ಭಾರತದ ಈ ಪಟ್ಟಣ, ಏಕಮಾತ್ರ - ’ಕಾನೂನುಬದ್ಧ ಭೂತದ ನಗರ!

Posted By: Arshad
Subscribe to Boldsky

ನಮ್ಮ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ಒಂದಾದರೂ ಭೂತಪ್ರೇತಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತದೆ. ಭೂತದ ಕಾಟಕ್ಕೆ ಊರು ಖಾಲಿ ಮಾಡಿ ಹೋದ ಉದಾಹರಣೆಗಳೂ ಇವೆ. ಆದರೆ ಇವೆಲ್ಲವೂ ಅಂತೆಕಂತೆಗಳೇ ಆಗಿದ್ದು ಕಾನೂನು ಇದನ್ನೆಲ್ಲ ನಂಬುವುದಿಲ್ಲ. ಆದರೆ ಈ ನಂಬಿಕೆಗೂ ವ್ಯತಿರಿಕ್ತವಾಗಿ ಭಾರತದಲ್ಲಿರುವ ಭಾನಗಢ ಎಂಬ ಪಟ್ಟಣಕ್ಕೆ ಭಾರತದ ಏಕಮಾತ್ರ ಕಾನೂನುಬದ್ದ ಭೂತನಗರ ಎಂಬ ಅನ್ವರ್ಥನಾಮ ದಕ್ಕಿದೆ. ಭಾರತದಲ್ಲಿಯೇ ಅತಿ ಹೆಚ್ಚು ಭೂತಗ್ರಸ್ತ ನಗರ ಎಂಬ ಕಾರಣಕ್ಕಾಗಿಯೇ ಈ ಪಟ್ಟ ದೊರಕಿದೆ.

ಎಷ್ಟೋ ಪ್ರಕರಣಗಳಲ್ಲಿ ಭೂತಪ್ರೇತಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳೇ ಯಾವುದೋ ಇತರ ಕಾರಣಕ್ಕೆ ತಾಳೆಹೊಂದಿ ಇದು ಒಂದು ಹೊಸ ಭೂತದ ಕಥೆ ಪಡೆಯುವ ಸಾಧ್ಯತೆಗಳೇ ಹೆಚ್ಚು. ತೇಜಸ್ವಿಯವರ ಪರಿಸರದ ಕತೆಗಳು ಗ್ರಂಥದ ಒಂದು ಕಥೆಯಲ್ಲಿ ತೇಜಸ್ವಿಯರ ಮನೆಯಲ್ಲಿಯೇ ಹಕ್ಕಿಯೊಂದು ಕೊಕ್ಕಿನಿಂದ ಕಿಟಕಿಯ ಗಾಜನ್ನು ಬಡಿದು ಹೊರಹೋಗಲು ಯತ್ನಿಸಿದ ಸದ್ದು ಭೂತದ ಕಥೆಗೆ ಗ್ರಾಸವಾದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಎಲ್ಲಿಯವರೆಗೆ ಇದರ ನಿಜಕಾರಣಗಳು ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂತದ ಕತೆಗಳು ರೋಚಕವೂ, ಭಯಮೂಡಿಸುವಂತಹವೂ ಆಗಿರುತ್ತವೆ. ಆದರೆ ಭಾನಗಢ ನಗರದಲ್ಲಿ ಭೂತದ ಬಗ್ಗೆ ಇರುವ ಕಲ್ಪನೆಗಳಿಗಿಂತಲೂ ಜನರು ಅನುಭವಿಸಿದ ಪ್ರಕರಣಗಳೇ ಹೆಚ್ಚು ಮಹತ್ವ ಪಡೆದಿದ್ದು ಈ ವೈಚಿತ್ರ್ಯವನ್ನು ಸುಲಭವಾಗಿ ವಿವರಿಸಲು ಅಸಾಧ್ಯವಾದುದು ಈ ಪಟ್ಟಣಕ್ಕೆ ಪಡೆದ ಖ್ಯಾತಿಗೆ ಕಾರಣವಾಗಿದೆ. ಈ ಬಗ್ಗೆ ಕುತೂಹಲ ಹೊಂದಿದ ಯಾರಿಗಾದರೂ ಜೀವಮಾನದಲ್ಲೊಮ್ಮೆಯಾದರೂ ಈ ಪಟ್ಟಣವನ್ನು ನೋಡಲೇಬೇಕು ಅನ್ನಿಸದಿರದು.....

ಸಂಜೆಯ ಬಳಿಕ ಇಲ್ಲಿಗೆ ಹೋಬೇಡಿ!!

ಸಂಜೆಯ ಬಳಿಕ ಇಲ್ಲಿಗೆ ಹೋಬೇಡಿ!!

ಭಾರತದಾದ್ಯಂತ ಲಕ್ಷಾಂತರ ಭೂತದ ಕಥೆಗಳಿವೆ ಹಾಗೂ ಕೆಲವು ಕಥೆಗಳಲ್ಲಿ ವಿವರಿಸಲಾದ ಸ್ಥಳಗಳು ಭೂತ್ರಗ್ರಸ್ತವಾಗಿವೆ. ಇಂತಹ ಭೂತಗ್ರಸ್ಥ ಸ್ಥಳಗಳು ನೂರಾರಿವೆ ಹಾಗೂ ಕೆಲವು ಸ್ಥಳಗಳಿಗೆ ಯಾವತ್ತೂ ಹೋಗಬೇಡಿ ಎಂದೂ ಕೆಲವು ಕಡೆ ಸಂಜೆಯ ಬಳಿಕ ಹೋಗಬೇಡಿ ಎಂದೂ ಹಿರಿಯರು ಎಚ್ಚರಿಸುತ್ತಾರೆ. ಈ ಸ್ಥಳಗಳಲ್ಲಿ ವಾಸವಾಗಿರುವ ಭೂತಗಳನ್ನು ಕೆಣಕಬೇಡಿ ಎನ್ನುವ ಕಾರಣಕ್ಕೇ ಈ ನಿಷೇಧ ಹೇರಲಾಗಿದೆ. ರಾಜಸ್ಥಾನದಲ್ಲಿರುವ ಭಾನಗಢ ಇಂತಹ ಒಂದು ಸ್ಥಳವಾಗಿದ್ದು ಇಲ್ಲಿರುವ ಕೋಟೆಗೆ ಸಂಜೆಯ ಬಳಿಕ ಹೋಗಬೇಡಿ ಎಂದು ಕಾನೂನಿನ ಫಲಕವೇ ಇದೆ!

ಇತಿಹಾಸದ ಪ್ರಕಾರ...

ಇತಿಹಾಸದ ಪ್ರಕಾರ...

ರಾಜಸ್ಥಾನದ ಅಲ್ವಾರ್ ಹಾಗೂ ಜೈಪುರ ಪಟ್ಟಣಗಳ ನಡುವೆ ಮರುಭೂಮಿಯಲ್ಲಿ ಈ ಪಟ್ಟಣವಿದೆ. ಒಂದು ಕಾಲದಲ್ಲಿ ವೈಭವತೆಯನ್ನು ಹೊಂದಿದ್ದ ದೊಡ್ಡ ಕೋಟೆ ಈಗ ಶಿಥಿಲವಾಗಿದ್ದರೂ ಹಿಂದಿನ ಸೌಂದರ್ಯದ ಹೆಚ್ಚಿನ ಭಾಗವನ್ನು ಉಳಿಸಿಕೊಂಡಿದೆ. ಮೊಗಲರ ಕಾಲದಲ್ಲಿ ಈ ಭಾಗದ ದೊರೆಯಾಗಿದ್ದ ಅಂಬರ್ ನ ಮಾನ್ ಸಿಂಗ್ ಎಂಬುವರ ಕಿರಿಯ ಸಹೋದರ ಮಾಧೋ ಸಿಂಗ್ ಈ ಕೋಟೆಯನ್ನು ಕಟ್ಟಿಸಿದ ಎಂದು ಇತಿಹಾಸ ತಿಳಿಸುತ್ತದೆ.

ಇತಿಹಾಸದ ಪ್ರಕಾರ...

ಇತಿಹಾಸದ ಪ್ರಕಾರ...

ಭಾನಗಢ ಪಟ್ಟಣದಾದ್ಯಂತ ಹಲವಾರು ಕುತೂಹಲ ಹಾಗೂ ನೋಡಲೇಬೇಕು ಎಂಬ ತೀವ್ರಾಪೇಕ್ಷೆ ಉಂಟುಮಾಡುವ ವಸ್ತುಗಳಿವೆ. ಆದರೆ ಈ ಪಟ್ಟಣದೊಳಗೆ ಹೋಗುತ್ತಿದ್ದಂತೆಯೇ ಜನರ ಉಪಸ್ಥಿತಿ ಹೆಚ್ಚೂ ಕಡಿಮೆ ಇಲ್ಲವಾಗುತ್ತದೆ ಹಾಗೂ ಕೇಂದ್ರಭಾಗದಲ್ಲಿ ಭೂತವನ್ನು ಹುಡುಕಿಹೊರಟ ನೀವೇ ಒಬ್ಬಂಟಿಗರಾಗಿಬಿಡುತ್ತೀರಿ. ಇದು ಸ್ಥಳವನ್ನು ಇನ್ನಷ್ಟು ರಹಸ್ಯಮಯ ಹಾಗೂ ಹೃದಯಬಡಿತವನ್ನು ಹೆಚ್ಚಿಸುತ್ತದೆ.

ಇತಿಹಾಸದ ಪ್ರಕಾರ...

ಇತಿಹಾಸದ ಪ್ರಕಾರ...

ಭೂತಗಳ ಬಗ್ಗೆ ಹೆಚ್ಚಿನ ಅನುಭವಗಳು ಪರೋಕ್ಷವಾಗಿಯೇ ಆಗಿವೆ ಹಾಗೂ ನಮಗೆ ಇದರ ಇರುವಿಕೆಯ ಅನುಭೂತಿಯುಂಟಾಗುತ್ತದೆ. ಏಕೆಂದರೆ ಈ ಪಟ್ಟಣಕ್ಕೆ ಕಾಲಿಡುವ ಮುನ್ನ ಸ್ಥಳೀಯರು ಹಾಗೂ ಇತರ ಮಾಧ್ಯಮಗಳ ಮೂಲಕ ಕೇಳಿರುವ ಭೂತದ ಕಥೆಗಳಿಗೆ ಬೆಂಬಲ ನೀಡುವ ಯಾವುದೇ ವಸ್ತು ಅಥವಾ ಸ್ಥಳವನ್ನು ಕಂಡಾಗ ಆ ಕಥೆಯಲ್ಲಿರುವ ಭೂತವೇ ಎದುರು ಬಂದಂತಹ ಅನುಭವವಾಗುತ್ತದೆ. ಆದರೆ ಹಗಲಿನಲ್ಲಿ ಇಲ್ಲಿರುವ ಭೂತಗಳು ಯಾರಿಗೂ ತೊಂದರೆ ಕೊಡದೇ ಇದ್ದರೂ ರಾತ್ರಿ ಹೊತ್ತು ಮಾತ್ರ ಬಂದವರನ್ನು ಬಿಡುವುದಿಲ್ಲ ಎಂದು ಇಲ್ಲಿನವರು ನಂಬುತ್ತಾರೆ ಹಾಗೂ ರಾತ್ರಿ ಹೋಗದಂತೆ ತಡೆಯುತ್ತಾರೆ. ಈ ಮಾತುಗಳನ್ನು ಉಪೇಕ್ಷಿಸಿ ರಾತ್ರಿ ಇಲ್ಲಿ ಕಳೆಯ ಹೋದವರು ಕಾಣೆಯಾಗಿದ್ದಾರೆ ಹಾಗೂ ರಾತ್ರಿ ಹೊತ್ತು ಕೋಟೆಯಿಂದ ವಿವರಿಸಲು ಸಾಧ್ಯವಾದ ಸದ್ದುಗಳು ಬರುತ್ತವೆ.

ಕಾನೂನುಬದ್ಧ ಫಲಕವನ್ನೇ ಹಾಕಲಾಗಿದೆ...!!

ಕಾನೂನುಬದ್ಧ ಫಲಕವನ್ನೇ ಹಾಕಲಾಗಿದೆ...!!

ಭೂತಗಳ ಇರುವಿಕೆಯನ್ನು ಗಮನಿಸಲೇಬೇಕು ಎಂಬ ಹಠ ತೊಟ್ಟು ಭಾನಗಢ ತಲುಪಿದ ನಮ್ಮ ತಂಡಕ್ಕೆ ಭಾರತೀಯ ಉತ್ಖತನ ಸಮೀಕ್ಷಾ ವಿಭಾಗ (Archaeological Survey of India) ಸಂಜೆಯಾಗುತ್ತಲೇ ಪಟ್ಟಣದಿಂದ ಹಿಂದಿರುಗಲು ಅವಸರಿಸಿತ್ತು. ಅಷ್ಟೇ ಅಲ್ಲ, ಈ ಪಟ್ಟಣದ ಪ್ರಾಂಭದಲ್ಲಿಯೇ "ಈ ಪಟ್ಟಣಕ್ಕೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಪ್ರವೇಷ ನಿಷೇಧಿಸಲಾಗಿದೆ" ಎಂದು ಸ್ಪಷ್ಟವಾಗಿಯೇ ಕಾನೂನುಬದ್ದ ಫಲಕವನ್ನು ಅಳವಡಿಸಿದೆ.

ಈ ಕೋಟೆಯ ಬಗ್ಗೆ ಹಲವಾರು ಕಥೆಗಳಿವೆ...

ಈ ಕೋಟೆಯ ಬಗ್ಗೆ ಹಲವಾರು ಕಥೆಗಳಿವೆ...

ಈ ಕೋಟೆಯ ಬಗ್ಗೆ ಹಲವಾರು ಕಥೆಗಳಿದ್ದರೂ ಇದರಲ್ಲಿ ಪ್ರಮುಖವಾದುದೆಂದರೆ ಈ ಪಟ್ಟಣದಲ್ಲಿದ್ದ ಒಬ್ಬ ಮಾಂತ್ರಿಕ ತನ್ನ ಮನೆಗಿಂತಲೂ ಎತ್ತರದ ಮನೆಗಳನ್ನು ಯಾರೂ ಕಟ್ಟಕೂಡದು ಎಂದು ಫರ್ಮಾನು ಹೊರಡಿಸಿದನಂತೆ. ಒಂದು ವೇಳೆ ಯಾರಾದರೂ ಇದನ್ನು ಉಪೇಕ್ಷಿಸಿ ಕಟ್ಟಡ ಕಟ್ಟಿದರೆ ಅದರ ನೆರಳು ಈ ಮನೆಯ ಮೇಲೆ ಬಿದ್ದ ತಕ್ಷಣ ಇಡಿಯ ಊರೇ ನಾಶವಾಗುತ್ತದೆ ಎಂದೂ ಹೆದರಿಸಿದನಂತೆ. ಆದರೆ ಈ ಸೂಚನೆಯನ್ನು ಮಾಧೋಸಿಂಗ್ ರವರ ಮೊಮ್ಮಗನಾದ ಅಜಬ್ ಸಿಂಗ್

ಎಂಬುವರು ಉಪೇಕ್ಷಿಸಿ ಕೋಟೆಯ ಎತ್ತರವನ್ನು ಇನ್ನಷ್ಟು ಎತ್ತರಿಸಿದರಂತೆ. ಪರಿಣಾಮವಾಗಿ ಇದರ ನೆರಳು ಮಾಂತ್ರಿಕನ ಮನೆಯ ಮೇಲೆ ಬಿದ್ದು ನಗರವೇ ದ್ವಂಸವಾಯಿತಂತೆ.

ಈ ಕೋಟೆಯ ಬಗ್ಗೆ ಹಲವಾರು ಕಥೆಗಳಿವೆ...

ಈ ಕೋಟೆಯ ಬಗ್ಗೆ ಹಲವಾರು ಕಥೆಗಳಿವೆ...

ಕೆಲವರು ಇದೇ ಕಥೆಯನ್ನು ಕೊಂಚ ಭಿನ್ನವಾಗಿ ಹೇಳುತ್ತಾರೆ. ಆ ಪ್ರಕಾರ ಈ ಮಾಂತ್ರಿಕ ರತ್ನಾವತಿ ಎಂಬ ಒಬ್ಬ ರಾಜಕುಮಾರಿಯನ್ನು ಮೋಹಿಸಿದನಂತೆ. ತನ್ನ ಮಾಂತ್ರಿಕ ಶಕ್ತಿಯಿಂದ ಒಂದು ದ್ರವವನ್ನು ಸೃಷ್ಟಿಸಿ ರಾಜಕುಮಾರಿ ಹಚ್ಚಿಕೊಳ್ಳುವ ಸುಗಂಧ ದ್ರವ್ಯದೊಡನೆ ಬದಲಾಯಿಸಿ ಈ ದ್ರವ್ಯ ಹಚ್ಚಿಕೊಂಡ ಆಕೆ ಈತನನ್ನೇ ಮೋಹಿಸುವಂತೆ ಮಾಡಿದನಂತೆ. ಆದರೆ ಈ ಕಪಟಬುದ್ದಿಯನ್ನು ಅರಿತ ರಾಜಕುಮಾರಿ ಈ ದ್ರವವಿದ್ದ ಪೆಟ್ಟಿಗೆಯನ್ನು ಕೋಟೆಯ ಕಿಟಕಿಯಿಂದ ಒಂದು ಬಂಡೆಯ ಮೇಲೆ ಎಸೆದಳಂತೆ. ಆ ಪೆಟ್ಟಿಗೆ ಉರುಳುತ್ತಾ ಮಾಂತ್ರಿಕನ ಮನೆಯ ಮೇಲೆ ಬಿದ್ದು ಮನೆಯನ್ನು ನೆಲಸಮ ಮಾಡಿ ಮನೆಯೊಳಗಿದ್ದ ಮಾಂತ್ರಿಕನ್ನೂ ಕೊಂದಿತಂತೆ. ಆದರೆ ಸಾಯುವ ಮೊದಲು ಮಾಂತ್ರಿಕ ಈ ಊರೇ ನಾಶವಾಗಲಿ, ಇಲ್ಲಿ ಯಾರೂ ವಾಸಿಸದಂತಾಗಲಿ ಎಂದು ಶಾಪ ಕೊಟ್ಟು ಸತ್ತನಂತೆ. ಬಳಿಕ ಈ ಊರು ಹಾಳುಬಿತ್ತಂತೆ.

ಇಲ್ಲಿ ಪ್ರತಿಯೊಂದು ಅಚ್ಚರಿ ಮೂಡಿಸುತ್ತದೆ!

ಇಲ್ಲಿ ಪ್ರತಿಯೊಂದು ಅಚ್ಚರಿ ಮೂಡಿಸುತ್ತದೆ!

ಕಥೆ ಎಷ್ಟೇ ಸುಳ್ಳೆಂದು ಅನ್ನಿಸಿದರೂ ಇವು ರೋಚಕ ಎಂಬುದರಲ್ಲಿ ಎರಡು ಮಾತಿಲ್ಲ. ವಾಸ್ತವವಾಗಿ ಈ ಕಥೆಗಳೇ ಈ ಪಟ್ಟಣವನ್ನು ನೋಡಲು ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುತ್ತವೆ. ಭಾನಗಢಕ್ಕೆ ಆಗಮಿಸಿದವರಿಗೆ ಬೃಹತ್ ದ್ವಾರವೊಂದು ಸ್ವಾಗತಿಸುತ್ತದೆ. ಅನತಿದೂರದಲ್ಲಿಯೇ ಇರುವ ಕೋಟೆ ತನ್ನಲ್ಲಿರುವ ರಹಸ್ಯವನ್ನು ನೋಡಲು ಬಂದಿದ್ದೀರಾ, ಬನ್ನಿ ಎಂದು ಸ್ವಾಗತಿಸಿದಂತಾಗುತ್ತದೆ. ಪಟ್ಟಣದ ಒಳಹೋಗುತ್ತಿದ್ದಂತೆಯೇ ಹಿಂದಿನ ವೈಭವದ ಅವಶೇಷಗಳು ರಾಶಿರಾಶಿಯಾಗಿ ಬಿದ್ದಿರುವುದನ್ನು ನೋಡಬಹುದು. ಅರೆಧ್ವಂಸಗೊಂಡ ದೇವಾಯಲಗಳು, ಕೋಟೆಯೊಳಗಿರುವ ಹವೇಲಿಗಳು, ಜನರೇ ಇಲ್ಲದ ಮಾರುಕಟ್ಟೆ ಮೊದಲಾದವೆಲ್ಲಾ ಅಚ್ಚರಿ ಮೂಡಿಸುತ್ತಾ ಸಾಗುತ್ತವೆ.

ಎಲ್ಲರಲ್ಲಿಯೂ ಅಚ್ಚರಿ ಮೂಡಿಸುತ್ತದೆ....

ಎಲ್ಲರಲ್ಲಿಯೂ ಅಚ್ಚರಿ ಮೂಡಿಸುತ್ತದೆ....

ಈ ಪಟ್ಟಣಕ್ಕೆ ಭೇಟಿ ನೀಡಿದ ಹೆಚ್ಚಿನ ಪ್ರವಾಸಿಗರು ಈ ಪಟ್ಟಣದಲ್ಲೇನೋ ವಿವರಿಸಲಸಲಾಧ್ಯವಾದ ತಳಮಳ, ಯಾವುದೋ ಅವ್ಯಕ್ತ ಶಕ್ತಿಯ ಇರುವಿಕೆಯನ್ನು ಅನುಭವಿಸಿದುದಾಗಿ ಹೇಳಿಕೊಂಡಿದ್ದಾರೆ. ಈ ಪಟ್ಟಣದ ಬಗ್ಗೆ ಕುತೂಹಲಗೊಂಡ ಹಲವು ವ್ಯಕ್ತಿಗಳು ಸಾಕ್ಷ್ಯಚಿತ್ರಗಳನ್ನೂ ತಯಾರಿಸಿದ್ದಾರೆ.

ರಾತ್ರಿ ಈ ಪಟ್ಟಣ ಪ್ರವೇಶಿಸಿದರೆ ಮತ್ತೆ ಹಿಂದಿರುಗುವುದಿಲ್ಲ

ರಾತ್ರಿ ಈ ಪಟ್ಟಣ ಪ್ರವೇಶಿಸಿದರೆ ಮತ್ತೆ ಹಿಂದಿರುಗುವುದಿಲ್ಲ

ಭಾರತದಲ್ಲಿ ನೂರಾರು ಭೂತನಗರಗಳಿದ್ದರೂ ಭಾನಗಢಕ್ಕೆ ಮಾತ್ರ ಕಾನೂನುಬದ್ಧ ಭೂತನಗರದ ಪಟ್ಟ ದೊರಕಿದೆ. ಈ ಪಟ್ಟಣದೊಳಗೆ ಪ್ರವೇಶ ಪಡೆಯಲು ಭಾರತ ಸರ್ಕಾರದ ಪ್ರವೇಶಾನುಮತಿ ಪಡೆಯುವುದು ಕಡ್ಡಾಯವಾಗಿದೆ ಹಾಗೂ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಪ್ರವೇಶ ನಿಷಿದ್ಧವಾಗಿದೆ. ರಾತ್ರಿ ಈ ಪಟ್ಟಣ ಪ್ರವೇಶಿಸಿದರೆ ಮತ್ತೆ ಹಿಂದಿರುಗುವುದಿಲ್ಲ ಎಂದು ಸ್ಥಳೀಯರು ನಂಬುತ್ತಾರೆ.

English summary

The Only “Legally Haunted” Place In India

A wizard once cursed the town which led to its destruction – one of the many ghost stories and supernatural experiences you will hear about when you visit Bhangarh, the “ghost town” of India which is considered to be one of the most haunted places in the country.