳೆಂದರೆ ಯಾರು?

ಚಿತ್ರ #6

ಚಿತ್ರ #6

ಇಲ್ಲಿ ಸಾಲಾಸ್ ಎಂದರೆ ಸೇಲ್ಸ್ ಎಂದಾಗಿರಬೇಕಿತ್ತಲ್ಲವೇ?

ಚಿತ್ರ #7

ಚಿತ್ರ #7

ಕಲಿಸುವವರಿಗೇ ಸ್ಲೆಲ್ಲಿಂಗ್ ಬರದಿದ್ದರೆ ಹೇಗೆ?

ಚಿತ್ರ #8

ಚಿತ್ರ #8

ತಮ್ಮ ಇಂಗ್ಲಿಷ್ ಜ್ಞಾನದ ಮೇಲೇ ಅನುಮಾನವಿರುವ ಇನ್ನೊಂದು ಶಿಕ್ಷಣ ಸಂಸ್ಥೆ

ಚಿತ್ರ #9

ಚಿತ್ರ #9

ತಾಳಿ! ಇಲ್ಲಿ ಡೈ ಎಂದರೆ ಸಾವು ಎಂದಾಗಿದೆ. ಇದು Dye ಎಂದರ್ಥವಲ್ಲವೇ?

ಚಿತ್ರ #10

ಚಿತ್ರ #10

ಬೇಬಿ ಕಟಿಂಗ್ ಎಂದರೆ? ಮಕ್ಕಳನ್ನೇ ಕತ್ತರಿಸುವುದೇ? ಅಥವಾ ಮಕ್ಕಳ ಕೂದಲು ಕತ್ತರಿಸುವುದೇ?

ಚಿತ್ರ #11

ಚಿತ್ರ #11

ಈ ಕಟಿಂಗ್ ಸೆಲೂನ್ ನಲ್ಲಿ ಪುರುಷರಿಗೂ ಮಹಿಳೆಯರಿಗೂ ಸೇವೆ ನೀಡಲಾಗುತ್ತದೆ ಸರಿ, ಆದರೆ ಇಲ್ಲಿ ಧೋನಿಗೇನು ಕೆಲಸ?

ಚಿತ್ರ #12

ಚಿತ್ರ #12

ರಾಜಕಾರಣಿಗಳ ನಿಜವಾದ ಬಣ್ಣವೇ ಇದು?

ಚಿತ್ರ #13

ಚಿತ್ರ #13

ಇದು 'ಅಂದರ್ ಕೀ ಬಾತ್ ಹೈ' ಆದರೆ ಫಿರ್ ಭೀ ' ಅಂಡರ್ವೇರ್ ಬೋಲೋ, ಅಂದರ್ ವೇರ್ ಅಲ್ಲ"

ಚಿತ್ರ #14

ಚಿತ್ರ #14

ಇಲ್ಲಿ ಲಘುಪಾನೀಯಗಳ ಕಾಗುಣಿತಗಳನ್ನು ಬರೆದವ ತನಗೆ ಬಂದಂತೆ ಬರೆದಿದ್ದಾನೆ ಅಷ್ಟೇ, ಅವನ ತಪ್ಪಿಲ್ಲ, ಬರೆಯಲು ಹೇಳಿದವರು ಕಾಗುಣಿತವನ್ನೂ ಕೊಡಬೇಕಿತ್ತಲ್ಲಾ?

ಚಿತ್ರ #15

ಚಿತ್ರ #15

ವೀರ್ಯ, ಗರ್ಭಾವಸ್ಥೆ, ಇನ್ನೂ ಏನೇನನ್ನೋ ಎಲ್ಲವನ್ನೂ ಇಲ್ಲಿ 'ರುಚಿ ನೋಡಲಾಗುತ್ತದೆ'!

ಚಿತ್ರ #16

ಚಿತ್ರ #16

ಈ ಅಂಗಡಿಯಲ್ಲಿ ಏನು ದೊರಕುತ್ತದೆ ಎಂಬುದನ್ನು ಬರೆದಿರುವ ಫಲಕವನ್ನು ಓದಲು ನಿಮಗೆ ಕೊಂಚ ಹೆಚ್ಚೇ ತಲೆ ಖರ್ಚುಮಾಡಬೇಕಾಗಿ ಬರಬಹುದು.

ಚಿತ್ರ #17

ಚಿತ್ರ #17

ಛೇ, ಯಾರ ಮನೆಯ ಎದುರಿಗಾದರೂ ಮೂತ್ರ ವಿಸರ್ಜಿಸಿದರೆ ಅವರು ಹೀಗೇಮಾಡುತ್ತಿದ್ದರೂ ಏನೋ...

ಚಿತ್ರ #18

ಚಿತ್ರ #18

ಬೇಕಿದ್ದರೆ ಪಂಥ ಕಟ್ಟುತ್ತೇವೆ, ಈ ಫಲಕವನ್ನು ಮದುಮಗಳ ಯಾರೋ ತರಲೆ ಸ್ನೇಹಿತರೇ ಬರೆದಿರಬೇಕು.

ಚಿತ್ರ #19

ಚಿತ್ರ #19

ತಾಳಿ ತಾಳಿ, ತಲೆಗೂದಲು ಕಿತ್ತುಕೊಳ್ಳಬೇಡಿ. ಇವರು ಹೇಳಹೊರಟಿರುವುದು ಇದು 'ವಾಷ್ ಬೇಸಿನ್

ಚಿತ್ರ #20

ಚಿತ್ರ #20

ಅಷ್ಟಕ್ಕೂ ಈ ಫಲಕದಲ್ಲಿ 'ಸ್ಕ್ರೂ' ಪದದ ಅರ್ಥವೇನು? ಇದು ಏಕಿಲ್ಲಿದೆ?

ಇಂಗ್ಲೀಷ್ ಮಾತನಾಡುವ ಟಾಪ್ 10 ರಾಷ್ಟ್ರಗಳು

For Quick Alerts
ALLOW NOTIFICATIONS
For Daily Alerts

    English summary

    These Sign Boards Will Make You Say, “RIP English”

    Here is a collection of some of the most ridiculous spelling mistakes that people have made on their sign boards; however, they flaunt them proudly! Have a look and share it with your friends as well, as it is sure going to brighten up a dull gloomy day! Come on people - Laugh, do not hesitate.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more