For Quick Alerts
ALLOW NOTIFICATIONS  
For Daily Alerts

ದೇವಿಯ ಶಕ್ತಿ: ಅಂದು ಯುದ್ಧಕ್ಕೆ ಬಂದು, ಗಂಟು ಮೂಟೆ ಕಟ್ಟಿ ಓಡಿದ ಪಾಕಿಸ್ತಾನ...

By Arshad
|

ದೈವಭಕ್ತಿ ನೀಡುವಷ್ಟು ಶಕ್ತಿಯನ್ನು ಬೇರಾವೂ ನೀಡಲಾರದು. ಯಾವುದೇ ಸಂದರ್ಭವನ್ನು ಎದುರಿಸಲು 'ದೇವನು ನನ್ನೊಂದಿಗಿದ್ದಾನೆ, ನಾನು ಸತ್ಯವನ್ನೇ ಅನುಸರಿಸುತ್ತಿದ್ದರೆ ದೇವರು ನನ್ನ ಕೈಬಿಡಲಾರ' ಎಂಬ ಭಾವನೆಯೊಂದಿಗೆ ಸಮಸ್ಯೆಯನ್ನು ಎದುರಿಸುವವರಿಗೆ ಜಯ ಬಹುತೇಕ ಖಚಿತವಾಗಿರುತ್ತದೆ.


ದೇಶದ ರಕ್ಷಣೆಗಾಗಿ ಪ್ರೇತವಾಗಿ ಕಾಯುತ್ತಿರುವ ಹುತಾತ್ಮ ಯೋಧನ ಕಥೆ!

ನಮ್ಮ ದೇಶದ ಗಡಿಗಳಲ್ಲಿ ಸುರಕ್ಷತೆ ಒದಗಿಸುವ ನಮ್ಮ ಯೋಧರಿಗೆ ಕ್ಷಣಕ್ಷಣಕ್ಕೂ ಎದುರಾಗಬಹುದಾದ ಅಪಾಯವನ್ನು ಎದುರಿಸಲು ದೇವರ ರಕ್ಷಣೆಗಿಂತ ಇನ್ನೊಂದು ರಕ್ಷಣೆ ದೊರಕಲಾರದು. ಇಲ್ಲಿ ಎದುರಾದ ನೂರಾರು ಅಪಾಯಕಾರಿ ಸಂದರ್ಭಗಳಲ್ಲಿ ಈ ಯೋಧರನ್ನು ಸಾವಿನಂಚಿನಿಂದ ಯಾವುದೋ ಅಗೋಚರ ಶಕ್ತಿಯೊಂದು ಕಾಪಾಡಿದ್ದು ಈ ಶಕ್ತಿಯನ್ನು ಯೋಧರು ಭಕ್ತಿಯಿಂದ ತನೋತ್ ಮಾತಾ ದೇವಿಯ ಶಕ್ತಿ ಎಂದೇ ನಂಬುತ್ತಾರೆ... ಮುಂದೆ ಓದಿ

ರಾಜಸ್ಥಾನದ ತನೋತ್ ಮಾತಾ ಮಂದಿರ

ರಾಜಸ್ಥಾನದ ತನೋತ್ ಮಾತಾ ಮಂದಿರ

ರಾಜಸ್ಥಾನದ ಲಾಂಗೇವಾಲಾ ಎಂಬ ಗಡಿಪ್ರದೇಶದಲ್ಲಿರುವ ತನೋತ್ ಮಾತಾ ಮಂದಿರಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ. ಈ ಗುಡಿಯಲ್ಲಿರುವ ತನೋತ್ ಮಾತಾ ಅಥವಾ ಅವಧ್ ಮಾತಾ ಎಂದು ಕರೆಯುವ ದೇವರು ಗಡಿಯನ್ನು ಕಾಯುವ ಯೋಧರನ್ನು ಹಲವು ಸಂದರ್ಭಗಳಲ್ಲಿ ಕಾಪಾಡಿರುವ ರೋಚಕ ಕಥೆಗಳನ್ನು ಇಲ್ಲಿದ್ದ ಯೋಧರು ಹಾಗೂ ಸ್ಥಳೀಯರು ತಿಳಿಸುತ್ತಾರೆ.

Image Courtesy

ಅಂದು ಪಾಕಿಸ್ತಾನದ ಟ್ಯಾಂಕ್ ಬಾಂಬ್ ಠುಸ್ ಆಗಿ ಹೋಯಿತು!

ಅಂದು ಪಾಕಿಸ್ತಾನದ ಟ್ಯಾಂಕ್ ಬಾಂಬ್ ಠುಸ್ ಆಗಿ ಹೋಯಿತು!

ಇದರಲ್ಲಿ ಪ್ರಮುಖವಾದುದು ಭಾರತದ ಮೇಲೆ ಧಾಳಿ ನಡೆಸಲು ಆಗಮಿಸಿದ್ದ ಪಾಕಿಸ್ತಾನದ ಟ್ಯಾಂಕ್ ಬಾಂಬ್ ಇಲ್ಲಿ ಸ್ಫೋಟಗೊಳ್ಳದೇ ಇದ್ದುದು ಹಾಗೂ ಇದರಿಂದ ಭಾರತೀಯ ಯೋಧರ ಕೈ ಮೇಲಾದುದು 1965 ಹಾಗೂ 1971 ರ ಯುದ್ಧಗಳಲ್ಲಿ ಸಾಬೀತಾಗಿದೆ.

ಪಾಕಿಸ್ತಾನದ ಮೂರು ಸಾವಿರಕ್ಕೂ ಹೆಚ್ಚಿನ ಬಾಂಬುಗಳು ಠುಸ್ ಆದವು!

ಪಾಕಿಸ್ತಾನದ ಮೂರು ಸಾವಿರಕ್ಕೂ ಹೆಚ್ಚಿನ ಬಾಂಬುಗಳು ಠುಸ್ ಆದವು!

ಈ ಎರಡು ಯುದ್ಧಕಾಲದ ಸಮಯದಲ್ಲಿ ಈ ಮಂದಿರದ ಬಳಿ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಬಾಂಬುಗಳನ್ನು ಬೀಳಿಸಲಾಗಿತ್ತು. ಆದರೆ ಅಚ್ಚರಿಯೋ ಎಂಬಂತೆ ಇದರಲ್ಲಿ ಒಂದೂ ಕೂಡಾ ಸ್ಪೋಟಗೊಳ್ಳಲಿಲ್ಲ. ಇದರಲ್ಲಿ ಕೆಲವು ಬಾಂಬುಗಳನ್ನು ಬಳಿಕ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ ಎಫ್) ಸಂಗ್ರಹಿಸಿ ದೇವಾಲಯದ ಆವರಣದಲ್ಲಿ ಪುಟ್ಟ ಸಂಗ್ರಹಾಲಯವನ್ನು ಸ್ಥಾಪಿಸಿ ಪ್ರದರ್ಶನಕ್ಕಿಡಲಾಗಿದ್ದಾರೆ. ಇಂದೂ ಇವುಗಳನ್ನು ನೋಡಬಹುದು.

ಚಿತ್ರಕೃಪೆ: Suresh Godara

ಇದೆಲ್ಲಾ ದೇವಿಯ ಮಹಿಮೆ

ಇದೆಲ್ಲಾ ದೇವಿಯ ಮಹಿಮೆ

ಈ ಮಂದಿರ ಜೈಸಲ್ಮೇರ್ ನಗರದಿಂದ ಸುಮಾರು ನೂರೈವತ್ತು ಕಿ.ಮೀ ದೂರದಲ್ಲಿದ್ದು ಭಾರತದ ಪಶ್ಚಿಮ ತುದಿಯಲ್ಲಿದೆ. ರಾಜಸ್ಥಾನದ ಮರುಭೂಮಿ ಹಾಗೂ ವಿಲಕ್ಷಣ ವಾತಾವರಣವನ್ನು ಮೆಚ್ಚುವ ಯಾವುದೇ ಪ್ರವಾಸಿಗರು ಈ ಮಂದಿರಕ್ಕೆ ಭೇಟಿ ನೀಡದೇ ಹಿಂದಿರುಗಬಯಸುವುದಿಲ್ಲ. ಅಷ್ಟೇ ಅಲ್ಲ, ಈ ಕಥೆಗಳನ್ನು ಕೇಳಿ ಈ ಸ್ಥಳವನ್ನು ಪ್ರತ್ಯಕ್ಷವಾಗಿ ಕಾಣಲೆಂದೇ ಹೆಚ್ಚಿನ ಪ್ರವಾಸಿಗರು ಇಲ್ಲಿ ಬರುತ್ತಾರೆ.

Image Courtesy

ತನೋತ್ ಮಂದಿರದ ಇತಿಹಾಸ

ತನೋತ್ ಮಂದಿರದ ಇತಿಹಾಸ

ರಾಜಸ್ಥಾನ ರಾಜ್ಯದ ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ತನೋತ್ ಎಂಬ ಪುಟ್ಟ ಹಳ್ಳಿದೆ ಈ ಮಂದಿರ. ಈ ಭಾಗದಲ್ಲಿ ಲಭ್ಯವಾದ ಅತಿ ಪುರಾತನ ಚರಣ ಲಿಪಿಯ ಪ್ರಕಾರ ತನೋತ್ ಮಾತಾ ಪವಿತ್ರ ದೇವತೆಯಾದ ಹಿಂಗ್ಲಜ್ ಮಾತೆಯ ಅವತಾರವಾಗಿದ್ದಾಳೆ. ಬಳಿಕ ಈಕೆಯೇ ಕರಣಿ ಮಾತೆಯ ಅವತಾರವನ್ನೂ ತಳೆಯುತ್ತಾಳೆ. ಈ ಮಂದಿರ ಸುಮಾರು ಎಂಟನೆಯ ಶತಮಾನದಲ್ಲಿ ಕಟ್ಟಲಾಗಿರಬಹುದು ಎಂದು ಅಂದಾಜಿಸಲಾಗಿದೆ.

Image Courtesy

1965ರ ಯುದ್ಧದಲ್ಲಿ ನಡೆದ ಪವಾಡ

1965ರ ಯುದ್ಧದಲ್ಲಿ ನಡೆದ ಪವಾಡ

1965ರಲ್ಲಿ ಭಾರತ ಪಾಕಿಸ್ತಾನಗಳ ನಡುವೆ ನಡೆದ ಯುದ್ಧದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರೀ ಅಗ್ನಿಮಳೆಯಾಗುತ್ತಿದ್ದು ಭಾರತದ ಪಡೆ ಅತಿ ಹೆಚ್ಚಿನ ಒತ್ತಡ ಮತ್ತು ಆತಂಕ ಎದುರಿಸುತ್ತಿತ್ತು. ಈ ಭಾರೀ ಆಕ್ರಮಣಕ್ಕೆ ಭಾರತದ ಸೇನೆ ಸಾಕಷ್ಟು ಪ್ರಮಾಣದಲ್ಲಿ ಸಿದ್ಧವಾಗಿರಲೂ ಇಲ್ಲ ಹಾಗೂ ಅಷ್ಟೊಂದು ಆಯುಧಗಳೂ ಇರಲಿಲ್ಲ. ಅಂತೆಯೇ ಪಾಕಿಸ್ತಾನ ತನ್ನ ಬಲಪ್ರದರ್ಶನದ ಮೂಲಕ ನಿಧಾನವಾಗಿ ಭಾರತದ ಕಡೆಯ ಭಾಗಗಳನ್ನು ಆಕ್ರಮಿಸಿಕೊಳ್ಳುತ್ತಾ ಮುಂದೆ ಬಂದಿತ್ತು. ಇದರಲ್ಲಿ ಭಾರತದ ಸೇನೆಯ ಬಾಹುಳ್ಯವಿದ್ದ ಕೃಷ್ಣಗಢವೂ ಸೇರಿತ್ತು.

1965ರ ಯುದ್ಧದಲ್ಲಿ ನಡೆದ ಪವಾಡ

1965ರ ಯುದ್ಧದಲ್ಲಿ ನಡೆದ ಪವಾಡ

ಈ ಗಡಿಯನ್ನು ಆಕ್ರಮಿಸಿಕೊಂಡ ಬಳಿಕ ಸಾಡೇವಾಲಾ ಎಂಬ ಇನ್ನೊಂದು ಸ್ಥಳದಲ್ಲಿ ನಿಯುಕ್ತಿಗೊಂಡ ಭಾರತದ ಇನ್ನೊಂದು ತುಕಡಿಯಾದ ಥರ್ಟೀನ್ ಗ್ರೆನೇಡಿಯರ್ಸ್ ತಂಡಕ್ಕೆ ಅಗತ್ಯವಸ್ತುಗಳನ್ನು ಹಾಗೂ ಯುದ್ಧವನ್ನು ಎದುರಿಸಲು ಬೇಕಾದ ಆಯುಧ ಮತ್ತು ಉಪಕರಣಗಳನ್ನು ತಲುಪಿಸುವುದು ಅಸಾಧ್ಯವಾಗಿ ಹೋಗಿತ್ತು. ಈಗ ಈ ತಂಡಕ್ಕೆ ನಿರಾಯುಧರಾಗಿ ಎದುರಾಳಿಯ ಗುಂಡಿಗೆ ಎದೆಯೊಡ್ಡುವ ಸಂದಿಗ್ಧತೆ ಎದುರಾಗಿತ್ತು. ಈ ಸಾಡೇವಾಲಾ ಪ್ರದೇಶ ತನೋತ್ ಮಾತಾ ಮಂದಿರಕ್ಕೆ ಅನತಿ ದೂರದಲ್ಲಿದ್ದು ಈ ಯೋಧರು ತಮ್ಮನ್ನು ರಕ್ಷಿಸುವಂತೆ ಮಾತೆಯಲ್ಲಿ ಪ್ರಾರ್ಥಿಸಿದರು.

ಅಂದು ಪಾಕಿಸ್ತಾನದ ಪಡೆ ನೂರಾರು ಬಾಂಬುಗಳನ್ನು ಎಸೆದಿತ್ತು..

ಅಂದು ಪಾಕಿಸ್ತಾನದ ಪಡೆ ನೂರಾರು ಬಾಂಬುಗಳನ್ನು ಎಸೆದಿತ್ತು..

ಆ ಪ್ರದೇಶವನ್ನು ನುಚ್ಚು ನೂರು ಮಾಡಲು ಪಾಕಿಸ್ತಾನದ ಪಡೆ ನವೆಂಬರ್ 17ರಂದು ನೂರಾರು ಬಾಂಬುಗಳನ್ನು ದೂರದಿಂದ ಎಸೆಯಿತು. ಇವರ ಪ್ರಾರ್ಥನೆಯನ್ನು ದೇವಿ ಕೇಳಿದಳೋ ಏನೋ, ಎಷ್ಟು ಗುರಿಯಿಟ್ಟು ಹಾರಿಸಿದರೂ ಅವು ಯಾವುವೂ ಮಂದಿರ ಅಥವಾ ಸಾಡೇವಾಲ ತುಕಡಿಯ ಬಳಿ ತಲುಪುತ್ತಲೇ ಇರಲಿಲ್ಲ. ಅಪ್ಪಿ ತಪ್ಪಿ ಕೆಲವು ಗುರಿ ತಲುಪಿದರೂ ಇವು ಸಿಡಿಯುತ್ತಲೇ ಇರಲಿಲ್ಲ. ಅದರಲ್ಲಿ ಒಂದು ಸಿಡಿದರೂ ಅಷ್ಟೂ ಜನರ ಪ್ರಾಣಕ್ಕೆ ಅಪಾಯವಿತ್ತು, ಆದರೆ ಹಾಗಾಗಲಿಲ್ಲ.

ತನೋತ್ ಮಾತೆ ನಮ್ಮ ವೀರ ಸೈನಿಕರನ್ನು ಕಾಪಾಡಿದಳು

ತನೋತ್ ಮಾತೆ ನಮ್ಮ ವೀರ ಸೈನಿಕರನ್ನು ಕಾಪಾಡಿದಳು

ಅಂದಿನ ಇತಿಹಾಸವನ್ನು ದಾಖಲಿಸಿದವರ ಪ್ರಕಾರ ನವೆಂಬರ್ 17ರಿಂದ 19ರವರೆಗಿನ ಮೂರು ದಿನದ ಅವಧಿಯಲ್ಲಿ ಪಾಕಿಸ್ತಾನದ ಕಡೆಯಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬಾಂಬುಗಳನ್ನು ಎಸೆಯಲಾಗಿತ್ತು. ಆದರೆ ತನೋತ್ಮಾತಾ ಮಂದಿರಕ್ಕೆ ಒಂದಿನಿತೂ ಹಾನಿಯಾಗಿರಲಿಲ್ಲ. ಈ ದಿನಗಳಲ್ಲಿ ಅಲ್ಲಿ ಉಪಸ್ಥಿತರಿದ್ದ ಸೈನಿಕರ ಕನಸಿನಲ್ಲಿ ತನೋತ್ ಮಾತೆ ಪ್ರತ್ಯಕ್ಷಳಾಗಿ ಮಂದಿರದ ಆಸುಪಾಸಿಯಲ್ಲಿಯೇ ಇದ್ದರೆ ಯಾವುದೇ ಅಪಾಯವಾಗುವುದಿಲ್ಲ ಎಂಬ ಅಭಯರಕ್ಷೆಯನ್ನು ನೀಡಿದ್ದಳೆಂದೂ ಈ ಕಥೆಯಲ್ಲಿ ಹೇಳಲಾಗಿದೆ.

ದೇವಿಯ ಕೃಪಕಟಾಕ್ಷೆಯಿಂದ ಭಾರತಕ್ಕೆ ಯುದ್ಧದಲ್ಲಿ ಗೆಲುವು ಸಿಕ್ಕಿತು

ದೇವಿಯ ಕೃಪಕಟಾಕ್ಷೆಯಿಂದ ಭಾರತಕ್ಕೆ ಯುದ್ಧದಲ್ಲಿ ಗೆಲುವು ಸಿಕ್ಕಿತು

ಈ ಯುದ್ಧದಲ್ಲಿ ಪಾಕಿಸ್ತಾನ ಎಷ್ಟು ಬಾಂಬುಗಳನ್ನು ಎಸೆದರೂ ಇವು ವಿಫಲವಾದ ಪರಿಣಾಮವಾಗಿ ಭಾರತಕ್ಕೆ ಈ ಯುದ್ಧದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಬಳಿಕ ಈ ಮಂದಿರದ ಆವರಣದಲ್ಲಿಯೇ ತನ್ನ ಕೇಂದ್ರವೊಂದನ್ನು ಸ್ಥಾಪಿಸಿ ಈ ಮಂದಿರದಲ್ಲಿ ತನೋತ್ ಮಾತೆಗೆ ನಡೆಯುವ ಪೂಜೆ ಹಾಗೂ ಇತರ ಧಾರ್ಮಿಕ ಕೆಲಸಗಳ ಉಸ್ತುವಾರಿಯನ್ನು ವಹಿಸಿಕೊಂಡಿತು. ಇಂದಿಗೂ ಈ ಮಂದಿರದ ಉಸ್ತುವಾರಿಯನ್ನು ಬಿಎಸ್ ಎಫ್ ಹೊರುತ್ತಿದೆ.

English summary

The Story Of Tanot Mata, The Diety Who Protected Indian Soldiers

The story of Tanot Temple at the Longewala border in Rajasthan is one such miraculous tale when the local deity Tanot aka Awad Mata didn't let any Pakistani tank bomb explode and Indian soldiers who were certain of martydom and defeat went on to crush the Pakistanis in both 1965 as well as 1971 wars.
X
Desktop Bottom Promotion