For Quick Alerts
ALLOW NOTIFICATIONS  
For Daily Alerts

  ಈ ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆಯೇ ಭಯ ಶುರುವಾಗುತ್ತದೆಯಂತೆ!!

  By Jaya Subramanya
  |

  ದುಷ್ಟಶಕ್ತಿಗಳಾದ ಭೂತ, ಪ್ರೇತ, ಪಿಶಾಚಿಗಳನ್ನು ಇಂದಿನ ಆಧುನಿಕ ಕಾಲದಲ್ಲಿ ಯಾರೂ ನಂಬುವುದಿಲ್ಲ. ಅದೆಲ್ಲಾ ಕಟ್ಟುಕಥೆ ಎಂಬುದಾಗಿಯೇ ಪರಿಗಣಿಸುತ್ತಾರೆ. ಒಬ್ಬ ಹುಡುಗಿಯ ಮೈಯಲ್ಲಿ ಪ್ರೇತ ಆಹಾನವಾಗಿದೆ ಎಂದಾಗಿ ಹೇಳಿದರೆ ಘೊಳ್ಳನೆ ನಕ್ಕುಬಿಡುತ್ತಾರೆ. ತಂತ್ರಜ್ಞಾನದ ಈ ಯುಗದಲ್ಲಿ ಅದೆಲ್ಲಾ ಮೂಢರನ್ನಾಗಿಸುವ ಸಂಗತಿಗಳು ಎಂಬುದಾಗಿಯೇ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ನಮ್ಮ ಮುಂದಿರುವ ಕೆಲವು ಸಂಗತಿಗಳಿಂದ ಭೂತ, ಪ್ರೇತ ಪಿಶಾಚಿಗಳನ್ನು ನಾವು ನಂಬಬೇಕಾಗುತ್ತದೆ.

  ಈ ದೇವಸ್ಥಾನದಲ್ಲಿ ಒಂದು ರಾತ್ರಿ ಕಳೆದರೆ, ಅವರು ಕಲ್ಲಾಗಿ ಬಿಡುತ್ತಾರೆ!

  ಈಗೀಗಂತೂ ಯೂಟ್ಯೂಬ್‌ನಂತಹ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಬಹಳಷ್ಟು ವೀಡಿಯೊಗಳನ್ನು ನಾವು ಕಾಣುತ್ತಿರುತ್ತೇವೆ. ಒಟ್ಟಿನಲ್ಲಿ ದೇಶದ ಕೆಲವೊಂದು ಹಳ್ಳಿಗಳಲ್ಲಿ ಈ ಭೂತ ಪ್ರೇತ ಉಪಟಳ ಮತ್ತು ಅದಕ್ಕೆ ಪರಿಹಾರವನ್ನು ನೀಡುವ ಹಲವಾರು ಮಂದಿರಗಳನ್ನು ನಾವು ಕಾಣುತ್ತೇವೆ. ಇಂತಹುದೇ ಒಂದು ತಾಣವಾಗಿದೆ ಮೆಹಂದೀಪುರ ಬಾಲಾಜಿ ದೇವಸ್ಥಾನ. ರಾಜಸ್ಥಾನದಲ್ಲಿರುವ ಈ ದೇವಾಲಯಕ್ಕೆ ಹೆಚ್ಚಿನ ಭಕ್ತರು ಭೂತ ಪ್ರೇತಗಳಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿಯೇ ಬರುತ್ತಾರೆ. ಈ ಜಾಗದಲ್ಲಿ ಪ್ರಬಲ ಶಕ್ತಿ ಇದೆ ಎಂಬುದು ಭಕ್ತರ ನಂಬಿಕೆಯಾಗಿದೆ....

  ಮಾಟ ಮಂತ್ರಗಳಿಂದ ರಕ್ಷಣೆ

  ಮಾಟ ಮಂತ್ರಗಳಿಂದ ರಕ್ಷಣೆ

  ಇಲ್ಲಿ ಮೂರು ದೇವರುಗಳನ್ನು ಪೂಜಿಸಲಾಗುತ್ತದೆ ಹನುಮಂತ, ಪ್ರೇತ ರಾಜ (ಪ್ರೇತಗಳ ಅಧಿಪತಿ) ಭೈರವ. ಈ ದೇವರುಗಳ ವಿಗ್ರಹಗಳು 100 ವರ್ಷಗಳಷ್ಟು ಹಳೆಯದಾಗಿದ್ದು ಇದನ್ನು ಯಾವುದೇ ಶಿಲ್ಪಿ ಕೆತ್ತಿಲ್ಲ. ಸ್ವಯಂ ಉದ್ಭವವಾಗಿದೆ. ಈ ದೇವಸ್ಥಾನ 20 ಶತಮಾನಗಳಷ್ಟು ಹಳೆಯದಾಗಿದೆ. ಈ ದೇವಾಲಯವು ದೈವಿಕ ಶಕ್ತಿಯನ್ನು ಪಡೆದುಕೊಂಡಿದ್ದು ಮಾಟ ಮಂತ್ರ, ಭೂತ ಪ್ರೇತಗಳ ಉಪಟಳದಿಂದ ರಕ್ಷಣೆಯನ್ನು ನೀಡುತ್ತದೆ.

  Image Courtesy

  ಒಂದೊಂದು ಹೆಜ್ಜೆಯಲ್ಲೂ ಇರಲಿ ಎಚ್ಚರ

  ಒಂದೊಂದು ಹೆಜ್ಜೆಯಲ್ಲೂ ಇರಲಿ ಎಚ್ಚರ

  ಈ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಕೆಲವೊಂದು ಅಡೆತಡೆಗಳು ಉಂಟಾಗಬಹುದು. ಇದು ಎಚ್ಚರಿಕೆಯ ಸೂಚನೆಯಾಗಿದೆ. ಒಮ್ಮೆ ನೀವು ಹಳ್ಳಿಯನ್ನು ತಲುಪಿದೊಡನೆ ತಣ್ಣನೆಯ ಗಾಳಿ ನಿಮ್ಮನ್ನು ಸ್ಪರ್ಶಿಸುತ್ತದೆ. ಈ ಸ್ಥಳವು ಅಂತಹ ಸ್ಥಳದಲ್ಲಿದೆ. ದಾರಿಯಲ್ಲಿ ನಡೆದಾಡುವುದು ಕೊಂಚ ಕಷ್ಟವಾಗಿದೆ. ನೀವು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆಯೇ ಇಡಿಯ ವಿಶ್ವವೇ ಬದಲಾದ ಅನುಭವ ನಿಮಗೆ ಉಂಟಾಗುತ್ತದೆ.

  ಜನಸಾಗರ

  ಜನಸಾಗರ

  ಬೆಳಗ್ಗೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ. ಈ ಹಳ್ಳಿ ಎಂದಿಗೂ ನಿದ್ರಿಸುವುದಿಲ್ಲವೆಂದೇ ಈ ಸಮಯದಲ್ಲಿ ತೋರುತ್ತದೆ. ಸ್ಥಳೀಯ ಅಂಗಡಿಗಳ ಜನರು ರಾತ್ರಿ ಮತ್ತು ಹಗಳಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಜನರ ನೂಕು ನುಗ್ಗಲಾಟದಲ್ಲಿ ನೀವು ಸಿಕ್ಕಿಹಾಕಿಕೊಳ್ಳಬಹುದು. ಇಲ್ಲಿ ಭದ್ರತಾ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಾರೆ.

  Image Source

  ವಿಐಪಿ ದರ್ಶನವಿಲ್ಲ!

  ವಿಐಪಿ ದರ್ಶನವಿಲ್ಲ!

  ವಿಐಪಿ ದರ್ಶನದಲ್ಲೂ ನೀವು ಸುಲಭವಾಗಿ ದೇವರನ್ನು ದರ್ಶಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ವಿಐಪಿ ದರ್ಶನಕ್ಕೆ ದಾರಿ ತೋರಿಸುವವರು ಪ್ರಸಾದ ವಿತರಕರಾಗಿದ್ದಾರೆ. ಇಲ್ಲಿ ಪ್ರಸಾದವಾಗಿ ನಿಮಗೆ ಕಪ್ಪಗಿನ ಚೆಂಡನ್ನು ನೀಡಲಾಗುತ್ತದೆ. ಹೂವುಗಳಿಲ್ಲ. ಇವುಗಳನ್ನು ಸೇವಿಸುವಂತಿಲ್ಲ ಬದಲಿಗೆ ದೇವಳದ ಒಳಗೆ ಉರಿಯುತ್ತಿರುವ ಅಗ್ನಿಯಲ್ಲಿ ಈ ಚೆಂಡನ್ನು ನೀವು ಎಸೆಯಬೇಕು.

  ದೆವ್ವವನ್ನು ನಂಬಬೇಕೇ ಬೇಡವೇ ಇದು ನಿಮಗೆ ಬಿಟ್ಟಿರುವ ಸಂಗತಿಯಾಗಿದೆ

  ದೆವ್ವವನ್ನು ನಂಬಬೇಕೇ ಬೇಡವೇ ಇದು ನಿಮಗೆ ಬಿಟ್ಟಿರುವ ಸಂಗತಿಯಾಗಿದೆ

  ಒಮ್ಮೆ ನೀವು ದೇವಳವನ್ನು ಪ್ರವೇಶಿಸುತ್ತಿದ್ದಂತೆಯೇ ಆಶ್ಚರ್ಯಚಕಿತರಾಗುವುದು ಖಂಡಿತ. ನಾಲ್ಕು ದೊಡ್ಡದಾದ ಹಾಲನ್ನು ನೀವು ಕಾಣಬಹುದು. ನೀವು ದೇವಳವನ್ನು ಪ್ರವೇಶಿಸುತ್ತಿದ್ದಂತೆಯೇ ಚೀರಾಟ, ಕೂಗಾಟ ಕಿವಿಯನ್ನು ತಲುಪುತ್ತದೆ. ದೆವ್ವ ಮೆಟ್ಟಿಕೊಂಡವರನ್ನು ನೀವಿಲ್ಲಿ ಕಾಣಬಹುದು. ದೆವ್ವಗಳನ್ನು ನೀವು ನಂಬುವುದಿಲ್ಲ ಎಂದಾದರೆ ಯೋಚಿಸಿ ದೇವಳಕ್ಕೆ ಕಾಲಿಡಿ.

  ಹನುಮನ ಸಾಥ್ ನಿಮಗೆ ದೊರೆಯುತ್ತದೆ

  ಹನುಮನ ಸಾಥ್ ನಿಮಗೆ ದೊರೆಯುತ್ತದೆ

  ಮೊದಲೆರಡು ಹಾಲ್‌ಗಳು ಭೈರವ ಮತ್ತು ಹನುಮನಿಗೆ ಸೀಮಿತವಾದುದಾಗಿದೆ. ಇಲ್ಲಿಯೇ ಕಪ್ಪು ಚೆಂಡನ್ನು ಅಗ್ನಿಗೆ ಎಸೆಯಬೇಕು. ಇದನ್ನು ಎಸೆಯುವ ಮುನ್ನ ನಿಮ್ಮ ದೇಹಕ್ಕೂ ಈ ಚೆಂಡನ್ನು ಸುತ್ತಬೇಕು. ನಂತರ ಸರ್ವಸಂಕಷ್ಟಗಳನ್ನು ದೂರಮಾಡುವ ಹನುಮನ ದರ್ಶನವನ್ನು ಪಡೆಯಿರಿ. ನಂತರ ಮೂರನೆಯ ಕೊಠಡಿಗೆ ಪ್ರವೇಶ.

  ಚೀರಾಟ, ನರಳಾಟ

  ಚೀರಾಟ, ನರಳಾಟ

  ಇಲ್ಲಿ ನಿಮಗೆ ದೆವ್ವ ಮೆಟ್ಟಿಕೊಂಡವರು ಮಾಡುವ ಕ್ರಿಯೆಗಳನ್ನು ನೋಡಬಹುದಾಗಿದೆ. ಕೆಲವರು ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತಿದ್ದರೆ ಇನ್ನು ಕೆಲವರು ತಲೆಯನ್ನು ತಿರುಗಿಸುತ್ತಿರುತ್ತಾರೆ. ನಿಮಗೂ ಈ ಅನುಭವ ಉಂಟಾಗುತ್ತದೆ.

  ದೇವಳದಲ್ಲಿ ಭೂತ ಪ್ರೇತಗಳ ಉಪಟಳ

  ದೇವಳದಲ್ಲಿ ಭೂತ ಪ್ರೇತಗಳ ಉಪಟಳ

  ದೆವ್ವ ಮೆಟ್ಟಿಕೊಂಡವರು, ಮಾಟ ಮಂತ್ರಗಳಿಂದ ತೊಂದರೆ ಅನುಭವಿಸುತ್ತಿರುವವರು ಈ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿರುವ ದೇವರುಗಳು ಅವರುಗಳ ಈ ಸಂಕಷ್ಟವನ್ನು ದೂರಮಾಡುತ್ತಾರೆ ಎಂಬ ನಂಬಿಕೆ ಮತ್ತು ಹಾಗೆಯೇ ನಡೆಯುವುದರಿಂದ ಕೂಡ ಭಕ್ತರ ಸಂಖ್ಯೆ ಇಲ್ಲಿ ಜಾಸ್ತಿ

  ನರಕದ ಕೋಣೆ

  ನರಕದ ಕೋಣೆ

  ಇಲ್ಲಿನ ಕಂಬಗಳಿಗೆ ಹೆಂಗಸರು, ಮಕ್ಕಳು ಮತ್ತು ಗಂಡಸರನ್ನು ಕಬ್ಬಿಣದ ಸರಳುಗಳಿಂದ ಕಟ್ಟಿ ಹಾಕಿರುವುದನ್ನು ನೀವು ಕಾಣಬಹುದು. ಇವರನ್ನು ದುಷ್ಟಶಕ್ತಿಗಳಿಂದ ಕಾಪಾಡಲು ಈ ರೀತಿಯ ಬಂಧನದಲ್ಲಿ ಇರಿಸಲಾಗುತ್ತದೆ. ಪೂಜಾರಿಗಳು ಇವರಿಗೆ ಹೊಡೆಯುವುದನ್ನು ನೀವು ಕಾಣಬಹುದು.

  ಕೂಡಲೇ ಆ ಜಾಗವನ್ನು ನೀವು ಖಾಲಿಮಾಡಬೇಕು

  ಕೂಡಲೇ ಆ ಜಾಗವನ್ನು ನೀವು ಖಾಲಿಮಾಡಬೇಕು

  ದೇವಳದ ಹೊರಗೆ ನೀವು ಕಾಲಿಟ್ಟ ಒಡನೆಯೇ ಕೂಡಲೇ ಆ ಜಾಗವನ್ನು ನೀವು ಖಾಲಿಮಾಡಬೇಕು. ಅಲ್ಲಿರುವ ಆಹಾರ ನೀರು ಕುಡಿಯಲೇಬಾರದು. ಏಕೆಂದರೆ ವಾತಾವರಣದಲ್ಲಿ ಕೂಡ ದುಷ್ಟ ಶಕ್ತಿಗಳ ಶಕ್ತಿ ಇರುತ್ತದೆ. ಮಹಾವೀರ ಹನುಮನ ನಾಮ ಕೇಳದರೆ ಭೂತ ಪ್ರೇತಗಳು ಹತ್ತಿರ ಸುಳಿಯುವುದಿಲ್ಲ ನೀವು ಇಲ್ಲಿ ಬಂದು ಕೇಳಿಕೊಂಡಿರುವುದು ನೆರವೇರಿದಲ್ಲಿ ಪುನಃ ಬಂದು ದೇವಸ್ಥಾನಕ್ಕೆ ಭೇಟಿಕೊಡಬೇಕು ಎಂಬುದು ಕಡ್ಡಾಯವಾಗಿದೆ.

  All Image Source

  English summary

  The only witch temple for exorcism of ghosts in India

  Located in the Dausa district of the Indian state of Rajasthan, Mehendipur Balaji is a temple where live exorcism can be witnessed by those who dare. Thousands of devotees flock this temple every day not just to be penitent, but to get their loved ones relived of evil spirits and ghosts. Some even say that this holy place is bestowed with such power that it could turn atheistic to a theist.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more