For Quick Alerts
ALLOW NOTIFICATIONS  
For Daily Alerts

ನಿಮಗಿದು ತಿಳಿದಿದೆಯಾ? ಗಲ್ಲ ನೋಡಿ ವ್ಯಕ್ತಿತ್ವ ತಿಳಿಯಬಹುದಂತೆ!

By Deepu
|

ಎಷ್ಟೇ ಬೆರೆತರು, ಎಷ್ಟೇ ಹತ್ತಿರದ ಒಡನಾಟ ಇದ್ದರೂ ಕೆಲವೊಮ್ಮೆ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ಏನೆಂದು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಆದರೆ ಪ್ರಾಚೀನ ಪದ್ಧತಿಯ ಒಂದು ವಿಧಾನದಿಂದ ವ್ಯಕ್ತಿತ್ವ ಹೇಗೆ ಎನ್ನುವುದನ್ನು ತಿಳಿಯಬಹುದು. ಅದೇ ಗದ್ದ, ಅಥವಾ ಗಲ್ಲ (ಚಿನ್) ನೋಡಿ ವ್ಯಕ್ತಿತ್ವ ತಿಳಿಯುವುದು. ನಿಜ, ಪುರಾತನ ಕಾಲದ ಪದ್ಧತಿ ಇದಾದರೂ ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿಯನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತದೆ.

ಒಬ್ಬ ವ್ಯಕ್ತಿಯ ಗದ್ದ ಅಥವಾ ಗಲ್ಲಕ್ಕಿಂತ ಇನ್ನೊಬ್ಬರ ಗದ್ದದ ಆಕಾರ ವಿಭಿನ್ನವಾಗಿರುತ್ತದೆ. ಅದು ಅವರ ನಡವಳಿಕೆಯನ್ನು ಪ್ರತಿಬಿಂಬಿಸುವುದು. ಕಚೇರಿಯಲ್ಲಿ, ಮನೆಯ ಹತ್ತಿರ ಅಥವಾ ಕಾಲೇಜಿನಲ್ಲಿ ನಿಮಗೆ ಸಿಗುವ ವ್ಯಕ್ತಿಗಳ ಗದ್ದ, ಉದ್ದ, ಚೌಕ, ಅಗಲ, ಹೀಗೆ ಯಾವ ಆಕಾರದಲ್ಲಿದೆ ಎಂದು ಮೊದಲು ಗುರುತಿಸಿ. ನಂತರ ನಾವಿಲ್ಲಿ ಹೇಳಿರುವ ವಿಚಾರಗಳನ್ನು ತಾಳೆಮಾಡಿ ನೋಡಿ. ಆಗ ವ್ಯಕ್ತಿಯ ವ್ಯಕ್ತಿತ್ವವನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು....

ಚೌಕಾಕೃತಿಯ ಗದ್ದ

ಚೌಕಾಕೃತಿಯ ಗದ್ದ

ಇವರು ಮೊಂಡು ಸ್ವಭಾವದವರು. ಒಂದು ವಿಚಾರದ ಬಗ್ಗೆ ಮಾತನಾಡುವಾಗ ಆ ವಿಷಯದ ಬಗ್ಗೆ ಆಯ್ಕೆ ಮಾಡಿಕೊಂಡು ಮಾತನಾಡುತ್ತಾರೆ. ಅವರಿಗೆ ಬೇಕೆಂದ ವಿಚಾರಗಳಿಗೆ ಯಾವುದೇ ಬಗೆಯಲ್ಲೂ ರಾಜಿ ಮಾಡಿಕೊಳ್ಳರು. ಜನರಿಗೆ ಇವರೊಂದಿಗೆ ವ್ಯವಹರಿಸಲು ಕಷ್ಟವಾಗುವುದು.

ಸಣ್ಣ ಮತ್ತು ಕಿರಿದಾದ ಗದ್ದ

ಸಣ್ಣ ಮತ್ತು ಕಿರಿದಾದ ಗದ್ದ

ಇವರು ಮುಂಗೋಪ ಸ್ವಭಾವದವರು. ಹಾಗೆಯೇ ತಮಾಷೆ ಹಾಗೂ ಹರಟೆ ಪ್ರಿಯರೂ ಹೌದು. ತಮ್ಮ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುವವರು. ಇವರು ನಿರುತ್ಸಾಹದ ಭಾವನೆಯಲ್ಲಿದ್ದರೂ ಜನರು ಬಹು ಬೇಗ ಗುರುತಿಸಬಲ್ಲರು.

ಉದ್ದನೆಯ ಗದ್ದ

ಉದ್ದನೆಯ ಗದ್ದ

ಇವರು ಬಹಳ ಕಲಾತ್ಮಕ ಮತ್ತು ಅಭಿವ್ಯಕ್ತ ಪಡಿಸುವ ವ್ಯಕ್ತಿತ್ವದವರು. ಕಾಳಜಿಯುಳ್ಳ ಮತ್ತು ನಿಷ್ಠಾವಂತರು. ಇವರನ್ನು ಸುಲಭವಾಗಿ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು.

ವೃತ್ತಾಕಾರದ ಗದ್ದ

ವೃತ್ತಾಕಾರದ ಗದ್ದ

ಇವರು ಉತ್ತಮ ಸ್ನೇಹಿತರಾಗಬಲ್ಲರು. ಅರ್ಥಮಾಡಿಕೊಳ್ಳುವುದು ಮತ್ತು ಪ್ರೋತ್ಸಾಹ ನೀಡುವುದು ಇವರ ಸ್ವಭಾವದಲ್ಲಿಯೇ ಇರುತ್ತದೆ. ಇವರು ಬಹಳ ನಿಷ್ಠಾವಂತ ಕೆಲಸಗಾರರೂ ಹೌದು. ಇವರನ್ನು ನಿಮ್ಮ ಗುಂಪಿನ ನಾಯಕರನ್ನಾಗಿ ಆರಿಸಬಹುದು.

ಮುಂದೆ ಚಾಚಿಕೊಂಡಿರುವ ಗದ್ದ

ಮುಂದೆ ಚಾಚಿಕೊಂಡಿರುವ ಗದ್ದ

ಇವರು ಪ್ರತಿಯೊಂದು ಸನ್ನಿವೇಶದಲ್ಲೂ ಆತ್ಮವಿಶ್ವಾಸಿಗರಾಗಿ ಮತ್ತು ಶಕ್ತಿಯುತರಾಗಿ ಮುನ್ನುಗ್ಗುತ್ತಾರೆ. ನಾಯಕತ್ವವನ್ನು ಬಯಸುವ ಹಾಗೂ ನಾಯಕತ್ವದಲ್ಲಿರುವಾಗ ಬಹಳ ಪ್ರಚೋದಿತ ವ್ಯಕ್ತಿಗಳಾಗಿ ವರ್ತಿಸುವರು. ತಮ್ಮ ಪಾಲುದಾರರಿಗೆ/ಸಂಗಾತಿಗೆ ಮೊಸ ಮಾಡಬಲ್ಲರು.

ಹಿಂದಕ್ಕೆ ಸರಿದ ಗದ್ದ

ಹಿಂದಕ್ಕೆ ಸರಿದ ಗದ್ದ

ಇವರು ಹೊಂದಾಣಿಕೆಯ ವಿಚಾರದಲ್ಲಿ ಹಾಗೂ ರಾಜತಾಂತ್ರಿಕ ಬುದ್ಧಿಯಲ್ಲಿ ಬಹಳ ಜಾಣರು. ಇವರು ಸುತ್ತಲಿನ ವ್ಯಕ್ತಿಗಳಿಂದ ಬಹುಬೇಗ ಪ್ರಭಾವಿತರಾಗುತ್ತಾರೆ. ಇವರು ಬಹುಬೇಗ ಬೇಸರಕ್ಕೂ ಒಳಗಾಗುವರು.

English summary

The Shape And Size Of Your Chin Reveal Your Personality

What if you could look at a person and figure out if he’s the cheating kind or is a huge gossip monger. Face reading is an ancient Chinese practice that includes looking at the chin to reveal natural tendencies of a person and finding out his/her personality. We present to you different kinds of personalities and behaviours associated with different types of chin- like round, long, pointed, protruding etc.
Story first published: Thursday, July 20, 2017, 20:57 [IST]
X
Desktop Bottom Promotion