For Quick Alerts
ALLOW NOTIFICATIONS  
For Daily Alerts

ಮದುವೆಗೆ ಹುಡುಗಿ ನೋಡುವ ಮುನ್ನ, ಈ 7 ಸಂಗತಿಗಳನ್ನು ಪರೀಕ್ಷಿಸಿಕೊಳ್ಳಿ...

By Arshad
|

ವಿವಾಹ ಒಂದು ಪವಿತ್ರವಾದ ಬಂಧನವಾಗಿದೆ. ನಿಸರ್ಗ ವಂಶವನ್ನು ಮುಂದುವರೆಯಲು ಗಂಡು ಹೆಣ್ಣು ಕೂಡುವ ವ್ಯವಸ್ಥೆಯನ್ನೇ ಸಮಾಜದಲ್ಲಿ ವಿವಾಹ ವ್ಯವಸ್ಥೆಯ ಮೂಲಕ ಏರ್ಪಡಿಸಲಾಗಿದ್ದು ವಿಶ್ವದ ಎಲ್ಲಾ ಧರ್ಮಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಬಂಧನಕ್ಕೆ ಒಳಗಾದವರಿಗೆ ಜೀವನಪರ್ಯಂತ ಒಬ್ಬರಿಗೊಬ್ಬರು ಬದ್ಧರಾಗಿರುವುದನ್ನು ಬೋಧಿಸಲಾಗುತ್ತದೆ.

ಮದುವೆ ವಿಳಂಬವಾಗುತ್ತಿದೆಯೇ? ಇಲ್ಲಿದೆ ಆಧ್ಯಾತ್ಮಿಕ ಪರಿಹಾರಗಳು

ಅಷ್ಟೇ ಅಲ್ಲ, ಪ್ರಾಣಿವರ್ಗ, ಪಕ್ಷಿವರ್ಗದಲ್ಲಿಯೂ ಹಲವು ಏಕಸಂಗಾತಿಯನ್ನು ಜೀವನಪರ್ಯಂತ ಪಾಲಿಸುತ್ತವೆ. ಆದರೆ ಮನುಷ್ಯರು ಭಾವನಾತ್ಮಕರಾಗಿದ್ದು ಪ್ರತಿಯೊಬ್ಬರ ಭಾವನೆ, ಯೋಚನೆಗಳು ಬೇರೆ ಬೇರೆಯಾಗಿರುತ್ತವೆ. ಪತಿ ಪತ್ನಿಯರ ಭಾವನೆಗಳು ಹಾಗೂ ಯೋಚನೆಗಳು ಒಂದೇ ಸಮನಾಗಿದ್ದರೆ ಮುಂದಿನ ಬಾಳಿನಲ್ಲಿ ಯಾವುದೇ ವೈಮನಸ್ಯ ಬರದಿರಲು ಸಾಧ್ಯ. ಆದರೆ ಈ ಜಗತ್ತಿನಲ್ಲಿ ಇಬ್ಬರ ಭಾವನೆಗಳು ಶೇಖಡಾ ನೂರರಷ್ಟು ಸಮನಾಗಿರುವುದಿಲ್ಲ. ಹಾಗಾಗಿ ಇವು ಎಷ್ಟು ಹೆಚ್ಚಿರುತ್ತದೆಯೋ ಅಷ್ಟೂ ಒಳ್ಳೆಯದು.

ಜಾತಕದಲ್ಲಿ ಕಾಡುವ ಕುಜ ದೋಷ! ಇದಕ್ಕೆ ಪರಿಹಾರವೇನು?

ವಿವಾಹಕ್ಕೂ ಮೊದಲು ಇಬ್ಬರ ಯೋಚನೆಗಳು ಸರಿಹೊಂದುತ್ತದೆಯೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಏಕೆಂದರೆ ಬಾಯಿಮಾತಿನಲ್ಲಿ ಹೇಳುವ ವಿಷಯಗಳು ಸುಳ್ಳಾಗಿರಲೂಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಪೂರ್ವಿಕರು ಕುಂಡಲಿಯನ್ನು ಹೊಂದಿಸಿ ನೋಡುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಆ ಪ್ರಕಾರ ಪ್ರತಿ ವ್ಯಕ್ತಿಯ ಜನ್ಮಜಾತಕ ಅನುಸರಿಸಿ ಗ್ರಹಗಳ ಸ್ಥಾನ ಮೊದಲಾದವುಗಳನ್ನು ಪರಿಗಣಿಸಿ ಈ ಜೋಡಿ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂದು ನಿರ್ಧರಿಸಬಹುದು. ಬನ್ನಿ, ಒಂದು ವಿವಾಹ ಯಶಸ್ವಿಯಾಗಬೇಕೆಂದರೆ ಯಾವ ಗುಣಗಳಿರಬೇಕು ಎಂಬುದನ್ನು ನೋಡೋಣ....

ಈ ಮದುವೆ ಅದೃಷ್ಟವನ್ನು ತರುತ್ತದೆ ಎಂಬ ಸೂಚನೆಗಳು

ಈ ಮದುವೆ ಅದೃಷ್ಟವನ್ನು ತರುತ್ತದೆ ಎಂಬ ಸೂಚನೆಗಳು

ವಿವಾಹ ಎಂದರೆ ಕೇವಲ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಬಂಧನವಲ್ಲ, ಬದಲಿಗೆ ಎರಡು ಕುಟುಂಬಗಳ ನಡುವೆ ನಡೆಯುವ ಬಂಧನ. ಈ ಪವಿತ್ರವಾದ ವಿವಾಹ ಬಂಧನದ ಮೂಲಕ ಎರಡೂ ಕುಟುಂಬಗಳಲ್ಲಿ ಅದೃಷ್ಟ ಆಗಮಿಸುತ್ತದೆ, ಸಂಸತವನ್ನು ತರುತ್ತದೆ ಎಂಬ ಆಶಾಭಾವನೆಯನ್ನು ಹೊಂದಲಾಗುತ್ತದೆ.

ಕುಂಡಲಿ ಹೊಂದುವ ಪ್ರಾಮುಖ್ಯತೆ

ಕುಂಡಲಿ ಹೊಂದುವ ಪ್ರಾಮುಖ್ಯತೆ

ಹಿಂದೂ ಧರ್ಮದ ಪ್ರಕಾರ ನಡೆಯುವ ವಿವಾಹಗಳಲ್ಲಿ ಜ್ಯೋತಿಷ್ಯಾಸ್ತ್ರಕ್ಕೆ ಪ್ರಮುಖ ಪಾತ್ರವಿದೆ. ವಿವಾಹಕ್ಕೂ ಮುನ್ನ ಪತಿ ಪತ್ನಿಯರಾಗುವವರ ಕುಂಡಲಿಗಳು ಹೊಂದಬೇಕು ಎಂದು ಹೆಚ್ಚಿನವರು ನಂಬುತ್ತಾರೆ. ಆ ಪ್ರಕಾರ ಇಬ್ಬರ ಕುಂಡಲಿಯ ವಿವರಗಳನ್ನು ಕಲೆಹಾಕಿ ಹೊಂದಿಸಿ ತಾಳೆ ಹಾಕಲಾಗುತ್ತದೆ. ಇಬ್ಬರ ಜಾತಕ, ಗ್ರಹಸ್ಥಾನಗಳು, ಹುಟ್ಟಿದ ಸಮಯ ಮೊದಲಾದ ಹಲವು ವಿಷಯಗಳನ್ನು ಪರಿಗಣಿಸಿ ಎಷ್ಟು 'ಗುಣ'ಗಳು ತಾಳೆಯಾಗಿವೆ ಎಂದು ಪರಿಶೀಲಿಸಲಾಗುತ್ತದೆ. ಎಷ್ಟು ಹೆಚ್ಚಿ ಗುಣಗಳು ಹೊಂದುತ್ತವೆಯೋ ಆ ವಿವಾಹ ಅಷ್ಟು ಯಶಸ್ವಿಯಾಗುತ್ತದೆ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ. ಕನಿಷ್ಠ ಅಗತ್ಯದ ಗುಣಗಳು ತಾಳೆಯಾಗದೇ ಇದ್ದರೆ ಈ ವಿವಾಹ ಮುಂದುವರೆಯಲಾರದು.

ಇಬ್ಬರ ಸ್ವಭಾವಗಳು ಹೊಂದುವುದು

ಇಬ್ಬರ ಸ್ವಭಾವಗಳು ಹೊಂದುವುದು

ವಿವಾಹ ಬಂಧನಕ್ಕೆ ಒಳಗಾಗುವ ಜೋಡಿಗೆ ಪ್ರತಿಯೊಬ್ಬರೂ ನಿಮ್ಮ ಮದುವೆ ಅದೃಷ್ಟ ತರಲಿ, ಜೀವನದಲ್ಲಿ ಸಮೃದ್ಧಿ ತುಂಬಿರಲಿ ಹಾಗೂ ಜೀವನ ಸುಖಕರವಾಗಿರಲಿ ಎಂದು ಆಶೀರ್ವದಿಸುತ್ತಾರೆ. ಈ ಆಶೀರ್ವಾದ ಕೇವಲ ಜೋಡಿಗೆ ಮಾತ್ರವಲ್ಲ, ಇಡಿಯ ಮನೆಯ ಸದಸ್ಯರಿಗೂ ಅನ್ವಯಿಸುತ್ತದೆ. ಈ ಮದುವೆ ಎರಡೂ ಕುಟುಂಬಗಳಿಗೆ ಅದೃಷ್ಟ ತರಲಿ ಎಂದು ಹಾರೈಸಲಾಗುತ್ತದೆ. ಈ ಹಾರೈಕೆ ನಿಜವಾಗಬೇಕೆಂದರೆ ಪತಿ ಪತ್ನಿಯರ ಸ್ವಭಾವಗಳು ಹೊಂದಬೇಕಾಗುತ್ತದೆ. ಒಂದು ವೇಳೆ ಪ್ರಾರಂಭದಲ್ಲಿ ಹೊಂದಿಕೊಳ್ಳದೇ ಇದ್ದರೂ ಕ್ರಮೇಣ ಅನ್ಯೋನ್ಯತೆಯಿಂದ ಹೊಂದಿಕೊಂಡಷ್ಟೂ ಜೀವನ ಸುಂದರವಾಗುತ್ತದೆ.

ಮುಂದಿನ ಜೀವನ ಸುಖಕರವಾಗಿರುತ್ತದೆ ಎಂದು ಸೂಚಿಸುವ ಸಂಜ್ಞೆಗಳು

ಮುಂದಿನ ಜೀವನ ಸುಖಕರವಾಗಿರುತ್ತದೆ ಎಂದು ಸೂಚಿಸುವ ಸಂಜ್ಞೆಗಳು

ವಿವಾಹ ಯಶಸ್ವಿಯಾಗಲು ಪರಸ್ಪರ ಅನ್ಯೋನ್ಯತೆ, ವಿಶ್ವಾಸಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇವು ತಕ್ಷಣಕ್ಕೆ ಕಾಣಿಸುವುದಿಲ್ಲ, ಕಾಲವೇ ತಿಳಿಸಿ ಹೇಳುತ್ತದೆ. ಆದರೆ ಹಲವು ಪುರಾಣ ಗ್ರಂಥಗಳಲ್ಲಿ ವ್ಯಕ್ತಿಯ ಭೌತಿಕ ಸಂಜ್ಞೆಗಳು ಮುಂದಿನ ಸಮಯದಲ್ಲಿ ವ್ಯಕ್ತಿಯ ಹಾಗೂ ಅವರ ಜೀವನಸಂಗಾತಿಯ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತವೆ.

ಯಾವುವು ಈ ಭೌತಿಕ ಸಂಜ್ಞೆಗಳು?

ಯಾವುವು ಈ ಭೌತಿಕ ಸಂಜ್ಞೆಗಳು?

ಈ ಭೌತಿಕ ಸಂಜ್ಞೆಗಳು ಯಾವುವು ಎಂಬುದನ್ನು ಭವಿಷ್ಯ ಪುರಾಣದಲ್ಲಿ ವಿವರಿಸಲಾಗಿದ್ದು ವ್ಯಕ್ತಿಯ ಹಲವು ದೇಹಲಕ್ಷಣಗಳನ್ನು ಆಧರಿಸಿ ಮುಂದಿನ ಜೀವನ ಹೇಗಿರುತ್ತದೆ ಎಂದು ಹೇಳಲಾಗಿದೆ. ವಿಶೇಷವಾಗಿ ದೇಹದ ಮೇಲಿರುವ ಮಚ್ಚೆಗಳ ಸ್ಥಾನವನ್ನು ಆಧರಿಸಿ ಹಲವು ವಿಷಯಗಳನ್ನು ತಿಳಿಸಲಾಗಿದೆ. ಅದರಲ್ಲಿ ಮಹಿಳೆಯಲ್ಲಿ ಕಾಣಲಾಗುವ ಪ್ರಮುಖವಾದ ಏಳು ಗುಣಲಕ್ಷಣಗಳ ಬಗ್ಗೆ ಇಂದು ಚರ್ಚಿಸಲಾಗಿದೆ. ಈ ಏಳೂ ಗುಣಗಳಿರುವ ಮಹಿಳೆಯನ್ನು ಮದುವೆಯಾಗುವ ವ್ಯಕ್ತಿಗೆ ಹಾಗೂ ಆತನ ಕುಟುಂಬಕ್ಕೆ ಅದೃಷ್ಟ ಖುಲಾಯಿಸುತ್ತದೆ ಹಾಗೂ ಸಮೃದ್ಧಿ ಬರುತ್ತದೆ ಎಂದು ಭವಿಷ್ಯ ಪುರಾಣದಲ್ಲಿ ತಿಳಿಸಲಾಗಿದೆ

#1. ಹಲ್ಲುಗಳು

#1. ಹಲ್ಲುಗಳು

ಯಾವ ಮಹಿಳೆಯ ಹಲ್ಲುಗಳು ನೇರವಾಗಿದ್ದು ಓರೆಕೋರೆಯಾಗಿರುವುದಿಲ್ಲವೋ ಆ ಮಹಿಳೆ ವಿವಾಹವಾಗಿ ಹೋಗುವ ಮನೆಯಲ್ಲಿ ನೆಮ್ಮದಿ ಹಾಗೂ ಸಮತೋಲನ ಆಗಮಿಸುತ್ತದೆ. ಆದರೆ ಹಲ್ಲುಗಳ ನಡುವೆ ಖಾಲಿ ಜಾಗವಿರುವ ಮಹಿಳೆಯರು ತಾವು ವಿವಾಹವಾಗಿ ಹೋಗುವ ಮನೆಯಲ್ಲಿ ಸತತ ಕಲಹಗಳನ್ನು ತಂದೊಡ್ಡುತ್ತಾರೆ.

#2 ಪಾದಗಳು

#2 ಪಾದಗಳು

ಮಹಿಳೆಯ ಪಾದಗಳು ಪತಿಯ ಯಶಸ್ಸಿನೊಂದಿಗೆ ನೇರ ಸಂಬಂಧ ಹೊಂದಿದೆ. ಒಂದು ವೇಳೆ ಆಕೆಯ ಪಾದಗಳ ಬಣ್ಣ ಪೇಲವವಾಗಿದ್ದಂತೆ ಕಂಡುಬಂದರೆ ಮುಂದಿನ ದಿನಗಳು ಕಷ್ಟಕರವಾಗಿರುತ್ತವೆ, ಕೆಂಪು ಅಥವಾ ಗುಲಾಬಿ ಬಣ್ಣದ ಪಾದಗಳಿದ್ದರೆ ಪತಿಯ ಮನೆಗೆ ಸಮೃದ್ದಿ ಹಾಗೂ ಸಾಮಾಜಿಕ ಸ್ಥಾನಮಾನ ದೊರಕುತ್ತದೆ ಎಂದು ಹೇಳಲಾಗಿದೆ.

#3 ಹಣೆಯ ಗೆರೆಗಳು

#3 ಹಣೆಯ ಗೆರೆಗಳು

ಮಹಿಳೆಯ ಹಣೆಯ ಮೇಲೆ ಒಂದು ವೇಳೆ ಮೂರು ಅಡ್ಡಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದರೆ ಅಥವಾ ಹುಬ್ಬು ಮೇಲೇರಿಸಿದಾಗ ಗೆರೆಗಳು ಸ್ಪಷ್ಟವಾಗಿ ಮೂಡಿದರೆ ಈಕೆ ಪತಿಯ ಜೀವನದಲ್ಲಿ ಅದೃಷ್ಟವನ್ನು ತರುತ್ತಾಳೆ ಎಂದು ವಿವರಿಸಲಾಗಿದೆ. ಈ ಮೂರು ಗೆರೆಗಳು ಭಗವಂತ ಶಿವನ ಆಶೀರ್ವಾದದ ಪ್ರತೀಕ ಎಂದು ಭಾವಿಸಲಾಗುತ್ತದೆ.

#4 ಚರ್ಮ

#4 ಚರ್ಮ

ಮಹಿಳೆಯ ಚರ್ಮ ನಯವಾಗಿದ್ದು ಯಾವುದೇ ರೀತಿಯಲ್ಲಿ ಪೇಲವವಾಗದೇ ಹಾಗೂ ಶುಷ್ಕವಾಗಿರದೇ ಇದ್ದರೆ ಈಕೆ ತನ್ನ ಪತಿಗೆ ಸತತ ಬೆಂಬಲ ನೀಡುವವಳು ಹಾಗೂ ಮನೆಯಲ್ಲಿ ಸಮನ್ವಯತೆ, ಅನ್ಯೋನ್ಯತೆಯನ್ನು ಕಾಯ್ದುಕೊಂಡು ಹೋಗುವವಳು ಎಂದು ವಿವರಿಸಲಾಗಿದೆ. ಆದರೆ ಚರ್ಮದಲ್ಲಿ ಬಿರುಕುಗಳು, ಅಡ್ಡದಿಡ್ಡಿ ಗೆರೆಗಳು ಇದ್ದರೆ ಈಕೆಯ ಪತಿಗೆ ದುರಾದೃಷ್ಟ ಆವರಿಸುತ್ತದೆ ಹಾಗೂ ಕಷ್ಟಕರ ದಿನಗಳು ಆಗಮಿಸುತ್ತದೆ ಎಂದು ವಿವರಿಸಲಾಗುತ್ತದೆ. ಅಷ್ಟೇ ಅಲ್ಲ, ಈಕೆ ಮನೆಯವರೊಂದಿಗೆ ಒರಟಾಗಿ ನಡೆದುಕೊಳ್ಳುವವಳೂ, ಸತತ ಜಗಳವಾಡುವವಳೂ, ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿಗಳನ್ನು ಬದಲಿಸುವವಳೂ ಅಗಿರುತ್ತಾಳೆ ಎಂದೂ ವಿವರಿಸಲಾಗಿದೆ.

#5 ಕುತ್ತಿಗೆ

#5 ಕುತ್ತಿಗೆ

ಕುತ್ತಿಗೆಯಲ್ಲಿ ನೆರಿಗೆಗಳು ಇಲ್ಲದೇ ಇರುವುದು ಸೌಂದರ್ಯದ ಲಕ್ಷಣವಾಗಿದೆ. ಆದರೆ ಭವಿಷ್ಯ ಪುರಾಣದ ಪ್ರಕಾದ ಮಹಿಳೆಯ ಕುತ್ತಿಗೆಯಲ್ಲಿ ಸ್ಪಷ್ಟವಾದ ಅಡ್ಡಗೆರೆಗಳಿರುವ ಮಹಿಳೆ ವಿವಾಹವಾಗಿ ಹೋಗುವ ಮನೆಗೆ ಅದೃಷ್ಟ ತರುತ್ತಾಳೆ.

#6 ಹುಬ್ಬುಗಳು

#6 ಹುಬ್ಬುಗಳು

ಈ ಲಕ್ಷಣವನ್ನು ಅತಿ ಕಡಿಮೆ ಪರಿಗಣಿಸಿದರೂ ಅತಿ ಹೆಚ್ಚಿನ ಮಹತ್ವದ್ದಾಗಿದೆ. ಮಹಿಳೆಯ ಹುಬ್ಬು ಎಷ್ಟು ಸ್ಪಷ್ಟವಾದ ಕಮಾನನ್ನು ಹೊಂದಿರುತ್ತದೆಯೋ ಅಷ್ಟೂ ಮಟ್ಟಿಗೆ ಆಕೆಯ ಪತಿಯ ಮನೆಯಲ್ಲಿ ಧನ ಹಾಗೂ ಅದೃಷ್ಟ ಆಗಮಿಸುತ್ತದೆ. ಅಪ್ಪಟ ಸರಳ ರೇಖೆ ಇದಕ್ಕೆ ವಿರುದ್ಧ ಫಲ ನೀಡುತ್ತದೆ.

ಕಣ್ಣಿನ ಹುಬ್ಬುಗಳು- ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು

#7 ಧ್ವನಿ

#7 ಧ್ವನಿ

ಮಹಿಳೆಯ ದನಿ ತೀರಾ ಕೀರಲಾಗಿಯೂ ಇರಬಾರದು, ಅತ್ತ ತೀರಾ ಗಡುಸಾಗಿಯೂ ಇರಬಾರದು. ನಡುವಿನ ತರಂಗದ ಧ್ವನಿ ಹೊಂದಿರುವ ಮಹಿಳೆ ವಿವಾಹವಾಗಿ ಹೋಗುವ ಮನೆಯಲ್ಲಿ ಸಮತೋಲನ, ಸಂತೋಷ ಹಾಗೂ ಸಮೃದ್ಧಿಯನ್ನು ತರುತ್ತಾಳೆ.

English summary

These physical traits in life-partner are a sign of good luck & wealth

In Hindu marriages, astrology plays a significant role in ensuring the same. Not all, but some families believe in Kundli Milan of the ‘couple in question’ to see if their ‘gunas’ do match or not. These astrological calculations are based on the couple’s respective horoscopes and planetary motion.
X
Desktop Bottom Promotion