ಮಾನವರೂಪಿ ಮುಖ ಹೊಂದಿದ ರಹಸ್ಯಮಯ ಬೆಕ್ಕು ಪತ್ತೆ! ಇದು ನಿಜವೇ?

By: Arshad
Subscribe to Boldsky

ಜಗತ್ತಿನಲ್ಲಿ ಸದಾ ಅಲ್ಲೊಂದು ಇಲ್ಲೊಂದು ವಿಚಿತ್ರ ಹಾಗೂ ವಿಜ್ಞಾನ ವಿವರಿಸಲಾಗದ ರಹಸ್ಯಮಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಈ ರಹಸ್ಯಗಳನ್ನು ಅರಿಯಲೆಂದೇ ಇಂದಿನ ದಿನಗಳಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದ್ದು ಕೆಲವಾರು ರಹಸ್ಯಗಳನ್ನು ಭೇದಿಸಲಾಗಿದೆ. ನಿಮಿಷ ನಿಮಿಷಕ್ಕೂ ನಡೆಯುವ ವಿದ್ಯಮಾನಗಳನ್ನು ಕಲೆಹಾಕುತ್ತಾ ಹೊಸ ಪ್ರಯೋಗಗಳನ್ನೂ ನಡೆಸಲಾಗುತ್ತಿದೆ. ವಿಶೇಷವಾಗಿ ಮಾನವರಿಗೆ ಆವರಿಸುವ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದ್ದು ಹೊಸ ಬಗೆಯ ಕಾಯಿಲೆಗಳು ಪ್ರಕಟಗೊಳ್ಳುತ್ತಿವೆ ಹಾಗೂ ಇದಕ್ಕೆ ಔಷಧಿಗಳನ್ನು ಇನ್ನಷ್ಟೇ ಸಂಶೋಧಿಸಬೇಕಾಗಿದೆ.

ಕೆಲವೆಡೆ ಅನುವಂಶಿಕ ಕಾರಣಗಳಿಂದ ಹುಟ್ಟುವ ಜೀವಿ ತಂದೆ ತಾಯಿಯರನ್ನು ಹೋಲದೇ ಬೇರೆಯೇ ರೂಪ ತಳೆದಿರುವುದು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಎರಡು ತಲೆಯ ಹಸುವಿನ ಕರು, ಪರಸ್ಪರ ಅಂಟಿಕೊಂಡ ಸಯಾಮೀಸ್ ಅವಳಿ ಮೊದಲಾದವು ಆಗಾಗ ಜಗತ್ತಿನ ಈ ರಹಸ್ಯಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಇತ್ತೀಚಿನ ಇನ್ನೊಂದು ಸೇರ್ಪಡೆ ಎಂದರೆ ಮಾನವ ಮುಖದ ಬೆಕ್ಕೊಂದು ಜನಿಸಿರುವುದು. ಈ ಬಗ್ಗೆ ಹಲವು ಸಂಶೋಧಕರು ಕುತೂಹಲ ತಾಳಿದ್ದು ಇವರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ...

ಈ ವಿಡಿಯೋ ವೈರಲ್ ಆಗಿಬಿಟ್ಟಿದೆ

ಈ ವಿಡಿಯೋ ವೈರಲ್ ಆಗಿಬಿಟ್ಟಿದೆ

ಇಂತಹ ವಿಚಿತ್ರವಾದುದೇನಾದರೂ ಕಂಡುಬಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಇನ್ನಿಲ್ಲದ ಕುತೂಹಲ. ಈ ಕುತೂಹಲವೇ ಈ ಬೆಕ್ಕಿನ ವಿಡಿಯೋವನ್ನು ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹರಡಲು ನೆರವಾಗಿದೆ. ಈ ವಿಡಿಯೋವನ್ನು ಮಲೇಶಿಯಾದ ಪಶ್ಚಿಮ ಭಾಗದಲ್ಲಿರುವ ಪಹಾಂಗ್ ಎಂಬಲ್ಲಿನ ಅಜ್ಞಾತ ಸ್ಥಳವೊಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತದೆ.

ಈ ವಿಡಿಯೋದಲ್ಲಿ ಏನನ್ನು ತೋರಿಸಲಾಗಿದೆ?

ಈ ವಿಡಿಯೋದಲ್ಲಿ ಏನನ್ನು ತೋರಿಸಲಾಗಿದೆ?

ಮೂಲಗಳ ಪ್ರಕಾರ ಈ ವೀಡಿಯೋದಲ್ಲಿ ವಿರಳ ತಲೆಗೂದಲಿರುವ, ಗುಲಾಬಿ ಬಣ್ಣದ ಚರ್ಮದ, ನಾಲ್ಕು ಕಾಲಿನ, ಬಾಲವುಳ್ಳ, ಆದರೆ ಮುಖ ಮಾನವರನ್ನು ಹೋಲುವ ಮತ್ತು ಎರಡು ಪ್ರಮುಖ ಕೋರೆಹಲ್ಲುಗಳು ತುಟಿಯಿಂದ ಹೊರಚಾಚಿರುವ ಜೀವಿಯನ್ನು ಚಿತ್ರಿಸಲಾಗಿದೆ. ಎರಡು ಬೆರಳುಗಳಷ್ಟೇ ಉದ್ದವಿರುವ ಶರೀರದ ಕಾಲುಗಳ ತುದಿಯಲ್ಲಿ ಚೂಪಾದ ಉಗುರುಗಳಿವೆ.

ಈ ಜೀವಿಯ ವಾಸ್ತವ

ಈ ಜೀವಿಯ ವಾಸ್ತವ

ಈ ವಿಡಿಯೋವನ್ನು ಕಂಡ ಜನರು ಇದನ್ನು ನಿಜವೆಂದು ನಂಬುತ್ತಿದ್ದು ಮುಂದೆ ಬರಲಿರುವ ಯಾವುದೋ ಆಪತ್ತಿನ ಸಂಕೇತವೆಂಬಂತೆ ಭಯಭೀತರಾಗುತ್ತಿದ್ದಾರೆ. ಆದರೆ ತಜ್ಞರು ನೀಡಿರುವ ವಿವರಣೆಯ ಪ್ರಕಾರ ಇದು ನಿಜವಾದ ಜೀವಿಯಲ್ಲ, ಬದಲಿಗೆ ಸಿಲಿಕಾನ್ ಮೂಲವಸ್ತುವನ್ನು ಬಳಸಿ ನಿರ್ಮಿಸಲಾದ ಗೊಂಬೆಯಾಗಿದ್ದು ಆನ್ಲೈನ್ ನಲ್ಲಿ ಮಾರಾಟಕ್ಕೂ ಲಭ್ಯವಿದೆ.

ಇದು ದೊಡ್ಡ ಸುಳ್ಳು!

ಇದು ದೊಡ್ಡ ಸುಳ್ಳು!

ಯಾವಾಗ ಇದು ಸುಳ್ಳು ಎಂದು ತಜ್ಞರು ಸ್ಪಷ್ಟಪಡಿಸಿದರೋ ಆಗ ಇದಕ್ಕೂ ಹಿಂದೆ ಇದೇ ರೀತಿಯ ಸುಳ್ಳುಗಳಿಗೆ ಬೇಸ್ತು ಬಿದ್ದಿರುವ ನೂರಾರು ಸಂಗತಿಗಳು ಬೆಳಕಿಗೆ ಬಂದಿವೆ. ಇದಕ್ಕೂ ಮುನ್ನ ಭಾರತದ ಹಳ್ಳಿಯೊಂದರಲ್ಲಿ ಮಾನವ ಮುಖದ ಕುರಿಮರಿಯೊಂದು ಜನಿಸಿದ್ದು ಸಹಾ ದೊಡ್ಡ ಸುದ್ದಿ ಮಾಡಿತ್ತು.

ನಿರ್ಣಯ

ನಿರ್ಣಯ

ಈ ವರದಿಯ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಮಲೇಶಿಯಾ ಪೋಲೀಸ್ ಇಲಾಖೆಯೂ ತನಿಖೆ ನಡೆಸಿದ್ದು ಯಾವುದೇ ಸಾಕ್ಷ್ಯವಾಗಲೀ, ಜೀವಿಯಾಗಲೀ ಕಂಡುಬರದೇ ಇದ್ದ ಕಾರಣ ಇದೊಂದು ಊಹಾಪೋಹದ ಸುಳ್ಳು ಎಂದು ಡೇಲಿಮೇಲ್ ವರದಿ ಮಾಡಿದೆ. ಸರ್ಕಾರದ ಕಡೆಯಿಂದಲೂ ಇಂತಹ ಸುಳ್ಳು ಸುದ್ದಿ ಹಾಗೂ ಊಹಾಪೋಹಗಳನ್ನು ಹರಡದಿರುವಂತೆ ಮನವಿಗಳು ಪ್ರಕಟಗೊಂಡಿವೆ. ವಾಸ್ತವವಾಗಿ ಸುಮ್ಮನೇ ಸುಳ್ಳು ಸುದ್ದಿಯೊಂದನ್ನು ಅಂತರ್ಜಾಲದಲ್ಲಿ ಹಾಕಿ

ಎಲ್ಲೆಡೆ ಪಸರಿರುವಂತೆ ಮಾಡಿ ತಮಾಷೆ ನೋಡುವ ಕಿಡಿಗೇಡಿಗಳ ಕುತಂತ್ರವೇ ಹೊರತು ಇನ್ನೇನಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಕೇವಲ ಮಲೇಶಿಯನ್ನರಿಗೆ ಮಾತ್ರವಲ್ಲ, ಜಗತ್ತಿನ ಎಲ್ಲರಿಗೂ ಅನ್ವಯಿಸುತ್ತದೆ. ಕೆಟ್ಟ ಕುತೂಹಲದಿಂದ ಯಾವುದೇ ಸುದ್ದಿಯ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳದೇ ನೇರವಾಗಿ ಇನ್ನೊಬ್ಬರಿಗೆ ದಾಟಿಸಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಬಯಕೆಯೇ ಈ ಪರಿಯ ತೊಂದರೆಗೆ ಮೂಲವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

All images Source: Asiawire.com

English summary

The Mysterious Cat With A Human-like Face Found!!

With science researches and inventions reaching a new level, there is a lot that is changing and evolving around us. There are new experiments being conducted on a minute-by-minute basis in today's world, and also there are a lot of new diseases that are coming up, which the mankind is yet to discover a medicine for. With genetic mutations and genes going wrong in a few cases, there is just anything that one can expect from and this example of a cat-human creature would prove it right that humans have no control on the gene mutations that can take place, which is the result of all the scientific experiments being done. Read on to know more details on this...
Subscribe Newsletter