For Quick Alerts
ALLOW NOTIFICATIONS  
For Daily Alerts

  ಕಾರ್ಗಿಲ್ ಯುದ್ಧದಲ್ಲಿ ಒಂದು ಕಾಲನ್ನು ಕಳೆದುಕೊಂಡ ವೀರ ಯೋಧನ ಕಥೆ ಇದು...

  By Arshad
  |

  ಮಾಲತಿ ಹೊಳ್ಳ- ಈ ಹೆಸರು ಕೇಳಿದರೆ ನಿಮಗೇನೆನಿಸುತ್ತದೆ? ಯಾವುದಾದರೊಂದು ಸಾಧನೆ ಸಾಧಿಸಲು ಅಂಗವೈಕಲ್ಯ ಅಡ್ಡಿ ಬರದು, ಇದಕ್ಕೆ ನಿಜವಾಗಿ ಬೇಕಾಗಿರುವುದು ಮಾನಸಿಕ ಸ್ಥೈರ್ಯ ಹಾಗೂ ಛಲ. ಜೀವನದಲ್ಲಿ ಎದುರಾಗುವ ಸಾವಿರಾರು ಧೃತಿಗೆಡವುವ ಸಂದರ್ಭಗಳಲ್ಲಿ ಚಿತ್ತ ಕಳೆದುಕೊಳ್ಳದೇ ಎದುರಿಸುವವರೇ ನಿಜವಾದ ಧೀರರು. ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಆಗಾಗ ಕಾಣುತ್ತಿರುತ್ತೇವೆ. ಈ ಕಾರಣದಿಂದಲೇ ಸಾಮಾನ್ಯ ಜನರಾಗಿದ್ದ ಇವರು ತಮ್ಮ ಪ್ರತಿಭೆ ಅಥವಾ ಛಲದ ಫಲ ಕಂಡುಬರುತ್ತಿದ್ದಂತೆಯೇ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

  ಕುತೂಹಲ ಕೆರಳಿಸುವ ಕಾರ್ಗಿಲ್ ಕದನದ ರೋಚಕ ಕ್ಷಣಗಳು!

  ಇಂತಹ ಒಂದು ಧೀರತನವನ್ನು ಪ್ರದರ್ಶಿಸಿದ ಮೇಜರ್ ಡಿ.ಪಿ. ಸಿಂಗ್ ರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಇವರು ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ 1999ರ ಕಾರ್ಗಿಲ್ ಯುದ್ಧದಲ್ಲಿ ಅಪಾರ ಶೌರ್ಯವನ್ನು ಪ್ರದರ್ಶಿಸಿ ಗಾಯಗೊಂಡು ಒಂದು ಕಾಲನ್ನು ಕಳೆದುಕೊಂಡರು.

  ಆದರೆ ಈ ವೈಕಲ್ಯಕ್ಕೆ ಇವರ ಛಲವನ್ನು ಅಡಗಿಸಲು ಸಾಧ್ಯವಾಗಿಲ್ಲ. ಯುದ್ಧದ ಬಳಿಕ ತನ್ನ ಸಾಮರ್ಥ್ಯವನ್ನೆಲ್ಲಾ ಅಂಗವಿಕಲರ ಕ್ರೀಡೆಯಲ್ಲಿ ತೊಡಗಿಸಿಕೊಂಡ ಇವರು ನಂತರದ ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಮ್ಯಾರಥಾನ್ ಓಟಗಳಲ್ಲಿ ಕೃತಕಕಾಲಿನೊಂದಿಗೆ ಓಡಿ ಗೆದ್ದುಕೊಂಡು ಲಿಮ್ಕಾ ದಾಖಲೆಯನ್ನೂ ಪಡೆದಿದ್ದಾರೆ. 

  ಸಿಯಾಚಿನ್‍ನಲ್ಲಿ ಸದಾ ಯೋಧರ ರಕ್ಷಣೆಗೆ ನಿಲ್ಲುವ "ಒಪಿ ಬಾಬಾ''ನ ಆತ್ಮ!

  ಅಷ್ಟೇ ಅಲ್ಲ, ಇವರು ಓಡಲು ಬಳಸುವ ಬ್ಲೇಡ್ ಮಾದರಿಯ ಕೃತಕ ಕಾಲಿನಿಂದಾಗಿ "ಭಾರತದ ಬ್ಲೇಡ್ ರನ್ನರ್" ಎಂಬ ವಿಶೇಷಣವನ್ನೂ ಪಡೆದಿದ್ದಾರೆ. ಅಷ್ಟೇ ಅಲ್ಲ, ತನ್ನಂತೆಯೇ ಊನವಿರುವ ಇತರರಿಗೆ ಮನೋಸ್ಥೈರ್ಯ ತುಂಬಲು ಅಲ್ಲಲ್ಲಿ ಭಾಷಣಗಳನ್ನು ಮಾಡುತ್ತಾ ತನ್ನವರಿಗೆ ತನ್ನದೇ ಜೀವನದ ಉದಾಹರಣೆಯನ್ನು ನೀಡಿ ಜೀವನದ ಬೆಲೆಯನ್ನು ತಿಳಿಸುತ್ತಾ ಸ್ಫೂರ್ತಿ ತುಂಬುತ್ತಿದ್ದಾರೆ. 

  ಮೇಜರ್ ಡಿ.ಪಿ ಸಿಂಗ್ ರವರ ಗಾಯ ಹಾಗೂ ಚಿಕಿತ್ಸೆ

  ಮೇಜರ್ ಡಿ.ಪಿ ಸಿಂಗ್ ರವರ ಗಾಯ ಹಾಗೂ ಚಿಕಿತ್ಸೆ

  ಇಂದು ಇವರು ಏನಾಗಿದ್ದಾರೋ ಇದನ್ನು ಸಾಧಿಸುವುದು ಖಂಡಿತಾ ಸುಲಭವಾಗಿರಲಿಲ್ಲ. ಯುದ್ಧದಲ್ಲಿ ಆದ ಗಾಯದಿಂದ ಮೂರ್ಛೆಹೋಗಿದ್ದ ಇವರನ್ನು ಸೈನಿಕರು ಆಸ್ಪತ್ರೆಗೆ ಕರೆತಂದಾಗ ಹೆಚ್ಚೂ ಕಡಿಮೆ ಇವರು ಸಾಯುವ ಸ್ಥಿತಿಯಲ್ಲಿದ್ದರು. ನಂತರದ ನಲವತ್ತು ದಿನಗಳಲ್ಲಿ ವೈದ್ಯರು ಇವರನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಿದರು. ಇವರ ದೇಹದ ತೂಕ ಕೇವಲ ಇಪ್ಪತ್ತೆಂಟು ಕೇಜಿಗಳಿಗೆ ಇಳಿಯಿತು.

  Image Source

  ದೇಹದ ಪ್ರತಿ ಅಂಗವೂ ಜರ್ಝರಿತಗೊಂಡಿತ್ತು....

  ದೇಹದ ಪ್ರತಿ ಅಂಗವೂ ಜರ್ಝರಿತಗೊಂಡಿತ್ತು....

  ಯುದ್ಧದ ಆಘಾತದಿಂದ ದೇಹದ ಪ್ರತಿ ಅಂಗವೂ ಜರ್ಝರಿತಗೊಂಡಿತ್ತು. ಕರುಳು, ಯಕೃತ್, ಮೂತ್ರಕೋಶ, ಎದೆಗೂಡು, ಮೊಣಕೈ ಮೊದಲಾದವು ತೀವ್ರವಾಗಿ ಗಾಯಗೊಂಡಿದ್ದವು. ಈ ಆಘಾತದ ಕಾರಣ ಇವರಿಗೆ ಒಂದು ಕಿವಿಯಲ್ಲಿ ಇಂದಿಗೂ ಕೊಂಚ ಕಡಿಮೆಯೇ ಕೇಳುತ್ತಿದೆ.

  Image Courtesy

  ಬಾಲ್ಯದಲ್ಲೂ ಬಡತನದ ಜೀವನ....

  ಬಾಲ್ಯದಲ್ಲೂ ಬಡತನದ ಜೀವನ....

  ಕೆಲವರಿಗೆ ಏನು ಮುಟ್ಟಿದರೂ ಮಣ್ಣು, ಕೆಲವರು ಏನು ಮುಟ್ಟಿದರೂ ಚಿನ್ನ. ಮೇಜರ್ ಡಿ.ಪಿ. ಸಿಂಗ್ ರವರಿಗೆ ಚಿಕ್ಕಂದಿನಿಂದಲೂ ಮುಟ್ಟಿದ್ದೆಲ್ಲಾ ಮಣ್ಣು ಎಂಬ ಸ್ಥಿತಿಯೇ ಇತ್ತು. ಇವರ ತಂದೆ ತಾಯಿಯರಿಗೆ ಕಾಡುತ್ತಿದ್ದ ಬಡತನದ ಕಾರಣ ಇವರು ತಮ್ಮ ಅಜ್ಜ ಅಜ್ಜಿಯರ ನೆರಳಿನಲ್ಲಿ ಬೆಳೆದರು.

  Image Courtesy

   ದೈಹಿಕ ಆಘಾತದೊಡನೆ ಮಾನಸಿಕ ಆಘಾತ

  ದೈಹಿಕ ಆಘಾತದೊಡನೆ ಮಾನಸಿಕ ಆಘಾತ

  ಆರ್ಥಿಕ ಮುಗ್ಗಟ್ಟಿನಿಂದ ತನ್ನ ಒಂಬತ್ತನೆಯ ತರಗತಿಯ ಪರೀಕ್ಷೆಯನ್ನೂ ಕಟ್ಟಲಿಕ್ಕ ಸಾಧ್ಯವಾಗದೇ ಶಾಲೆ ಬಿಟ್ಟು ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ ಭಾರತೀಯ ಸೇನೆಯಲ್ಲಿ ಪ್ರವೇಶ ಪಡೆದರು. ಯುದ್ಧದಲ್ಲಿ ಆದ ಗಾಯದ ಬಳಿಕ ಇವರ ಪತ್ನಿಯೂ ಬಿಟ್ಟು ಹೋದ ಕಾರಣ ದೈಹಿಕ ಆಘಾತದೊಡನೆ ಮಾನಸಿಕ ಆಘಾತವನ್ನೂ ಎದುರಿಸುವಂತಾಯ್ತು.

  Image Courtesy

  ತರಬೇತಿ

  ತರಬೇತಿ

  ಗಾಯಗೊಂಡ ಬಳಿಕ ಪೂರ್ಣವಾಗಿ ಚೇತರಿಸಿಕೊಳ್ಳಲು ಇವರಿಗೆ ಸರಿಸುಮಾರು ಹತ್ತು ವರ್ಷಗಳೇ ಬೇಕಾದವು. ಈ ಯತ್ನದಲ್ಲಿ ಇವರು ಗಾಲ್ಫ್, ಸ್ಕ್ವಾಶ್, ವಾಲಿಬಾಲ್ ಮೊದಲಾದವುಗಳನ್ನು ಆಡುತ್ತಾ ತನ್ನ ಸೇನೆಯ ತರಬೇತಿಯ ಸಮಯದಲ್ಲಿ ಕಲಿಸಿದ್ದ ವ್ಯಾಯಾಮಗಳನ್ನೂ ಮಾಡತೊಡಗಿದರು. ಕೃತಕ ಕಾಲಿನೊಂದಿಗೆ ನಡೆಯುವುದೇ ಕಷ್ಟವಾಗಿರುವಾಗ ಓಡುವುದು ಇನ್ನಷ್ಟು ಕಷ್ಟವಾಗಿತ್ತು. ಏಕೆಂದರೆ ಓಟದಲ್ಲಿ ಅತಿ ಹೆಚ್ಚಿನ ದೈಹಿಕ ಸಾಮರ್ಥ್ಯ ಹಾಗೂ ಸಹಿಷ್ಣುತೆಯ ಅಗತ್ಯವಿದೆ.

  ಕೃತಕ ಕಾಲಿನೊಂದಿಗೆ ಮ್ಯಾರಥಾನ್ ಓಟ!

  ಕೃತಕ ಕಾಲಿನೊಂದಿಗೆ ಮ್ಯಾರಥಾನ್ ಓಟ!

  2009ರಲ್ಲಿ ಕೃತಕ ಕಾಲಿನೊಂದಿಗೆ ಏರ್ಟೆಲ್ ದೆಹಲಿ ಹಾಫ್ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದರು. ಈ ಓಟವನ್ನು ಇವರು ಮೂರು ಗಂಟೆಗಳ ಬಳಿಕ ಪೂರೈಸಿದರೂ ಭಾರೀ ರಕ್ತಸ್ರಾವ ಕಂಡುಬಂದಿತ್ತು. ಇದನ್ನು ತಪ್ಪಿಸಿಕೊಳ್ಳಲು ಒಂದು ಹೆಜ್ಜೆ ಓಟ, ಒಂದು ಹೆಜ್ಜೆ ನೆಗೆತ ಎಂಬ ಮಾದರಿಯ ಓಟವನ್ನು ತಾನಾಗಿಯೇ ಅಭ್ಯಸಿಸತೊಡಗಿದರು. ಅಂದರೆ ಆರೋಗ್ಯವಂತ ಕಾಲಿನಿಂದ ಓಡುತ್ತಾ ಕೃತಕಕಾಲನ್ನು ಎಳೆದಾಡುತ್ತಾ ಎಂಬಂತೆ ಓಡತೊಡಗಿದರು.

  Image Courtesy

  ಪ್ರಥಮ ಬ್ಲೇಡ್ ರನ್ನರ್ ಸ್ಪರ್ಧಿ ಎಂಬ ಗರಿಮೆ

  ಪ್ರಥಮ ಬ್ಲೇಡ್ ರನ್ನರ್ ಸ್ಪರ್ಧಿ ಎಂಬ ಗರಿಮೆ

  ಆದರೆ ಈ ವಿಧಾನದಲ್ಲಿ ಇವರು ಐದು ಕಿಮೀ ಓಡಲು ಸಾಧ್ಯವಾಗುವಷ್ಟು ಸಾಮರ್ಥ್ಯ ಪಡೆಯಲು ಕೆಲವಾರು ತಿಂಗಳುಗಳನ್ನೇ ವ್ಯಯಿಸಿದರು. ಈ ವಿಧಾನದಿಂದ ಮುಂದಿನ ಎರಡು ಮ್ಯಾರಥಾನ್ ಗಳನ್ನು ಜಯಿಸಿದರು. ಈ ವಿಧಾನವನ್ನೇ ಇನ್ನಷ್ಟು ಉತ್ತಮಗೊಳಿಸುತ್ತಾ ಮುಂದಿನ ಪ್ರಯತ್ನಗಳಲ್ಲಿ ಹದಿನೈದು ನಿಮಿಷ ಕಡಿಮೆ ಅವಧಿಯಲ್ಲಿ ಓಟವನ್ನು ಪೂರ್ಣಗೊಳಿಸಿದರು. 2011ರಲ್ಲಿ ಇವರ ಸಾಧನೆಯನ್ನು ಕಂಡುಕೊಂಡ ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ರವರು ಇವರಿಗೆ ಬ್ಲೇಡ್ ಮಾದರಿಯ ಕೃತಕ ಕಾಲನ್ನು ಒದಗಿಸಿ ಹೆಚ್ಚಿನ ಸಾಧನೆ ಸಾಧಿಸಲು ನೆರವಾದರು. ಇದು ಇವರ ಜೀವನಕ್ಕೆ ಪ್ರಮುಖ ತಿರುವನ್ನು ಪಡೆಯಲು ಸಾಧ್ಯವಾಗಿತ್ತು. ಈ ಮೂಲಕ ಹಾಫ್ ಮ್ಯಾರಥಾನ್‌ನಲ್ಲಿ ಭಾರತದ ಪ್ರಥಮ ಬ್ಲೇಡ್ ರನ್ನರ್ ಸ್ಪರ್ಧಿ ಎಂಬ ಗರಿಮೆಯನ್ನು ಪಡೆದರು.

  Image Courtesy

  ಸವಾಲುಗಳು ಹಾಗೂ ಸರಿಯಾದ ಚಿಂತನಮಾರ್ಗ

  ಸವಾಲುಗಳು ಹಾಗೂ ಸರಿಯಾದ ಚಿಂತನಮಾರ್ಗ

  ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ದೈಹಿಕ ಸಾಮರ್ಥ್ಯದ ಜೊತೆಗೇ ಮಾನಸಿಕ ಸ್ಥೈರ್ಯವೂ ಅಗತ್ಯವಾಗಿ ಬೇಕಾಗುತ್ತದೆ. ಅದರಲ್ಲೂ ವಿಶೇಷ ಆದ್ಯತೆಯ ಅಗತ್ಯವುಳ್ಳ ವ್ಯಕ್ತಿಗಳಿಗೆ ಕೃತಕ ಅಂಗಗಳನ್ನು ತೊಟ್ಟು ತಯಾರಾಗುವುದರಲ್ಲಿಯೇ ಹೆಚ್ಚಿನ ಸಮಯ ಬೇಕಾಗುತ್ತದೆ. ಇವರಿಗೆ ತಮ್ಮ ಬ್ಲೇಡ್ ಮಾದರಿಯ ಕೃತಕ ಕಾಲನ್ನು ದೃಢವಾಗಿ ಧರಿಸಿಕೊಂಡು ಓಟವೊಂದಕ್ಕೆ ತಯಾರಾಗಲೇ ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಬಳಿಕ ಓಟದ ಅಭ್ಯಾಸದ ನಂತರ ಸಾಮಾನ್ಯ ಸ್ಥಿತಿಗೆ ಬರಲು ಇತರರಿಗಿಂತ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಈ ಎಲ್ಲಾ ಸವಾಲುಗಳನ್ನು ಎದುರಿಸಿದ ಮೇಜರ್ ತಮ್ಮನ್ನು ತಾವೇ "ಚಾಲೆಂಜರ್" ಎಂದು ಕರೆದುಕೊಂಡು ಮಾನಸಿಕರಾಗಿ ಹೆಚ್ಚು ಹೆಚ್ಚು ದೃಢರಾಗುತ್ತಾ ಬಂದರು.

  Image Courtesy

  ಮಾನಸಿಕ ಸ್ಥೈರ್ಯವೇ ಯಶಸ್ಸಿನ ಗುಟ್ಟು....

  ಮಾನಸಿಕ ಸ್ಥೈರ್ಯವೇ ಯಶಸ್ಸಿನ ಗುಟ್ಟು....

  ಇವರ ಪ್ರಕಾರ ಯಾವುದೇ ದೈಹಿಕ ಸಾಮರ್ಥ ಮಾನಸಿಕ ಸಾಮರ್ಥವನ್ನೇ ಅವಲಂಬಿಸಿದ್ದು ಈ ಸಾಮರ್ಥ್ಯದ ಮೂಲಕವೇ ಮ್ಯಾರಥಾನ್ ನಂತಹ ಓಟಗಳನ್ನು ಗೆಲ್ಲಲು ಸಾಧ್ಯ. ಅಂಗವೈಕಲ್ಯ ಇರಲಿ ಅಥವಾ ಇಲ್ಲದೇ ಇರಲಿ, ಸವಾಲನ್ನು ಗೆಲ್ಲಬೇಕಾದರೆ ಈ ಮಾನಸಿಕ ಸ್ಥೈರ್ಯ ಬೇಕೇ ಬೇಕು ಎಂಬುವುದೇ ಇವರ ಯಶಸ್ಸಿನ ಗುಟ್ಟು. ಅಲ್ಲದೇ ಯಾವುದೇ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿ ತನ್ನಲ್ಲಿ ಇಲ್ಲದಿರುವ ಅಂಗದ ಬಗ್ಗೆ ಕೊರಗುವುದರ ಬದಲು ತನ್ನಲ್ಲಿ ಇರುವ

  ಅಂಗಗಳ ಬಗ್ಗೆ ಯೋಚಿಸುತ್ತಾ ಇವುಗಳ ಗರಿಷ್ಟ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಯೋಚಿಸಬೇಕು.

  ಭವಿಷ್ಯದ ಯೋಜನೆ

  ಭವಿಷ್ಯದ ಯೋಜನೆ

  ಕೇವಲ ಮ್ಯಾರಥಾನ್ ಗಳನ್ನು ಗೆದ್ದು ಪದಕಗಳನ್ನು ಮನೆಯಲ್ಲಿ ತೂಗು ಹಾಕಿ ಪ್ರದರ್ಶಿಸುವಲ್ಲಿ ಇವರು ತೃಪ್ತಿ ಪಡೆದಿಲ್ಲ. ಬದಲಿಗೆ ತನ್ನಂತೆಯೇ ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಿರುವವರಿಗೆ ನೆರವಾಗಲೆಂದು "ಚ್ಯಾಲೆಂಜಿಂಗ್ ಒನ್ಸ್" ಎಂಬ ಎನ್.ಜಿ.ಓ ಅಥವ ಸರ್ಕಾರೇತರ ಸಂಘಟನೆಯನ್ನು ಸ್ಥಾಪಿಸಿ ಅಂಗವಿಕಲರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇವರ ಧ್ಯೇಯವಾಕ್ಯ "ನೀವು ಅಂಗವಿಕಲ ಅಥವ ಅಂಗಹೀನರಾಗಿದ್ದೀರಿ ಎಂದು ಭಾವಿಸುತ್ತಿಲ್ಲ" ಎಂದೇ ಆಗಿದೆ. ಕ್ರೀಡೆಯ ಕುರಿತಾದ ಇವರ ಉತ್ಸಾಹ ಹಾಗೂ ಸೇನೆಯಲ್ಲಿ ಪಡೆದ ತರಬೇತಿಯನ್ನು ಇವರು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಅಂಗವಿಕಲತೆಯನ್ನೇ ತಮ್ಮ ಸಾಮರ್ಥ್ಯವಾಗಿಸಿಕೊಂಡಿದ್ದಾರೆ. ಅಲ್ಲದೇ ಅಂಗಹೀನರಿಗೆ ಕೃತಕ ಅಂಗಗಳು ಹಾಗೂ ತನ್ನಿಂದಾಗುವ ಯಾವುದೇ ನೆರವನ್ನು

  ನೀಡುವಲ್ಲಿ ಇವರು ಸದಾ ಉತ್ಸುಕರಾಗಿದ್ದು ಸದಾ ಕ್ರಿಯಾಶೀಲರಾಗಿರುತ್ತಾರೆ. ಅಷ್ಟೇ ಅಲ್ಲ, ಸೇನೆಯಲ್ಲಿ ಗಾಯಗೊಂಡ ತನ್ನನ್ನು ಬದುಕುಳಿಸಿದ ಸೈನಿಕರನ್ನೂ ಇವರು ಸ್ಮರಿಸಿಕೊಂಡು ಹೀಗೆನ್ನುತ್ತಾರೆ...

  Image Courtesy

  ಭವಿಷ್ಯದ ಯೋಜನೆ

  ಭವಿಷ್ಯದ ಯೋಜನೆ

  "ಹಿಂದೆ ಸರಿಯುವುದು ತುಂಬಾ ಸುಲಭ, ಹೆಚ್ಚಿನವರು ಹೀಗೇ ಮಾಡುತ್ತಾರೆ, ಆದರೆ ನಾನು ನನ್ನ ಕೊನೆ ಉಸಿರಿರುವವರೆಗೂ ಎಷ್ಟೇ ಸೋಲುಗಳು ಎದುರಾದರೂ ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತೇನೆ, ಇದು ಕಷ್ಟ ಎಂದು ಗೊತ್ತು. ಆದರೆ ಭಗವಂತನು ಒಂದು ಶಕ್ತಿ ಕಸಿದುಕೊಂಡರೆ ಇನ್ನೊಂದು ಶಕ್ತಿಯನ್ನು ದಯಪಾಲಿಸಿರುವನಲ್ಲ, ಆತನೇ ಇದರ ಪರಿಣಾಮಗಳನ್ನು ನಿರ್ಧರಿಸಲಿ, ಜೈ ಹಿಂದ್" ಇವರ ಧೀರೋದಾತ್ತ ಪದಗಳಿಗೆ ಸಾಟಿಯೇ ಇಲ್ಲ, ಇವರು ಜೀವನದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ, ಇನ್ನೂ ಹಲವರಿಗೆ ಪ್ರೇರಣೆಯಾಗಲಿ ಎಂದೇ ನಾವು ಹಾರೈಸೋಣ....

  English summary

  The Man Who Won More Than One War

  Meet Major D.P Singh, an army man who fought the Kargil War in 1999 at the age of 25 and survived a mortal injury. He lost a leg in the war but not his will to live, succeed and make a difference. He is today India’s first amputee marathon runner and a Limca record holder for running more than 20 marathons. He has acquired the title of “Indian Blade Runner”. He is also a motivational speaker who is trying to inspire millions with his story.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more